fbpx
Karnataka

ಕರ್ನಾಟಕದ ಕಾನೂನು ಮತ್ತು ಸರ್ಕಾರದ ವಿರುದ್ಧ ನಿಂತಿರುವ ಬ್ಯಾಂಕುಗಳೇ ಹುಷಾರ್…!!!

ಕನ್ನಡಿಗರೇ ಏಳಿ ಎದ್ದೇಳಿ ನಿಮ್ಮ ಹಕ್ಕನ್ನು ಚಲಾಯಿಸಿ.

ಬೆಂಗಳೂರು ಪರಭಾಷೆಯ ಹೊಡೆತಕ್ಕೆ ಸಿಕ್ಕಿ ನಲುಗುತ್ತಿರುದನ್ನು ಎತ್ತಿ ತೋರಿಸುವ ಘಟನೆಯೊಂದು ಜಯನಗರದಲ್ಲಿ ವರದಿಯಾಗಿದೆ… ಮೊನ್ನೆ ಮೊನ್ನೆ ತಾನೇ ಕನ್ನಡದಲ್ಲಿ ಮಾತನಾಡಿದ ಕನ್ನಡಿಗನಿಗೆ 1000 ರೂ ದಂಡ ವರದಿಯಾಗಿ ಅದು ಮಾಸುವ ಮುನ್ನವೇ ಕನ್ನಡಿಗರ ಪ್ರತಿಷ್ಠೆಗೆ ಧಕ್ಕೆ ಎಂಬಂತೆ ಕರ್ನಾಟಕದಲ್ಲಿನ ಅದೂ ರಾಜಧಾನಿಯಲ್ಲಿನ ಖಾಸಗಿ ಬ್ಯಾಂಕ್ ಒಂದು ಕನ್ನಡದ ನಾಗರೀಕರೊಬ್ಬರು ಕನ್ನಡದಲ್ಲಿ ವ್ಯವಹರಿಸಿದರು ಎಂಬ ಕಾರಣಕ್ಕೆ ಅವಮಾನ ಮಾಡಿ ಕಡ್ಡಾಯವಾಗಿ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಸಂಭಾಷಣೆ ನಡೆಸುವಂತೆ ಫರ್ಮಾನು ಹೊರಡಿಸಿದ ಶೋಚನೀಯ ಘಟನೆ ನೆಡೆದಿದೆ.

ಘಟನೆಯ ವಿವರ  

”ಜುಲೈ 2 ರಂದು ನಡೆದ ಘಟನೆ ಐಸಿಐಸಿಐ ಬ್ಯಾಂಕ್‌ನ ಜಯನಗರ ಶಾಖೆಗೆ ಠೇವಣಿ ಇಡುವ ಸಂಬಂಧ ಭೇಟಿ ನೀಡಿದ್ದ ವಕೀಲ ಎಂ.ಟಿ. ನಾಗರಾಜ್‌ ರವರು ಬ್ಯಾಂಕ್‌ ಮ್ಯಾನೇಜರ್ ಸಂಧ್ಯಾ ಅವರಲ್ಲಿ ಮನವಿ ಮಾಡಿಕೊಂಡರು. ಬ್ಯಾಂಕ್‌ನಲ್ಲಿ ನಾಗರಾಜ್‌ ರವರಿಗೆ ಸಹಕರಿಸಲು ನೂಪುರ್‌ ಗೋರೈ ಎನ್ನುವವರನ್ನು ಕಳುಹಿಸಿದರು. ನಾಗರಾಜ್‌ ರವರಿಗೆ ನೂಪುರ್‌, ಯಾವ ಸಹಾಯ ಅಗತ್ಯವೆಂದು ಇಂಗ್ಲಿಷ್‌ನಲ್ಲಿ ಕೇಳಿದರು. ಆಗ ಅವರು ತಮ್ಮ ಹಣವನ್ನು ಡೆಪಾಸಿಟ್‌ ಮಾಡಬೇಕೆಂದು ಕನ್ನಡದಲ್ಲಿ ಹೇಳಿದರು. ಅದಕ್ಕೆ ನಿಮ್ಮ ಸಹಾಯ ಬೇಕು ಎಂದು ಕೇಳಿದರು. ಆಗ ಅವರು ಏರು ದ್ವನಿಯಲ್ಲಿ “You speak either in Hindi or English, don’t speak in Kannada” ಎಂದು ಹೇಳಿದರು ಇದನ್ನು ಕೇಳಿ ಅವರಿಗೆ ಆಘಾತ ವಾಯಿತು. ಈ ವಿಷಯವನ್ನು ಬ್ಯಾಂಕ್‌ ಮ್ಯಾನೇಜರ್‌ ಗಮನಕ್ಕೆ ತೆಗೆದುಕೊಂಡು ಹೋದರೆ ಮ್ಯಾನೇಜರ್‌ ಅವರು ತಮ್ಮ ಸಿಬ್ಬಂದಿಯನ್ನೇ ಸಮರ್ಥಿಸಿಕೊಂಡರು.”

