fbpx
ಕರ್ನಾಟಕ

ಕಾವೇರಿ ಬುಡಕ್ಕೆ ಕೊಡಲಿ ಏಟೇ? ಕೊಡಗಿಗೆ ಬೇಕೆ ರೈಲು?

ಕೊಡಗಿಗೆ ಬರುವ ರೈಲನ್ನು ನಿಲ್ಲಿಸಿ, ಕಾವೇರಿ ನದಿಯೊಂದಿಗೆ ನೀವು ಕುಡಿಯುವ ನೀರನ್ನು ಕಪಾಡಿ ಎಂಬ ಶಿರ್ಷಿಕೆಯೊಂದಿಗೆ ಕ್ಯೆನಲ್ಲಿ ನೀರಿನಲೋಟದ ಸೆಲ್ಫಿಯೊಂದಿಗೆ ಸಹಿಸಂಗ್ರಹ ಅಂದೋಲನ ಅಂತರ್ಜಾಲದಲ್ಲಿ ಕಳೆದಮೂರು ದಿನಗಳಿಂದ ನೆಡೆಯುತ್ತಿದ್ದು ಇದುವರೆವಿಗೂ 13 ಸಾವಿರ ಮಂದಿ ಈ ಅಭಿಯಾನವನ್ನು ಬೆಂಬಲಿಸಿ ಸಹಿ ಹಾಕಿದ್ದಾರೆ, ಮ್ಯೆಸೂರಿನಿಂದ ಕೊಡಗಿನ ಕುಶಾಲನಗರಕ್ಕೆ ರೈಲ್ವೆಹಳಿ ಹಾಕುವ ಯೋಜನೆಯ ಸಮೀಕ್ಷೆಕಾರ್ಯಕ್ಕೆ ಈಗಾಗಲೇ ಹಸಿರು ನಿಶಾನೆ ಬಿದ್ದಿರುವ ಬೆನ್ನಲ್ಲೇ ಕೊಡಗಿಗೆ ರೈಲು ಬರುವುದು ಬೇಡ ಏಂಬ ಕೂಗೂ ಎದ್ದಿದೆ,ರಾಜ್ಯದ ಕೆಲ ಉದ್ದಿಮೆದಾರರು ಇದನ್ನು ಸ್ವಾಗತಿಸಿದ್ದರೆ,ಈ ಯೋಜನೆಯಿಂದ ಇಲ್ಲಿಗೂ ವಲಸಿಗರು ಬಂದು ಸೇರುವುದಲ್ಲದೆ ಈ ಯೋಜನೆ ಅನುಷ್ಟಾನಕ್ಕೆ ಬರುವಷ್ಟರಲ್ಲಿ ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆ‌ಆಗಬಹುದೆಂಬ ಅತಂಕ ಸ್ಥಳೀಯರಿಗೆ ! ವಿಭಿನ್ನ ಚರಿತ್ರೆ, ಸಂಸ್ಕೃತಿ ಹಾಗು ಭಾಷೆಯನ್ನು ಹೊಂದಿರುವ ಕೊಡಗು ರಾಜ್ಯದಲ್ಲಿ ವಿಭಿನ್ನಪ್ರದೇಶವಾಗಿ ಗುರುತಿಸಿಕೊಂಡಿದೆ.

