fbpx
ಕರ್ನಾಟಕ

ತುಂಗಭದ್ರಾ ಜಲಾಶಯಕ್ಕೆ 60 ವರ್ಷದ ಸಂಭ್ರಮ

ಹೈದರಾಬಾದ್ ಕರ್ನಾಟಕ ಪ್ರದೇಶದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಷಷ್ಟ್ಯಬ್ದ ಸಂಭ್ರಮ. ಜಲಾಶಯ ನಿರ್ಮಾಣವಾಗಿ ಜು.1ರಂದು 6 ದಶಕ ಪೂರೈಸಿದೆ. ಈ ಸಂಭ್ರಮದ ಮಧ್ಯೆ ಜಲಾಶಯದ ಆಯಸ್ಸು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂಬ ಆಂತಕವೂ ಎದುರಾಗಿದೆ. ಅದೆಲ್ಲದರ ಮಾಹಿತಿ ಇಲ್ಲಿದೆ.

ತುಂಗಭದ್ರ ಅಣೆಕಟ್ಟು, ಕೃಷ್ಣಾ ನದಿಯ ಉಪನದಿಯಾದ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಅಣೆಕಟ್ಟು ಕರ್ನಾಟಕದ ಹೊಸಪೇಟೆ ನಗರದ ಹತ್ತಿರದಲ್ಲಿದೆ. ಇದು ನೀರಾವರಿ ಸೇವೆಯ ವಿವಿಧೋದ್ದೇಶವುಳ್ಳ ಅಣೆಕಟ್ಟು., ವಿದ್ಯುತ್, ಪ್ರವಾಹ ನಿಯಂತ್ರಣ, ಇತ್ಯಾದಿ ಈ ಹಿಂದಿನ ಹೈದರಾಬಾದ್ ರಾಜ್ಯದ ಹಿಂದಿನ ಮದ್ರಾಸ್ ಪ್ರಾಂತ್ಯದ ಜಂಟಿ ಯೋಜನೆಯಲ್ಲಿ ನಿರ್ಮಾಣ ಆರಂಭಿಸಿದರು. ನಂತರ 1953 ರಲ್ಲಿ ಅದು ಕರ್ನಾಟಕ ಮತ್ತು ಆಂಧ್ರ ಪ್ರದೇಶ ಜಂಟಿ ಯೋಜನೆಯ ಆಯಿತು.

ತುಂಗಭದ್ರ ನದಿಯು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು.   ಈ ನದಿಗಳು ಪಶ್ಚಿಮ ಘಟ್ಟದ ವರಹ ಪರ್ವತದಡಿ ಉಗಮ ಹೊಂದಿ ಶಿವಮೊಗ್ಗ ಜಿಲ್ಲೆಯ ಕೂಡ್ಲಿ ಬಳಿ ಸಂಗಮಗೊಂಡು ತುಂಗಭದ್ರಾ ನದಿಯಾಗಿ ಹರಿದು ಕೊಪ್ಪಳ,ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಜೀವ ನದಿಯಾಗಿ ಹರಿದು . ಮುಂದೆ ಇದು ಆಂಧ್ರ ಪ್ರದೇಶದ ಕರ್ನೂಲು ಬಳಿ ಇದಕ್ಕಿಂತ ದೊಡ್ಡದಾದ ಕೃಷ್ಣಾ ನದಿಯನ್ನು ಸೇರುತ್ತದೆ. ಈ ನದಿಯ ಒಟ್ಟು ಉದ್ದ ಸುಮಾರು ೬೧೦ ಕಿ.ಮಿ.ಗಳು. ಇದರಲ್ಲಿ ೩೮೦ ಕಿ.ಮಿ.ನಷ್ಟು ಕರ್ನಾಟಕದಲ್ಲಿ ಹರಿಯುತ್ತದೆ.

ಮದ್ರಾಸು ಮತ್ತು ನಿಜಾಮ ಸರಕಾರಗಳ ಜಂಟಿ ಪ್ರಯತ್ನದಿಂದ 1945ರಲ್ಲಿ ತುಂಗಭದ್ರ ಯೋಜನೆ ಆರಂಭವಾಯಿತು . ರಾಜ್ಯಗಳ ವಿಂಗಡಣೆ ಬಳಿಕ 1953ರಲ್ಲಿ 125ಕೋಟಿ ರೂ.ವೆಚ್ಚದಲ್ಲಿ ಯೋಜನೆ ರೂಪುಗೊಂಡು ಆಂಧ್ರ ಪ್ರದೇಶ ಮತ್ತು ಮೈಸೂರು ರಾಜ್ಯಗಳ ಪ್ರಯತ್ನದಲ್ಲಿ ಮುಂದುವರೆಯಿತು.

ತುಂಗಭದ್ರ ಜಲಾಯನ ಪ್ರದೇಶವು 28 179. 20 ಚ.ಕೀ.ಮೀ. ವ್ಯಾಪ್ತಿ ಹೊಂದಿದ್ದು ಜಲಾಯಶಯದ ನೀರಿನಿಂದ ಆವೃತವಾದ ಪ್ರದೇಶವು 378.14 ಚ.ಕೀ.ಮೀ. ಇದ್ದು ಸುಮಾರು 80ಕಿ.ಮೀ.ಸುತ್ತಳತೆ ಹೊಂದಿರುವ ಜಲಾಶಯ 133 TMC ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ ಸುಮಾರು 10ಲಕ್ಷ ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಆದರೆ ಇಂದು 32TMCಕ್ಕೂ ಅಧಿಕ ಹೂಳು ತುಂಬಿದೆ .

