ಪ್ರಾಚೀನ ಭಾರತದ ಮಹಾಕಾವ್ಯಗಳು ಹಾಗೂ ತತ್ವಶಾಸ್ತ್ರಗಳೆಲ್ಲವೂ ಅನೇಕ ನೀತಿ ಕಥೆಗಳಿಂದ ತುಂಬಿ ಹೋಗಿದೆ ಆ ನೀತಿ ಕತೆಗಳಲಿ ಬರುವ ಮುಖ್ಯವಸ್ತು ನೈತಿಕ ಜವಾಬ್ದಾರಿ ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳಲ್ಲೂ ನೈತಿಕ ಜವಾಬ್ದಾರಿಯಿಂದ ನುಣುಚಿಕೊಂಡರೆ ಎಂಥಹ ಅನಾಹುತವಗುತ್ತದೆ ಎಂಬುದಕ್ಕೆ ದೃಷ್ಟಾಂತಗಳಿವೆ ಈ ಕತೆಗಳಲ್ಲಿ ಬರುವ ನೀತಿ ಸರ್ವರಿಗೂ ಸರ್ವಕಾಲಕ್ಕೂ ಒಪ್ಪುವಂತಹುದು. ಪಂಚತಂತ್ರ, ಈಸೋಪನ ಕಥೆಗಳ ಮೂಲಕ ಮಕ್ಕಳಿಗೆ ಮಾನವೀಯ ಮೌಲ್ಯಗಳ ಬಗ್ಗೆ, ನೀತಿಯ ಬಗ್ಗೆ ಕಥೆಗಳನ್ನು ಹೇಳುತ್ತಾ ಬಂದಿದ್ದೇವೆ. ಇಂಥಹ ಕಥೆಗಳಲ್ಲಿ ಸಿಗುವ ಒಂದು ಕಂತು ವಿಕ್ರಮ್ ಮತ್ತು ಬೇತಾಳನ ಕಥೆಗಳು ಇದನ್ನು ನೀವೂ ಓದಿರಬಹುದು ಅಥವ ಟೀವಿಯಲ್ಲಿ ಬಂದ ಧಾರಾವಾಹಿನಿಯನ್ನು ನೋಡಿರಬಹುದು ವಿಕ್ರಮಾದಿತ್ಯ ಎಂಬ ರಾಜ ಬೇತಾಳನನ್ನು ಹೊತ್ತು ತರುವುದು ದಾರಿಯಲ್ಲಿ ಬೇತಾಳ ಕಥೆ ಹೇಳುವುದು ಕೊನೆಗೆ ಕಥೆಗೆ ಸಂಬಂಧಪಟ್ಟಂತೆ ದ್ವಂದ್ವಾರ್ಥ ಅಥವಾ ಗೂಡಾರ್ಥದಿಂದ ಕೂಡಿದ ಪ್ರಶ್ನೆಗೆ ಉತ್ತರ ಹೇಳಬೇಕು ಇಲ್ಲದಿದ್ದರೆ ತಲೆ ಒಡೆಯುತ್ತದೆ, ಮಾತನಾಡಿದರೆ ಹಾರಿ ಹೋಗುತ್ತೇನೆ ಎಂಬ ಇಕ್ಕಟ್ಟಿಗೆ ರಾಜನನ್ನು ಬೇತಾಳ ಕಾಡಿಸುತ್ತಿರುತ್ತದೆ ಏನೇ ಇರಲಿ ಅದರಲ್ಲೊಂದು ನೈತಿಕ ಜವಾಬ್ದಾರಿಯ ಬಗ್ಗೆ ನೀತಿ ಕತೆ ಇರುತ್ತಿತ್ತು. ಈ ಲೇಖನದಲ್ಲೂ ಅಂತಹುದೇ ಒಂದು ನೀತಿ ಕಥೆ ಇದೆ. ಅಷ್ಟೇ ಅಲ್ಲ ಆ ಕಥೆ ಸದ್ಯದ ನಮ್ಮ ರಾಷ್ಟ್ರದ ರಾಜಕೀಯ ಪರಿಸ್ಥಿತಿಗೆ ಹೊಂದುತ್ತದೆ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ನೈತಿಕ ಜವಾಬ್ದಾರಿಯಿಂದ ನುಣುಚಿಕೊಂಡರೆ ಏನಾಗಬಹುದು? ಯಾವ ದೃಷ್ಟಿಕೋನದಿಂದ ಈ ಕಥೆ ಇಲ್ಲಿ ಪ್ರಸ್ತುತವಾಗಿದೆಯೆಂದು ಲೇಖನದ ಕೊನೆಯಲ್ಲಿ ನಿಮಗೆ ತಿಳಿಯುತ್ತದೆ. ಯಾವುದೇ ವ್ಯಕ್ತಿ “ಆತ ಎಷ್ಟೇ ಒಳ್ಳೆಯವನಾಗಿರಲಿ ನೈತಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ !
ಬಹಳ ಹಿಂದೆ ಒಬ್ಬ ಮುದುಕನಿದ್ದ ಆತ ನಿಷ್ಠೆಗೆ, ಒಳ್ಳೆಯತನಕ್ಕೆ ತುಂಬಾ ಹೆಸರುವಾಸಿಯಾಗಿದ್ದ ಆತನ ಮನೆಯ ಪಕ್ಕ ಒಬ್ಬ ಶ್ರೀಮಂತ ವ್ಯಾಪಾರಿಯಿದ್ದನು ಒಂದು ದಿನ ಆ ವ್ಯಾಪಾರಿ ಈ ಮುದುಕನ ಬಳಿ ಬಂದು ನಾನು ವ್ಯಾಪಾರಕ್ಕಾಗಿ ಸಮುದ್ರಯಾನ ಮಾಡುತ್ತಿವುದರಿಂದ ನಾನು ಬರುವವರೆಗೂ ನನ್ನ ಸಂಪತ್ತು ನಿನ್ನ ಬಳಿ ಇರಲಿ ಅದನ್ನು ಜೋಪನವಾಗಿ ನೋಡಿಕೊಳ್ಳುವೆಯಾ ಎಂದು ಕೇಳುತ್ತಾನೆ ಇದಕ್ಕೆ ಆ ಮುದುಕನು ಒಪ್ಪಿಕೊಂಡನು ದೇವರನ್ನು ಸಾಕ್ಷಿಯಾಗಿ ಮಾಡಿಕೊಂಡು ನಿನ್ನ ಸಂಪತ್ತನ್ನು ಜೋಪಾನವಾಗಿ ಸಂರಕ್ಷಿಸುವುದಾಗಿ ವಾಗ್ದಾನ ಮಾಡುತ್ತಾನೆ.