ಈ ಯೋಜನೆ ಪರಿಸರಕ್ಕೆ ಮಾರಕವಾಗಿದ್ದು, ಇಲ್ಲಿರುವ ಕಾಡು ಹಾಗೂ ಎಸ್ಟೆಟ್ ಗಳು ಇರುವುದರಿಂದಲೇ ಇಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿ ಕಾವೇರಿ ನದಿ ತುಂಬಿಹರಿದು ಅಣೆಕಟ್ಟುಗಳು ತುಂಬುತ್ತದೆ,ಈಗಾಗಲೇ ಅವ್ಯಾಹತ ಪರಿಸರ ನಾಶದಿಂದ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ, ಅಷ್ಟೊ ಇಷ್ಟೊ ಕಾಡು ಉಳಿದಿದ್ದು ಈ ರೈಲ್ವೆ ಯೋಜನೆಯಿಂದ ಸಾವಿರಾರು ಮರಗಳು ನೆಲ್ಲಕ್ಕುರಳಲಿದೆ, ಇದರಿಂದ ಪರಿಸರಕ್ಕೆ ಇನ್ನಷ್ಟು ಹಾನಿಯಾಗುವುದಲ್ಲದೇ ಕಾವೇರಿ ಒಡಲು ಬರಿದಾಗಬಹುದೆಂಬ ಅತಂಕ ಕಾಡತೊಡಗಿದೆ, ದಕ್ಷಿಣಭಾರತದ ಜೀವನಾಡಿಯಾದ ಕಾವೇರಿಯಿಂದ ಸೂಮಾರು ಎಂಟುಕೋಟಿಜನರಿಗೆ ಕುಡಿಯುವ ನೀರು ಸಿಗುತ್ತಿದೆಯಲ್ಲದೆ ಸುಮಾರು ಐನೂರಕ್ಕೂ ಹೆಚ್ಚು ಉದ್ದಿಮೆಗಳು ಇದರ ನೀರನ್ನೇ ಅವಲಂಬಿಸಿದೆ, ಬೆಂಗಳೂರಿಗರಿಗೆ ಕುಡಿಯುವ ನೀರೊದಗಿಸುವ ನೀರಿನ ತೊಟ್ಟಿ ಕೊಡಗಿನಲ್ಲಿದೆ ಎಂಬುದನ್ನು ಮರೆಯುವಂತಿಲ್ಲ!

ಹಾಗಾಗಿ ಕಾವೇರಿ ತೀರದ ಪರಿಸರವನ್ನು ಕಾಪಾಡುವುದು ಈಗ ಅತ್ಯಂತ ಅಗತ್ಯವಾಗಿದೆ,
ಕೊಡಗಿನ ಕಾವೇರಿ ಕಣಿವೆಯಲ್ಲಿರುವ ಪ್ರತಿಯೊಂದು ಮರವೂ ಸಾವಿರಾರು ಲೀಟರ್ ನೀರು ನೆಲದೊಳಗೆ ಬಸಿದುಹೋಗಲು, ಭೂಮಿಯೊಳಗೆ ಸಣ್ಣಸಣ್ಣ ತೊರೆಗಳಾಗಿ ಹರಿಯಲು ಸಹಾಯಮಾಡುತ್ತದೆ, ಪರಿಸರದ ತೇವಾಂಶವನ್ನು ಕಾಪಾಡಿ ಮಳೆಬರಿಸಲು ಈ ಮರಗಳು ಸಹಾಯ ಮಾಡುತ್ತದೆ, ಮರಗಳೇ ಇಲ್ಲದಿದ್ದರೇ, ತೇವಾಂಶವೂ ಇಲ್ಲಾ ಮಳೆಯೂ ಇಲ್ಲಾ, ಬೆಂಗಳೂರಿಗರಿಗೆ ಕುಡಿಯಲು ನೀರು ಇಲ್ಲಾ!!

ಅಭಿವೃದ್ದಿಯ ಹೆಸರಲ್ಲಿ ಈಗಾಗಲೇ ಸಾವಿರಾರು ಮರಗಳ ಮಾರಣಹೋಮವಾಗಿದ್ದು, ಅಧಿಕ ಶಕ್ತಿಯ ವಿದ್ಯುತ ತಂತಿಗಳನ್ನು ಸಾಗಿಸಲು ಹಾಗೂ ರಾಷ್ಟ್ರಿಯ ಹೆದ್ದಾರಿ ನೆಪದಲ್ಲಿ ಈಗಾಗಲೇ ಸಾವಿರಾರು ಮರಗಳು ಧರೆಗುರುಳಿದೆ,ಕಾವೇರಿ ಬರಡಾದರೆ ಬೆಂಗಳೂರು, ಮಂಡ್ಯ, ಮ್ಯೆಸೂರು, ಕೊಡಗು ಹಾಗೂ ತಮಿಳುನಾಡಿನ ಸೇಲಂ, ಈರೋಡ್ ತಿರುಚಿ, ತಂಜಾವೂರ್ ಹಾಗೂ ನಾಗಪಟ್ಟಣಂ ಜಿಲ್ಲೆಯ ಜನರ ಹಾಗೂ ರೈತರ ಜೀವನವನ್ನು ಉಹಿಸಿಕೊಳ್ಳುವುದು ಕಷ್ಟ!!

