ಅಂಕಪಟ್ಟಿ ಸರಿಪಡಿಸಲು ಒತ್ತಾಯಿಸಿ SFI, BVS, KSSF, DSF. ಪ್ರತಿಭಟನೆ ನಡೆಸುತ್ತದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ “ಕಾಲೇಜುಗಳ ಆಯ್ಕೆಯಾಧಾರಿತ ಕ್ರೆಡಿಟ್ ವ್ಯವಸ್ಥೆ (CBSC) ಯನ್ನುಸಮರ್ಪಕವಾಗಿ ಜಾರಿ ಮಾಡದರ ಪರಿಣಾಮ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
2014 ರ UGC ನಿಯಮವನ್ನು ಅನುಷ್ಠಾನಗೊಳಿಸದಿರುವುದರಿಂದ ಈ ಗೊಂದಲ ನಿರ್ಮಾಣವಾಗಿದ್ದು ಕೂಡಲೆ ಅದನ್ನು ಸರಿ ಪಡಿಸುವಂತೆ ಒತ್ತಾಯಿಸಿ ಬೆಂಗಳೂರು ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳ ಹಿತರಕ್ಷಣಾ ಸಮಿತಿಯಿಂದ ಇಂದು ವಿ.ವಿ ಕ್ಯಾಂಪಸ್ ನ ಉಪಕುಲಪತಿಗಳ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಮನವಿ ಸ್ವಿಕರಿಸಿದ ಉಪಕುಲಪತಿಗಳು ಅಂಕ ಪಟ್ಟಿ ದೋಷ ಸರಿಪಡಿಸುವುದಾಗಿ ಭರವಸೆ ನೀಡಿದರು. ಈ ಕೂಡಲೆ ವಿದ್ಯಾರ್ಥಿ ಸಂಘಟನೆಗಳ ಸಭೆ ಕರೆಯುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ SFI ರಾಜ್ಯಾದ್ಯಕ್ಷ ವಿ.ಅಂಬರೀಶ್, ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ರಾಜ್ಯ ಉಪಾಧ್ಯಕ್ಷ ಬಸವರಾಜ ಪೂಜಾರ್, ಜಿಲ್ಲಾಧ್ಯಕ್ಷ ಚಿಕ್ಕರಾಜು ಎಸ್. ವೆಂಕಟೇಶ್ ಕೆ. ದೀಲಿಪ್ ಶೆಟ್ಟಿ. KSSF ನ ಕುಮಾರಸ್ವಾಮಿ, BVS ನ ಮನೋಹರ್, ಅಪ್ಪಗೆರೆ ಪ್ರದೀಪ್, ಪ್ರಕಾಶ್, DSF ನ ರಾಜಗೋಪಾಲ್ ಹಾಜರಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
