fbpx
ಸಮಾಚಾರ

ಭಾರತಕ್ಕೆ ಮತ್ತೊಂದು ಗರಿ… ದೇಸಿ ನಿರ್ಮಿತ ಕ್ಷಿಪಣಿ ಯಶಸ್ವಿ ಉಡಾವಣೆ…

ಇಂದು ಮುಂಜಾನೆ 8.15ಕ್ಕೆ ಸರಿಯಾಗಿ ಇಸ್ರೇಲ್-ಭಾರತ ಜಂಟಿ ತಂತ್ರಜ್ಞಾನದಿಂದ ಇಸ್ರೇಲ್ ಸಹಯೋಗದಲ್ಲಿ ದೇಸೀಯವಾಗಿ ನಿರ್ಮಿಸಲಾದ ಭೂಮಿಯಿಂದ ಗಗನಕ್ಕೆ ಚಿಮ್ಮುವ ಹೊಸ ಕ್ಷಿಪಣಿಯನ್ನು ಬಾಲಸೋರ್ ನ ಒರಿಸ್ಸಾ ಕಡಲ ತೀರದ ವಾಯು ನೆಲೆಯಿಂದ ಇಂದು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು ಎಂದು ಡಿ ಆರ್ ಡಿ ಓ ಅಧಿಕಾರಿಗಳು ತಿಳಿಸಿದ್ದಾರೆ.

ಡಿ ಆರ್ ಡಿ ಓ ಗೆ ಸೇರಿದ ಹೈದರಬಾದ್ ನಲ್ಲಿರುವ ಭಾರತೀಯ ರಕ್ಷಣಾ, ಸಂಶೋಧನೆ ಅಭಿವೃದ್ದಿ ಪ್ರಯೋಗಾಲಯದಲ್ಲಿ ಇಸ್ರೇಲ್ ಮತ್ತು ಭಾರತ ತಂತ್ರಜ್ಞಾನಗಳ ನೆರವಿನಿಂದ ಈ ಕ್ಷಿಪಣಿಯನ್ನು ಸಿದ್ದಪಡಿಸಲಾಗಿದ್ದು ಕ್ಷಿಪಣಿ ನಿರ್ದಿಷ್ಟ ಗುರಿಯಲ್ಲಿ ಸಾಗಲು ಮತ್ತು ಅದನ್ನು ನಿಯಂತ್ರಿಸಿ ಮುನ್ನಡೆಸಲು ಬಹು ಕಾರ್ಯಭಾರತದ ನಿಗಾವಹಿಸುವ ಮತ್ತು ಯಾವುದೇ ಅಪಾಯದ ಮುನ್ಸೂಚನೆ ನೀಡಬಲ್ಲ ಥ್ರಿಯೇಟ್ ಅಲರ್ಟ್ ರಾಡಾರ್(ಎಂಎಫ್-ಎಸ್ಟಿಎಆರ್) ಅನ್ನು ಸಹ ಜೋಡಿಸಲಾಗಿದೆ.

ಈ ಯಶಸ್ವಿ ಉಡಾವಣೆಯಿಂದ ನಮ್ಮ ಭರವಸೆ ಹೆಚ್ಚಾಗಿದ್ದು, ಮುಂದಿನ ಎಲ್ಲ ಗುರಿಗಳನ್ನು ಯಶಸ್ವಿಯಾಗಿ ತಲುಪುವ ವಿಶ್ವಾಸವಿದೆ ಎಂದು ಡಿ ಆರ್ ಡಿ ಓ ಅಧಿಕಾರಿಗಳು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top