fbpx
Editor's Pick

ಝಣ ಝಣ… ಬಳೆ ಸ್ತ್ರೀ ಕುಲದ ಕಳೆ

ಭಾಗ್ಯದ ಬಳೆಗಾರ ಹೋಗಿ… ಬಾ… ನನ್ ತವರೀಗೆ

ನಿನ್ನ ತವರೂರ ನಾನೇನು ಬಲ್ಲೇನು

ಗೊತ್ತಿಲ್ಲ ಗುರಿಯಿಲ್ಲ ಓ ಬಾಲೆ

ತೋರಿಸೇ ನಿನ್ನಯಾ ತವರೂರ ಹಾದೀಯಾ॥

ಈ ಜಾನಪದ ಗೀತೆ ಕೇಳಿದ ಯಾವ ಹೆಣ್ಣು ಮಗಳು ತಾನೇ ರೋಮಾಂಚನಗೊಳ್ಳುವುದಿಲ್ಲ ಹೇಳಿ! ಇಂಥ ‘ಬಳೆ’ ಸ್ತ್ರೀಯ ಸೌಭಾಗ್ಯದ ಸಂಕೇತವೂ ಹೌದು. ಬಳೆ ಇಲ್ಲದ ಮೊಂಡು ಕೈಯನ್ನು ನೋಡಿ ಯಾವ ನಮ್ಮ ಭಾರತೀಯ ಮನವೂ ಸಹಿಸುವುದಿಲ್ಲ. ನಮ್ಮ ಸಂಸ್ಕೃತಿ – ಸಂಪ್ರದಾಯಗಳಲ್ಲಿ ಬಳೆಗಳು ಮತ್ತು ಬಳೆಗಾರನಿಗೆ ಒಂದು ಪವಿತ್ರವಾದ ಸ್ಥಾನಮಾನ, ಗೌರವಗಳಿವೆ.

