fbpx
Awareness

ಒರಟು ಮಕ್ಕಳಲ್ಲಿ ಶಿಸ್ತನ್ನು ತರುವುದು ಹೇಗೆ?

ಮಕ್ಕಳಿಗೆ ವ್ಯಕ್ತಿತ್ವ ವಿಕಾಸದಲ್ಲಿ ಶಿಸ್ತು – ಸಮಯ ಪ್ರಜ್ಞೆ ಅವಶ್ಯ, ಕೆಲವು ಬರಿ ಒದ್ದು ಬುದ್ಧಿ ಕಲಿಸಿ ಬೇಕು ಎಂದು ಒತ್ತಾಯದಿಂದ ಮಕ್ಕಳಿಗೆ ಹೊಡೆಯುತ್ತಾರೆ ಎಂಬಂತಹ ಸ್ಪಷ್ಟನೆಗಳನ್ನು ಪೋಷಕರ ನೀಡುತ್ತಾರೆ. ಅನಾಗರೀಕವಾಗಿ ವರ್ತಿಸುವ ಮಕ್ಕಳ ಮೇಲೆ ದೊಡ್ಡವರು ಎಷ್ಟೇ ಉತ್ತಮ ಉದ್ದೇಶದಿಂದ ನೀಡುವ ಶಿಕ್ಷೆಯೂ ಆಕ್ರಮಣ ಎಂದೇ ಎನಿಸಿಕೊಳ್ಳುತ್ತದೆ.ಆದರೆ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದನ್ನು ಜಾಗತಿಕವಾಗಿ ಅನೇಕ ರಾಷ್ಟ್ರಗಳು ನಿಷೇಧಿಸಿವೆ. ಶಿಕ್ಷೆ ನೀಡುವುದು ಅಥವಾ ಶಿಕ್ಷೆಯ ಭಯ ಹುಟ್ಟಿಸುವುದು ಎರಡೂ ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಪೋಷಕರ ಸಮರ್ಥನೆಗಳು ಮೇಲ್ನೋಟಕ್ಕೆ ಸಮಂಜಸ ಎನಿಸಿದರೂ ತಾತ್ವಿಕ, ಮನೋವೈಜ್ಞಾನಿಕ ಹಾಗೂ ಕಾನೂನಿನ ಹಿನ್ನೆಲೆಯಿಂದ ಸರಿ ಎನಿಸುವುದಿಲ್ಲ.

201510271559307307_Teach-your-children-in-this-way_SECVPF

ಒಂದು ವೇಳೆ ನಿಮ್ಮ ಮಗು ಇದ್ದಕ್ಕಿದ್ದಂತೆ ನಿಮಗೆ ಎದುರುತ್ತರ ನೀಡುವ ಮಟ್ಟಕ್ಕೆ ಬೆಳೆದರೆ, ನಿಮಗೆ ನಿಜಕ್ಕು ಆ ಕ್ಷಣ ಆಘಾತವಾಗುವುದು ಸಹಜ. ಆ ಸಂದರ್ಭದಲ್ಲಿ ನೀವು ಹೇಗೆ ಪ್ರತಿಕ್ರಿಯಿಸುತ್ತೀರಾ, ಆ ನಿಮ್ಮ ಮಗುವಿನಲ್ಲಿ ಒಂದು ಒಳ್ಳೆಯ ವರ್ತನೆಯನ್ನು ಹೇಗೆ ತರುತ್ತಿರಿ. ಈ ಪರಿಸ್ಥಿತಿಯನ್ನು ನೀವು ನಾಜೂಕಿನಿಂದ ನಿಭಾಯಿಸಬೇಕಾಗುತ್ತದೆ. ಅನಾಗರೀಕವಾಗಿ ವರ್ತಿಸುವ ಮಕ್ಕಳನ್ನು ತಿದ್ದಲು ಹೋದಾಗ ಅವರು ಉದ್ವೇಗಕ್ಕೆ ಒಳಗಾಗುವುದು ಸಹಜ. ಹಾಗೆಂದು ಈ ವಿಚಾರವನ್ನು ನಿಧಾನವಾಗಿ ಪರಿಹರಿಸಲು ಸಹ ಸಾಧ್ಯವಾಗುವುದಿಲ್ಲ.

