fbpx
Karnataka

ಕ್ರಾಂತಿ ವೀರ ಮಂಗಲ್ ಪಾಂಡೆಯನ್ನ ನೆನೆಯೋಣ…

 

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮನ ಜನ್ಮದಿನ.  

ಮಂಗಳ ಪಾಂಡೆ (ದಿ. ೮ ಎಪ್ರಿಲ್ ೧೮೫೭) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿ ಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದರು. ೧೯೫೭ಲ್ಲಿ ಬ್ರಿಟಿಷರ ಮೇಲೆ ಮಾಡಿದ ಆಕ್ರಮಣವು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂಪವನ್ನು ಪಡೆಯಿತು.ಅವರು ವ್ಯಾಪಕವಾಗಿ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆಯಲಾಗುತ್ತದೆ. ಭಾರತ ಸರ್ಕಾರ ವಿಶಿಷ್ಠ ಸ್ವಾತಂತ್ರ್ಯ ಹೋರಾಟಗಾರ ಎಂದು ಸ್ಮರಣೆಗಾಗಿ ಭಾರತೀಯ ಅಂಚೆ ಚೀಟಿಯ ಜಾರಿ ಮಾಡಿದೆ. ಮೀರಿದ ಅವರ ಜೀವನ ಮತ್ತು ಕ್ರಿಯೆಗಳನ್ನು ಬೆಳ್ಳಿ ತೆರೆಗೆ ಮಾರ್ಪಡಿಸಲಾಗಿದೆ.

mangal-pandy

ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಘಟನೆ ಇದು. 1857ರ ಮಾರ್ಚ 29ರಂದು ಕಾಡತೂಸು ತುಂಬಿದ ಬಂದೂಕನ್ನು ಕೈಗೆತ್ತಿಕೊಂಡು ಕವಾಯತು ಮೈದಾನಕ್ಕೆ ನುಗ್ಗಿ ತನ್ನ ಸೊದರ ಸಿಪಾಯಿಗಳಿಗೆ “ನಿಮ್ಮ ಧರ್ಮದ ಮೇಲಾಣೆ! ಬನ್ನಿ ವಂಚಕ ಶತ್ರುಗಳ ಮೇಲೆ ಆಕ್ರಮಣ ಮಾಡೋಣ, ನಮ್ಮ ನಾಡಿನ ಸ್ವಾತಂತ್ರ್ಯವನ್ನು ಗಳಿಸೋಣ.” ಎಂದು ಮಂಗಲ್ ಪಾಂಡೆ ಕರೆಕೊಟ್ಟ. ಇದನ್ನು ಸಹಿಸದೆ ಅವನ ಮೇಲೆ ಎರಗಿ ಬಂದ ಬ್ರಿಟಿಷ್ ಸಾಜವಾರೆಂಟ್ – ಮೇಜರ್ ಹ್ಯೂಸನ್ ಮಂಗಲ್ ಪಾಂಡೆಯ ಬಂದೂಕಿನಂದ ಹೊರಟ ಗುಂಡೊಂದು ತಗುಲಿ ನೆಲಕ್ಕುರುಳಿದ. ಅದೇ ವೇಳೆಗೆ ಅಲ್ಲಿಗೆ ಬಂದ ಲೆಫ್ಟಿನಂಟ್ ಭಾಘ್ ಪಾಂಡೆಯ ಮೇಲೆ ಗುರಿಯಿಟ್ಟು ಗುಂಡು ಹಾರಿಸಿದನಾದರೂ ಅವನ ಗುರಿ ತಪ್ಪಿತು ಹಾಗೂ ಪಾಂಡೆಯ ಖಡ್ಗದ ಪ್ರಹಾರ ಅವನ ಮೇಲೆ ಬಿದ್ದು ಅವನೂ ನೆಲಕ್ಕೆ ಕುಸಿಯಬೇಕಾಗಿ ಬಂತು.