ಮಹತ್ವ:-

*ಗಾಜಿನ ಬಳೆಗಳಿಂದ ನಿರ್ಮಾಣವಾಗುವ ನಾದಲಹರಿಗಳಿಂದಾಗುವ ಲಾಭಗಳು

  1. ‘ಬಳೆಗಳಿಂದ ನಿರ್ಮಾಣವಾಗುವ ನಾದಲಹರಿಗಳಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ-ಶಸ್ತ್ರಾಸ್ತ್ರಗಳ ಮೂಲಕ (ಮಾರಕ ಶಕ್ತಿಯ ಮೂಲಕ) ಇಂದ್ರಿಯಗಳ ರಕ್ಷಣೆಯಾಗಿ ಆಯಾಯ ಇಂದ್ರಿಯಗಳ ಸಾತ್ತ್ವಿಕತೆಯು ಹೆಚ್ಚಾಗುತ್ತದೆ.’
  1. ಬಳೆಗಳಿಂದ ಸ್ತ್ರೀಯರಲ್ಲಿರುವ ಕ್ರಿಯಾಶಕ್ತಿಯು ಜಾಗೃತವಾಗಿ ಸ್ತ್ರೀಯರ ದೇಹಕೋಶಗಳ ಶುದ್ಧಿಯಾಗುತ್ತದೆ, ಕೆಟ್ಟ ಶಕ್ತಿಗಳಿಂದ ಸ್ತ್ರೀಯರ ರಕ್ಷಣೆಯಾಗುತ್ತದೆ ಮತ್ತು ವಾಸ್ತುಶುದ್ಧಿಯಾಗುತ್ತದೆ.
  1. ಬಳೆಗಳ ಚಲನವಲನದಿಂದ ರಜೋಗುಣವು ನಿರ್ಮಾಣವಾಗುತ್ತದೆ. ಈ ರಜೋಗುಣವು ಸ್ತ್ರೀಯರ ದೇಹದಲ್ಲಿನ ಆದಿಶಕ್ತಿಯ ತತ್ತ್ವವನ್ನು ಕಾರ್ಯನಿರತಗೊಳಿಸಲು ಪೂರಕವಾಗಿರುತ್ತದೆ. ಬಳೆಗಳಲ್ಲಿರುವ ಕ್ರಿಯಾಲಹರಿಗಳು ಒಂದಾಗುವುದರಿಂದ ಅವು ಕ್ರಿಯಾಶಕ್ತಿಯ ಲಹರಿಗಳಿಂದ ತುಂಬಿಕೊಳ್ಳುತ್ತವೆ.
  1. ಜಾಗೃತವಾದ ಶಕ್ತಿತತ್ತ್ವದಿಂದ ಸ್ತ್ರೀಯರ ಪ್ರಾಣಮಯ ಮತ್ತು ಮನೋಮಯಕೋಶಗಳ ಶುದ್ಧಿಯಾಗಲು ಸಹಾಯವಾಗುತ್ತದೆ.
  1. ಕ್ರಿಯಾಶಕ್ತಿಯ ಲಹರಿಗಳು ದೇಹಕ್ಕೆ ಸ್ಪರ್ಶವಾಗುವುದರಿಂದ ಜೀವದ ಸೂರ್ಯನಾಡಿಯು ಕಾರ್ಯನಿರತವಾಗಿ ಶಕ್ತಿಲಹರಿಗಳು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತವೆ.
  1. ಬಳೆಗಳಿಂದ ಪ್ರಕ್ಷೇಪಿತವಾಗುವ ಕ್ರಿಯಾಶಕ್ತಿಯ ಲಹರಿಗಳಿಂದ ಜೀವದ ಸುತ್ತಲೂ ರಜೋಲಹರಿಗಳ ಗತಿಮಾನ ಕವಚವು ನಿರ್ಮಾಣವಾಗುತ್ತದೆ. ಇದರಿಂದಾಗಿ ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳಿಂದ ಜೀವದ ರಕ್ಷಣೆಯಾಗುತ್ತದೆ.
  1. ಆದಿಶಕ್ತಿಯ ಲಹರಿಗಳು ವಾಸ್ತುವಿನಲ್ಲಿ ಹರಡುವುದರಿಂದ ವಾಸ್ತುವಿನಲ್ಲಿರುವ ರಜ-ತಮ ಕಣಗಳ ವಿಘಟನೆಯಾಗಿ ವಾಸ್ತುವಿನ ಶುದ್ಧಿಯಾಗುತ್ತದೆ, ಇದರಿಂದಾಗಿ ಬಳೆಗಳ ಆಘಾತದಾಯಕ ನಾದಕ್ಕೆ ಕೆಟ್ಟ ಶಕ್ತಿಗಳು ಹೆದರುತ್ತವೆ.

ಕಾಲ ಬದಲಾದಂತೆಲ್ಲಾ ಜನರ ಆಚಾರ ವಿಚಾರ ನಂಬಿಕೆಗಳೆಲ್ಲವೂ ಬದಲಾಗ್ತಾಹೋಗುತ್ತಿದೆ. ಪಾರಂಪರಿಕವಾಗಿ ಬಂದ ಆಚರಣೆಗಳೆಲ್ಲವೂ ಆಧುನಿಕ ಜಗತ್ತಿಗೆ ತಕ್ಕಂತೆ ಹೊಚ್ಚ ಹೊಸ ಮಾರ್ಪಾಡನ್ನು ಪಡೆದುಕೊಳ್ಳುತ್ತಿವೆ. ಈಗ್ಯಾಕೆ ಈ ಮಾತು ಅಂತೀರಾ.. ಹಿಂದಿನ ಕಾಲದಲ್ಲಿ ಮದುವೆ ಸಂಭ್ರಮ ಹೇಗಿತ್ತು ನೀವೇ ಒಮ್ಮೆ ಯೋಚನೆಮಾಡಿ… ಮದುವಣಗಿತ್ತಿಯ ಅಲಂಕಾರಗಳನ್ನು ನೀವೂ ಒಮ್ಮೆ ನೆನಪಿಸಿಕೊಳ್ಳಿ… ರೇಷ್ಮೆಯ ಸೀರೆ, ಕೈತುಂಬಾ ಹಸಿರುಬಳೆ, ಮೈತುಂಬಾ ಒಡವೆ, ಮುಖದಲ್ಲಿ ನಾಚಿಕೆ, ಅಬ್ಬಬ್ಬಾ… ಅದೆಂತಹ ದಿನಗಳು ಅಲ್ವಾ… ಈಗ ಅವೆಲ್ಲವೂ ಕಾಲಾನುಸಾರ ಬದಲಾವಣೆಯನ್ನು ಪಡೆದುಕೊಂಡಿವೆ.. ಮುಖ್ಯವಾಗಿ ಮದುವಣಗಿತ್ತಿಯ ಮುಖದಲ್ಲಿ ನಾಚಿಕೆಯಿಲ್ಲ, ಕೈಯಲ್ಲಿ ಹಸಿರುಗಾಜಿನ ಬಳೆಗಳಿಲ್ಲ, ಹೌದು.. ನಾವು ಹೇಳಹೊರಟಿರುವುದು ಮರೆಯಾಗುತ್ತಿರುವ ಹಸಿರುಗಾಜಿನ ಬಳೆಗಳ ಬಗ್ಗೆ.

