fbpx
Karnataka

ರವಿಬೆಳಗೆರೆಗೆ ಜೈಲು ಶಿಕ್ಷೆ!? ಪ್ರಕರಣದ ಸಂಕ್ಷಿಪ್ತ ವಿವರಣೆ

ಶಾಸಕರೊಬ್ಬರ ವಿರುದ್ದ ತಮ್ಮ ಪತ್ರಿಕೆಯಲ್ಲಿ ವರದಿ ಮಾಡಿರುವ ಹಿನ್ನೆಲೆಯಲ್ಲಿ ಶಾಸಕರೊಬ್ಬರು ತಮ್ಮ ಹಕ್ಕುಚ್ಯುತಿಯಾಗಿದೆಯೆಂದು ಆರೋಪಿಸಿರುವುದರಿಂದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಸೆರೆವಾಸ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಬೆಂಗಳೂರು: ಶಾಸಕರೊಬ್ಬರ ವಿರುದ್ದ ತಮ್ಮ ಪತ್ರಿಕೆಯಲ್ಲಿ ವರದಿ ಮಾಡಿರುವ ಹಿನ್ನೆಲೆಯಲ್ಲಿ ಶಾಸಕರೊಬ್ಬರ ತಮ್ಮ ಹಕ್ಕುಚ್ಯುತಿಯಾಗಿದೆಯೆಂದು ನಿಲುವಳಿ ಮಂಡಿಸಿದ್ದಾರೆ. ಹಕ್ಕುಚ್ಯುತಿಯಾಗಿದ್ದ ಸಂಧರ್ಭದಲ್ಲಿ ಪ್ರಕರಣದ ತನಿಕೆ ನೆಡೆಸಿದ್ದ ಕೆ. ಬಿ. ಕೋಳಿವಾಡ್ ನೇತೃತ್ವದ ಸಮಿತಿ, ಶಿಫಾರಸ್ಸು ಪ್ರತಿಯನ್ನು ಕೆ. ಬಿ. ಕೋಳಿವಾಡ್ (Speaker) ರವರಿಗೆ ಸಲ್ಲಿಸಿದೆ. ಸಭಾಪತಿ ಕೆ.ಬಿ ಕೋಳೀವಾಡ ಅರ್ಜಿಯನ್ನು ಪರಿಶೀಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಸಭಾಪತಿ ‘ಹಕ್ಕು ಭಾಧ್ಯತಾ ಸಮಿತಿ’ಗೆ ವರ್ಗಾಯಿಸಿದರು.

ಶಿಕ್ಷೆ ವಿಧಿಸಿದ ಹಕ್ಕು ಬಾಧ್ಯತಾ ಸಮಿತಿಯು ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ದಂಡವನ್ನು ವಿಧಿಸಿದೆ. ಸೋಮವಾರದಂದು ತನಿಖಾ ತಂಡ ವರದಿ ಸಲ್ಲಿಸಿದ್ದು, ಅಧ್ಯಕ್ಷ ಕೆ.ಬಿ ಕೋಳೀವಾಡ ರವಿಬೆಳಗೆರೆ ವಿರುದ್ದ ಶಿಕ್ಷೆ ಪ್ರಕಟಿಸಿದ್ದಾರೆ.

 ಜೈಲು ಶಿಕ್ಷೆಯ ಕಾಲಮಿತಿ: 6 ತಿಂಗಳಿಂದ – ಒಂದು ವರ್ಷ.