ಮಂಗಲ್ ಪಾಂಡೆಯನ್ನು ಸೆರೆಹಿಡಿಯುವ ಆದೇಶ ಮಾಡಿದರೂ, ಅದನ್ನು ಪಾಲಿಸಲು ಯವೊಬ್ಬ ಸಿಪಾಯಿಯು ಮುಂದಾಗಲಿಲ್ಲ. ಕೊನೆಗೆ ಜನರಲ್ ಹಿಯರ್ಸೇ ತನ್ನ ಜೊತೆ ಇದ್ದ ಕೆಲವರು ಐರೋಪ್ಯ ಸೈನೆಕರೊಂದಿಗೆ ಮಂಗಲ್ ಪಾಂಡೆಯತ್ತ ನುಗ್ಗಿದ. ಇದನ್ನು ಗಮನಿಸಿದ ಪಾಂಡೆ, ತಾನು ಪರಂಗಿಗಳ ಕೈಗೆ ಸಿಕ್ಕಿ ಬಿಳುವುದಕ್ಕಿಂತ ಅತ್ಮಾರ್ಪಣೆ ಮಾಡಿಕೊಳ್ಳವುದೇ ಲೇಸೆಂದು ತಿರ್ಮಾನಿಸಿ ತನ್ನ ಬಂದೂಕನ್ನು ಎದೆಯ ಕಡೆಗೆ ತಿರುಗಿಸಿ ಗುಂಡು ಹಾರಿಸಿಕೊಂಡ. ಗಾಯಗೊಂಡು ನೆಲಕ್ಕುರುಳಿದ ಅವನನ್ನು ಆಸ್ಪತ್ರೆಗೊಯ್ಯಲಾಯಿತು. ಗಾಯದಿಂದ ಚೆತರಿಸಿಕೊಂಡ ಮಂಗಲ್ ಪಾಂಡೆಯನ್ನು ಸೈನಿಕ ನ್ಯಾಯಸ್ಥಾನದಲ್ಲಿ ವಿಚಾರಣೆಗೊಳಪಡಿಸಲಾಯಿತು. ವಿಚಾರಣೆವೇಳೆ ಕ್ರಾಂತಿಯ ಸೂತ್ರಧಾರಿಗಳ, ಸಹಕಾರಿಗಳ ಹೆಸರುಗಳನ್ನು ತಿಳಸುವಂತೆ ಎಷ್ಟೇ ಬಲವಂತ ಪಡಿಸಿದರು, ಮಂಗಲ್ ಪಾಂಡೆ ಯಾರ ಹೆಸರನ್ನು ತಾನು ಹೆಳುವುದಿಲ್ಲವೆಂದು ಖಡಾಖಂಡಿತವಾಗಿ ತಿಳಿಸಿದ.

ಸೈನಿಕ ನ್ಯಾಯಸ್ಥಾನದ ತೀರ್ಪಿನಂತೆ ಏಪ್ರಿಲ್ 8ರಂದು ಗಲ್ಲಿಗೇರಿಸುವ ಮೂಹೂರ್ತ ನಿಶ್ಚಯವಾಯಿತು. ಆದರೆ ಇಡೀ ಬ್ಯಾರಕ್ಪುರದಲ್ಲಿ ಅವನನ್ನು ಗಲ್ಲಿಗೇರಿಸಲು ಯಾರೂ ತಯಾರಿರಲಿಲ್ಲ. ಬೇರೆ ದಾರಿಯಿಲ್ಲದೆ ಕಲ್ಕತ್ತಾದಿಂದ ನಾಲ್ವರು ನೇಣುಹಾಕುವವರನ್ನು ಕರೆಯಿಸಿ, ಏಪ್ರಿಲ್ 8ರಂದು ಬೆಳಗಿನ ಸಮಯದಲ್ಲಿ ಗಲ್ಲಿಗೇರಿಸಲಾಯಿತು. ಹೀಗೆ 1827, ಜುಲೈ 19ರಂದು ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯಾ ನಗ್ವಾ ಹಳ್ಳಿಯ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದ ಮಂಗಲ್ ಪಾಂಡೆ ಅಮರ ಹುತಾತ್ಮರ ಪಂಕ್ತಿಗೆ ಸೇರಿಬಿಟ್ಟ ಮತ್ತು ಅವನ ಚೇತನ ಹಿಂದೂಸ್ಥಾನದಾದ್ಯಂತ ಹಬ್ಬಿಕೊಂಡಿತು.

ಇದರೊಂದಿಗೆ 1857ರ ಸಂಗ್ರಾಮದಲ್ಲಿ ಸ್ವಧರ್ಮ ಮತ್ತು ಸ್ವರಾಜ್ಯಗಳಿಗೆ ಹೊರಡಿದವರನ್ನು ಶತ್ರುಗಳೂ ಹಾಗೂ ಸ್ನೇಹಿತರೂ ‘ಪಾಂಡೇ’ ಎಂಬ ಹೆಸರಿನಿಂದ ಕರೆಯಲಾರಂಭಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top