ಸರ್ ಎಂ.ವಿಶ್ವೇಶ್ವರಯ್ಯ ನೇತೃತ್ವದ ಎಂಜಿನಿಯರ್‌ಗಳ ಮಂಡಳಿಯ ಮೇಲ್ವಿಚಾರಣೆಯಲ್ಲಿ ಪುನಃ ನಿರ್ಮಾಣ ಕಾರ್ಯ ಭರದಿಂದ ಸಾಗಿತು. 90 ಗ್ರಾಮಗಳು ಮುಳುಗಡೆಯಾಗಿ ಸುಮಾರು 55 ಸಾವಿರ ಜನರನ್ನು ಸ್ಥಳಾಂತರಿಸಲಾಯಿತು. 1953ರಲ್ಲಿ ಮೊದಲ ಬಾರಿಗೆ ಕಾಲುವೆಯಲ್ಲಿ ನೀರು ಹರಿಯಿತು. ನೂರಾರು ಕಿಲೋ ಮೀಟರ್ ಉದ್ದದ ಮೂರು ಕಾಲುವೆಗಳ ನಿರ್ಮಾಣವೂ ಮುಂದುವರೆದು 1960ರ ವೇಳೆಗೆ ಸಂಪೂರ್ಣಗೊಂಡಿತು. ಈಗಿನ ಹಾಗೆ ಅತ್ಯಾಧುನಿಕ ಯಂತ್ರಗಳು ಇಲ್ಲದೇ 340 ಕಿ.ಮೀ ಉದ್ದದ ಕಾಲುವೆಗಳ ನಿರ್ಮಾಣಕ್ಕೆ ಮಾನವ ಶಕ್ತಿ ಬಳಕೆಯಾಯಿತು! ಕಲ್ಲು ಗುಡ್ಡಗಳಲ್ಲಿ ಕಿಲೋಮೀಟರ್‌ಗಟ್ಟಲೇ ಸುರಂಗವನ್ನು ಕೊರೆದು ಕಾಲುವೆ ನಿರ್ಮಿಸಿದರು. ರಠಿಣ ಸವಾಲುಗಳನ್ನು ಎದುರಿಸಿ ಅಣೆಕಟ್ಟನ್ನು ನಿರ್ಮಿಸಿದ ತಿರುಮಲೆ ಅಯ್ಯಂಗಾರ್ ಆಧುನಿಕ ಭಗೀರಥನೇ ಸರಿ.

ತುಂಗಭದ್ರಾ ಅಣೆಕಟ್ಟು ಬಗೆಗೆ ವಿವರ :

 •  ಹೆಸರು = ತುಂಗಭದ್ರಾ ಅಣೆಕಟ್ಟು
 • ಅಣೆಕಟ್ಟೆ ನದಿ = ತುಂಗಭದ್ರಾ ನದಿ
 • ಸ್ಥಳ = ಹೊಸಪೇಟೆ, ಬಳ್ಳಾರಿ ಜಿಲ್ಲೆ, ಕರ್ನಾಟಕ, ಭಾರತ
 • ಅಕ್ಷಾಂಶ = 15 ಡಿಗ್ರಿ – 15’ – 0’’ N/ಉತ್ತರ
 • ರೇಖಾಂಶ = 76ಡಿಗ್ರಿ – 21’ – 0” E/ಪೂರ್ವ
 • ಅಣೆಕಟ್ಟೆ ವಿಧ = ಸಮ್ಮಿಶ್ರ, ನಾಲೆ ಉದ್ದ (701 ಮೀ.)
 • ಅಣೆಕಟ್ಟೆ ಉದ್ದ = 2,449ಮೀ.
 • ಅಣೆಕಟ್ಟೆ ಎತ್ತರ = 49.5೦ ಮೀ. ಅಡಿಪಾಯದಿಂದ
 • ಕೋಡಿಯ ಸಾಮರ್ಥ್ಯ = 650,000 ಕ್ಯೂಸೆಕ್ಸ್’
 • ನಿರ್ಮಾಣ ಆರಂಭ = 1949
 • ಉದ್ಘಾಟನೆ = 1953
 • ಯೋಜನೆ ಹಣ =
 • ಮಾಲೀಕರು = ಕರ್ನಾಟಕ ರಾಜ್ಯ
 • ನಿರ್ವಹಣೆ = ತುಂಗಭದ್ರಾ ಮಂಡಳಿ(ನಿಗಮ)
 • ಜಲಾಶಯದ ಹೆಸರು = ತುಂಗಭದ್ರಾ ಜಲಾಶಯ
 • ಜಲಾಶಯ ಸಾಮರ್ಥ್ಯ = 101(132) tmcft; 498ಮೀ.ಸಮುದ್ರ ಮಟ್ಟದಿಂದ(msl)
 • ನಿಜ ಸಾಮರ್ಥ್ಯ = 98.7 (116.84) tmcft (at 498ಮೀ./ msl)
 • ಅನುಪಯುಕ್ತ ಸಾಮರ್ಥ್ಯ = 2.3 tmcft (below 477.01ಮೀ. msl)
 • ಜಲಾಶಯ ಸಂಗ್ರಹಣಾ ಪ್ರದೇಶ = 28,180 km2
 • ಜಲಾಶಯದ ಮೇಲ್ಮೈಪ್ರದೇಶ =350km2
 • ನಿರ್ವಾಕರು = ಕರ್ನಾಟಕ ಸರ್ಕಾರ
 • ಪ್ಲಾಂಟ್ ಟರ್ಬೈನ್ = ಅಣೆಕಟ್ಟು ಬುಡದಲ್ಲಿ-ನಾಲೆ ಹರಿವು
 • ವಿದ್ಯುದುತ್ಪಾದಕ ಸಾಮರ್ಥ್ಯ = 127ಮೆ.ವಾ.MW

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top