ನಂತರ ಆ ಮುದುಕ ವ್ಯಾಪಾರಿಯ ಸಂಪತ್ತನ್ನು ಜೋಪಾನ ಮಾಡುವಂತೆ ತನ್ನ ಮಗನಿಗೆ ಒಪ್ಪಿಸುತ್ತಾನೆ ಆ ಮುದುಕನ ಮಗನೂ ಸಂಪತ್ತನ್ನೂ ಜೋಪಾನ ಮಾಡುವುದಾಗಿ ವಾಗ್ದಾನ ಮಾಡುತ್ತಾನೆ ಆದರೆ ಸ್ವಲ್ಪ ಕಾಲದಲ್ಲೆ ಮುದುಕನ ಮಗ ವ್ಯಾಪಾರಿಯ ಸಂಪತ್ತನ್ನು ಖರ್ಚು ಮಾಡಲು ಪ್ರಾರಂಭ ಮಾಡುತ್ತಾನೆ ಇದನ್ನು ಗಮನಿಸಿದ ಊರಿನ ಜನ ಮುದುಕನಿಗೆ ಈ ಬಗ್ಗೆ ದೂರು ಕೊಡುತ್ತಾರೆ ಮುದುಕ ತನ್ನ ಮಗನನ್ನು ಕರೆದು ಇದರ ವಿವರಣೆ ಕೇಳಿದಾಗ ಮಗ ಜನ ನನ್ನ ಮೇಲೆ ಹೊಟ್ಟೆಕಿಚ್ಚಿನಿಂದ ಹೀಗೆಲ್ಲ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆಂದು ಅದಕ್ಕೆ ಕಿವಿಗೊಡಬೇಡವೆಂದು ಹೇಳಿ ತನ್ನ ತಂದೆಯ ಬಾಯಿ ಮುಚ್ಚಿಸುತ್ತಾನೆ ಮುದುಕ ತನ್ನ ಮಗನ ಮೇಲಿನ ಮಮತೆಯಿಂದ ಅವನ ಮಾತನ್ನು ನಂಬುತ್ತಾನೆ ಆದರೆ ಮುದುಕನ ಮಗ ವ್ಯಾಪಾರಿಯ ಐಶ್ವರ್ಯವನ್ನು ಖರ್ಚು ಮಾಡುವ ಕೆಲಸವನ್ನು ಮುಂದುವರೆಸುತ್ತಾನೆ.
ವ್ಯಾಪಾರದಿಂದ ವಾಪಸ್ ಬಂದ ವ್ಯಾಪಾರಿ ತನ್ನ ಸಂಪತ್ತನ್ನು ಹಿಂದಿರುಗಿಸುವಂತೆ ಕೆಳುತ್ತಾನೆ ಮುದುಕ ತನ್ನ ಮಗನನ್ನು ಕರೆದಾಗ ಮಗ ವ್ಯಾಪಾರಿಯು ಕೊಟ್ಟಿದ್ದ ಸಂಪತ್ತಿನ ಕಾಲು ಭಾಗ ಮಾತ್ರ ಹಿಂದಿರುಗಿಸುತ್ತಾನೆ ಹಾಗೆಯೇ ಇಷ್ಟೇ ಕೊಟ್ಟಿದ್ದೆಂದು ಹೇಳುತ್ತಾನೆ ಮುದುಕನ ತನ್ನನ್ನು ಮೋಸ ಮಾಡುತ್ತಿದ್ದಾನೆಂದು ಹೇಳಿ ವ್ಯಾಪಾರಿ ರಾಜನ ಬಳಿಗೆ ದೂರನ್ನು ಒಯ್ಯುತ್ತಾನೆ. ವ್ಯಾಪಾರಿಯ ದೂರನ್ನು ಆಲಿಸಿದ ರಾಜ ಮುದುಕನನ್ನು ವಿಚಾರಣೆಗೆ ಕರೆಸಿದಾಗ ಮುದುಕ ರಾಜನ ಮುಂದೆ ತನ್ನ ಮಗನನ್ನು ತಂದು ನಿಲ್ಲಿಸಿ ಮಹಾರಾಜ ವ್ಯಾಪಾರಿಯ ದೂರು ಸತ್ಯವಾದದ್ದು ನನ್ನ ಮಗ ತಪ್ಪು ಮಾಡಿದ್ದಾನೆ ಅವನನ್ನು ಶಿಕ್ಷಿಸಿ ಎಂದು ಹೇಳುತ್ತಾನೆ.