ಐಸಿಐಸಿಐ ಬ್ಯಾಂಕ್ ನಲ್ಲಿ ಕನ್ನಡ ಭಾಷೆಗೆ ಅವಕಾಶವಿಲ್ಲ, ಇಂಗ್ಲಿಷ್ ಹಾಗು ಹಿಂದಿ ಭಾಷೆಯಲ್ಲಿ ಮಾತನಾಡುವಂತೆ ಉದ್ಧಟತನದಿಂದ ಹೇಳಿರುವ ರೀತಿ ಅವರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಬ್ಯಾಂಕ್ ನಡೆದುಕೊಂಡ ಕಾರಣ ಜುಲೈ 3 ರಂದು ಜಯನಗರ ಠಾಣೆಗೆ ನಾಗರಾಜ್‌ರವರು ದೂರು ನೀಡಿದ್ದಾರೆ. ಈ ಪ್ರಕರಣವನ್ನು ಪೊಲೀಸರೂ ಗಂಭೀರವಾಗಿ ಪರಿಗಣಿಸಿದ್ದು, ಜಯನಗರ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಈಶ್ವರಿ ಸುರೇಶ್‌ ರವರು ಬ್ಯಾಂಕ್‌ ಸಿಬ್ಬಂದಿ ನೂಪುರ್‌ ಅವರನ್ನು ಕರೆಸಿ ಮಾತನಾಡಿಸಿದಾಗ ನೂಪುರ್‌ ರವರು ಕಳೆದ ಮೇ ತಿಂಗಳಲ್ಲಿ ತಾವು ಬೆಂಗಳೂರಿಗೆ ಬಂದಿದ್ದು, ಕನ್ನಡ ಭಾಷೆ ಗೊತ್ತಿಲ್ಲ. ಬೇಗ ಕಲಿತುಕೊಳ್ಳುವುದಾಗಿ ತಿಳಿಸಿದ್ದಾರೆ. ಈಶ್ವರಿಯವರು ಇನ್ನು ಮುಂದೆ ಈ ರೀತಿಯಾದ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿ ಕಳುಹಿದ್ದಾರೆ. ಜೊತೆಗೆ ಕಡ್ಡಾಯವಾಗಿ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಇಲ್ಲಿನ ಕನ್ನಡ ಭಾಷಿಕರ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳಬಾರದೆಂದು ಎಚ್ಚರಿಸಲಾಗಿದೆ.

ಈ ಎಲ್ಲ ಘಟನೆ ಗೆ ಪ್ರತಿಕ್ರಿಯಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

WhatsApp-Image-20160727 (1)

ತಮ್ಮ ಬ್ಯಾಂಕಿನ ಅಧಿಕಾರಿ ಸಿಬ್ಬಂದಿವರ್ಗದರು ಸ್ಥಳೀಯ ಗ್ರಾಹಕರೊಡನೆ ಕನ್ನಡದಲ್ಲಿ ವ್ಯವಹರಿಸದೆ ಕನ್ನಡಿಗರ ಮನೋಭಾವನೆಗೆ ಆಘಾತವನ್ನುಂಟುಮಾಡಿರುವುದನ್ನು ಕನ್ನಡ ಅಭಿವೃದ್ಧ ಪ್ರಾಧಿಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಗ್ರಾಹಕರೊಡನೆ ಸೌಜನ್ಯದಿಂದ ನೆಡೆದುಕೊಳ್ಳದಿರುವ ಬ್ಯಾಂಕಿನ ಅಧಿಕಾರಿಯ ವಿರುದ್ಧ ಅಗತ್ಯ ಶಿಸ್ತುಕ್ರಮ ಕೈಗೊಳ್ಳುವುದು. ಕನ್ನಡ ಬಾರದ ಅಧಿಕಾರಿಗಳಿಗೆ ಕನ್ನಡ ಕಲಿಕಾ ತರಬೇತಿ ಕೇಂದ್ರಗಳನ್ನು ತೆರೆದು ತರಬೇತಿ ನೀಡುವುದು, ಬ್ಯಾಂಕಿನ ಎಲ್ಲಾ ಚಲನ್ ಗಳು, ರಸೀದಿಗಳು, ನಮೂನೆಗಳು, ಅರ್ಜಿಗಳು ಕನ್ನಡದಲ್ಲಿ ಲಭ್ಯವಿರುವಂತೆ ಕ್ರಮವಹಿಸುವುದು, ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಕನ್ನಡ ಜ್ಞಾನವಿರುವ ಸಿಬ್ಬಂದಿ/ಅಧಿಕಾರಿಗಳನ್ನು ನೇಮಿಸುವುದು. ಬ್ಯಾಂಕಿನ ದೈನಂದಿನ ವ್ಯವಹಾರಗಳು ಕನ್ನಡದಲ್ಲಿ ನಡೆಯುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಮುಂದಿನ ದಿನಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೋಡನೆ ತಮ್ಮ ಬ್ಯಾಂಕಿಗೆ ಭೇಟಿ ನೀಡಲಿದ್ದೇನೆ. ಭೇಟಿಯ ದಿನಾಂಕವನ್ನು ಪತ್ರ ಬರೆದು ತಿಳಿಸಲಾಗುವುದು. ಈ ನಿಟ್ಟಿನಲ್ಲಿ ತಮ್ಮ ಕೈಗೊಂಡ ನಿಲುವನ್ನು ಪತ್ರ ತಲುಪಿದ 7 ದಿನಗಳ ಒಳಗಾಗಿ ಪ್ರಾಧಿಕಾರಕ್ಕೆ ವರದಿ ನೀಡಬೇಕಾಗಿ ಕೋರಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top