fbpx
ಸಮಾಚಾರ

ಬೆಂಗಳೂರು ಮಹಾನಗರ ಪಾಲಿಕೆಗೇಕೆ ಪರಭಾಷೆ ಕಾಲ್ ಸೆಂಟರ್?

ಬೆಂಗಳೂರು ನಗರದಲ್ಲಿರುವ 1 ಕೋಟಿ ಜನರಲ್ಲಿ ಶೇ  80ರಷ್ಟು ಜನರು ಇತರ ಭಾಷೆಯವರಾಗಿದ್ದು, ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಿಯೂ ನಾವು ನಮ್ಮದೆ ಭಾಷೆಯನ್ನು ಬಳಸಿಕೊಂಡು ನೆಮ್ಮದಿಯಾಗಿ ಇರಬಹುದು ಎನ್ನುವ ಆತ್ಮವಿಶ್ವಾಸದ ಬದುಕನ್ನು ನಡೆಸುತ್ತಿರುವುದು ಕನ್ನಡಿಗರ ದೌರ್ಬಲ್ಯವಾಗಿದೆ’
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಹುಭಾಷೆ ಕಾಲ್ ಸೆಂಟರ್ ಸ್ಥಾಪನೆಯನ್ನು ಐಟಿ ಬಿಟಿ ಕನ್ನಡಿಗರ ಗುಂಪು ವಿರೋಧಿಸಿ ಈ ಪತ್ರವನ್ನು ಬರೆದಿದ್ದಾರೆ. ಇದು ಹೇಗಿದೆ ಎಂದರೆ ಕರ್ನಾಟಕದಲ್ಲಿ ಕನ್ನಡಿಗರನ್ನ ತುಳಿಯುವ ವ್ಯವಸ್ಥಿತ ಸಂಚಿದು. ಭಾಷಾ ಆಧಾರದ ಮೇಲೆ ರಚಿತವಾಗಿರುವ ರಾಜ್ಯಗಳಲ್ಲಿ ಈ ರೀತಿ ಪರಭಾಷೆ ಓಲೈಕೆ ನಾಡಿನ ಸಾರ್ವಭೌಮತ್ವಕ್ಕೆ ಅಪಾಯ. ಇದರಿಂದ ಮುಂದೆ ವಲಸೆ ಹೆಚ್ಚಾಗಿ ಮೂಲಭೂತ ಪೂರೈಕೆಯನ್ನ ಪೂರೈಸಲಾಗದೆ ಪ್ರಾದೇಶಿಕ ಅಸಮತೋಲನ ಜೊತೆಗೆ ಅಸಮಾನತೆಯಂಥ ಅನೇಕ ಸಮಸ್ಯೆ ಎದಿರಾಗುವುದು ಖಂಡಿತ. ಜೊತೆಗೆ ಪ್ರಾದೇಶಿಕ ಸಂವಿಧಾನದ ವಿರೋಧಿ ನಡೆ ಕೂಡ ಇದು. ಭಾರತದಾದ್ಯಂತ ಇರುವ ಮಹಾನಗರ ಪಾಲಿಕೆಯಲ್ಲಿ ಎಲ್ಲೂ ಇರದ ಬಹುಭಾಷಾ ಕಾಲಸೆಂಟರ್ ಇಲ್ಲೆಕೆ? ಪರಭಾಷೆ ಓಲೈಕೆ ಯಾವ ಕಾರಣಕ್ಕಾಗಿ? ಈಗ ಮೊದಲೇ ಅನಿಯಂತ್ರಿತ ವಲಸೆಯಿಂದಾಗಿ ಬೆಂಗಳೂರು ಅನೇಕ ಮೂಲಭೂತ ಸಮಸ್ಯೆಗಳನ್ನ ಎದಿರುಸುತ್ತಿದೆ.

ಅದರ ಜೊತೆಗೆ ನೀವುಗಳು ಅದಕ್ಕೆ ಪೂರಕವಾಗಿ ವಲಸಿಗರಿಗಾಗಿ ಬಹುಭಾಷೆ ಕಾಲಸೆಂಟರ್ ತೆರದರೆ ವಲಸಿಗರಿಗೆ ರತ್ನಗಂಬಳಿ ಹಾಸಿ ಕರೆದಂತಾಗುತ್ತದೆ. ಇದರಿಂದಾಗಿ ಮುಂದಾಗುವ ಅನೇಕ ಸಮಸ್ಯೆಗಳಿಗೆ ಇದು ಮುನ್ನುಡಿಯಾಗುತ್ತದೆ. ಹೀಗಾಗಿ ಒಟ್ಟಾರೆ ನಾವೆಲ್ಲ ಕನ್ನಡಿಗರು ಒಕ್ಕೂರಲಿಂದ ಹೇಳುವುದೆನೆಂದರೆ ಬಹುಭಾಷಾ ಕಾಲಸೆಂಟರ್ ಬೇಡ, ಇದನ್ನೂ ಮೀರಿ ನೀವು ತಂದುದ್ದಾದಲ್ಲಿ ಕರುನಾಡಿನ ಜನತೆಯ ಉತ್ತರವನ್ನು ನೀವು ಮುಂದೆ ಎದಿರಿಸಬೇಕಾಗುತ್ತದೆ

ಬಹುಭಾಷಾ ಕಾಲ್ ಸೆಂಟರ್ ಪರಿಣಾಮಗಳು :

1. ವಲಸೆಗೆ ರತ್ನಗಂಬಳಿ ಹಾಸಿ ಕರೆದಂಗಾಗುತ್ತದೆ.