ರಾಜ ಮುದುಕನ ಮಗನನ್ನು ಥಳಿಸಿ ಸೆರೆಮನೆಗೆ ತಳ್ಳುತ್ತಾನೆ. ನಂತರ ರಾಜ ಮುದುಕನ ನಿಷ್ಠಯನ್ನು ಹೊಗಳಿ ವ್ಯಾಜ್ಯವನ್ನು ಖುಲಾಸೆಗೊಳಿಸುತ್ತಾನೆ ಆದರೆ ವ್ಯಾಪಾರಿ ಮುದುಕನಿಗೂ ಶಿಕ್ಷೆಯಾಗಬೇಕೆಂದು ಹಠ ಹಿಡಿಯುತ್ತಾನೆ ಕಾರಣ ನಾನು ಮುದುಕನಿಗೆ ನನ್ನ ಸಂಪತ್ತನ್ನು ರಕ್ಷಿಸಲು ಕೊಟ್ಟಿದ್ದು ಆತನು ದೇವರ ಸಾಕ್ಷಿಯಾಗಿ ಸಂಪತ್ತನ್ನು ರಕ್ಷಿಸುವುದಾಗಿ ಹೇಳಿದ್ದನು ಮುದುಕನ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು ಅದರೆ ನಾನು ಸಂಪೂರ್ಣ ನಷ್ಟ ಅನುಭವಿಸಿರುವೆ ಗಳಿಸಿದ ಸಂಪತ್ತಿನಲ್ಲಿ ಈ ಮುದುಕನಿಗಾಗಿ ಕಳೆದುಕೊಂಡಿರುವೆ ತಾನು ಸಂಪತ್ತನ್ನು ರಕ್ಷಿಸದೆ ಅದನ್ನು ತನ್ನ ಮಗನಿಗೆ ಕೊಟ್ಟಿದ್ದು ತಪ್ಪು! ಹಾಗಾಗಿ ಈ ಮುದುಕನೂ ಅಪರಾಧಿ ಅವನನ್ನೂ ಶಿಕ್ಷಿಸಬೇಕು ಎಂದನು ವ್ಯಾಪಾರಿ.
ರಾಜನಿಗೆ ಈ ವ್ಯಾಪರಿಯ ಮಾತಿನಿಂದ ಆಶ್ಚರ್ಯವಾಗುತ್ತದೆ ಇಲ್ಲಿ ಈ ಮುದುಕ ವ್ಯಾಪಾರಿಯ ಹಣವನ್ನು ಕದ್ದಿಲ್ಲ ಅಥವಾ ಅದರಿಂದ ಯಾವ ಪ್ರಯೋಜನವೂ ಆಗಿಲ್ಲ ಆದರೂ ನಿಷ್ಠೆಯಿಂದ ಅವನ ಮಗನನ್ನು ಸೆರೆಗೆ ಕಳಿಸಿದ್ದಾನೆ ಆದರೂ ಈ ವ್ಯಾಪಾರಿ ಮುದುಕನಿಗೆ ಶಿಕ್ಷೆಯಾಗಬೇಕೆಂದು ಹೇಳುತ್ತಿದ್ದಾನಲ್ಲ!
ಬೇತಾಳ ಕತೆ ಮುಗಿಸಿ ವಿಕ್ರಮಾದಿತ್ಯನಿಗೆ ಕೇಳುತ್ತದೆ, ಹೇಳು ರಾಜನ್ ತೀರ್ಮಾನ ಏನಾಗಬೇಕಿತ್ತು? ಅದಕ್ಕೆ ವಿಕ್ರಮಾದಿತ್ಯ ಹೇಳುತ್ತಾನೆ ಮುದುಕ ಸಂಪತ್ತನ್ನು ನೇರವಾಗಿ ಕದ್ದಿಲ್ಲದಿದ್ದರೂ ಇದಕ್ಕೆ ಅವನೂ ಹೊಣೆ ಅವನ ಕರ್ತವ್ಯಲೋಪದಿಂದಾಗಿಯೇ ಈ ಅಚಾತುರ್ಯ ನಡೆದಿದೆ ವ್ಯಾಪಾರಿಯ ಸಂಪತ್ತನ್ನು ರಕ್ಷಿಸಲು ಅವನು ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ ಜನರು ತನ್ನ ಮಗನ ಬಗ್ಗೆ ದೂರಿದಾಗ ಅದನ್ನು ಸರಿಯಾಗಿ ವಿಚಾರಿಸದೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಮುದುಕನ ಉಪೇಕ್ಷೆಯಿಂದ ವ್ಯಾಪಾರಿ ತನ್ನೆಲ್ಲಾ ಸಂಪತ್ತನ್ನು ಕಳೆದುಕೊಳ್ಳುವಂತಾಯಿತು, ಹಾಗಾಗಿ ಮುದುಕನು ಶಿಕ್ಷೆಗೆ ಅರ್ಹ ಎನ್ನುತ್ತಾನೆ
2010 ಭಾರತದ ಘನತೆವೆತ್ತ ಪ್ರಧಾನಮಂತ್ರಿ ಖ್ಯಾತ ಅರ್ಥ ಶಾಸ್ತ್ರಜ್ಞ ಆರ್.ಬಿ.ಐ ನ ಮಾಜಿ ಗೌರ್ನರ್ , ಯೋಜನಾ ಆಯೊಗದ ಉಪಾಧ್ಯಕ್ಷರು , ಮಾಜಿ ಹಣಕಾಸು ಮಂತ್ರಿ ಆತನ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಅನುಮಾನಿಸಲೇ ಆಗದಂತಹ ವ್ಯಕ್ತಿತ್ವ ಇರುವ ವ್ಯಕ್ತಿ ರಾಷ್ಟ್ರವನ್ನು ಹಾಗೂ ರಾಷ್ಟ್ರದ ಸಂಪತ್ತನ್ನು ರಕ್ಷಿಸುವುದಾಗಿ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತಾರೆ ಅದು ಯಾರೂ ಅಲ್ಲ ಡಾ||ಮನಮೋಹನ್ ಸಿಂಗ್ ನಂತರ ರಾಜ ಎಂಬ ವ್ಯಕ್ತಿಯನ್ನು ತನ್ನ ಮಂತ್ರಿಮಂಡಲದಲ್ಲಿ ಮಾಹಿತಿ ತಂತ್ರಜ್ಞಾನ ಹಾಗು ದೂರ ಸಂಪರ್ಕ ಖಾತೆಯ ಮಂತ್ರಿಯನ್ನಾಗಿ ಮಾಡುತ್ತಾರೆ.
ಮೇಲಿನ ವಿಕ್ರಮಾದಿತ್ಯನ ಕಥೆಯಂತೆಯೇ ಇಲ್ಲೂ ಸಹ ರಾಜಾ ಎಂಬ ಮಗ ದೇಶದ ಅಮೂಲ್ಯ ಸಂಪತ್ತನ್ನು ಪ್ರಧಾನಿ ಹಾಗೂ ತನ್ನ ಮಂತ್ರಿಮಂಡಲದ ಸಹೋದ್ಯೋಗಿಗಳ ಮುಂದೆಯೇ ಲೂಟಿ ಮಾಡಿದ ವಿಷಯವನ್ನು ಎಲ್ಲಾ ರಾಷ್ಟ್ರೀಯ ಪತ್ರಿಕೆಗಳು ಮೊದಲ ಪುಟದಲ್ಲೇ ವರದಿ ಮಾಡುತ್ತವೆ ಮುಂದೆ ನಡೆದುದ್ದೆಲ್ಲ ನಿಮಗೆ ಗೊತ್ತೇ ಇದೆ ಇಲ್ಲಿ ಪತ್ರಿಕೆಗಳು ಅತ್ತದಷ್ಟೇ ಬಂತು!
