fbpx
Karnataka

ಪಂಜಾಬಿಗರು ಭತ್ತದ ತಳಿಗೆ ದೇವೇಗೌಡರ ಹೆಸರಿಟ್ಟಿದ್ದಾರೆ

ಪಂಜಾಬಿಗರು ಭತ್ತದ ತಳಿಗೆ ದೇವೇಗೌಡರ ಹೆಸರಿಟ್ಟು ಅಭಿಮಾನ ತೋರಿದರೆ
ಸಿಂಧಗೀಯ ರೈತರು ದೇವೇಗೌಡರ ಪ್ರತಿಮೆಯನ್ನೇ ಸ್ಥಾಪಿಸಿ ಮಣ್ಣಿನ ಮಗನಿಗೆ ಅಭಿಮಾನ ತೋರಿಸಿದ್ದಾರೆ.

Untitled-1ಅದು 1972 ದೇವರಾಜ್ ಅರಸರ ಆಡಳಿತದ ಕಾಲ, ಉತ್ತರ ಕರ್ನಾಟಕ ಭಾಗದ ಬೀದರ್ ಗುಲ್ಬರ್ಗ ಬಿಜಾಪುರಗಳಲ್ಲಿ ಭೀಕರ ಬರಗಾಲದಿಂದ ರೈತರು ಕಂಗೆಟ್ಟಿದ್ದರು.ಆ ಸಮಯದಲ್ಲಿ ವಿರೋಧ ಪಕ್ಷಗಳ ಪ್ರಮುಖ ನಾಯಕರು ಮುಖ್ಯಮಂತ್ರಿಗಳನ್ನು ಎಚ್ಚರಿಸಲು ಜೈಲ್ ಭರೋ ಚಳುವಳಿ ಮಾಡಲು ತೀರ್ಮಾನಿಸಿದರು .ಆದರೆ ಚಾಣಾಕ್ಷರದ ಅರಸರು ಯಾರನ್ನೂ ಬಂಧಿಸಿ ಜೈಲಿನಲ್ಲಿಡಲಿಲ್ಲ ಬದಲಾಗಿ ಹೋರಾಟಕ್ಕೆ ಧುಮುಕಿದ್ದ ಗುಲ್ಬರ್ಗ ವಿಜಾಪುರದ ರೈತರನ್ನು ಹಾಗೂ ಮುಖಂಡರುಗಳನ್ನು ಬಂಧಿಸಿ ದೂರದ ಮಹಾರಾಷ್ಟ್ರದ ಸೊಲ್ಲಾಪುರದವರೆಗೆ ಬಿಟ್ಟು ಬರಲು ಆದೇಶಿಸಿದ್ದರು ಬಂಧನಕ್ಕೊಳಗಾಗುವವರು ಅಲ್ಲಿಂದ ಮತ್ತೆ ಊರಿನ ಕಡೆ ನಡೆದುಕೊಂಡೇ ಬರ ಬೇಕಿತ್ತು .ಇದರಿಂದಾಗಿ ಯಾರೊಬ್ಬರು ಹೋರಾಟಕ್ಕೆ ಧುಮುಕಲಿಲ್ಲ .ಜನ ಬೆಂಬಲವಿಲ್ಲದೆ ವಿರೇಂದ್ರ ಪಾಟೀಲರು ನಿಜ ಲಿಂಗಪ್ಪನವರಂತಹ ಮಹಾನ್ ನಾಯಕರೇ ಕಂಗೆಟ್ಟರು.ಆ ಸಮಯದಲ್ಲಿ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು. ದೇವೇಗೌಡರು ಹೆಗ್ಗಡೆ ,ವೀರೇಂದ್ರ ಪಾಟೀಲರ ಜೊತೆ ವಿಜಾಪುರ ಭಾಗದಲ್ಲೆಡೆ ತಿರುಗಾಡಿ ಭೀಕರ ಬರಗಾಲದ ನಿಜ ದರ್ಶನ ಮಾಡಿದರು ಬಿಜಾಪುರ ಗುಲ್ಬರ್ಗದ ರೈತರಂತೂ ರಾಜ್ಯವನ್ನೇ ಬಿಟ್ಟು ಮಹಾರಾಷ್ಟ್ರದ ಕಡೆ ಗುಳೆ ಹೊರಟಿದ್ದರು.

ದೇವೇಗೌಡರು ವಿಧಾನಸೌಧದಲ್ಲಿ ಇದನ್ನು ಎಳೆ ಎಳೆಯಾಗಿ ತೆರೆದಿಟ್ಟು ಅಂದಿನ ಮುಖ್ಯಮಂತ್ರಿಗಳ Capture-4-300x299ಮೇಲೆ ತೀವ್ರ ಒತ್ತಡ ಹೇರಿದರು ಕೊನೆಗೆ ಅರಸರು ಉತ್ತರ ಕರ್ನಾಟಕದ ರೈತರು ಸೊಲ್ಲಾಪುರಕ್ಕೆ ಹೋಗೋದು ಬೇಡ ಮೈಸೂರು ಭಾಗಕ್ಕೆ ಬಂದು ಕಾವೇರಿ ಕಣಿವೆಗಳಲ್ಲಿ ಕೆಲಸ ಮಾಡಲಿ ಅವರಿಗಾಗಿ ಕ್ಯಾಂಪ್ ವ್ಯವಸ್ತೆ ಮಾಡೋಣ ಎಂದರು ಆದರೆ ಉತ್ತರ ಕರ್ನಾಟಕದ ರೈತರು ತಮ್ಮ ಮನೆ ಮಠ ,ವಯಸ್ಕ ತಂದೆ ತಾಯಿಯರನ್ನು ಬಿಟ್ಟು ಮೈಸೂರು ಭಾಗಗಳಲ್ಲಿ ಢೇರೆಗಳಲ್ಲಿ ಬದುಕೋದು ಸರಿ ಕಾಣಿಸಲಿಲ್ಲ ಆ ಕಾರಣದಿಂದ ಉತ್ತರ ಕರ್ನಾಟಕದ ಭಾಗಗಳಿಗೆ ನೀರಾವರಿ ಯೋಜನೆಗಳನ್ನು ಜಾರಿ ಗೊಳಿಸಿ ಎಂದು ಹೋರಾಟ ಮುಂದುವರೆಸಿದರು ಇದರ ಪರಿಣಾಮವಾಗಿ ಕೆಲ ನೀರಾವರಿ ಯೋಜನೆಗಳಿಗೆ ಉತರ ಕರ್ನಾಟಕ ಭಾಗದಲ್ಲಿ ಚಾಲನೆ ಸಿಗುವಂತಾಯಿತು .