ಅಭಿವೃದ್ದಿಗೆ ನಮ್ಮ ವಿರೋಧವಿಲ್ಲಾ, ಅದರೆ ಪರಿಸರಕ್ಕೆ ಮಾರಕವಾದ ಇಂಥಹ ಯೋಜನೆಗಳು ಬೇಕೆ? ಇದರಬದಲು ಜನರಿಗೆ ಅನುಕೂಲವಾಗುವಂತೆ ಉತ್ತಮ ರಸ್ತೆ ಅಥವಾ ಎಲ್ಲಾ ಅಧುನಿಕ ಸೌಲಭ್ಯಗಳಿರುವ ಆಸ್ಪತ್ರೆ ನಿರ್ಮಿಸಬಹುದಲ್ಲವೇ ? ಎಂಬುದು ಸ್ಥಳೀಯರ ಅಂಭೋಣ. 2011 ರಲ್ಲೇ ಕಾಂಗ್ರೆಸ್ ನ ಯುಪಿ‌ಎ ಸರ್ಕಾರ ಇದರ ಬಗ್ಗೆ ಸಮೀಕ್ಷೆ ನೆಡೆಸಿ ಈ ಯೊಜನೆ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಅದನ್ನು ಕ್ಯೆಬಿಟ್ತಿತ್ತು.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈಲ್ವೆಗೆ ಉಚಿತ ಜಾಗನೀಡುವುದಲ್ಲದೇ ಯೋಜನೆಯ ಅರ್ಧ ವೆಚ್ಚವನ್ನು ರಾಜ್ಯ ಭರಿಸುವುದಾಗಿ ಹೇಳಿದಾಗ ಯುಪಿ‌ಎ ಇದನ್ನು ಮರುಪರಿಶೀಲಿಸಿತಲ್ಲದೇ ಬಿಜೆಪಿಯ ಏನ್ ಡಿ‌ಎ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಈ ಯೋಜನೆಯನ್ನು ಕ್ಯೆಗೆತ್ತಿಕೊಂಡಿತು

ಕೊಡಗಿಗೆ ರೈಲು ತರಬೇಕೆಂಬ ಯೋಜನೆ ಇಂದು ನೆನ್ನೆಯದಲ್ಲಾ, 1929 ರಲ್ಲಿಯೆ ಇದರ ಬಗ್ಗೆ ಸರ್ವೆಗಾಗಿ ಮ್ಯೆಸೂರಿ ಗೆಜಿಟಿಯನಲ್ಲಿ ಪ್ರಸ್ತಾಪ ಮಾಡಲಾಗಿತ್ತು,ಅದರೆ ಕೊಡಗು ಗುಡ್ಡಗಾಡು ಪ್ರದೇಶವಾದ್ದರಿಂದ ರೈಲ್ವೆ ಹಳಿಹಾಕುವ ಯೋಜನೆಯನ್ನು ಕೈಬಿಟ್ಟಿತ್ತು,ಕೊಡಗಿನ ಜನಸಂಖ್ಯೆಯನ್ನು ಗಮನಿಸಿದರೆ ಈ ಯೋಜನೆ ಲಾಭದಾಯಕವಲ್ಲಾ ಎಂಬುದೆ ನನ್ನ ಅನಿಸಿಕೆ, ಅದರೆ ಕೊಡಗಿಗೆ ರೈಲುಸಂಪರ್ಕದಿಂದ ದಿನದ ಸಮಯದಲ್ಲಿ ರೈಲ್ವೆಪ್ರಯಾಣ ಮಾಡುವ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಸವಿಯಬಹುದು ಹಾಗೂ ಪ್ರವಾಸೋದ್ಯಮ ವೃದ್ದಿಸುತ್ತದೆ ಎಂಬ ಹಲವಾರು ಕಾರಣ ಕೊಟ್ಟು ಈ ಯೋಜನೆಯನ್ನು ಬೆಂಬಲಿಸುವವರಿದ್ದಾರೆ,ಬಸ್ ಪ್ರಯಾಣದ ಮೂಲಕವು ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯುತ್ತಿರುವಾಗ ಪರಿಸರಕ್ಕೆ ಮಾರಕವಾದ ಈ ಯೋಜನೆ ಬೇಕೆ ಎಂಬುದು ಈಗ ಪ್ರಶ್ನೆ? ಈ ಯೋಜನೆಯಿಂದ ಕೊಡಗಿಗೆ ಸಂಪರ್ಕವ್ಯವಸ್ಥೆಯಲ್ಲಿ ಸುಧಾರಣೆಯಾಗುತ್ತದೆ ಎಂದು ಕೆಲವುರು ಹೇಳುತ್ತಿದ್ದಾರೆ, ಅದರೆ ಬಸ್ ಮೂಲಕ ಈಗಾಗಲೆ ಕೊಡಗಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಇದೆ,