ಮದುವೆ ಸಂಭ್ರಮದಲ್ಲಿ ಶುಭಸೂಚಕವಾಗಿ, ಸುಮಂಗಲೆಯರ ಮುತ್ತೈದೆ ಭಾಗ್ಯವನ್ನು ಬಿಂಬಿಸುವ ನಿಟ್ಟಿನಲ್ಲಿ ಹಸಿರು ಗಾಜಿನ ಬಳೆಗಳ ಬಳಕೆಯಿದೆ.. ನಿತ್ಯವೂ ಗಾಜಿನ ಬಳೆಗಳನ್ನೇ ಬಳಸುವ ಕಾಲವೊಂದಿತ್ತು. ಆದರೆ ಸದ್ಯ ಎಲ್ಲವೂ ಬದಲಾಗಿದೆ.. ವಿಭಿನ್ನ ಮಾದರಿಯ ಬಳೆಗಳು ಮಾರುಕಟ್ಟೆಯಲ್ಲಿ ಬಹುಬೇಡಿಕೆಯನ್ನು ಹೊಂದಿದೆ. ಅಂದರೆ ವುಡನ್ ಬ್ಯಾಂಗಲ್ಸ್,ಪ್ಲಾಸ್ಟಿಕ್, ಮೆಟಲ್ಸ್ ಸೇರಿದಂತೆ ವಿಭಿನ್ನ ಬಗೆಯ ಬಳೆಗಳು ನೀರೆಯರ ಮನಸೂರೆಗೈದಿದ್ದೂ ಆಗಿದೆ.. ಟ್ರೆಂಡ್ಗೆ ತಕ್ಕಂತಹ ಬದಲಾವಣೆಯನ್ನುಎಲ್ಲರೂ ಬಯಸುವುದು ಸಾಮಾನ್ಯವೇ ಬಿಡಿ.. ಆದರೆ ಈಗ ಮದುವೆ ಸಮಾರಂಭದಲ್ಲೂ ಮದುವಣಗಿತ್ತಿ ಹಸಿರು ಬಳೆಗಳ ಬದಲಾಗಿ ಮಾರ್ಡನ್ ಬಳೆಗಳ ಬಳಕೆಯನ್ನು ಮಾಡುವುದಕ್ಕೆ ಪ್ರಾರಂಭಸಿದ್ದಾರೆ. ಅದರಲ್ಲೂ ಡ್ರೆಸ್ಗೆ ತಕ್ಕಂತೆ ಮ್ಯಾಚಿಂಗ್ ಇಯರ್ರಿಂಗ್ಸ್, ಬ್ಯಾಂಗಲ್ಸ್ ಇರಬೇಕು. ಅದಕ್ಕಾಗಿಯೇ ಹತ್ತು ಹಲವು ಅಂಗಡಿಗಳನ್ನು ಸುತ್ತಿದರೂ ಚಿಂತಿಲ್ಲ. ಆದರೆ ಸರಿಹೊಂದುವ ಡಿಫರೆಂಟ್ ಬಳೆಗಳಿಲ್ಲದೇ ಮದುವೆ ಮಾಡಿಕೊಳ್ಳುವುದಾದರೂ ಹೇಗೆ ಅನ್ನುವಂತಾಗಿದೆ ಕಾಲ…