ಏಕೆಂದರೆ ಇದೊಂದು ತಕ್ಷಣ ಪರಿಹಾರವನ್ನು ಹುಡುಕಿಕೊಳ್ಳಬೇಕಾಗಿರುವ ಸಮಸ್ಯೆಯಾಗಿರುತ್ತದೆ. ಮಗುವನ್ನು ಸರಿಯಾದ ದಾರಿಯಲ್ಲಿ ತರಬೇಕಾದುದು ಎಷ್ಟಾದರು ಪೋಷಕರ ಕರ್ತವ್ಯವಲ್ಲವೆ, ಹಾಗೆಂದು ಅದಕ್ಕೆ ನೀವು ಸಹ ಒರಟಾಗಿ ಮಗುವಿನ ಹತ್ತಿರ ನಡೆದುಕೊಳ್ಳಬೇಡಿ. ಮಗುವಿನ ಒರಟತನ ಮತ್ತು ಕೋಪದ ಸ್ಥಳದಲ್ಲಿ ಸಭ್ಯತೆಯನ್ನು ತಂದರೆ ಪರಿಸ್ಥಿತಿ ತನ್ನಷ್ಟಕ್ಕೆ ತಾನೇ ಸರಿ ಹೋಗುತ್ತದೆ.

ಪ್ರತಿ ಮಗುವಿನ ಉತ್ತಮ ಅಂಶಗಳನ್ನು ಗಮನಿಸಿ, ಧನಾತ್ಮಕ ಅಂಶಗಳನ್ನು ಉತ್ತಮ ನುಡಿಗಳಿಂದ ಪ್ರೋತ್ಸಾಹಿಸುವುದು ಪರಿಣಾಮಕಾರಿ ಆಗುತ್ತದೆ. ಎಂತಹ ಸಮಸ್ಯಾತ್ಮಕ ಮಗುವೇ ಆದರೂ ಅದರಲ್ಲಿ ಉತ್ತಮ ಗುಣಗಳು ಇದ್ದೇ ಇರುತ್ತವೆ. ಅವುಗಳನ್ನು ಗಮನಿಸಿ, ಪ್ರೋತ್ಸಾಹಿಸಬೇಕು. ಇದಕ್ಕೆ ಸ್ವಲ್ಪ ತಾಳ್ಮೆ ಬೇಕಾಗುತ್ತದೆ. ಅದೊಂದು ನಿಮ್ಮ ಬಳಿ ಇದ್ದರೆ, ನಿಮ್ಮ ಮಗುವನ್ನು ನೀವು ಸರಿ ದಾರಿಗು ತರುವುದು ಏನು ಕಷ್ಟವಲ್ಲ. ಒರಟು ಮಕ್ಕಳಿಗೆ ಹೇಗೆ ಪ್ರತಿಕ್ರಿಯಿಸಬೇಕು?

ensenar-001

ತಕ್ಷಣ ಪ್ರತಿಕ್ರಿಯಿಸಿ :-

ನಿಮ್ಮ ಮಗು ಒಂದು ವೇಳೆ ಅಸಭ್ಯವಾಗಿ ವರ್ತಿಸಿದರೆ ತಡ ಮಾಡದೆ ತಕ್ಷಣ ಪ್ರತಿಕ್ರಿಯಿಸಿ. ಇದು ತೀರಾ ಮುಖ್ಯ ಎಂಬುದನ್ನು ಮರೆಯಬೇಡಿ. ನಿಮ್ಮ ಮಗುವಿಗೆ ನಾನೇನೋ, ತಪ್ಪು ಮಾಡಿದೆ ಎಂದು ಗೊತ್ತಾಗಲಿ. ಒಂದು ವೇಳೆ ನಿಮ್ಮ ಮಗು ನಿಮ್ಮ ಜೊತೆ ಕೋಪದಿಂದ ನಡೆದುಕೊಂಡಲ್ಲಿ, ನಿಮ್ಮ ಮಗುವನ್ನು ಹದ್ದು ಬಸ್ತಿನಲ್ಲಿಡಲು ನೀವು ನಿಮ್ಮ ಅಧಿಕಾರವನ್ನು ಬಳಸಿಕೊಳ್ಳಿ. ಆದರೆ ಅದೇ ಸಮಯದಲ್ಲಿ ನಿಮ್ಮ ದೈಹಿಕ ಭಾಷೆಯನ್ನು ಗಮನದಲ್ಲಿಟ್ಟುಕೊಳ್ಳುವುದನ್ನು ಮರೆಯಬೇಡಿ.

ಒಳ್ಳೆಯ ಆಯ್ಕೆಗಳನ್ನು ನೀಡಿ :-

ಕೋಪವನ್ನು ತೋರಿಸುವ ಮಕ್ಕಳನ್ನು ಹೇಗೆ ನಿಭಾಯಿಸುವುದು? ಮೊದಲು ನಿಮ್ಮ ಮಗುವಿಗೆ ಹೇಳಿ, ಯಾವುದಾದರು ಒಂದು ವಿಚಾರದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುವುದು ಒಳ್ಳೆಯದೇ, ಹಾಗೆಂದು ಅದಕ್ಕಾಗಿ ಕೋಪಾತಾಪವನ್ನು ಪ್ರದರ್ಶಿಸುವುದು ಒಳ್ಳೆಯದಲ್ಲ ಎಂಬುದನ್ನು ತಿಳಿಸಿಕೊಡಿ.

