fbpx
Karnataka

ಗುರುಪೂರ್ಣಿಮೆಯನ್ನು ಏಕೆ ಆಚಿರುಸುತ್ತಾರೆ ಗೊತ್ತೇ?? ಇಲ್ಲಿ ಓದಿ…..

ಗುರು ಪೂರ್ಣಿಮಾ ಹಬ್ಬವು ಸಾಮಾನ್ಯವಾಗಿ ಹಿಂದೂ ಮತ್ತು ಬೌದ್ದರಿಂದ ಆಚರಿಸಲ್ಪಡುವ ಹಬ್ಬವಾಗಿದೆ.ಗುರು ಎಂಬುದು ಮೂಲತಃ ಸಂಸ್ಕ್ರತ ಪದ. “ಗು” ಎಂದರೆ ಕತ್ತಲು ಅಥವಾ ಅಜ್ಞಾನ , “ರು” ಎಂದರೆ ಕತ್ತಲನ್ನು ಹೋಗಳದಿಸುವವನು ಎಂದರ್ಥ. ಹಿಂದೂ ಧಾರ್ಮಿಕತೆಯಲ್ಲಿ ಗುರುವಿನ ಮೌಲ್ಯ ಮತ್ತು ತ್ಯಾಗವನ್ನು ಬಿಂಬಿಸಲು ಸಾಮಾನ್ಯವಾಗಿ ಆಚರಿಸಲ್ಪಡುವ ಹಬ್ಬವಾಗಿದೆ.ಹಿಂದೂ ಸಾಧು ಸಂತರು ತಮ್ಮ ದೈವ ಗುರು ವ್ಯಾಸರ ಸ್ಮರಣೆಗೋಸ್ಕರ ಆಶಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಿದ್ದರು.  ಬೌದ್ಧರು ತಮ್ಮ ಧರ್ಮಗುರು ಬುದ್ಧನ ಗೌರವಾರ್ಥವಾಗಿ ಆಚರಿಸುತ್ತಾರೆ. ಗೌತಮ ಬುದ್ಧನು ತನ್ನ ಗುರು ಸಾರನಾಥನ ಗೌರವಾರ್ಥವಾಗಿ ಉತ್ತರಪ್ರದೇಶದಲ್ಲಿ ಮೊತ್ತಮೊದಲ ಬಾರಿಗೆ ಆಚರಿಸಿದ್ದನು . ಅಲ್ಲದೆ ಅಂದು ಮಹರ್ಷಿ ವ್ಯಾಸರ ಜನ್ಮದಿನವೆಂದೂ ಮತ್ತು ಮಹರ್ಷಿಗಳು ಬ್ರಹ್ಮ ಸೂತ್ರವನ್ನು ಬರೆಯಲ್ ಆರಂಬಿಸಿ ಆಶಾಢಶುದ್ಧ ಪಾಡ್ಯದಂದು ತಮ್ಮ ವ್ಯಾಖ್ಯಾನಗಳನ್ನು ಮನುಕುಲಕ್ಕೆ ಅರ್ಪಣೆ ಮಾಡಿದ್ದರಿಂದಲೂ ಆದಿನವನ್ನು ಗುರುಪೂರ್ಣಿಮ ಎಂತಲೂ ಕರೆಯುತ್ತಾರೆ .

