fbpx
ಕರ್ನಾಟಕ

ಎಂಥಾ ಕಾಲ ಬಂತು ಸ್ವಾಮಿ… ಬೆಂಗಳೂರಿನಲ್ಲಿ ಮತ್ತೆ ಹರಿದ ನೆತ್ತರು…

ಕೆಂಗೇರಿಯ ಕಾಂಗ್ರೆಸ್ ಮುಖಂಡ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ನಾಗರಾಜ್ ಅಲಿಯಾಸ್ ಮಾರಹನುಮ ಉರುಫ್ ಚೀಚಿ(42) ರನ್ನು ದುಷ್ಕರ್ಮಿಗಳು ನೆನ್ನೆ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.ಕೊಚ್ಚಿ ಟ್ರಾವೆಲ್ ಏಜೆನ್ಸಿ ಮಾಲೀಕರೂ ಆದ ನಾಗರಾಜ್ ಎಂದಿನಂತೆ ತಮ್ಮ ಕಾರ್ಯ ಮುಗಿಸಿಕೊಂಡು ಹಿಂತಿರುಗುವಾಗ ಈ ಘಟನೆ ಸಂಭವಿಸಿದೆ.

ಸುಮಾರು 5 ದುಷ್ಕರ್ಮಿಗಳ ತಂಡ ಕೆಂಗೇರಿ shell ಪೆಟ್ರೋಲ್ ಬಂಕ್ ಬಳಿ ಅಡ್ಡಗಟ್ಟಿ ಮನಸೋ ಇಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ನೆಡೆಸಿದ್ದಾರೆ, ಆದರೆ ನಾಗರಾಜ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು ತನಿಖೆ ನೆಡೆಸುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಈ ತರಹದ ಘಟನೆಗಳು ನೆಡೆಯುತ್ತಿದ್ದು, ಸಾರ್ವಜನಿಕರ ಮನದಲ್ಲಿ ತಳಮಳ ಉಂಟು ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top