ಹಕ್ಕುಚ್ಯುತಿ ಹಾಗೆಂದರೇನು?:

“ಮಾನವನ ಸಂವಿಧಾನದ ಹಕ್ಕುಗಳಿಗೆ ಧಕ್ಕೆ ಉಂಟುಮಾಡುವುದು”… ಜನಪ್ರತಿನಿಧಿ ರವರ ವಿರುದ್ಧ ಸುಳ್ಳು ಆರೋಪ ಮಾಡಿದಾಗ, ತಪ್ಪು ಮಾಹಿತಿ ನೀಡಿದಾಗ ಹಕ್ಕುಚ್ಯುತಿ ಮಂಡಿಸಬಹುದು. ಜನಪ್ರತಿನಿಧಿ ತಮ್ಮ ಹಕ್ಕಿಗೆ ಚ್ಯುತಿ ಬಂದಿದೆ ಎಂದು ಆರೋಪಿಸಿ ವಿಧಾನಸಭೆಯಲ್ಲಿ ನ್ಯಾಯ ಒದಗಿಸುವಂತೆ ಕೋರಿಕೊಳ್ಳುವುದು.

ಶಾಸಕರೊಬ್ಬರ ನೇತೃತ್ವದಲ್ಲಿ ಹಕ್ಕು ಬಾಧ್ಯತಾ ಸಮಿತಿ ನೇಮಕ ಮಾಡಲಾಗಿರುತ್ತದೆ. ಇದರಲ್ಲಿ ಶಾಸಕರೊಬ್ಬರು ಅಧ್ಯಕ್ಷರಾದರೆ ಉಳಿದ 8-12 ಜನ ಶಾಸಕರು ಸದಸ್ಯರಾಗಿರುತ್ತಾರೆ. ಹಕ್ಕುಚ್ಯುತಿ ಪ್ರಕರಣಗಳಲ್ಲಿ ತನಿಖೆ ನಡೆಸುವುದು ಇದೇ ಸಮಿತಿ. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಹಕ್ಕು ಭಾಧ್ಯತಾ ಸಮಿತಿ ಅಂತಿಮ ವರದಿಯನ್ನು ಸ್ಪೀಕರ್ಗೆ ಸಲ್ಲಿಸುತ್ತದೆ. ವರದಿಯಲ್ಲಿ ಶಿಫಾರಸು ಮಾಡುವುದು ಒಂದು ಪ್ರಮುಖ ಭಾಗ. ಕೊನೆಗೆ ಅದನ್ನು ಸದನದ ಮುಂದೆ ಇಟ್ಟು ಒಪ್ಪಿಗೆ ಪಡೆಯಬೇಕು.

 ರವಿ ಬೆಳಗೆರೆರವರ ಪರಿಚಯ ನಿಮಗಿದೆಯೇ?

ಪತ್ರಕರ್ತ, ಖ್ಯಾತ ಲೇಖಕ ರವಿ ಬೆಳಗೆರೆ, ವಯಸ್ಸು ಐವತ್ನಾಲ್ಕು, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿವತಿ ಇಂದ ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. ಬೆಂಗಳೂರಿನ ಫೇಮಸ್ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕ.

ಸಭಾಪತಿ (ಸ್ಪೀಕರ್) ಕಾರ್ಯ:

ಸಭಾಪತಿಯ ಆಡಳಿತಾತ್ಮಕ ಪಾತ್ರವು ಚರ್ಚೆಗಳಿಗೆ ಮಧ್ಯಸ್ಥಿಕೆ ವಹಿಸುವುದಾಗಿದೆ. ನಿಯಮಗಳಿಗನುಸಾರವಾಗಿ ಕಾರ್ಯನಿರ್ವಹಿಸುವುದು, ಜತೆಗೆ ಮತಗಳ ಫಲಿತಾಂಶವನ್ನು ಪ್ರಕಟಿಸುವುದು (ಘೋಷಿಸುವುದು) ಮತ್ತು ಇತರೇ ಇದಕ್ಕೆ ಸಂಬಂಧಪಟ್ಟ ಕಾರ್ಯಗಳನ್ನು ನಿರ್ವಹಿಸುವುದಾಗಿದೆ. ಶಾಸನಸಭೆಯಲ್ಲಿ ಯಾರು ಮಾತನಾಡಬೇಕು ಮತ್ತು ಯಾವ ಸದಸ್ಯರು ಸಭೆಯ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಸಭಾಪತಿ ಹೊಂದಿರುತ್ತಾರೆ. ಕೆಲವೊಮ್ಮೆ ಔಪಚಾರಿಕ ಹಾಗೂ ಇತರೆ ಸಂದರ್ಭಗಳಲ್ಲಿ ಸಭಾಪತಿ ಸಹ ಸದಸ್ಯರಲ್ಲಿ ಒಬ್ಬರಂತೆ ಪ್ರತಿನಿಧಿಸಬಹುದಾಗಿದ್ದು, ಅವರ ಧ್ವನಿಗೂ ಸಹ ಮಹತ್ವವಿರುತ್ತದೆ.

