fbpx
Karnataka

ಹಾಸನ ಎ.ಸಿ. ವಿಜಯ ಆತ್ಮಹತ್ಯೆಗೆ ವಿಫಲ ಯತ್ನ…

ಎ.ಸಿ. ವಿಜಯ ಈ ಮೊದಲು ಹೈಸ್ಕೂಲು ಶಿಕ್ಷಕಿಯಾಗಿದ್ದವರು, ಕೆಎಎಸ್ ಆದ ಮೇಲೆ ಹಾಸನ ಉಪವಿಭಾಗಾದಿಕಾರಿಯಾಗಿ ನೇಮಕಗೊಂಡರು. ಹಾಸನ ಜಿಲ್ಲೆ ಕಂಡ ಅತಿ ದುರಹಂಕಾರಿ ಮತ್ತು ಭ್ರಷ್ಟ ಅಧಿಕಾರಿ ಈಕೆ. ಈಕೆಯನ್ನು ಅನೇಕ ದೂರುಗಳ ಹಿನ್ನೆಲೆಯಲ್ಲಿ ಹಾಸನ ವೈದ್ಯಕೀಯ ಕಾಲೇಜಿನ ಆಡಳಿತಾದಿಕಾರಿಯಾಗಿ ವರ್ಗಾಯಿಸಲಾಗಿದೆ. ಆದರೆ ಈಕೆ ಕೆಎಟಿ ತಡೆಯಾಜ್ಞೆ ತಂದು ವಾಪಾಸಾಗಿದ್ದರು. ಆದರೆ ಇವರಿಗೆ ಮತ್ತೆ ಉಪವಿಭಾಗಾದಿಕಾರಿ ಹುದ್ದೆ ವಹಿಸದಂತೆ ಆಗ್ರಹಿಸಿ ಹಾಸನದಲ್ಲಿ ಪ್ರತಭಟನೆ ಧರಣಿ ಸತ್ಯಾಗ್ರಹ ನಡೆದಿದೆ. ಈ ನಡುವೆ ಪೈಪೋಟಿಯ ಮೇಲೆ ಅದೇ ಹುದ್ದೆಗೆ ಕೇಳಲು ವಿಜಯಾ ರಾಜಕಾರಣಿಯೋರ್ವರಿಗೆ ೭೦ಲಕ್ಷ ನೀಡಿದ್ದರೆಂಬ ಖಚಿತ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ಅಸಹಾಯಕರಾದ ವಿಜಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಇವರಿಗೆ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಶಾಸಕ ಎಚ್ ಡಿ ರೇವಣ್ಣ (ದೇವೇಗೌಡರ ಪುತ್ರ) ಹಲವು ಬಾರಿ ಪತ್ರಿಕಾಗೋಷ್ಠಿ ನಡೆಸಿದ್ದರಲ್ಲದೆ ವರ್ಗಾಯಿಸುವಂತೆ ಆಗ್ರಹಿಸಿದ್ದರು

ಉಪವಿಭಾಗಾಧಿಕಾರಿ ವಿಜಯರವರ ವಿರುದ್ದ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಅವರನ್ನ ಜು.೨೨ರಂದು ಹಾಸನದ ಹಿಮ್ಸ್ ಆಸ್ಪತ್ರೆಗೆ ವರ್ಗಾವಣೆಗೊಳಿಸಿ ಆದೇಶಿಸಿದ್ರು. ಇವರ ಸ್ಥಾನಕ್ಕೆ ಪಾಂಡವಪುರದ ಎಸಿಯಾಗದ್ದ ಎಚ್.ಎಲ್.ನಾಗರಾಜು ಬಂದಿದ್ರು. ಆದ್ರೆ ವಿಜಯ ಸರ್ಕಾರಕ್ಕೆ ಸೆಡ್ಡು ಹೊಡೆದು ಕೆಎಟಿ ಮೊರೆಯೋಗಿ ಪುನಃ ಉಪವಿಭಾಗಾಧಿಕಾರಿ ಸ್ಥಾನಕ್ಕೆ ವಾಪಸ್ಸಾಗಿದ್ರು. ಆದ್ರೆ ವಿಜಯ ಒರ್ವ ಭ್ರಷ್ಟ ಅಧಿಕಾರಿಯಂತ ಸಾರ್ವಜನಿಕರು ಆರೋಪಿಸಿ ಅವರ ವಿರುದ್ದ ಸರಣಿ ಪ್ರತಿಭಟನೆ ಮಾಡಿದ್ರು. ಇದ್ರಿಂದ ಮನನೊಂದು ಕಳೆದ ೪ ದಿನಗಳಿಂದ ರಜೆಯ ಮೇಲೆ ತೆರೆಳಿದ್ರು. ಇಂದು ಮತ್ತೆ ಕೆ.ಎ.ಟಿ. ಮೊರೆಯೋಗಿದ್ರು. ಇಂದು ಈ ಸಂಬಂಧ ನ್ಯಾಯಾಲಕ್ಕೆ ಹಾಜರಾಗಿದ್ದ ವಿಜಯ ಮಧ್ಯಾಹ್ನ ೪ ಗಂಟೆಗೆ ಮನೆಗೆ ಬಂದಿದ್ದಾರೆ. ಮನೆಯ ತಮ್ಮ ರೂಮಿಗೆ ತೆರಳಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಶೋಭರಾಣಿ ಆಗಮಿಸಿ ಪರಿಶೀಲನೆ ನಡೆಸಿ ವಿಜಯರವನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ರು. ಆಸ್ಪತ್ರೆಗೆ ಜೆಡಿಎಸ್ ಮುಖಂಡ ರೇವಣ್ಣ ಆಗಮಿಸಿ ಆರೋಗ್ಯವನ್ನ ವಿಚಾರಿಸಿದ್ರು. ಜೊತೆಗೆ ಇದಕ್ಕೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜುರವರೇ ನೇರಹೊಣೆ ಹಾಗಾಗಿ ಅವರು ರಾಜೀನಾಮೆ ನೀಡಬೇಕು. ಅಂತ ವಾಗ್ದಾಳಿ ನಡೆಸಿ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published.

To Top