fbpx
ಸಮಾಚಾರ

ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ ವಿವರ

ಬೆಂಗಳೂರು, ಜೂನ್ 29 : ದಿ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು ಕಿರಿಯ ಸಹಾಯಕ ಗ್ರೇಡ್-2 ಮತ್ತು ಜವಾನರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22 ಜುಲೈ 2016.

ಕಿರಿಯ ಸಹಾಯಕ ಗ್ರೇಡ್ – 2 30 ಹುದ್ದೆಗಳು ಮತ್ತು 5 ಜವಾನರ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಜಿಗಳನ್ನು ಸಲ್ಲಿಸಲು ಜುಲೈ 13ರೊಳಗೆ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿಸಿದ ಬಳಿಕ ಅರ್ಜಿ ಶುಲ್ಕ ಪಾವತಿ ಮಾಡಿ, ಸ್ವದೃಡೀಕೃತ ಯಥಾಪ್ರತಿಗಳನ್ನು ಜುಲೈ 22ರೊಳಗೆ ಬ್ಯಾಂಕಿಗೆ ಕಳುಹಿಸಬೇಕು.

ಕಿರಿಯ ಸಹಾಯಕ ಗ್ರೇಡ್ – 2 : ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಎಸ್‌ಸಿ (ಪಿಸಿಎಂ) /ಬಿಕಾಂ/ಬಿಬಿಎಂ/ಬಿಸಿಎ/ಬಿಇ(ಐಎಸ್/ಸಿಎಸ್)/ಜಿ.ಡಿ.ಸಿ ಪ್ರಮಾಣ ಪತ್ರ ಹೊಂದಿದ ಬಿಎ ಪದವೀಧರರಾಗಿರಬೇಕು. ಪದವಿಯಲ್ಲಿ ಮೂರು ವರ್ಷಗಳ ಸರಾಸರಿ ಶೇ 50 ಅಂಕಗಳನ್ನು ಪಡೆದಿರಬೇಕು.

jobs

ಬ್ಯಾಂಕಿಂಗ್ ಕ್ಷೇತ್ರದ ಫಿನಾಶ್ಮಿಯಲ್ ಕೋರ್ಸ್ ಪದವಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ 1 ವರ್ಷಕ್ಕೂ ಹೆಚ್ಚಿನ ಅನುಭವ, ಗ್ರಾಜುಯೇಟ್ ಡಿಗ್ರಿ ಇನ್ ಕೋ-ಆಪರೇಶನ್ ಇದ್ದವರಿಗೆ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ : 30/4/2016ರಲ್ಲಿ ಇದ್ದಂತೆ ಪ.ಜಾ/ಪ.ಪಂ 40 ವರ್ಷ, ಹಿಂದುಳಿದ ಜಾತಿ/ಹಿಂದುಳಿದ ವರ್ಗ 38 ವರ್ಷ/ಇತರೆ ಗುಂಪಿನ ಅಭ್ಯರ್ಥಿಗಳಿಗೆ 35 ವರ್ಷ. ಅಭ್ಯರ್ಥಿಗಳು ಕರ್ನಾಟಕದ ನಿವಾಸಿಗಳಾಗಿದ್ದು, ಕನ್ನಡ ಓದುವ/ಬರೆಯುವ ಜ್ಞಾನ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ.

ಜವಾನರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಬ್ಯಾಕಿಂಗ್ ಕ್ಷೇತ್ರದಲ್ಲಿ ಸುಮಾರು 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಲಘು ವಾಹನ ಚಲಿಸಲು ಪರವಾನಿಗೆ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ.

ವಯೋಮಿತಿ : 30/4/2016ರಲ್ಲಿ ಇದ್ದಂತೆ. ಪ.ಜಾ/ಪ.ಪಂ 40 ವರ್ಷ, ಹಿಂದುಳಿದ ಜಾತಿ/ಹಿಂದುಳಿದ ವರ್ಗ 38 ವರ್ಷ/ಇತರೆ ಗುಂಪಿನ ಅಭ್ಯರ್ಥಿಗಳಿಗೆ 35 ವರ್ಷ. ಅಭ್ಯರ್ಥಿಗಳು ಕರ್ನಾಟಕದ ನಿವಾಸಿಗಳಾಗಿದ್ದು, ಕನ್ನಡ ಓದುವ/ಬರೆಯುವ ಜ್ಞಾನ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ.

source: kannada.oneindia

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top