fbpx
ತಿಂಡಿ ತೀರ್ಥ

ಭಾರತದ ಆಹಾರ ಭವಿಷ್ಯ ಭಯಾನಕ.

ಭಾರತದ ದಾಖಲೆ ಪ್ರಮಾಣದ ಆಹಾರಧಾನ್ಯ ಉತ್ಪಾದನೆಯಾಗಿರುವುದು 2011-12ನೇ ಹಣಕಾಸು ವರ್ಷದಲ್ಲಿ. ಇಡೀ ವಿಶ್ವದಲ್ಲಿ ಆಹಾರೋತ್ಪಾದನೆ ಕುಂಠಿತವಾಗಿ ಆಹಾರಧಾನ್ಯಗಳ ಬೆಲೆ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ಭಾರತದ ಈ ಸಾಧನೆ ನಿಜಕ್ಕೂ ಹೆಮ್ಮೆಪಡುವಂಥದ್ದು. ಭಾರತದ ಈ ಗಣನೀಯ ಸಾಧನೆ ಸಾಧ್ಯವಾದದ್ದು ಸಕಾಲಿಕ ನೀತಿಗಳಿಂದಾಗಿ ಎಂದು 2012-13ನೇ ವರ್ಷದ ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಆದರೆ ವಾಸ್ತವಿಕವಾಗಿ ಈ ಪ್ರಗತಿ ದರ ನಿಗದಿತ ಗುರಿಗಿಂತ ಶೇಕಡ 3.6ರಷ್ಟು ಕಡಿಮೆ. ಇದರ ಜತೆಗೆ ಇಂಥ ಹಿತಾನುಭವದ ಪರಿಸ್ಥಿತಿ ತೀರಾ ಕ್ಷಣಿಕ ಮತ್ತು ಇದು ಭಾರತೀಯ ಕೃಷಿಕ್ಷೇತ್ರ ಇಂದು ಎದುರಿಸುತ್ತಿರುವ ದೊಡ್ಡ ಹಾಗೂ ತೀವ್ರ ಸಮಸ್ಯೆಗಳನ್ನು ಹುದುಗಿಸುವ ಪ್ರಯತ್ನ. ಭಾರತದ ಕೃಷಿಕ್ಷೇತ್ರ ಇಂದು ಕೆಲ ಉನ್ನತಮಟ್ಟದ ಅಂತರ ಸಂಪರ್ಕವಿರುವ ಸವಾಲುಗಳ ಸರಣಿಯನ್ನೇ ಎದುರಿಸುತ್ತಿದೆ. ಇವುಗಳನ್ನು ವಿಶ್ಲೇಷಣೆಗೆ ಗುರಿಪಡಿಸಿದಾಗ, ಕೃಷಿಕ್ಷೇತ್ರ ಈ ದೇಶಕ್ಕೆ ಅತ್ಯಂತ ದೊಡ್ಡ ಸವಾಲು ತಂದೊಡ್ಡಿರುವುದು ವೇದ್ಯವಾಗುತ್ತದೆ ಮತ್ತು ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ

 

ಭಾರತದ ಆಹಾರ ಭವಿಷ್ಯ ಭಯಾನಕ. ಭಾರತ ಎದುರಿಸುತ್ತಿರುವ ಕೃಷಿಕ್ಷೇತ್ರದ ಪ್ರಮುಖ ಸಮಸ್ಯೆಗಳು :

