fbpx
Karnataka

ಹೆಣ್ಣು ಭ್ರೂಣ ಹತ್ಯೆ ತಡೆಗೆ ಪಣತೊಟ್ಟ ಮಹಿಳಾ ಬೈಕರ್ಸ್

 

ಹೆಣ್ಣು ಮಗುವಿನ ಭ್ರೂಣ ಹತ್ಯೆ ಕಳವಳಕಾರಿ ಸಂಗತಿಯಾಗಿದ್ದು, ಅದನ್ನು ದೇಶಾದ್ಯಂತ ತಡೆಗಟ್ಟಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಖುದ್ದು ಆಸಕ್ತಿ ವಹಿಸಿ ”ಬೇಟಿ ಬಚಾವೋ, ಬೇಟಿ ಪಡಾವೋ” ಕಾರ್ಯಕ್ರಮವನ್ನು ಕಳೆದ ವರ್ಷ ಜನವರಿ 22ರಂದು ಜಾರಿಗೆ ತಂದಿದ್ದರು.

ಪ್ರಸವ ಪೂರ್ವ ಮತ್ತು ಪ್ರಸವಪೂರ್ವ ರೋಗ ನಿರ್ಣಯದ ತಂತ್ರ ಕಾಯ್ದೆ(ಪಿಸಿಪಿಎನ್ ಡಿಟಿ) 1994ರಲ್ಲಿ ಜಾರಿಗೆ ಬಂದಿದ್ದು, ಅದರಂತೆ ಭ್ರೂಣದ ಲಿಂಗ ಪತ್ತೆ ಮಾಡುವುದು ಕಾನೂನು ರೀತ್ಯಾ ಅಪರಾಧವಾಗಿದೆ.

ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡ್ತಿದೆ. ಜನರು ಜಾಗರೂಕರಾದಾಗ ಮಾತ್ರ ಸರ್ಕಾರದ ಪ್ರಯತ್ನ ಯಶಸ್ವಿಯಾಗಲು ಸಾಧ್ಯ. ಮನೆ ಮನೆಗೆ ಹೋಗಿ ಈ ಬಗ್ಗೆ ಶಿಕ್ಷಣ ನೀಡಿದಲ್ಲಿ ಮಾತ್ರ ಜನರು ಎಚ್ಚೆತ್ತುಕೊಳ್ಳುತ್ತಾರೆ. ಹಳೇ ನಂಬಿಕೆ ಬಿಟ್ಟು ಹೆಣ್ಣಿನ ರಕ್ಷಣೆಗೆ ನಿಲ್ಲುತ್ತಾರೆ. ಇದನ್ನು ಸ್ಪಷ್ಟವಾಗಿ ತಿಳಿದಿರುವ ನಾಲ್ವರು ಮಹಿಳೆಯರು ಹೆಣ್ಣು ಭ್ರೂಣ ಹತ್ಯೆ ತಡೆಗೆ ಪಣ ತೊಟ್ಟಿದ್ದಾರೆ. ಬೈಕ್ ಗ್ಯಾಂಗ್ ಕಟ್ಟಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

`ಬೈಕಿಂಗ್ ಕ್ವೀನ್ಸ್’ ಹೆಸರಿನ ಗ್ಯಾಂಗ್, ಏಷ್ಯಾ ದೇಶಗಳ 10 ಸಾವಿರ ಕಿಲೋಮೀಟರ್ ಸಂಚರಿಸಿದೆ. ವಿಶ್ವದಾದ್ಯಂತ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ನಾಲ್ವರು ಮಹಿಳೆಯರ ಈ ಟೀಂನ ಲೀಡರ್ 40 ವರ್ಷದ ಸೈಕಾಲಜಿಸ್ಟ್ ಸಾರಿಕಾ ಮೆಹ್ತಾ.

ಥೈಲ್ಯಾಂಡ್ ಮತ್ತು ಭೂತಾನ್ ದೇಶಗಳ ಶಿಕ್ಷಿತ ಸಂಘಟನೆಗಳ ಜೊತೆ ಈ ಗ್ಯಾಂಗ್ ಮಾತುಕತೆ ನಡೆಸಿದೆ. 10 ಏಷ್ಯಾ ದೇಶಗಳನ್ನು ಸುತ್ತಿದ ಮೊದಲ ಮಹಿಳಾ ಬೈಕರ್ಸ್ ಎಂಬ ಹೆಸರು ಪಡೆದಿರುವ ಇವರು ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top