fbpx
ಸಮಾಚಾರ

58 ಕೋಟಿ ರೂ. ಸರಕಾರಿ ಅಂದಾಜಿನ ರಸ್ತೆಯನ್ನು 50 ಲಕ್ಷ ರೂ. ಗೆ ನಿರ್ಮಿಸಿದ 600 ಗ್ರಾಮಸ್ತರು !

ರಾಂಚಿ: ಜಾರ್ಖಂಡ್ ರಾಜ್ಯದ ಹತ್ತು ಹಳ್ಳಿಗಳ ಸುಮಾರು 600 ಗ್ರಾಮಸ್ಥರು ಒಟ್ಟಾಗಿ 20 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಿ ಯಲ್ಲರಿಗೂ ಮಾದರಿಯಾಗಿದೆ. ಈ ರಸ್ತೆ ಕಾಮಗಾರಿಗೆ ಸರಕಾರ ರೂ.58 ಕೋಟಿ ಅಂದಾಜು ವೆಚ್ಚ ಆಗಬಹುದು ಅಂದಾಜಿಸಿದರು. ಆದರೆ ಗ್ರಾಮಸ್ಥರು ಈ ರಸ್ತೆಯನ್ನು ಕೇವಲ ರು.50 ಲಕ್ಷಕ್ಕೆ ನಿರ್ಮಿಸಿದಾರೆ ಯಂದು ನ್ಯೂಸ್ 24 ವರದಿ ಮಾಡಿದೆ. ಹಳ್ಳಿಗಳ ನಡುವಿನ ಸಂಪರ್ಕ ರಸ್ತೆಯನ್ನು ಸರಕಾರ ನಿರ್ಮಿಸಲು ವಿಫಲವಾಗಿದುದ್ದರಿಂದ ಈ ಕಾರ್ಯವನ್ನು ತಾವೇ ಮಾಡಿ ಸರ್ಕಾರಕ್ಕೆ ಹಲವಾರು ಕೋಟಿ ರೂ. ಉಳಿತಾಯ ಮಾಡಿದಾರೆ. ಪ್ರತಿಯೊಬ್ಬ ಗ್ರಾಮಸ್ತನಿಂದ ಸಂಗ್ರಹಿಸಿದ ಹಣದಿಂದ ಈ ರಸ್ತೆ ಮಾಡಲಾಗಿದೆ.

ಈ 20 ಕಿ.ಮೀ ರಸ್ತೆ ಹೊರತಾಗಿ ಗ್ರಾಮಸ್ಥರು ಕೊಯ್ಲಾ ನದಿಗೆ ಅಡ್ಡಲಾಗಿ 100 ಅಡಿ ಸೇತುವೆ ನಿರ್ಮಿಸಿದ್ದಾರೆ. ಈ ಪ್ರದೇಶದಲ್ಲಿ 1196 ರಲ್ಲಿ ದೋಣಿಯೊಂದು ಮುಳುಗಡೆಯಾಗಿ ಆರು ಮಂದಿ ಬಲಿಯಾಗಿದ್ದರು, ಅಂದಿನಿಂದ ಈ ಸೇತುವೆ ಬೇಡಿಕೆ ಇತ್ತು.

ಮಾವೋ ಹಿಂಸೆ ಹಾಗೂ ಸರಕಾರಿ ಅಧಿಕಾರಿಗಳ ನಿರ್ಲಕ್ಷದಿಂದ ಬೇಸತ್ತ ಗ್ರಾಮಸ್ಥರು ಈ ಮಹೋನ್ನತ ಕಾರ್ಯದಿಂದ ಈಗ ಗಮರಿಯ, ರೇಲಾ, ಖಜೂರಿಯ, ಪೆರಾಲ್, ಬಡಗುವಾ, ಹಾಗೂ ಕಡ ಗ್ರಾಮಗಳಿಗೆ ರಸ್ತೆಗಳ ಸಂಪರ್ಕ ಸಿಕ್ಕಂತಾಗಿದೆ.

ಈ ರಸ್ತೆ ಕಾಮಗಾರಿಯನ್ನು ಫೆಬ್ರವರಿ 28 ರಲ್ಲಿ ಆರಂಭಿಸಲಾಗಿದ್ದು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top