ಬೆಲ್ಜಿಯಂ ದೇಶದ, ಬ್ರಸೆಲ್ಸ್ ನಲ್ಲಿ ಶನಿವಾರ ಮೃತಪಟ್ಟ ರಾಕೇಶ್ ಸಿದ್ದರಾಮಯ್ಯ – ನವರ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸ್ ಆಪ್ ನಲ್ಲಿ ಹರಡುತ್ತಿದ್ದ ಅನೇಕ ವದಂತಿಗಳ ಬಗ್ಗೆ ದಿವಂಗತ. ರಾಕೇಶ್ -ರವರ ಸ್ನೇಹಿತ ಅನಂತ್ ನಾರಾಯಣ್ ತಮ್ಮ ಫೇಸ್ಬುಕ್ ಖಾತೆಯ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ

“ಕಳೆದ 2 ದಿನಗಳಿಂದ ವಾಟ್ಸ್ ಆಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಈ ವದಂತಿಗಳು ನನಗೆ ನೋವು ತಂದಿದೆ. ಮೊದಲನೆಯದಾಗಿ, ಈ ಚಿತ್ರ Tomorrow Land ಹೋಟೆಲ್ ನಲ್ಲಿ ತೆಗದಿದ್ದಲ್ಲ . ಇದು ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿರುವ ನನ್ನ ರೆಸ್ಟೋರೆಂಟ್ ಬಿಯರ್ ರಿಪಬ್ಲಿಕ್ ನಲ್ಲಿ ತೆಗೆದದ್ದು. ಭೋಜನ ಕೂಟಕ್ಕೆ ಆಹ್ವಾಅನಿತರಾಗಿದ್ದ ರಾಕೇಶ್ ಮತ್ತು ಇತರೆ ಸ್ನೇಹಿತರು; ಹೊರಡುವ ಮುನ್ನ ಈ ಫೋಟೋ ಕ್ಲಿಕ್ಕಿಸಿದ್ದು. ಇದೊಂದು ಡಿನ್ನರ್ ಮತ್ತು ಗೆಟ್ ಟುಗೆದೆರ್ ಆಗಿತ್ತು ಅಷ್ಟೇ, ನಾನು ರಾಕೇಶ್ ರೊಡನೆ ಬೆಲ್ಜಿಯಂ ಗೆ ಹೋಗಿಲ್ಲ; ಬೆಂಗಳೂರಿನಲ್ಲೇ ಇದ್ದೇನೆ”.
ರಾಕೇಶ್ ರವರ ವ್ಯಕ್ತಿತ್ವವನ್ನು ಮೆಚ್ಚುಕೊಂಡವರಲ್ಲಿ ನಾನು ಒಬ್ಬ. ಅವರ ಬಗ್ಗೆ ಅಪಾರ ಗೌರವ, ಸ್ನೇಹವಿತ್ತು. ಈ ವದಂತಿಗಳಿಗೆ ಯಾರು ಕೂಡ ದನಿಗೂಡಬಾರದು. ರಾಕೇಶ್, ಒಬ್ಬ ಉತ್ತಮವಾದ ವ್ಯಕ್ತಿಯಾಗಿದ್ದರು. ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಹಾಗೆಯೇ, ಸಾವಿನ ಮನೆಯಲ್ಲಿ ವಿಕೃತ ಬುದ್ಧಿಗಳನ್ನು, ಮನಸ್ಸನ್ನು ಪ್ರದರ್ಶಿಸುರವರು ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಪರಾಮರ್ಶಿ ಸಲಿ ಎಂದು ಅನಂತ ನಾರಾಯಣ್ ಹೇಳಿದ್ದಾರೆ.
ಸಾವಿನ ಮನೆಯಲ್ಲಿ, ಈ ರೀತಿಯ ವಿಕೃತಿ ಮೆರೆಯುವುದು, ಅಗಲಿದ ಆತ್ಮಕ್ಕೆ ಕೊಡುವ ಸಂತಾಪವೆ? ತಲೆ ಬುಡ ವಿಲ್ಲದ ಮಾಹಿತಿಯನ್ನು ವ್ಯಭವೀಕರಿಸುವುದು ಸರಿಯಲ್ಲ. ಬೆಂಗಳೂರಿನಲ್ಲಿ ತೆಗೆದ ಫೋಟೋವನ್ನು ಸ್ವತಃ ರೆಸ್ಟೋರೆಂಟ್ ಮಾಲೀಕರೇ ಧೃಡೀಕರಿಸುವ ಹಿನ್ನಲೆಯಲ್ಲಿ, ಈ ಮಾಹಿತಿ ಶುದ್ಧ ಸುಳ್ಳು. ನಿಮಗೆ ಈ ಮೆಸೇಜ್ ಬಂದಲ್ಲಿ, ಕೂಡಲೇ ಡಿಲೀಟ್ ಮಾಡಿ.
ಮತ್ತೆ ಹುಟ್ಟಿ ಬಾ ರಾಕೇಶ್..
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
