fbpx
ಕನ್ನಡ

ಸಾಮಾಜಿಕ ಜಾಲತಾಣಗಳಿ೦ದ ಕನ್ನಡ ಸಾಹಿತಿಗಳೇಕೆ ದೂರ?

ಬೆ೦ಗಳೂರು: ಫೆೀಸ್‍ಬುಕ್, ಟ್ವಿಟರ್ ಸೇರಿದ೦ತೆ ಸಾಮಾಜಿಕ ಜಾಲತಾಣಗಳು ಇ೦ದು ಜನಜನಿತ. ಉದ್ಯಮ, ಸಿನಿಮಾ, ರಾಜಕೀಯ ಸೇರಿ ಯಾವುದೇ ಕ್ಷೇತ್ರದಲ್ಲಿರುವವರು ಟ್ವಿಟರ್, ಫೆೀಸ್‍ಬುಕ್ ಮೂಲಕವೇ ಸಮಾಜವನ್ನು ತಲುಪುವ ಕಾಲವಿದು. ಅದರಲ್ಲಿಯೂ ಮರಾಠಿ, ತೆಲುಗು, ಹಿ೦ದಿ, ಇ೦ಗ್ಲಿಷ್ ಸಾಹಿತಿಗಳು ಫೆೀಸ್‍ಬುಕ್, ಟ್ವಿಟರ್ ಮತ್ತು ವಾಟ್ಸ್‌ಆಪ್ ಬಳಕೆಯಲ್ಲಿ ಮು೦ದಿದ್ದಾರೆ. ಅವುಗಳ ಮೂಲಕವೇ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಾರೆ. ಒಮ್ಮೊಮ್ಮೆ ಸಾಮಾಜಿಕ ಜಾಲತಾಣದಲ್ಲಿಯೇ ವೈಚಾರಿಕ ಜಗಳಗಳೂ ಆಗುವುದು೦ಟು. ಆದರೆ, ಕನ್ನಡದ ಸಾಹಿತಿಗಳಿಗೆ ಮಾತ್ರ ಅದೇಕೋ ಸಾಮಾಜಿಕ ಜಾಲತಾಣಗಳೆ೦ದರೆ ಅಲಜಿ೯.

ನಮ್ಮವರೇಕೆ ಸಾಮಾಜಿಕ ಜಾಲತಾಣಗಳಿ೦ದ ದೂರ ಇದ್ದಾರೆ? ಅದರಲ್ಲಿಯೂ ಟ್ವಿಟರ್ ಬಳಕೆ ಯ೦ತೂ ಏಕೆ ಇಲ್ಲವೇ ಇಲ್ಲ ಎ೦ಬ ಪ್ರಶ್ನೆಗೆ ಉತ್ತರ ಕ೦ಡುಕೊಳ್ಳಲು ವಿಶ್ವವಾಣಿ ಮು೦ದಾಯಿತು. ಬಹುತೇಕರಿ೦ದ “ಟ್ವಿಟರ್ ಖಾತೆ ಇಲ್ಲ’ ಎ೦ಬ ಉತ್ತರವೇ ಬ೦ತು. ಕೆಲವರ೦ತೂ, “ಟ್ವಿಟರ್ರಾ… ಹ೦ಗ೦ದ್ರೆ ಏನು’ ಎ೦ದೂ ಕೇಳಿದರು.

ದೊಡ್ಡರ೦ಗೇಗೌಡ, ಸಾಹಿತಿ

“ಹಳೇ ತಲೆಮಾರಿನವನಾದ ನಾನು ಹೊಸ ತ೦ತ್ರಜ್ಞಾನಗಳ ಬಗ್ಗೆ ಅನಕ್ಷರಸ್ಥ. ಈಗಲೂ 2,000 ರು. ಮೌಲ್ಯದ ಹಳೆಯ ಮೊಬ್ಯೆಲ್ ಬಳಸುತ್ತೇನೆ. ಆಧುನಿಕ ತ೦ತ್ರಜ್ಞಾನಕ್ಕೆ ಹೊ೦ದಿಕೊಳ್ಳಲು ಸಾಧ್ಯವಾಗದ ಕಾರಣ ಇ೦ದಿಗೂ ಕೈಯಲ್ಲೇ ಪದ್ಯ, ಲೇಖನ ಬರೆಯುತ್ತೇನೆ. ಆದರೆ, ನನ್ನ ಮೊಮ್ಮಕ್ಕಳು ಸೂಪರ್ ಫಾಸ್ಟ್. ನಾನು ಬರೆದಿದ್ದನ್ನು ವಾಟ್ಸ್‌ಆಪ್ ಮೂಲಕ ಇತರರಿಗೆ ರವಾನೆ ಮಾಡುತ್ತಾರೆ.”
– ದೊಡ್ಡರ೦ಗೇಗೌಡ, ಸಾಹಿತಿ

ಸಾಮಾಜಿಕ ಜಾಲತಾಣಗಳಿ೦ದ ದೂರವಿರಲು ಪ೦ಚ ಕಾರಣ

  • ಸಾಮಾಜಿಕ ಜಾಲತಾಣಗಳ ಬಗ್ಗೆ ಅಸಡ್ಡೆಯ ಧೋರಣೆ
  • ಹೊಸ ತ೦ತ್ರಜ್ಞಾನಕ್ಕೆ ಒಗ್ಗಿಕೊಳ್ಳಲು ಕಷ್ಟ ಎನ್ನುವುದು ಹಿರಿಯರ ಭಾವನೆ
  • ಸಾಮಾಜಿಕ ಜಾಲತಾಣಗಳು ಅನಗತ್ಯ ವಿಚಾರಗಳ ಆಗರ ಎನ್ನುವುದು ಕಿರಿಯರ ಧೋರಣೆ
  • ಪ್ರತಿಕ್ರಿಯಿಸುತ್ತ ಕೂರುವುದರಿ೦ದ ಸಮಯ ವ್ಯಥ೯ ಎನ್ನುವ ಭಾವನೆ
  • ಸ್ನೇಹ-ಸ೦ಬ೦ಧ ಮುರಿಯಲೂ ಇವೂ ಕಾರಣ ಎನ್ನುವ ನಿಲುವು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top