ಹಿಂದೂ ಮತ್ತು ಬೌದ್ಧ ಆಚರಣೆಗಳು

ಈ ದಿನ ಬೌದ್ಧರು ೮ ತತ್ವಗಳನ್ನು ಪಾಲಿಸುವ ಉಪೋಸಥ ಎಂಬ ಪದ್ಧತಿಯನ್ನು ಆತರಿಸುತ್ತಾರೆ. ವಿಪಸ್ಯನಾ ಧ್ಯಾನಿಗಳು ಈ ದಿನ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಧ್ಯಾನ ಮಾಡುತ್ತಾರೆ. ಮಳೆಗಾಲ, ಅಂದರೆ ವರ್ಷ (ವಸ್ಸ) ಇಂದಿನಿಂದಲೇ ಪ್ರಾರಂಭವಾಗುತ್ತದೆ. ಜುಲೈ ಇಂದ ಅಕ್ಟೋಬರ್ ವರೆಗೆ ಚಾಂದ್ರಮಾನ ಪಂಚಾಂಗದ ಮೂರು ತಿಂಗಳುಗಳ ಕಾಲ ಇರುವ ಈ ಮಳೆಗಾಲದಲ್ಲಿ ಬೌದ್ಧ ಸನ್ಯಾಸಿಗಳು ಒಂದೇ ಸ್ಥಳದಲ್ಲಿ ಇರುತ್ತಾರೆ, ಅದೂ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಇರುತ್ತಾರೆ. ಕೆಲವೊಂದು ಆಶ್ರಮಗಳಲ್ಲಿ ಸನ್ಯಾಸಿಗಳು ಈ ವಸ್ಸ ಕಾಲದಲ್ಲಿ ತೀವ್ರ ತಪಸ್ಸಿಗೆ ಒಳಗಾಗುತ್ತಾರೆ. ವಸ್ಸ ಕಾಲದಲ್ಲಿ ಹಲವಾರು ಸಾಮಾನ್ಯ ಬೌದ್ಧರು ತಮ್ಮ ಆಧ್ಯಾತ್ಮಿಕ ಅಭ್ಯಾಸ ತೀವ್ರಗೊಳಿಸಿ ಮಾಂಸ, ಮಧ್ಯ ಅಥವಾ ಧೂಮಪಾನವನ್ನು ತ್ಯಾಗ ಮಾಡುವಂತಹ ವಿರಕ್ತ ಪದ್ಧತಿಗಳನ್ನು ಪಾಲಿಸುತ್ತಾರೆ.

ಗುರುವಿನ ಸ್ಮರಣಾರ್ಥಕವಾಗಿ ಈ ದಿನ ವಿಶೇಷ ಮಂತ್ರಗಳಾದಂತಹ ವೇದವ್ಯಾಸರಿಂದಲೇ ರಚಿತವಾದ ೨೧೬ ಶ್ಲೋಕಗಳುಳ್ಳ ಗುರು ಗೀತಾ ಮಂತ್ರದ ಪಠಣ ಇಡೀ ದಿನ ಮಾಡಲಾಗುತ್ತದೆ. ಇದರ ಜೊತೆ ಅನೇಕ ಆಶ್ರಮ, ಮಠ ಅಥವಾ ಗುರು ಪೀಠ ಇರುವಂತಹ ಸ್ಥಳಗಳಲ್ಲಿ ಹಲವಾರು ಭಕ್ತಾದಿಗಳು ಸೇರಿ ವಿಶೇಷ ಭಜನೆ, ಕೀರ್ತನೆ ಮತ್ತು ಹೋಮಗಳನ್ನು ಆಯೋಜಿಸುತ್ತಾರೆ. ಈ ದಿನ ಗುರುಗಳ ಪಾದಪೂಜೆ ಮಾಡುವ ಮೂಲಕ ಶಿಶ್ಯರು ಮತ್ತೊಮ್ಮೆ ತಮ್ಮನ್ನು ತಾವೇ ಗುರುವಿಗೆ ಸಮರ್ಪಿಸಿಕೊಳ್ಳುತ್ತಾರೆ.ಎಂದಿನಂತೆ ಬರುವ ವರ್ಷವೂ ಗುರುವಿನ ಮಾರ್ಗದರ್ಶನ ಹಾಗೂ ಬೋಧನೆಗಳಿಗೆ ಬದ್ಧರಾಗಿರುತ್ತೇವೆ ಎಂದು ಶಿಶ್ಯರು ಸಂಕಲ್ಪ ಮಾಡುತ್ತಾರೆ. ಈ ದಿನದಂದು ವಿಶೇಷವಾಗಿ ಪಠಿಸುವ ಮಂತ್ರ ಇದು ಗುರುರ್ಬ್ರಹ್ಮ, ಗುರುರ್ವಿಷ್ಣು, ಗುರುರ್ದೇವೋ ಮಹೇಶ್ವರಾ । ಗುರು ಸಾಕ್ಷಾತ್ ಪರಬ್ರಹ್ಮ । ತಸ್ಮೈ ಶ್ರೀ ಗುರವೇ ನಮಃ.

