ಮುಂದಿನ ವರ್ಷ ತನ್ನ 480 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ Pensioners’ ಪ್ಯಾರಡೈಸ್ , ಲೇಕ್ ಸಿಟಿ , ಪಬ್ ಸಿಟಿ , IT ಸಿಟಿ ಎಂಬೆಲ್ಲಾ ಹೆಸರುಗಳಿವೆ, ಜಗತ್ ವಿಖ್ಯಾತಿ ಹೊಂದಿದ ರಾಜಧಾನಿಗೆ ದಿನಕ್ಕೆ ಲಕ್ಷಾಂತರ ಮಂದಿ ಭೇಟಿ ಕೊಡುತ್ತಾರೆ ಕೂಡ… ಎಷ್ಟೋ ಮಂದಿಗೆ ಜೀವನ ನೀಡಿದ ಮತ್ತು ನೀಡುತ್ತಿರುವ ಬೆಂಗಳೂರು ಎಲ್ಲರನ್ನು ತನ್ನ ಮಕ್ಕಳಂತೆ ಸಲಹುತ್ತಾ ಬಂದಿದೆ, ಹಾಗೆಯೆ ಪರಭಾಷಿಕರನ್ನು ಕೂಡ ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿರುವ ಬೆಂಗಳೂರಿಗೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಪರಭಾಷಿಕರೇ ಕಂಟಕವಾಗುತ್ತಿರುವಂತೆ ತೋರುತ್ತಿದೆ.
ಈಗಾಗಲೇ ಕನ್ನಡಿಗರ ಸಂಖ್ಯೆ ಬೆಂಗಳೂರಿನಲ್ಲಿ ಇಳಿಮುಖವಾಗಿದ್ದು ಕೇವಲ 48% ಅಷ್ಟು ಮಾತ್ರ ಕನ್ನಡಿಗರು ಬೆಂಗಳೂರಿಗರಾಗಿ ವಾಸಿಸುತ್ತಿರುವುದು ಅಂಕಿ ಅಂಶಗಳ ಪ್ರಕಾರ ತಿಳಿದುಬಂದಿದೆ. IT BT ಅನ್ಕೊಂಡು ಬಂದು ಇಲ್ಲೇ ಠಿಕಾಣಿ ಹೂಡುತ್ತಿರುವ ಮಂದಿಗೆ ಬರವಿಲ್ಲ… ಬಂದೋರು ತಾವಾಯಿತು ತಮ್ಮ ಕೆಲಸವಾಯಿತು ಎಂದು ಇದ್ದರೆ ಯಾರು ಏನು ಹೇಳುವುದಿಲ್ಲ, ಮಾತಾಡುವುದಿಲ್ಲ, ಆದರೆ ತಮ್ಮದೇ ಬೆಂಗಳೂರು ಎಂಬಂತೆ ವರ್ತಿಸುತ್ತಾ ಇರುವುದು ಎಲ್ಲ ಕನ್ನಡಿಗರಿಗೂ ತಾಳ್ಮೆಗೆಡುವಂತೆ ಮಾಡಿದೆ… ಸುಮ್ಮನಿದ್ದೇವೆ ಎಂದರೆ ತುಳಿಯುವ ಮಂದಿಗೆ ಬರವಿಲ್ಲ…
ಉತ್ತರ ಭಾರತದ ಮಹಿಳೆಯೊಬ್ಬಳು ಮೊನ್ನೆ ಮೊನ್ನೆ ಕುಡಿದ ಅಮಲಿನಲ್ಲಿ ಪೊಲೀಸರಿಗೇ ಹೊಡೆಯಲು ಹೊಂದಿದ್ದನು ನಾವಿಲ್ಲಿ ಸ್ಮರಿಸಬಹುದು, ಕಂಠ-ಪೂರ್ತಿ ಕುಡಿದಿದ್ದಲ್ಲದೆ, ಕರ್ತವ್ಯ ನಿರತ ಸಂಚಾರಿ ಪೋಲೀಸರ ವಿರುದ್ದ ‘ಅವಾಚ್ಯ’ ಶಬ್ದಗಳನ್ನು ಪಯೋಗಿಸಿ ಅವರನ್ನು ವಿನಾಕಾರಣ ನಿಂದಿಸಿ, ತಮ್ಮ ದರ್ಪ-ದೌರ್ಜನ್ಯಗಳನ್ನು ಮಾಡುತ್ತಿರುವ ಇವರಿಗೆ ಏನು ಮಾಡಬೇಕು ಹೇಳಿ?
ತೀರಾ ಇತ್ತೀಚೆಗೆ, ಪರ ರಾಜ್ಯದ ಯುವತಿಯೊಬ್ಬಳು ವೇಶ್ಯಾವಾಟಿಕೆಗೆ ಒಪ್ಪದೇ ಇದ್ದಾಗ ಆಕೆಯ ಸ್ನೇಹಿತರೆ ಥಳಿಸಿದ್ದನು ಮರೆಯುವಂತಿಲ್ಲ… ಬೆಂಗಳೂರಿನಲ್ಲಿ ತಮ್ಮದೇ ಆದ ವೇಶ್ಯಾವಾಟಿಕೆ ಜಾಲವನ್ನು ನಿರ್ಮಿಸಿಕೊಂಡು
ರಾಜಾರೋಷವಾಗಿ ದಂದೆ ಮುಂದುವರೆಸಿದ್ದಾರೆ.
ಕನ್ನಡವನ್ನು ಮಾತಾಡಿದರೆ ಕೆಲಸ ಸಿಗುವುದಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿರುವುದಂತೂ ನಿಜ, ನಮ್ಮ ಕನ್ನಡಿಗರೇ ಕನ್ನಡದಲ್ಲಿ ಮಾತಾಡುವುದನ್ನು ಕಡಿಮೆ ಮಾಡಿದ್ದಾರೆ. ಎತ್ತ ನೋಡಿದರೂ ಇಂಗ್ಲಿಷ್ ತುಂಬಿ ತುಳುಕ್ಕುತಿರುವುದಂತೂ ಸತ್ಯ.
ಬೆಂಗಳೂರಿನ ಕಾನೂನು-ಸುವ್ಯವಸ್ಥೆಗೆ ಈ ಉತ್ತರ ಭಾರತೀಯರು ಮಾರಕವಾಗಿದ್ದಾರೆ ಎಂಬುದು ಸುಳ್ಳಲ್ಲ…
ಮಾನ್ಯ ಪೊಲೀಸ್ ಆಯುಕ್ತರು ಇಂತವರ ಮೇಲೆ ನಿಗಾ ಇಟ್ಟು, ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು. ‘ದಕ್ಷ’ ಪೊಲೀಸ್ ಅಧಿಕಾರಿಗಳು ಅವರು ಇಂತವರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಶಾಂತ ನಗರಿ ಎಂದು ಹೆಸರು ಮಾಡಿರುವ ಬೆಂಗಳೂರಿಗೆ ಪರಭಾಷಿಗರ ಉಪಟಳ ತಪ್ಪಿಸಬೇಕಾಗಿದೆ.
ಹೀಗೆ ಮುಂದುವರೆದರೆ ಮುಂದೊಂದು ದಿನ ಕನ್ನಡಿಗರ ಮಕ್ಕಳು ಪರಭಾಷಿಕರ ಕೈ ಕೆಳಗೆ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುವುದಂತೂ ನಿಜ…
-ಗಿರೀಶ್ ಗೌಡ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