  1. ದೇಶದ ಆಹಾರ ಭದ್ರತೆ ದೇಶ ಎದುರಿಸುತ್ತಿರುವ ಅತಿದೊಡ್ಡ ಸವಾಲು. ದೇಶದಲ್ಲಿ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೊಳಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
  2. ಕೃಷಿ ಮಾರುಕಟ್ಟೆ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿಲ್ಲವಾದ ಕಾರಣ, ಕೃಷಿ ಕ್ಷೇತ್ರ ಇಂದು ಲಾಭದಾಯಕ ವೃತ್ತಿಯಾಗಿ ಉಳಿದಿಲ್ಲ. ಈ ಕಾರಣದಿಂದಾಗಿ ಆರ್ಥಿಕತೆಯಲ್ಲಿ ಇದಕ್ಕೆ ಸಂಬಂಧಿಸಿದ ಮತ್ತಷ್ಟು ಸಮಸ್ಯೆಗಳು ಹುಟ್ಟಿಕೊಂಡಿವೆ.
  3. ಕಾರ್ಮಿಕ ಮಾರುಕಟ್ಟೆ ಕ್ಷೇತ್ರದಲ್ಲಿ ಕೂಡಾ ಸುಧಾರಣೆಗಳು ಆಗದಿರುವುದು ಈ ವಲಯದ ಬಂಡವಾಳ ಹೂಡಿಕೆ ಅವಕಾಶಗಳಿಗೆ ತಡೆಯಾಗಿ ಪರಿಣಮಿಸಿದೆ.
  4. ಈ ವೃತ್ತಿಯಲ್ಲಿ ಜನಸಾಂದ್ರತೆ ಅಧಿಕವಾಗಿದ್ದು, ಈ ಕ್ಷೇತ್ರವನ್ನು ಅವಲಂಬಿಸಿದವರಿಗೆ ಬರುವ ತಲಾದಾಯ ತೀರಾ ಕಡಿಮೆ. ಉದಾಹರಣೆಗೆ ಶೇಕಡ2 ಮಂದಿ ಕೃಷಿಕ್ಷೇತ್ರವನ್ನು ಅವಲಂಬಿಸಿದ್ದು, ಇದು ಒಟ್ಟು ಆದಾಯದ ಶೇಕಡ 14.1 ಪಾಲನ್ನು ಮಾತ್ರ ಹೊಂದಿದೆ.

ಇದಕ್ಕಿಂತಲೂ ಹೆಚ್ಚಾಗಿ ಕೃಷಿಕ್ಷೇತ್ರ ಇತರ ಹಲವಾರು ಇತಿಮಿತಿಗಳಿಗೆ ಒಳಪಟ್ಟಿದ್ದು, ಇದು ಕೃಷಿಕ್ಷೇತ್ರದ ಪ್ರಗತಿ ಹಾಗೂ ವಿಸ್ತರಣೆಗೆ ಅಡ್ಡಿಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕೃಷಿಕ್ಷೇತ್ರದ ಪ್ರಗತಿ ಮತ್ತು ವಿಸ್ತರಣೆಗೆ ಸರ್ಕಾರ ಆದ್ಯ ಗಮನವನ್ನು ನೀಡಬೇಕಾಗಿದೆ. ಕೃಷಿಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವುದು, ವಿತರಣಾ ವ್ಯವಸ್ಥೆ ಸರಿಪಡಿಸುವುದು, ಹೊಲದಿಂದ ಮಾರುಕಟ್ಟೆಗೆ ಉತ್ತಮ ಸಂಪರ್ಕ ಅಭಿವೃದ್ಧಿಪಡಿಸುವುದು, ದಾಸ್ತಾನು ಸಾಮಥ್ರ್ಯ ಹೆಚ್ಚಿಸುವುದು, ಮೌಲ್ಯವರ್ಧನೆ ಅಂಶ, ಉತ್ತಮ ಸಾಲ ಸೌಲಭ್ಯ ಮತ್ತು ಪರಿಣಾಮಕಾರಿ ಕೃಷಿ ವಿಮೆ ಸೌಲಭ್ಯ ಮತ್ತು ಕೃಷಿ-ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮುಖ್ಯ.

ಕೃಷಿಯನ್ನು ಬಹಳಷ್ಟು ಮಂದಿ ಅವಲಂಬಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಅಧಿಕ ಗಮನ ಹರಿಸಲೇಬೇಕಿದೆ. ಇದು ಇತರ ವಲಯಗಳಾದ ಕೈಗಾರಿಕೆ ಹಾಗೂ ಸೇವಾ ಕ್ಷೇತ್ರದ ಆರ್ಥಿಕತೆಯ ವಿಸ್ತರಣೆ ಹಾಗೂ ಉದ್ಯೋಗಾವಕಾಶ ಸೃಷ್ಟಿಯನ್ನು  ಅವಲಂಬಿಸಿದೆ.

ಕೃಷಿಕ್ಷೇತ್ರದಲ್ಲಿ ಪ್ರಮುಖವಾದ ಒಂದಕ್ಕೊಂದು ಸಂಪರ್ಕ ಹೊಂದಿರುವ ಇತರ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕಾಗಿದೆ.