ಗುರುಪೂರ್ಣಿಮೆಯ ಮಹತ್ವ

ಹಿಂದೂಗಳಿಗಾಗಿ, ಗುರುಪೂರ್ಣಿಮೆಯಂದು ಚಾತುರ್ಮಾಸ ಆರಂಭವಾಗುತ್ತದೆ. ರೈತರಿಗೆ ಈ ದಿನ ಅತ್ಯಂತ ಮಹತ್ವದ್ದಾಗಿದೆ. ಮಳೆಗಾಲದ ಪ್ರಾರಂಭವನ್ನು ಸೂಚಿಸುವ ಗುರುಪೂರ್ಣಿಮೆ ದವಸ ಧಾನ್ಯಗಳ ಬೆಳೆಯುವಿಕೆ ಅತೀ ಮುಖ್ಯವಾದ ಸಮಯವಾಗಿದೆ.

ಬೇಸಿಗೆಯ ತಾಪದಿಂದ ತಂಪಿನ ಅನುಭೂತಿಯನ್ನು ನಮಗೆ ನೀಡುವ ಮಾನ್ಸೂನ್ ಅಥವಾ ಮಳೆಗಾಲ ನಿಮ್ಮ ಆಧ್ಯಾತ್ಮಿಕ ಪಾಠಗಳನ್ನು ಪ್ರಾರಂಭಿಸಲು ಮುಖ್ಯವಾದ ದಿನಗಳಾಗಿವೆ. ಆದ್ದರಿಂದ ಗುರುಪೂರ್ಣಿಮೆಯಂದು ಸ್ವಲ್ಪ ಹೊತ್ತನ್ನು ಗುರುವಿಗಾಗಿ ಮೀಸಲಿಟ್ಟು ನಿಮ್ಮನ್ನು ಜ್ಞಾನದ ಕಡೆಗೆ ಕೊಂಡೊಯ್ದ ಆ ಮಹಾನ್ ಚೇತನಕ್ಕೆ ನಮಸ್ಕರಿಸಿ.

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:

ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:

 

ಎಂದು ಗುರುವಿನೆಡೆಗೆ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ಇದೊಂದು ಗುರು – ಶಿಷ್ಯರ ಪರಂಪರೆಯನ್ನು ಭಾಧ್ರಪಡಿಸಿ ಜಗತ್ತಿಗೆ ಸಾರುವ ಹಬ್ಬವೆಂತಲೂ ಹೇಳಬಹುದು.

 

ನಚೋರ ಹಾರ್ಯಂ ನಚರಾಜ ಹಾರ್ಯಂ

ನಭಾತ್ರಬಾಜ್ಯಂ ನಚ ಭಾರಕಾರಿ

ವ್ಯಯೇಕ್ರತೆ ವರ್ದತಿ ಏವ ನಿತ್ಯಂ

ವಿದ್ಯಾಧನಂ ಸರ್ವ ಧನಃ ಪ್ರಧಾನಂ.

 

ಅಂದರೆ ವಿದ್ಯೆಯನ್ನು ಯಾವ ಕಳ್ಳಕಾಕರಿಂದಲೂ ಮೋಸಮಾಡಿ ಕದ್ದೊಯ್ಯಲು ಸಾಧ್ಯವಿಲ್ಲ , ಯಾವ ರಾಜನೂ ಕೂಡ ತನ್ನ ಸಾಮರ್ಥ್ಯ ಮತ್ತು ಧರ್ಪದಿಂದ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಹೊತ್ತು ತಿರುಗಾಡಲು ಇದು ಭಾರವೂ ಅಲ್ಲ.ಹೇಗೆ ಖರ್ಚು ಮಾಡುತ್ತೇವೋ ಹಾಗೆ  ವರ್ಧಿಸುವಂತಹ , ಎಲ್ಲ ಸಂಪತ್ತಿಗಿಂತಲೂ ಶ್ರೇಷ್ಟವಾದುದು ಎಂದರ್ಥ. ಇಂತಹ ಅತ್ಯಮೂಲ್ಯ ಸಂಪತ್ತನ್ನು ಧಾರೆ ಎರೆದ ಗುರುವ್ರಂದಕ್ಕೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top