ಈ ಯೋಜನೆಯಿಂದ ವ್ಯೆವಿಧ್ಯಮಯ ಜೀವಸಂಕುಲವನ್ನು ಹೊಂದಿರುವ ಪಶ್ಚಿಮಘಟ್ಟಗಳನ್ನೊಳಗೊಂಡ ಕೊಡಗಿನ ಪರಿಸರಕ್ಕೆ ಅಪಾರ ಹಾನಿಯಾಗುತ್ತದೆ, ಕೊಡಗಿನ ಕಾಡುಗಳು ಆನೆಗಳ ಆಶ್ರಯತಾಣವಾಗಿದೆ, ಈಗಾಗಲೇ ಕಳೆದೆರೆಡು ವರ್ಷಗಳಿಂದ ಪಶ್ಚಿಮಕೊಡಗಿನಲ್ಲಿ ಉದ್ದಿಮೆಗಳು ತಲೆ‌ಏತ್ತುತ್ತಲಿರುವುದರಿಂದ ಬಂಡಿಪುರ ಹಾಗೂ ಮದುಮಲೈ ಕಾಡುಗಳಲ್ಲಿದ್ದ ಆನೆಗಳು ಜಾಗಖಾಲಿಮಾದುತ್ತಿರುವುದರಿಂದ ನಗರಕ್ಕೆ ಬಂದು ಆಗಾಗ ಜನರ ಆನೆಯ ನಡುವಿನ ಸಂಘರ್ಷ ಹೆಚ್ಚುತ್ತದೆ ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ,

ತಮಿಳುನಾಡಿನ ಕುದನ್ ಕುಲಂ ಅಣುಸ್ತಾವರದಿಂದ ಕೇರಳಕ್ಕೆ ವಿಧ್ಯುತ್ ತೆಗೆದುಕೊಂಡುಹೊಗಲು ಹಾಕುವ ಹೈಟೆನ್ಶನ್ ಕಂಬಗಳನ್ನು ಕೊಡಗಿನ ದಟ್ಟಾರಣ್ಯದಲ್ಲೆ ತೆಗೆದುಕೊಂಡುಹೋಗಲು ನಿರ್ಧರಿಸಿದಾಗ ೫೫,೦೦೦ ಕ್ಕಿಂತ ಹೆಚ್ಚು ಮರಗಳನ್ನು ಕಡಿಯುವ ಯೋಜನೆಯಿತ್ತು, ಅದಕ್ಕಿಂತ ದೊಡ್ಡದಾದ ಈ ರೈಲ್ವೆ ಯೋಜನೆಗೆ ಎಷ್ಟು ಮರಗಳು ಬಲಿಯಾಗುತ್ತದೆ ಎಂದು ಯೋಚಿಸಿನೋಡಿ,

