ಏಮ್ಸ್ ವೈದ್ಯರು ಮಹಿಳಿಯಿಂದ ಅಪರೂಪದ ಮನವಿ ಸ್ವೀಕರಿಸಿದ್ದಾರೆ. ಹಠಾತ್ ನಿಧನ ಹೊಂದಿದ ಪತಿಯ ದೇಹದೊಂದಿಗೆ ಆಸ್ಪತ್ರೆಗೆ ಬಂದ ಮಹಿಳೆ, ಆತನ ವೀರ್ಯವನ್ನು ಸಂಗ್ರಹಿಸಿಕೊಡಲು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಆ ವೀರ್ಯ ಬಳಸಿ ಮಗು ಪಡೆಯುವುದು ಆಕೆಯ ಉದ್ದೇಶ.
ಕೆಲ ವಷಗಳ ಹಿಂದಷ್ಟೇ ವಿವಾಹವಾಗಿದ್ದ ಜೋಡಿಗೆ ಮಗು ಇಲ್ಲ. ‘ ಮೃತ ವ್ಯಕ್ತಿಯ ಪೋಷಕರು, ಸೊಸೆಯ ಮನವಿಯನ್ನು ಬೆಂಬಲಿಸಿದ್ದಾರೆ,’ ಎಂದು ವೈದ್ಯರು ತಿಳಿಸಿದ್ದಾರೆ.
ಮರಣೋತ್ತರ ವೀರ್ಯ ಸಂಗ್ರಹ(ಪಿಎಂಎಸ್ಆರ್) ಬಗ್ಗೆ ಯಾವುದೇ ಸ್ಪಷ್ಟ ನಿರ್ದೇಶನ ಹೊರಡಿಸಬೇಕು. ವೀರ್ಯ ಸಂಗ್ರಹಣೆಗೆ ಅವಕಾಶ ಇದ್ದಾಗ, ಸಮಥವಾಗಿ ಬಳಸಿಕೊಳ್ಳಬಹುದು. ಕುಟುಂಬದವರರಿಗೆ ಹಾಗೂ ಸಮಾಜಕ್ಕೆ ಇದರಿಂದ ಅನುಕೂಲವಾಗುವುದು,’ ಎಂಬುದು ವೈದ್ಯರ ವಾದ.
: postmortem sperm retrieval (PMSR) ಬಗ್ಗೆ ಭಾರತದಲ್ಲಿ ಸರಿಯಾದ ಮಾರ್ಗ ಸೂಚಿ ಇಲ್ಲ. ಮರಣೋತ್ತರವಾಗಿ ವ್ಯಕ್ತಿಯೊಬ್ಬನ ವೀರ್ಯ ಪಡೆಯುವ ಸಂಬಂಧ ಮಾರ್ಗಸೂಚಿ ಇಲ್ಲದ ಕಾರಣ ಈ ಮನವಿಯನ್ನು ತಿರಸ್ಕರಿಸಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಭವಿಷ್ಯದಲ್ಲಿ ಇಂಥ ಗೊಂದಲ ತಪ್ಪಿಸಲು ಸೂಕ್ತ ಮಾರ್ಗಸೂಚಿ ಸಿದ್ಧಪಡಿಸುವುದು ಒಳ್ಳೆಯದು ಎಂದಿದ್ದಾರೆ.[ಬ್ರಾಹ್ಮಣ ಹುಡುಗನ ವೀರ್ಯಕ್ಕೆ ಭಾರೀ ಬೇಡಿಕೆ] ಹ್ಯೂಮನ್ ರಿಪ್ರೊಡಕ್ಟಿವ್ ಸೈನ್ಸಸ್ ಎಂಬ ನಿಯತಕಾಲಿಕದಲ್ಲಿ ಬರೆದ ಲೇಖನವೊಂದರಲ್ಲಿ ಈ ವಿಷಯವನ್ನು ವೈದ್ಯರು ಬಹಿರಂಗಪಡಿಸಿದ್ದಾರೆ. ಭವಿಷ್ಯದಲ್ಲಿ ಇಂಥ ಗೊಂದಲ ತಪ್ಪಿಸಲು ಸೂಕ್ತ ಮಾರ್ಗಸೂಚಿ ಸಿದ್ಧಪಡಿಸುವಂತೆ ವೈದ್ಯರು ಮನವಿ ಮಾಡಿದ್ದಾರೆ. ಎಐಐಎಂಎಸ್‌ನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ಅವರ ಪ್ರಕಾರ, ವ್ಯಕ್ತಿಯೊಬ್ಬ ಮೃತಪಟ್ಟ ಒಂದು ದಿನದವರೆಗೂ ಆತನ ವೃಷಣದಲ್ಲಿ ವೀರ್ಯ ಜೀವಂತವಿರುತ್ತದೆ. ಅದನ್ನು ಸಂಗ್ರಹಿಸುವುದು ಸುಲಭ ವಿಧಾನ. ಕೇವಲ ಐದು ನಿಮಿಷದಲ್ಲಿ ವೀರ್ಯವನ್ನು ಹೊರತೆಗೆಯಬಹುದು. ಆದರೆ, ಇದರಲ್ಲಿ ನೈತಿಕ ಹಾಗೂ ಕಾನೂನು ಸಂಕೀರ್ಣತೆಗಳಿವೆ ಎಂದಿದ್ದಾರೆ.[ಈ ದಂಪತಿಗಳಿಗೆ ಐಐಟಿ ವಿದ್ಯಾರ್ಥಿಯ ವೀರ್ಯವೇ ಬೇಕಂತೆ!] ದೇಶದಲ್ಲಿ ಎಆರ್‌ಟಿ ನಿಯಮಾವಳಿಯ ಪ್ರಕಾರ, ಮೃತ ಪತಿಯ ವೀರ್ಯವನ್ನು ಕೃತಕ ಗರ್ಭಧಾರಣೆ ವಿಧಾನದ ಮೂಲಕ ಮಹಿಳೆಗೆ ಬಳಸಲು ಅವಕಾಶವಿದೆ. ಆದರೆ ಇದು ಪತಿ ಜೀವಂತವಿದ್ದಾಗ ಸಂಗ್ರಹಿಸಿದ ವೀರ್ಯವಾಗಿರಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
