fbpx
ಸಮಾಚಾರ

ಪುರುಷರಿಗೆ ಪ್ರವೇಶವಿಲ್ಲದ ಈ ಗ್ರಾಮದಲ್ಲಿ ಹೆಚ್ಚಾಗ್ತಿದೆ ಜನಸಂಖ್ಯೆ..!

ಕೀನ್ಯಾದ ಅಮೋಜಾ ಗ್ರಾಮ, ಮಹಿಳೆಯರು ಹಾಗೂ ಹುಡುಗಿಯರಿಗೆ ಸ್ವರ್ಗ. ಅಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಆದ್ರೆ ಸ್ವರ್ಗ ಸುಖ ಅನುಭವಿಸಲು ಬರುವ ಮಹಿಳೆಯರು ನರಕ ನೋಡಿಯೇ ಇಲ್ಲಿಗೆ ಬಂದಿರುತ್ತಾರೆ.

1990ರಲ್ಲಿ ಈ ಗ್ರಾಮವನ್ನು ರಿಬಾಕಾ ಲೋಲೋಸೊಲಿ ನಿರ್ಮಿಸಿದ್ದಾರೆ. ಒಂದಲ್ಲ ಒಂದು ಚಿತ್ರಹಿಂಸೆ ಅನುಭವಿಸಿದ ಮಹಿಳೆಯರು ಇಲ್ಲಿಗೆ ಬರುತ್ತಾರೆ. ಬಾಲ್ಯ ವಿವಾಹ, ಅತ್ಯಾಚಾರ, ಲೈಂಗಿಕ ಹಿಂಸೆ ಅಥವಾ ಇನ್ನಾವುದೋ ಸಮಸ್ಯೆಯಿಂದ ಮನೆ ಬಿಟ್ಟ ಬಂದ ಮಹಿಳೆಯರು ಇಲ್ಲಿದ್ದಾರೆ.

ಪುರುಷರಿಲ್ಲದ ಈ ಗ್ರಾಮದಲ್ಲಿ ಗೃಹ ಕೈಗಾರಿಕೆ ನಡೆಸಿ ಮಹಿಳೆಯರು ಹೊಟ್ಟೆ ತುಂಬಿಕೊಳ್ಳುತ್ತಾರೆ. ಗ್ರಾಮದಲ್ಲಿ ಸುಮಾರು 200 ಮಕ್ಕಳಿವೆ. ಮಕ್ಕಳಿಗಾಗಿ ಶಾಲೆ ಸೌಲಭ್ಯ ಇಲ್ಲಿದೆ. ಜೊತೆಗೆ ಕ್ಲಿನಿಕ್ ಕೂಡ ಇದೆ. ಪುರುಷರಿಲ್ಲದ ಈ ಗ್ರಾಮದಲ್ಲಿ ಮಹಿಳೆಯರು ಖುಷಿಯಾಗಿದ್ದಾರೆ.

ಪರಸ್ಪರ ಸಂತೋಷವಾಗಿರಲು ಹಬ್ಬಗಳನ್ನು ಆಚರಿಸಿಕೊಳ್ತಾರೆ. ಆರಂಭದಲ್ಲಿ ಈ ಗ್ರಾಮದಲ್ಲಿ ಕೇವಲ 15 ಮಹಿಳೆಯರಿದ್ದರು. ದಿನಕಳೆದಂತೆ ಸಂಖ್ಯೆ ಜಾಸ್ತಿಯಾಗ್ತಾ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published.

To Top