ಲಾಭದಾಯಕವಲ್ಲದ ಯೋಜನೆಗೆ 1800 ಕೋಟಿ ಖರ್ಚುಮಾಡುವ ಅಗತ್ಯವಿದೆಯೇ? ಪ್ರವಾಸೋದ್ಯಮ ಉತ್ತೇಜನಕ್ಕೆ ಈ ಯೋಜನೆ ಎಂದು ಸರ್ಕಾರ ಸಮಜಾಯಿಷಿ ಕೊಡುತ್ತಿದೆ, ಅದರೆ ಈಗಾಗಲೇ ಕೊಡಗಿನಲ್ಲಿ ತಲೆ ಎತ್ತಿರುವ ನೂರಾರು ಹೋಂ ಸ್ಟೇಗಳು ರೆಸಾರ್ಟ್ ಗಳಿಂದ ಕೊಡಗಿನ ರಸ್ತೆಗಳು ಗಬ್ಬೆದಿರುವುದನ್ನು ಗಮನಿಸಬಹುದು. ಅಷ್ಟೇ ಅಲ್ಲಾ ಇಲ್ಲಿ ಬೆಳೆಯುವ ಕಾಫ಼ಿಯನ್ನು ಸುಲಭವಾಗಿ ಮಂಗಳೂರು ಬಂದರಿಗೆ ಸಾಗಿಸಲು ಈ ರೈಲ್ವೆಯೋಜನೆ ಸಹಾಯವಾಗುತ್ತದೆ ಎಂದು ಸರ್ಕಾರ ಕಾರಣಹೇಳುತ್ತಿದೆ ಅದರೆ ಈಗಾಗಲೇ ರಸ್ತೆಯಮೂಲಕವೇ ಯವುದೇ ತೊಂದರೆ ನಷ್ಟವಿಲ್ಲದೇ ಕಾಫ಼ಿಯನ್ನು ಸಾಗಣಿಕೆಮಾಡಲಾಗುತ್ತಿದೆ,

ತೆನ್ಸಿಒನ್ ಈಗ ಮ್ಯೆಸೂರಿನಿಂದ ಕುಶಾಲನಗರದ ತನಕ ಮಾತ್ರ ಈ ರೈಲ್ವೆ ಯೋಜನೆ ಎಂದು ಹೇಳಲಾಗುತ್ತಿದ್ದರೂ ಮುಂದೆ ಮಡಿಕೇರಿ ಅಲ್ಲಿಂದ ಕೇರಳದವರೆಗೂ ವಿಸ್ತರಣೆಯಾದರೆ ಆಶ್ಛರ್ಯವಿಲ್ಲಾ!ಯೋಜನೆ ವಿಸ್ತರಣೆಗೊಂಡಂತೆಲ್ಲ ಕಾಡಿನ ನಾಶ ಮರಗಳ ಮಾರಣ ಹೋಮ ಜಾಸ್ತಿಯಾಗುತ್ತದೆ,ಇದರಿಂದ ಹೆಚ್ಚಿನ ನಷ್ಟ ಅನುಭವಿಸುವವರು ಕಾವೇರಿ ನೀರನ್ನೇ ನಂಬಿ ಬದುಕುತ್ತಿರುವ ಕನ್ನಡಿಗರು ಹಾಗೂ ತಮಿಳಿಗರು,ನೂರಾರು ವರ್ಷಗಳಿಂದ ಬೆಳೆದುನಿಂತಿರುವ ಹೆಮ್ಮರಗಳನ್ನು ಉರುಳಿಸಿ ಮತ್ತೆ ಬೆಳೆಸುವುದು ಸುಲಭದ ಮಾತಲ್ಲ! ಪರಿಸರಕ್ಕೆ ಜೀವಸಂಕುಲಕ್ಕೆ ಮಾರಕವಾದ ಅಭಿವೃದ್ದಿಯೋಜನೆಗಳು ಬೇಕೇ?