ಭಾರತದ ರಾಜ್ಯಂಗ ವ್ಯವಸ್ಥೆ ದೇಶವನ್ನು ನಡೆಸಲು ಅತ್ಯುನ್ನತ ಅಧಿಕಾರವನ್ನು ಪ್ರಧಾನಮಂತ್ರಿಗೆ ನೀಡುತ್ತದೆ ರಾಜ್ಯಕ್ಕೆ-ಸರ್ಕಾರಕ್ಕೆ ಇವರೇ ಮುಖ್ಯಸ್ಥರು ರಾಜಕೀಯದ ಎಲ್ಲ ಅಂಗಗಳು ಇವರ ಅಧೀನದಲ್ಲಿ ಕೆಲಸ ಮಾಡುತ್ತದೆ “Transaction of Business Rules” ನ ಪ್ರಕಾರ ಯಾವುದೇ ಕಡತಗಳನ್ನು ನೋಡುವ ಅಥವಾ ತರಿಸಿಕೊಳ್ಳುವ ಪರಮಾಧಿಕಾರವಿದೆ ಅದು ಯಾವ ಖಾತೆಗೆ ಸಂಬಂದಿಸಿದ್ದಿರಲಿ ಅದನ್ನು ನೋಡುವ ಅಧಿಕಾರ ಪ್ರಧಾನಿಗಿದೆ ಯಾವ ಗಳಿಗೆಯಲ್ಲಾದರೂ ಡಾ||ಮನಮೋಹನ್ ಸಿಂಗ್ ರಾಜಾ ಮಾಡಿದ ಲೂಟಿಯನ್ನು ತಡೆತಬಹುದಾಗಿತ್ತು! ಆದರೆ ಅವರು ಹಾಗೆ ಮಾಡಲಿಲ್ಲ ಅದರ ಬದಲು ಮೌನಕ್ಕೆ ಶರಣಾಗಿದ್ದರು ಇವರು ತಮಗಿದ್ದ ಅಧಿಕಾರವನ್ನು ಉಪಯೋಗಿಸದೇ ಮೌನವಾಗಿದ್ದರ ಪರಿಣಾಮ ನಮ್ಮ ರಾಷ್ಟ್ರಕ್ಕೆ ಅಗಾಧವಾದ ಆರ್ಥಿಕ ನಷ್ಟವನ್ನುಂಟು ಮಾಡಿದೆ ಈ ವಿಷಯದ ಬಗ್ಗೆ ತುಟಿಬಿಚ್ಚದ ಪ್ರಧಾನಿಯಿಂದಾದ ನಷ್ಟ ಕೋಟಿ ಕೋಟಿ ರೂಪಾಯಿಗಳು.
ಡಾ||ಸಿಂಗ್‍ಗೆ ವ್ಯಯಕ್ತಿಕವಾಗಿ ರಾಜನ ಅಕ್ರಮ ಗಳಿಕೆಯಿಂದ ಏನೂ ಲಾಭವಿಲ್ಲ ಆದರೆ ತಕ್ಕ ಸಮಯದಲ್ಲಿ ತಮಗೆಲ್ಲಾ ಪರಮಾಧಿಕಾರವಿದ್ದರೂ ರಾಜನ ವಿರುದ್ಧ ಕ್ರಮ ಕೈಗೊಳ್ಳದಿದ್ದದ್ದು ರಾಷ್ಟ್ರವನ್ನು ರಾಷ್ಟ್ರದ ಸ್‍ಂಪತ್ತನ್ನು ರಕ್ಷಿಸುವುದಾಗಿ ಪ್ರಧಾನಿ ಹುದ್ದೆಗೇರುವಾಗ ದೇವರ ಹೆಸರಲ್ಲಿ ಪ್ರಮಾಣವಚನ ತೆಗೆದುಕೊಂಡು ಅದನ್ನು ಸತ್ಯನಿಷ್ಠನಾಗಿ ನಿಭಾಯಿಸುವಲ್ಲಿ ವಿಫಲರಾದದ್ದು ಕ್ಷಮಿಸಲಾರದಂತಹ ಅಪರಾಧ ವಿಕ್ರಮಾದಿತ್ಯನ ಕಥೆಯಲ್ಲಿ ಬರುವ ಮುದುಕನ ಹಾಗೆ ರಾಜನನ್ನು ಮಂತ್ರಿಮಂಡಲದಿಂದ ಅನರ್ಹಗೊಳಿಸಿದ್ದಾರೆ ಇಷ್ಟು ಮಾತ್ರಕ್ಕೆ ರಾಜಾ ಮಾಡಿದ ಅಪರಾಧ ಮುಗಿದು ಹೋಗುತ್ತದೆಯೇ?
