fbpx
Karnataka

ದೇಶದ ಪ್ರಪಥಮ ರೈಲು ಚಕ್ರ ಪರೀಕ್ಷಾ ಕೇಂದ್ರ ಸ್ಥಾಪನೆ.

ಬೆಂಗಳೂರು: ಯಲಹಂಕದಲ್ಲಿ ದೇಶದ ಪ್ರಪ್ರಥಮ ರೈಲು ಚಕ್ರ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡುವ ಮೂಲಕ ಭಾರತ ಪ್ರಪಂಚದ ಅತ್ಯಂತ ಶ್ರೇಷ್ಠ ರಾಷ್ಟ್ರಗಳ ಗುಂಪಿಗೆ ಸೇರಲಿದೆ, ರೈಲು ಚಕ್ರಗಳ ವಿನ್ಯಾಸ, ಅಭಿವೃದ್ಧಿ ಮತ್ತು ಪರೀಕ್ಷಾ ಕೇಂದ್ರವೂ ಯಲಹಂಕ ರೈಲ್ವೆ ವ್ಹೀಲ್ ಫ್ಯಾಕ್ಟರಿ ಆವರಣದಲ್ಲಿ ಸ್ಥಾಪನೆಯಾಗಲಿದೆ.
ಯಲಹಂಕದಲ್ಲಿ ನಿರ್ಮಾಣವಾಗುವ ಹೊಸ ರೈಲು ಚಕ್ರಗಳನ್ನು ಸುರಕ್ಷತಾ ಪರೀಕ್ಷೆಗಾಗಿ ಅಮೆರಿಕಾಗೆ ಕಳುಹಿಸಲಾಗುತ್ತಿದೆ. ಪ್ರತಿ ಒಂದು ರೈಲು ಚಕ್ರ ಸುರಕ್ಷತಾ ಪರೀಕ್ಷೆಗೆ 3 ಕೋಟಿ ರು. ವೆಚ್ಚ ಆಗುತ್ತಿದೆ. ಇನ್ನು ಬೇರೆ ದೇಶಗಳು ಕೂಡ ರೈಲು ಚಕ್ರಗಳನ್ನು ಪರೀಕ್ಷೆಗೆ ಕಳುಹಿಸುತ್ತವೆ. ಹೀಗಾಗಿ ನಮ್ಮ ದೇಶದ ರೈಲು ಚಕ್ರ ಪರೀಕ್ಷೆಗಾಗಿ ಬಹಳ ಸಮಯ ಕಾಯಬೇಕಾಗುತ್ತದೆ.train weel 2
ಏಷ್ಯಾ ಖಂಡದಲ್ಲಿ ಚೀನಾ ದೇಶದಲ್ಲಿ ಮಾತ್ರ ಈ ರೈಲು ಚಕ್ರ ಪರೀಕ್ಷಾ ಕೇಂದ್ರವಿದೆ. ಇನ್ನೂ ಅಮೆರಿಕಾ ಬಿಟ್ಟರೇ ಜರ್ಮನಿ ಮತ್ತಪ ಇಟಲಿ ದೇಶಗಲ್ಲಿ ಮಾತ್ರ ಈ ಕೇಂದ್ರವಿದೆ.
ಯಲಹಂಕದ ರೈಲು ಚಕ್ರ ತಯಾರಿಕಾ ಕಾರ್ಖಾನೆ ಆವರಣದಲ್ಲಿ ಸುಮಾರು 58 ಕೋಟಿ ರು. ವೆಚ್ಚದಲ್ಲಿ ಈ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಎಲ್ಲಾ ಜವಾಬ್ದಾರಿಗಳನ್ನು ಭಾರತೀಯ ರೈಲ್ವೆ ತಾಂತ್ರಿಕ ಮತ್ತು ಆರ್ಥಿಕ ಸೇವಾ ಸಂಸ್ಥೆಗೆ ನೀಡಲಾಗಿದೆ ಎಂದು ರೈಲುಚಕ್ರ ಕಾರ್ಖಾನೆ ಜನರಲ್ ಮ್ಯಾನೇಜರ್ ಪಂಕಜ್ ಜೈನ್ ತಿಳಿಸಿದ್ದಾರೆ.
ಭಾರತೀಯ ರೈಲ್ವೆ ತಾಂತ್ರಿಕ ಮತ್ತು ಆರ್ಥಿಕ ಸೇವಾ ಸಂಸ್ಥೆಯು ಈಗಾಗಲೇ ಯೋಜನೆಯ ನೀಲನಕ್ಷೆ ತಯಾರಿಸಿದ್ದು, ಜೂನ್ ಮಧ್ಯದಲ್ಲಿ ಜಾಗತಿಕ ಟೆಂಡರ್ ಕರೆಯಲಾಗುವುದು, ಈ ಪರೀಕ್ಷಾ ಕೇಂದ್ರ ಟೆಂಡರ್ ಪಡೆಯಲು ಹಲವು ರಾಷ್ಟ್ರಗಳು ಒಲವು ತೋರಿವೆ ಎಂದು ಅವರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top