೧೬೦೦ ಕೀಮೆ ಉದ್ದದ್ದ ಹಿಮಾಲಯಕ್ಕಿಂತ ಪುರಾತನವಾದ ಪಶ್ಚಿಮಘಟ್ಟಗಳು ‘ಯುನೆಸ್ಕೋ”ದ ವಿಶ್ವ ಜೀವವ್ಯೆವಿದ್ಯಮಯತಾಣಗಳ ಪಾರಂಪರಿಕ ಪಟ್ಟಿಯಲ್ಲಿ 2012 ರಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಸ್ಥಾನಪಡೆದಿವೆ, ಇಲ್ಲಿ 60ಕ್ಕು ಹೆಚ್ಚು ವಿವಿಧ ಪಕ್ಷಿಗಳ ಪ್ರದೇಶ, 325 ಅಳಿವಿನಂಚಿನಲ್ಲಿರುವ ಪ್ರಭೇಧದ ಜೀವಿಗಳು ಹಾಗೂ ವಿಶಿಷ್ಟರೀತಿಯ ವೃಕ್ಷಗಳಿಗೆ ಆಶ್ರಯತಾಣವಾಗಿರುವ ಕೋಡಗಿನ ಅರಣ್ಯಕ್ಕೆ ಈ ಯೋಜನೆಯಿಂದ ಸಂಚಕಾರವಿದೆ,ಕುದುರೆಮುಖ ಐರನ್ ಕಂಪೆನಿಯಿಂದ ಆದ ಪರಿಸರ ಹಾನಿ ನಮ್ಮ ಕಣ್ಣಮುಂದೆ ಇದೆ,ಹಾಗಿದ್ದಾಗ ಪರಿಸರವನ್ನು ಹಾಳುಮಾಡುವ ಇಂಥಹ ಯೋಜನೆ ಬೇಕೆ? ಇದರಿಂದ ಮುಂದಿನ ದಿನಗಳಲ್ಲಿ ಪರಿಸರ,ವಾತಾವರಣದ ಹಾಗೂ ನೀರಿನ ಸರಬರಾಜಿನಲ್ಲಾಗುವ ಪರಿಣಾಮವನ್ನು ಉಹಿಸಲು ಸಾಧ್ಯವಿಲ್ಲಾ!ಕಳೆದ ವರ್ಷ ಅನುಭವಿಸಿದ ಬೀಕರ ಬರಗಾಲಕ್ಕೆ ನಾವೇ ಹೊಣೆಗಾರರಲ್ಲವೇ?

ಪರಿಸರದ ಮೇಲಾಗುವ ಪರಿಣಾಮವನ್ನು ಅರಿತು ಹಲವಾರು ಜನ ಈಗ ಈ ಯೋಜನೆಯ ವಿರುದ್ದ ಸಹಿಸಂಗ್ರಹ ಅಭಿಯಾನ ಅರಂಬಿಸಿ ಇದನ್ನು ಪ್ರಧಾನಮಂತ್ರಿ, ರೈಲ್ವೆಮಂತ್ರಿ, ಪರಿಸರಖಾತೆಮಂತ್ರಿ ಮತ್ತು ಸಂಭದ ಪಟ್ಟವರಿಗೆ ಅನ್ ಲೈನ್ ಅಭಿಯಾನದ ಮೂಲಕ ಯೋಜನೆ ಜಾರಿಗೆ ತರದಂತೆ ಓತ್ತಾಯಿಸುತ್ತಿದ್ದಾರೆ, ಕ್ಯೆನಲ್ಲಿ ನೀರಿನ ಲೋಟಹಿಡಿದು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾ ಈ ಅಭಿಯಾನಕ್ಕೆ ಕ್ಯೆಜೋಡಿಸಿದ್ದಾರೆ, ಖ್ಯಾತ ಹಿಂದಿ ನಟ ಮಿಲಿಂದ್ ಸೊಮನ್,ಜುಹಿ ಚತುರ್ವೇದಿಯಲ್ಲದೇ ದೇಶವಿದೇಶಗಳಿಂದ ಅನೇಕರು ಈ ಅಭಿಯಾನಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ,ಕಾವೇರಿ ಕೊಳ್ಳ ಬರಿದಾದರೆ ಬೆಂಗಳೂರಿಗರಿಗೆ ಮುದೊಂದುದಿನ ಕುಡಿಯುವ ನೀರಿಗೂ ತತ್ವಾರವಾಗಬಹುದು, ಹಾಗಾಗಿ ಬೆಂಗಳೂರಿಗರು ಈ ಅಭಿಯನಕ್ಕೆ ಹೆಚ್ಚು ಬೆಂಬಲ ಸೂಚಿಸಬೇಕಿದೆ, ಇನ್ನೂ ಕಾಲ ಮಿಂಚಿಲ್ಲ, ಅಭಿಯಾನಕ್ಕೆ ಬೆಂಬಲ ಸೂಚಿಸಲು http://goo.gl/pwBhFb ತಾಣಕ್ಕೆ ಭೇಟಿಕೊಡಿ. ಅಭಿವೃದ್ದಿಯ ಹೆಸರಲ್ಲಿ ಪರಿಸರನಾಶ ಖಂಡಿತ ಕೂಡದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top