ನೂರಾರು ಡಿಗ್ರಿಗಳನ್ನು ಹೊಂದಿರುವ ಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿದ್ದ ಡಾ||ಸಿಂಗರನ್ನು ನಂಬಿ ದೇಶವನ್ನು ದೇಶದ ಸಂಪತ್ತನ್ನು ನಿಷ್ಠೆಗೆ ಹಾಗೂ ಸತ್ಯಪರತೆಗೆ ಹೆಸರಾದ ಡಾ||ಸಿಂಗರ ಕ್ಯೆಗೆ ಕೊಟ್ಟೇವೆ ಹೊರತು ರಾಜ ಎನ್ನುವ ಪಪಿಯ ಕ್ಯೆಗೆ ಅಲ್ಲ. ಡಾ||ಸಿಂಗರು ದೇಶದ ಸಂಪತ್ತನ್ನು ನೇರವಾಗಿ ಲೂಟಿಮಾಡಿಲ್ಲದ್ದಿದ್ದರೂ ಅವರು ಪರೋಕ್ಷವಾಗಿ ಇದಕ್ಕೆ ಹೊಣೆ ಡಾ||ಸಿಂಗರ ಕರ್ತವ್ಯಲೋಪದಿಂದಾಗಿಯೇ ಈ ಅಚಾತುರ್ಯ ನಡೆದಿದೆ ದೇಶವನ್ನು ದೇಶದ ಸಂಪತ್ತನ್ನು ರಕ್ಷಿಸುವಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞ ವಿಫಲರಾಗಿದ್ದಾರೆ ವೈಯಕ್ತಿಕವಾಗಿ ಡಾ||ಸಿಂಗ್ ಎಷ್ಟೇ ಒಳ್ಳೆಯ ಮನುಷ್ಯರಿರಬಹುದು ಆದರೆ ನೈತಿಕ ಜವಾಬ್ದಾರಿಯ ಪ್ರಶ್ನೆ ಬಂದಾಗ ತಪ್ಪಿಸಿಕೊಳ್ಳಾಲು ಸಾಧ್ಯವೇ? ವಿಕ್ರಮಾದಿತ್ಯನ ಕಥೆಯಲ್ಲಿ ಬರುವ ಮುದುಕನಂತೆಯೇ ಡಾ||ಸಿಂಗ್ ಕೂಡ ಶಿಕ್ಷೆಗೆ ಅರ್ಹರು ಹೌದೋ ಅಲ್ಲವೋ? ವ್ಯಾಪಾರಿಯ ಸ್ಥಾನದಲ್ಲಿ ನಾವೆಲ್ಲಾ ಭಾರತೀಯರು ನಿಂತಿದ್ದೇವೆ ನಮ್ಮ ಸಂಪತ್ತನ್ನು ದೇಶದ ಸಂಪತ್ತನ್ನು ರಕ್ಷಿಸಲು ವಿಫಲರಾದ ಸ್ಥಾನದಲ್ಲಿ ಪ್ರಧಾನಿ ನಿಂತಿದ್ದಾರೆ. ಇವರು ಶಿಕ್ಷೆಗೆ ಅರ್ಹರು ಹೌದೋ ಅಲ್ಲವೋ ಎಂದು ನಿರ್ಧರಿಸಬೇಕಾದ ಕೆಲಸ ಭಾರತೀಯರದು!
ಪ್ರಕಾಶ್ ಕೆ ನಾಡಿಗ್
ಶಿವಮೊಗ್ಗ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