ಇದರ ಪರಿಣಾಮ?

ಹೆಚ್ಚಿನ ಪ್ರಕರಣದಲ್ಲಿ ಹಕ್ಕು ಚ್ಯುತಿ ಮಾಡಿದವರನ್ನು ಕರೆಸಿ ವಾಗ್ದಂಡನೆ ನೀಡಲಾಗುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಸ್ಪೀಕರ್ ಕಚೇರಿಗೆ ಕರೆಸಿ ಎಚ್ಚರಿಕೆ ನೀಡಲೂಬಹುದು. ಅಥವಾ ಮುಂದೆ ಅಂಥ ತಪ್ಪಾಗದಂತೆ ಎಚ್ಚರ ವಹಿಸುತ್ತೇನೆ ಎಂದು ಸದನದ ಮುಂದೆ ಕ್ಷಮೆಯನ್ನೂ ಕೋರಬಹುದು. ಕೋರಿದ ಕ್ಷಮೆಯನ್ನೂ ಧ್ವನಿ ಮುದ್ರಿಸಲಾಗುತ್ತದೆ.

ಸದ್ಯ ಬೆಳಗೆರೆಯವರ ಪ್ರಕರಣದಲ್ಲಿ ಕೂಡ ಅಷ್ಟೆ. ಹಕ್ಕಿಗೆ ಚ್ಯುತಿ ಆಗಿದೆ ಎಂದು ದೂರು ನೀಡಲಾಗಿದೆ. ಅದನ್ನು ಸಮಿತಿ ಪರಿಶೀಲನೆ ನಡೆಸಿದೆ. ಜತೆಗೆ ಜೈಲು ಶಿಕ್ಷೆ ಹಾಗೂ Rs.10000/- ದಂಡವನ್ನು ವಿಧಿಸಿದೆ.
ಬೆಳಗೆರೆ ಪ್ರಕರಣದ ಬಗ್ಗೆ ಅಧಿವೇಶನಲ್ಲಿ ಶಾಸಕರು ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ, ಎಂಬುದರ ಮೇಲೆ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕರ ಭವಿಷ್ಯ ನಿಂತಿದೆ.

ಸಮಿತಿಯ ತೀರ್ಪನ್ನು ಪ್ರಶ್ನಿಸಿ ಬೆಳಗೆರೆ ಸ್ಪೀಕರ್‍ಗೆ ಮೇಲ್ಮನವಿ ಸಲ್ಲಿಸಬಹುದಾಗಿದ್ದರೂ ಸಮಿತಿ ಅಧ್ಯಕ್ಷ ಸ್ವತಃ ಕೋಳೀವಾಡರೇ ಆಗಿರುವುದರಿಂದ ತೀರ್ಪು ಮರುಪರಿಶೀಲನೆ ಸಾಧ್ಯತೆ ಕಡಿಮೆಯಿದೆ.

ಆದರೆ ಈ ವರೆಗೆ ಹಕ್ಕು ಚ್ಯುತಿ ವಿಚಾರವಾಗಿ ಯಾರನ್ನೂ ಬಂಧಿಸಲಾಗಿಲ್ಲ ಎಂಬ ಇತಿಹಾಸ ನಮ್ಮಲ್ಲಿರುವುದರಿಂದ ಬೆಳಗೆರೆಯವರು ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಂತೂ ಇಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top