fbpx
News

ಕಾರ್ಗಿಲ್ ವಿಜಯ ದಿವಸ ಇಂದು

ಬೆಂಗಳೂರು: ಇಲ್ಲಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದ ಆವರಣದಲ್ಲಿ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಆಚರಣೆ ಹಮ್ಮಿಕೊಳ್ಳಲಾಗಿದೆ.

1999ರಲ್ಲಿ ನಡೆದಿತ್ತು ಕಾರ್ಗಿಲ್‌ ಸಮರ:

1999ರ ಮೇ ತಿಂಗಳಲ್ಲಿ ಶುರುವಾದ ಕಾರ್ಗಿಲ್‌ ಕದನ ಸುಮಾರು 2 ತಿಂಗಳ ಕಾಲ ನಡೆದಿತ್ತು. ಪಾಕಿಸ್ತಾನ ಸೇನೆ ಸಿಯಾಚಿನ್‌ ಪ್ರದೇಶ ವಶಪಡಿಸಿಕೊಳ್ಳಲು ಭಾರತದ ಗಡಿಯೊಳಗೆ ನುಗ್ಗಿತ್ತು. ಕಾರ್ಗಿಲ್‌ ಬೆಟ್ಟವನ್ನು ಆಕ್ರಮಿಸಿಕೊಂಡಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ 490 ಅಧಿಕಾರಿಗಳು, ಯೋಧರು, ಜವಾನರು ಹುತಾತ್ಮರಾಗಿದ್ದರು. ಜು.26ರಂದು ಪಾಕ್‌ ಸೇನೆಯನ್ನು ನಮ್ಮ ಸೈನಿಕರು ಹಿಮ್ಮೆಟ್ಟಿಸಿ ಕಾರ್ಗಿಲ್‌ ಬೆಟ್ಟದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದರು.

1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಜಯ ತಂದುಕೊಡಲು ದೇಶಕ್ಕಾಗಿ ಪ್ರಾಣತೆತ್ತ ವೀರ ಯೋಧರ/ ಹುತಾತ್ಮರ ಸ್ಮರಣೀಯ ಸಂಕೇತವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಾರ್ಗಿಲï ವಿಜಯ ದಿವಸದ ಆಚರಣೆಯನ್ನು ಭಾನುವಾರ ಬೆಳಗ್ಗೆ 8.20ರಿಂದ 9.30ರ ವರೆಗೆ ಆಚರಿಸಲಾಗುತ್ತಿದೆ.

ಶ್ರೀನಗರ, ಜಮ್ಮು-ಕಾಶ್ಮೀರದ ದ್ರಾಸ್ ವಿಭಾಗದಲ್ಲಿರುವ ಯುದ್ಧ ಸ್ಮಾರಕಕ್ಕೆ ಸೋಮವಾರ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರು 1999ರ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.

ಹಿರಿಯ ಸೇನಾಧಿಕಾರಿಗಳಾದ ಲೆಜಡಿ. ಎಸ್.ಹೂಡಾ ಮತ್ತು ಲೆಜ ಎಸ್.ಕೆ.ಪಟ್ಯಾಲ್ ಅವರು ಜಸಿಂಗ್ ಜೊತೆಯಲ್ಲಿದ್ದರು. ಈವೇಳೆ ಜಸಿಂಗ್ ಅವರು ಹುತಾತ್ಮ ಯೋಧರ ಪತ್ನಿಯರು ಮತ್ತು ಬಂಧುಗಳೊಂದಿಗೆ ಸಂವಾದ ನಡೆಸಿದರು.

‘ಆಪರೇಷನ್ ವಿಜಯ್’ ನಲ್ಲಿ ಪಾಕಿಸ್ತಾನದ ವಿರುದ್ಧ ಗೆಲುವಿನ ನೆನಪಿಗಾಗಿ ಸೇನೆಯು ಒಂದು ವಾರ ಕಾಲ ಹಮ್ಮಿಕೊಂಡಿರುವ 16ನೇ ಲಾರ್ಗಿಲ್ ವಿಜಯ ದಿವಸ್ ಆಚರಣೆಯು ಮಂಗಳವಾರ ಸಂಪನ್ನಗೊಳ್ಳಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top