fbpx

ಅಭಿಮಾನಿಗಳಿಗೆ ಕರೆ ಕೊಟ್ಟ ನಟ ಯಶ್! ಏನದು?

ಒಂದು ಕಾಲದಲ್ಲಿ ನದಿಯಾಗಿದ್ದ ವೃಷಭಾವತಿ ಇದೀಗ ಕೆಂಗೇರಿ ಮೋರಿಯಾಗಿದೆ. ಇದರ ಪುನಶ್ಚೇತನಕ್ಕಾಗಿ ಯುವ ಬ್ರಿಗೇಡ್ ವತಿಯಿಂದ ಸೆಪ್ಟೆಂಬರ್ 22 ರಂದು ಭಾನುವಾರ ರನ್ ಫಾರ್ ವೃಷಭಾವತಿ ಮ್ಯಾರಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

 

 

ಯುವ ಬ್ರಿಗೇಡ್ ಪ್ರಯತ್ನವನ್ನು ನಟ ರಾಕಿಂಗ್ ಸ್ಟಾರ್ ಯಶ್ ಬೆಂಬಲಿಸಿದ್ದು, ಮ್ಯಾರಥಾನ್ ನಲ್ಲಿ ಎಲ್ಲರೂ ಭಾಗವಹಿಸುವಂತೆ ಅಭಿಮಾನಿಗಳಿಗೆ ವಿಡಿಯೋ ಮಾಡಿ ಕರೆ ಕೊಟ್ಟಿದ್ದಾರೆ. ಈ ಬಗ್ಗೆ ವಿಡಿಯೋ ಮಾಡುವ ಮೂಲಕ ಯಶ್ ಅವರು ಮ್ಯಾರಥಾನ್‍ಗೆ ಬೆಂಬಲ ಘೋಷಿಸಿದ್ದಾರೆ.

“ಸಿಟಿ ಮಧ್ಯೆ ನದಿ ಹುಟ್ಟುದೋ, ಹರಿಯೋದು ಅಪರೂಪ. ಇಂತಹದೊಂದು ವಿಶೇಷತೆಯನ್ನು ಹೊಂದಿದ್ದ ವೃಷಭಾವತಿ ಇದೀಗ ಮೋರಿಯಾಗಿ ಬದಲಾಗಿದೆ. ಇದನ್ನು ಸರಿಪಡಿಸುವ ಯುವಬ್ರಿಗೇಡ್ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಪ್ರಯತ್ನಕ್ಕೆ ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top