ಮುಂದೆ ರಾಮಕೃಷ್ಣ ಹೆಗ್ಗಡೆಯವರ ಆಡಳಿತ ಸಮಯದಲ್ಲಿ ದೇವೇಗೌಡರೇ ನೀರಾವರಿ ಮಂತ್ರಿಗಳಾದರು.ಆ ಸಮಯದಲ್ಲಿ ವಿಜಾಪುರ ಕಲಬುರ್ಗಿ ಭಾಗಗಳಿಗೆ ನೀರು ಒದಗಿಸಲು ಆ ಕಾಲಕ್ಕೇ 600 ಕೋಟಿ ರೂಪಾಯಿಗಳ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದರು ಇದರಲ್ಲಿ ಎಂ.ಸಿ.ಮನಗೂಳಿ ಪ್ರಯತ್ನವೂ ಸಾಕಷ್ಟಿದೆ ಇದರಿಂದ ನೀರು ಸಿಂಧಗಿ, ಇಂಡಿ ತಾಲೂಕಿಗೂ ಬರುವಂತಾಯಿತು.ಬರದಿಂದ ಕಂಗೆಟ್ಟಿದ್ದ ರೈತರಿಗೆ ಈ ನೀರು ಆಸರೆಯಾಯಿತು ಈ ಕಾರಣದಿಂದ ಅಲ್ಲಿನ ರೈತರೇ ತಮ್ಮ ಹಣದಿಂದ ಸಿಂದಗಿಯ ಗೊಳಗೆರಿಯಲ್ಲಿ ದೇವೇಗೌಡರು ಮತ್ತು ಅವರ ಶಿಷ್ಯರಾದ ಮನಗೂಳಿಯವರ ಪ್ರತಿಮೆಯನ್ನು ಸ್ಥಾಪಿಸಿ ಮಣ್ಣಿನ ಮಗನಿಗೆ ಗೌರವ ಸಲ್ಲಿಸಿದ್ದಾರೆ .
ಇನ್ನು 1997. ದೇವೇಗೌಡರು ಪ್ರಧಾನಿಯಾಗಿದ್ದ ಸಮಯ ,ಪಂಜಾಬಿನಲ್ಲಿ ರೈತರು ಯತೇಚ್ಚವಾಗಿ ಭತ್ತ ಬೆಳೆದ ಪರಿಣಾಮ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಂತಾಯಿತು. ರೈತರಿಂದ ಭತ್ತ ಖರೀದಿಸಲು ಯಾರೂ ಮುಂದೆ ಬರಲಿಲ್ಲ ಜೊತೆಗೆ ರೈತರಿಗೆ ಆಸರೆಯಾಗಬೇಕಿದ್ದ ಅಲ್ಲಿನ ಸ್ಥಳೀಯ ಪಂಜಾಬ್ ಸರಕಾರವೂ ರೈತರಿಗೆ ಸಹಾಯ ಮಾಡಲಿಲ್ಲ ಆದರೆ ಪ್ರಧಾನಿಯಾಗಿದ್ದ ದೇವೇಗೌಡರಿಗೆ ವಿಚಾರ ತಿಳಿದು ರೈತರು ಬೆಳೆದ ಅದೇಷ್ಟೇ ಭತ್ತವಿದ್ದರೂ ಆ ಎಲ್ಲಾ ಭತ್ತವನ್ನು ರೈತರಿಂದ ಖರೀದಿಸಲು ಆದೇಶ ನೀಡುವ ಮೂಲಕ ಮಣ್ಣಿನ ಮಗ ಎಂಬುವುದನ್ನು ಮತ್ತೊಮ್ಮೆ ಸಾಭಿತು ಪಡಿಸಿದರು .ದೇವೇಗೌಡರ ಈ ಸಹಾಯವನ್ನು ಪಂಜಾಬಿನ ರೈತರು ಮರೆಯಲಿಲ್ಲ ತಾವು ಬೆಳೆಯುವ ಭತ್ತದ ತಳಿಯೊಂದಕ್ಕೆ ದೇವೇಗೌಡ ಎಂದು ನಾಮಕರಣ ಮಾಡುವ ಮೂಲಕ ದೇವೇಗೌಡರನ್ನು ಸದಾ ನೆನಪಿಸಿಕೊಳ್ಳುತ್ತಾರೆ⁠⁠⁠⁠

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top