fbpx
Karnataka

ಕನ್ನಡಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ !

ಮೇಲ್ಮನೆಯಲ್ಲಿ ಕನ್ನಡದ ಕಹಳೆ !

ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ಶ್ರೀಮತಿ ನಿರ್ಮಲ ಸೀತಾರಾಮನ್ ರವರು ಇಂದು ರಾಜ್ಯ ಸಭೆಯಲ್ಲಿ ಕನ್ನಡಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಿರ್ಮಲ ರವರು ಮೂಲತಃ ಆಂಧ್ರ ದವರಾಗಿದ್ದು ಅವರ ಅತ್ತೆ-ಮಾವ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಈ ಹಿಂದೆ, ಅವರು ಕರ್ನಾಟಕದಿಂದ ರಾಜ್ಯ ಸಭೆಗೆ ಸ್ಪರ್ಧಿಸುವ ವೇಳೆಯಲ್ಲಿ ಪತ್ರಕರ್ತರು ಕನ್ನಡಲ್ಲಿ ಪ್ರಶ್ನೆ ಕೇಳಿದಾಗ, ಅವರು ಪ್ರಾಮಾಣಿಕವಾಗಿ ಕನ್ನಡವನ್ನು ಕಲಿಯುವ ಪ್ರಯತ್ನ ಮಾಡುತ್ತೇನೆಂದು ಹೇಳಿದ್ದರು.

ಪ್ರತಿಷ್ಠಿತ PwC ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಶ್ರೀಮತಿ ನಿರ್ಮಾಲವರ ಕನ್ನಡ ಪ್ರೇಮ ಸ್ವಾಗತಾರ್ಹ ! ಕನ್ನಡ ಬರದಿದ್ದರೂ ಬೇರೆ ಭಾಷೆಯಿಂದ ಬರೆಸಿಕೊಂಡು ಕನ್ನಡಲ್ಲೇ ಪ್ರಮಾಣವಚನ ಸ್ವೀಕರಿಸುವುದು ಕನ್ನಡಿಗರಿಗೆ ಹರ್ಷ ಮೂಡಿಸಿದೆ. ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹರವರು ಕನ್ನಡಲ್ಲಿ ಪ್ರಮಾಣವಚನ ಸ್ವೀಕರಿಸಿದ ವಿಡಿಯೋ ವನ್ನು ತಮ್ಮ ಅಧಿಕೃತ ಫೇಸ್ಬೂಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿರುವುದು ವಿಶೇಷ.

ನುಡಿದಂತೆ ನಡೆದಿರುವ [ಅಥವಾ, ಕನ್ನಡ ಕಲಿಯುವ ಪ್ರಾಮಾಣಿಕ ಪ್ರಯತ್ನವನ್ನು] ತಮ್ಮ ಪ್ರಮಾಣ ವಚನದಲ್ಲೇ ಮಾಡಿರುವುದು ಸಂತೋಷದ ಸಂಗತಿ.

ಇದು #ವೆಂಕಯ್ಯ_ಸಾಕಯ್ಯ ಹವಾ ?

ಈ ಹಿಂದೆ 6 ಬಾರಿ ಸತತವಾಗಿ ಕರ್ನಾಟಕದಿಂದ ಆಯ್ಕೆಯಾಗಿ, ಸಭೆ-ಸಮಾರಂಭಗಳಲ್ಲಿ ನನಗೆ ‘ಕನ್ನಡ ಬರಲ್ಲ’ ಅಂತಾನೆ ಹೇಳಿಕೊಂಡು ಮೆರೆದ ‘ತೆಲುಗುವಾಡು’ ನಾಯ್ಡು ಅಲಿಯಾಸ್ ವೆಂಕಯ್ಯ ನಾಯ್ಡು ವಿರುದ್ಧ ಸಾಮಾನ್ಯ ಕನ್ನಡಿಗ ಟ್ವಿಟ್ಟರ್ ಅಭಿಯಾನ ಕೈಗೊಂಡಿದ್ದು ಮತ್ತು ಅದಕ್ಕೆ ಅಪಾರ ಯಶಸ್ಸು ಕಂಡಿದ್ದು ಇಲ್ಲಿ ಸ್ಮರಿಸಬಹುದು.
ಟ್ವಿಟ್ಟರ್ ಅಭಿಯಾನಕ್ಕೆ ಮತ್ತು ಜನಾದೇಶಕ್ಕೆ ‘ಮನ್ನಣೆ’ ನೀಡಿದ ಬಿ.ಜೆ.ಪಿ ಕೋರ್ ಕಮಿಟಿ ವೆಂಕಯ್ಯ ರವರನ್ನು ರಾಜಸ್ಥಾನಕ್ಕೆ ವರ್ಗಾಯಿಸಿತ್ತು.

ಕನ್ನಡಿಗ ‘ತೊಡೆ ತಟ್ಟಿದರೆ’ ಅದು ದೆಹಲಿ ವರೆಗೂ ಕೇಳುತ್ತೆ ಅನ್ನವುದಕ್ಕೆ ಬದಲಾದ ವಿದ್ಯಮಾನಗಳೇ ಸಾಕ್ಷಿ. ನಾಮಪಾತ್ರ ಸಲ್ಲಿಸುವ ಸಮಯದಲ್ಲಿ ಕನ್ನಡ ಕಲಿಯುವ ಪ್ರಯತ್ನಕ್ಕೆ ‘ಶುಭಾರಂಭ’ ದೊರೆತಿರುವುದು ಕನ್ನಡಿಗರ ‘ಭಾಗ್ಯ’ ಎಂದರೆ ತಪ್ಪಾಗಲ್ಲ. ಅತ್ಯಂತ ಘಟಾನುಘಟಿಗಳ ಸಂಪುಟದಲ್ಲಿ ವಾಣಿಜ್ಯ ಮತ್ತು ವಿತ್ತ ಸಚಿವೆ [ರಾಜ್ಯ ದರ್ಜೆ] ವಾಗಿರುವ ನಿರ್ಮಾಲಾ ಸೀತಾರಾಮನ್ ರವರ ‘ಮೇಲ್ಮನೆ’ ಯಲ್ಲಿ ಹೊತ್ತು ಉರಿಯುತ್ತಿರುವ ‘ಕಳಸ ಬಂಡೂರಿ’ ವಿಷಯವನ್ನು ಪ್ರಸ್ತಾಪಿಸಲಿ ಮತ್ತು ಕರ್ನಾಟಕದ ಎಲ್ಲ ಸಂಸದರು ಇದರ ಬಗ್ಗೆ ‘ಧ್ವನಿ’ ಎತ್ತ್ತಲಿ ಎಂದು ಈ ಮೂಲಕ ಮನವಿ ಮಾಡಿಕೊಳ್ಳೋಣ.

ಶ್ರೀಮತಿ ನಿರ್ಮಲ ಸೀತಾರಾಮನ್ ರವರು ಇಂದು ರಾಜ್ಯ ಸಭೆಯಲ್ಲಿ ಕನ್ನಡಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

ನಮ್ಮಲ್ಲಿ ಜನಪ್ರಿಯ

To Top