ಬದಲಾವಣೆಯ ಅಷ್ಟರ ಮಟ್ಟಿಗೆ ಆಗಿದೆ ಅಂದರೆ ಗಾಜಿನ ಬಳೆಗಳ ಸ್ಥಿತಿ ಹೇಗಾಗಿರಬೇಡ..ಬರಿಯ ಗ್ರಾಮಗಳಿಗೆ ಇಲ್ವೇ ಕೆಳವರ್ಗಗಳ ಜನಾಂಗಕ್ಕೆ ಮಾತ್ರ ಸೀಮಿತ ಅಂತಾಗಿರುವುದರಲ್ಲಿ ವಿಶೇಷವೇನಿಲ್ಲ. ಯಾಕಂದರೆ ಹಸಿರು ಗಾಜಿನ ಬಳೆಗಳು ಮರೆಯಾಗಿ ಮಾಡರ್ನ್ ಬಳೆಗಳ ಉಪಯೋಗ ಈಗಾಗಲೇ ಶುರುವಾಗಿದೆ.

ಬಳೆಗಳ ವಿಧಗಳು-

ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು:

ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು:ವಿವಿಧ ಬಣ್ಣಗಳಿಂದ ಕೂಡಿದ್ದು ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರು ಇದನ್ನು ಇಷ್ಟಪಡುತ್ತಾರೆ. ಅದರಲ್ಲಿಯೂ ಕೆಂಪು ಮತ್ತು ಹಸಿರು ಬಣ್ಣದ ಬಳೆಗಳು ಮುತೈದೆಯರ ಲಕ್ಷಣವಾಗಿದೆ.ಮಣ್ಣಿನ ಬಳೆಗಳು ಹೆಚ್ಚು ದಪ್ಪಗಿದ್ದು ವಿವಿಧ ಬಣ್ಣಗಳಿಂದ ಆಕಷಕವಾಗಿ ಕಾಣುತ್ತದೆ.

ಪ್ಲಾಸ್ಟಿಕ್ ಬಳೆಗಳು:

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳೆಗಳು ಹೊಸ ಜನಾಂಗದ ಯುವತಿಯರನ್ನು ಹೆಚ್ಚು ಸೆಳೆಯುತ್ತದೆ. ಹೆಚ್ಚು ಬಾಳಿಕೆ ಬರುವ ಈ ಬಳೆಗಳು ಬೇರೆ ಬೇರೆ ಗಾತ್ರ ಮತ್ತು ಆಕಾರಗಳಲ್ಲಿಯೂ ದೊರೆಯುತ್ತದೆ.

ಚಿನ್ನದ ಬಳೆಗಳು:

ಹೆಚ್ಚಾಗಿ ಇದನ್ನು ಶ್ರೀಮಂತರು ಮಾತ್ರ ಧರಿಸುತ್ತಾರೆ.ಮದುವೆ ಮುಂತಾದ ಸಮಾರಂಭಗಳಲ್ಲಿ ಇದು ಹೆಚ್ಚು ಪ್ರಾಶಸ್ತ್ಯವನ್ನು ಹೊಂದಿದೆ.

ಬೆಳ್ಳಿಯ ಬಳೆಗಳು:

ಇದನ್ನು ಬಳಸುವುದು ಬಲು ವಿರಳ. ಆದರೂ ಬೆಳ್ಳಿಯ ಬಳೆಗೆ ಚಿನ್ನದ ಲೇಪನವನ್ನು ಹಾಕಿ ಬಳಸುವುದು ಇದೆ.

ಇತರ ಲೋಹದ ಬಳೆಗಳು:

ಲೋಹಗಳಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಹೊರತು ಪಡಿಸಿ ಇತರ ಲೋಹಗಳನ್ನು ಬಳಸುತ್ತಾರೆ. ಇವುಗಳಿಗೆ ಚಿನ್ನ ಅಥವಾ ಬೆಳ್ಳಿಯ ಲೇಪನ ನೀಡಿ ಹೊಳೆಯುವ ಹಾಗೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ “ಒನ್ ಗ್ರಾಂ ಗೋಲ್ಡ್” (one gram gold ornaments) ಹೆಚ್ಚು ಪ್ರಚಲಿತದಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top