  1. ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಅಂಶಗಳಿಗೆ ಒತ್ತು ನೀಡುವ ಕೃಷಿನೀತಿಯನ್ನು ಜಾರಿಗೊಳಿಸುವುದು. ವಾಣಿಜ್ಯೀಕರಣದ ಹಿನ್ನೆಲೆಯಲ್ಲಿ ಮತ್ತು ಖಾಸಗಿ ವಲಯ ಕೃಷಿಕ್ಷೇತ್ರಕ್ಕೆ ಲಗ್ಗೆ ಇಡುವ ಹಿನ್ನೆಲೆಯಲ್ಲಿ ಇದು ಇದು ಪಕ್ಷಪಾತದ ಕ್ರಮವಾಗಬಹುದು.
  2. ಹವಾಮಾನ ಸಂಬಂಧಿ ಅನಿಶ್ಚಿತತೆಗಳು ಮತ್ತು ಹವಾಮಾನ ಬದಲಾವಣೆ ಅಪಾಯ.
  3. ಸಮರ್ಪಕ ಮಾರುಕಟ್ಟೆ- ಆಧರಿತ ವಿಮಾ ಚೌಕಟ್ಟನ್ನು ಅಭಿವೃದ್ಧಿಪಡಿಸುವುದು.
  4. ಧೀರ್ಘಾವಧಿ ಉದ್ಯೋಗ ಸೃಷ್ಟಿ ಯೋಜನೆಯನ್ನು ಜಾರಿಗೊಳಿಸುವುದು. ಇದು ಬಡತನ ರೇಖೆಗಿಂತ ಕೆಳಗಿರುವವರಿಗೆ ಮತ್ತು ನಿರುದ್ಗೋಗಿಗಳಿಗೆ ಲಾಭದಾಯಕ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುವುದು. ಅಂದರೆ ಈಗ ಕೃಷಿಕ್ಷೇತ್ರವನ್ನೇ ನೆಚ್ಚಿಕೊಂಡಿರುವ ಅಧಿಕ ಮಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು.

ಬಹುಬ್ರಾಂಡ್ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗೆ ಸರ್ಕಾರ ಕೈಗೊಂಡಿರುವ ನಿರ್ಧಾರ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ. ಭಾರತದ ಕೃಷಿಕ್ಷೇತ್ರ ಇಂದಿಗೂ ದೇಶದ ಆರ್ಥಿಕತೆಯ ಅಸಂಘಟಿತ ಕ್ಷೇತ್ರ. ಇದು ಬಂಡವಾಳವನ್ನಷ್ಟೇ ನಿರೀಕ್ಷಿಸುವುದಲ್ಲದೇ, ತಜ್ಞ ಅನುಭವ ಹಾಗೂ ಉದ್ಯಮಶೀಲರನ್ನು ಕೂಡಾ ನಿರೀಕ್ಷಿಸುತ್ತಿದೆ. ವಿದೇಶಿ ಹೂಡಿಕೆದಾರರು ಇದಕ್ಕೆ ಅಗತ್ಯವಾದ ಉದ್ಯಮಶೀಲತೆಯನ್ನು ತಂದುಕೊಡಬಲ್ಲರು. ಅದಾಗ್ಯೂ ರಾತ್ರೋರಾತ್ರಿ ಪವಾಡಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅದಕ್ಕೆ ಸಮಯಾವಕಾಶ ಬೇಕಾಗಬಹುದು. ಅಂತೆಯೇ ಭಾರತದ ವಿದ್ಯುತ್ ಕ್ಷೇತ್ರಕ್ಕೆ ಎನ್ರಾನ್ ಪ್ರವೇಶಿಸಿದ್ದು ದೊಡ್ಡ ಸುದ್ದಿಯಾಯಿತು. ಅದಾಗ್ಯೂ ಎನ್ರಾನ್ ಎಫ್ಡಿಐ ಹೂಡಿಕೆ ಏನಾಯಿತು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ವಿದ್ಯುತ್ ಕ್ಷೇತ್ರದಲ್ಲಿ ಸಕಾಲಿಕ ಸುಧಾರಣೆಗಳನ್ನು ಜಾರಿಗೊಳಿಸದ ಹಿನ್ನೆಲೆಯಲ್ಲಿ ದೇಶೀಯ ಹಾಗೂ ವಿದೇಶಿ ಹೂಡಿಕೆದಾರರನ್ನು ಕ್ಷೇತ್ರ ಕಳೆದುಕೊಂಡಿತು. ಆದರೆ ಎಲ್ಲ ಹೂಡಿಕೆದಾರರೂ ಯಾವುದೇ ಕ್ಷೇತ್ರವನ್ನು ಪ್ರವೇಶಿಸುವುದಾದರೂ, ಗಳಿಕೆಯ ದೃಷ್ಟಿಕೋನವನ್ನೇ ನೋಡುತ್ತಾರೆ ಎನ್ನುವುದು ವಾಸ್ತವ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top