2. ಭಾಷಾವಾರು ರಾಜ್ಯಗಳಲ್ಲಿ ಪ್ರಾದೇಶಿಕ ಅಸಮಾನತೆಗೆ ಹಾದಿ ಮಾಡಿ ಕೊಟ್ಟಂತಾಗುತ್ತದೆ.

3. ನೀರು, ಮಾಲಿನ್ಯ, ಸ್ಥಳ ಇತ್ಯಾದಿ ಮೂಲಬೂತ ಸಮಸ್ಯೆಗಳು ಹೆಚ್ಚಾಗುತ್ತವೆ.

4. IISC ವಿಜ್ಞಾನಿಗಳು ಮೊನ್ನೆಯ ವರದಿ ಪ್ರಕಾರ ಬೆಂಗಳೂರಿಗೆ ಇನ್ನಷ್ಟು ವಲಸೆ ಆದರೆ ಅದು ಅವೈಜ್ಙಾನಿಕ.

5. ವಲಸೆಯಿಂದ ಬದ್ರತೆಗೆ ದಕ್ಕೆಯಾಗಿ ಸಮಾಜದಲ್ಲಿ ಅಸುರಕ್ಷೆ ತಾಂಡವವಾಡುತ್ತೆ.

6. ಡ್ರಗ್ಸ್, ಗಾಂಜಾದಂತ ಮಾದಕ ವಸ್ತುಗಳು ವಲಸಿಗರ ಜೊತೆ ಒಳ ಬರುತ್ತವೆ.

7. ಬೆಂಗಳೂರಿನ ವಲಸೆ ಹೆಚ್ಚಾದಂತೆ ಕರ್ನಾಟಕದ ಜನಸಂಖ್ಯೆಯು ಹೆಚ್ಚಾಗಿ ಇಡಿ ರಾಜ್ಯಕ್ಕೆ ಪೆಟ್ಟು ಬಿಳುತ್ತೆ. ಒಟ್ಟಾರೆ ಕರ್ನಾಟಕ ಹಿತ ದೃಷ್ಟಿ , ಕನ್ನಡಿಗರ ಸಾರ್ವಭಾಮತ್ವ ಮತ್ತು ಸಂವಿಧಾನದ ವಿರೋದಿ ನಡೇಯಾಗುತ್ತದೆ ಇದು. ಹಿಗಾಗಿ ಮಾನ್ಯ ಪಾಲಿಕೆ ಮಾಹಾಪೌರ ಮಂಜುನಾಥ್ ರೆಡ್ಡಿಯವರು ಈ ಆದೇಶವನ್ನ ಶೀಘ್ರವಾಗಿ ಹಿಂಪಡೆದು ಬೆಂಗಳೂರನ್ನ ರಕ್ಷಿಸಬೇಕಾಗಿ ವಿನಂತಿ. ಐಟಿ ಮತ್ತು ಬಿಟಿ ಕನ್ನಡ ಬಳಗ

`ಕರ್ನಾಟಕದಲ್ಲಿ 6 ಕೋಟಿಗೂ ಅಧಿಕ ಸಂಖ್ಯೆ ಜನರಿದ್ದು, ಅದರಲ್ಲಿ 1 ಕೋಟಿ ಜನರು ಬೆಂಗಳೂರು ನಗರವೊಂದರಲ್ಲಿಯೇ ಇದ್ದಾರೆ. ಆದರೆ, ರಾಜ್ಯದ ರಾಜಧಾನಿಯಲ್ಲೇ ನಿಜವಾದ ಕನ್ನಡಿಗರು ಯಾರು ಎಂದು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.

`ರಾಜ್ಯದಲ್ಲಿಯೇ ಕನ್ನಡ ಭಾಷೆ ಉಳಿಸಿ ಎಂಬ ಕೂಗು ಕೇಳಿ ಬರುತ್ತಿರುವುದು ಕನ್ನಡಕ್ಕೆ ಒದಗುತ್ತಿರುವ ದುರ್ಗತಿಯ ಸಂಕೇತ. ಈ ಬಗ್ಗೆ ಪ್ರತಿ ಕನ್ನಡಿಗರೂ ಗಂಭೀರವಾಗಿ ಚಿಂತಿಸಬೇಕಿದೆ’

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top