fbpx
News

ಪ್ರಧಾನಿ ಮೋದಿ ಸಂಪುಟ ವಿಸ್ತರಣೆ; ಪ್ರಮಾಣ ವಚನ ಸ್ವೀಕರಿಸಿದ ರಮೇಶ್ ಜಿಗಜಿಣಗಿ

ನವದೆಹಲಿ: ಬಹು ನಿರೀಕ್ಷಿತ ಕೇಂದ್ರ ಸಂಪುಟ ಪುನಾರಚನೆಗೆ ಪ್ರಧಾನಿ ಮೋದಿ ಅಂಕಿತ ಹಾಕಿದ್ದು, 6 ಹಾಲಿ ಸಚಿವರಿಗೆ ಕೊಕ್ ನೀಡಿ ಕರ್ನಾಟಕದ ರಮೇಶ್ ಜಿಗಜಣಿಗೆ ಸೇರಿದಂತೆ ಒಟ್ಟು 19 ನೂತನ ಸಚಿವರು ಕೇಂದ್ರ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ  ಸಂಪುಟ ದರ್ಜೆ ಸಚಿವರಾಗಿ 19 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೂತ ಸಚಿವರಿಗೆ ಪ್ರಮಾಣ ವಚನ ಭೋದಿಸಿದರು. ರಾಷ್ಟ್ರಪತಿ ಭವನದಲ್ಲಿರುವ ಮೆಜೆಸ್ಟಿಕ್ ದರ್ಬಾರ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದ್ದು, ಎಲ್ಲ 19 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಪ್ರಕಾಶ್ ಜಾವ್ಡೇಕರ್ ಗೆ ರಾಜ್ಯ ಸಚಿವ ಸಂಪುಟ ಸ್ಥಾನದಿಂದ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಬಡ್ತಿ ನೀಡಲಾಗಿದೆ.

ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪಟ್ಟಿ ಇಂತಿದೆ.

 1. ಅರ್ಜುನ್ ರಾಮ್ ಮೇಘ್ವಾಲ್ (ಬಿಜೆಪಿ ಸಂಸದ, ರಾಜಸ್ತಾನ)
 2. ರಮೇಶ್ ಜಿಗಜಿಣಗಿ (ಬಿಜೆಪಿ ಸಂಸದ, ಕರ್ನಾಟಕ)
 3. ಪಿಪಿ ಚೌದರಿ (ಬಿಜೆಪಿ ಸಂಸದ, ರಾಜಸ್ತಾನ)
 4. ಸುಭಾಷ್ ರಾಮ್ ರಾವ್ ಭಮ್ರೆ (ಬಿಜೆಪಿ ಸಂಸದ, ಮಹಾರಾಷ್ಟ್ರ)
 5. ಎಂಜೆ ಅಕ್ಬರ್ (ಬಿಜೆಪಿ ಸಂಸದ, ಮಧ್ಯ ಪ್ರದೇಶ)
 6. ಅನಿಲ್ ಮಾಧವ್ ಡಾವೆ (ರಾಜ್ಯಸಭಾ ಸದಸ್ಯ, ಮಧ್ಯ ಪ್ರದೇಶ)
 7. ಫಗ್ಗಾನ್ ಸಿಂಗ್ ಕುಲಸ್ಟೆ (ಬಿಜೆಪಿ ಸಂಸದ, ಮಧ್ಯ ಪ್ರದೇಶ)
 8. ವಿಜಯ್ ಗೋಯೆಲ್ (ಬಿಜೆಪಿ ರಾಜ್ಯಸಭಾ ಸದಸ್ಯ, ರಾಜಸ್ತಾನ)
 9. ಪುರುಷೋತ್ತಮ ರೂಪಾಲ (ಬಿಜೆಪಿ ಉಪಾಧ್ಯಕ್ಷ)
 10. ಜಸ್ವಂತ್ ಸಿಂಗ್ ಭಬೋರ್ (ಬಿಜೆಪಿ ಸಂಸದ, ಗುಜರಾತ್)
 11. ಮಹೇಂದ್ ನಾಥ್ ಪಾಂಡೆ (ಬಿಜೆಪಿ ಸಂಸದ, ಉತ್ತರ ಪ್ರದೇಶ)
 12. ಅನುಪ್ರಿಯಾ ಪಟೇಲ್ (ಅಪ್ನಾದಳ್ ಎಂಪಿ, ಉತ್ತರ ಪ್ರದೇಶ)
 13. ಮನ್ಸುಖ್ ಮಾಂಡವಿಯಾ (ಬಿಜೆಪಿ ಸಂಸದ, ಗುಜರಾತ್)
 14. ಅಜಯ್ ತಮ್ಟಾ (ಬಿಜೆಪಿ ಎಂಪಿ, ಉತ್ತರಖಂಡ)
 15. ರಾಮ್ ದಾಸ್ ಅಥಲ್ವಾಲೆ (ಆರ್ ಪಿಐ ಮುಖಂಡ)
 16. ಕೃಷ್ಣ ರಾಜ್ (ಬಿಜೆಪಿ ಸಂಸದೆ, ಉತ್ತರ ಪ್ರದೇಶ)
 17. ಸಿ ಆರ್ ಚೌದರಿ (ಬಿಜೆಪಿ ಸಂಸದ, ರಾಜಸ್ತಾನ)
 18. ರಾಜನ್ ಗೊಹೆನ್ (ಬಿಜೆಪಿ ಸಂಸದ, ಅಸ್ಸಾಂ)
 19. ಎಸ್ ಎಸ್ ಅಹ್ಲುವಾಲಿಯಾ (ರಾಜ್ಯಸಭಾ ಸದಸ್ಯ, ಪಶ್ಚಿಮ ಬಂಗಾಳ)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top