ಮಗುವಿಗೆ ಅಭ್ಯಾಸ ಮಾಡಿಸಿ :-

ತನಗೆ ಇಷ್ಟವಾಗಲಿಲ್ಲ ಎಂಬುದನ್ನು ತಿಳಿಸಲು ಮಗುವಿಗೆ ಕೆಲವು ಸಾಲುಗಳನ್ನು ಹೇಳಿ ಕೊಡಿ. ಅದು ಸಭ್ಯತೆಯ ಗೆರೆಯೊಳಗೆ ಇರಲಿ. ಇದನ್ನು ಆತ ಅಭ್ಯಾಸ ಮಾಡಲಿ, ಸಮಯ ಸಂದರ್ಭ ಬಂದಾಗ ಮಗುವು ತನ್ನ ಅಸಮಾಧಾನವನ್ನು ತೋರಿಸಲು ಈ ಸಾಲುಗಳನ್ನು ಬಳಸಿಕೊಳ್ಳುವಂತೆ ಮಾಡಿ.

ಸಮತೋಲನ :-

ನಿಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿ ನಡೆಯುತ್ತಲೆ ಇರುತ್ತದೆ. ಆದರೆ ಅದರಿಂದ ನೀವು ಅಷ್ಟೇ ಬೇಗ ಯಥಾಸ್ಥಿತಿಗೆ ಬರುತ್ತೀರಿ. ಇದನ್ನೆ ನಿಮ್ಮ ಮಗುವಿಗು ಸಹ ತಿಳಿಸಿಕೊಡಿ. ಪ್ರತಿ ಮಗುವೂ ವಿಭಿನ್ನ ಹಾಗೂ ವಿಶಿಷ್ಟ. ಒಂದು ಮಗುವನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಕೆ ಮಾಡುವುದು ಬೇಡ.

ನಿಮ್ಮ ಮಗುವಿಗೆ ಎಟುಕುವಂತಿರಿ :-

ನಿಮ್ಮ ಮಗುವಿನ ಆಗು-ಹೋಗುಗಳಿಗೆ ಎಟುಕುವಂತಿರಿ, ಇದರಿಂದ ನಿಮ್ಮ ಮಗು ನಿಮ್ಮ ಬಳಿ ಮುಚ್ಚು ಮರೆಯಿಲ್ಲದೆ ತನ್ನ ವಿಚಾರಗಳನ್ನು ತೋಡಿಕೊಳ್ಳುತ್ತದೆ. ಯಾವಾಗ ಸಮಯ ಸಮಯಕ್ಕೆ ಸಂವಹನಗಳು ನಡೆಯುತ್ತವೆಯೋ, ಆಗ ನಿಮ್ಮ ಮಗು ಹಾಳಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಮಕ್ಕಳ ಚಿಕ್ಕಪುಟ್ಟ ತಪ್ಪುಗಳನ್ನು ಉದಾರವಾಗಿ ಕ್ಷಮಿಸಿ. ಚಿಕ್ಕ ತಪ್ಪನ್ನೇ ಅತಿ ಗಂಭೀರವಾಗಿ ಪರಿಗಣಿಸಿ, ರಾದ್ಧಾಂತ ಸೃಷ್ಟಿಸುವುದು ಸಮಸ್ಯೆಗೆ ಬರಮಾಡಿಕೊಡುವಂತಾಗಿತ್ತದೆ.

ಮಕ್ಕಳಿಗೆ ಪಾಲಕರು ಶಿಸ್ತನ್ನು ಕಲಿಸುವ ಸಂದರ್ಭದಲ್ಲಿ ಮಹತ್ವದ ಸೂಚನೆಗಳು

635964370316966612714608479_parenting

೧.ಒಳ್ಳೆಯ ವರ್ತನೆಯ ಸ್ತುತಿ ಮತ್ತು ತಪ್ಪು ವರ್ತನೆಗೆ ಶಿಕ್ಷೆ. ಮಕ್ಕಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಸಿಕ್ಕಿದರೆ ಅಥವಾ ಬಹುಮಾನ ಸಿಕ್ಕಿದರೆ ಅದರ ಸ್ತುತಿಯನ್ನು ಮಾಡಬೇಕು. ಅವರ ಪ್ರಶಂಸೆಯನ್ನು ಮಾಡಬೇಕು, ಅವರಿಗೆ ಇನ್ನೂ ಒಳ್ಳೆಯದಾಗಿ ವರ್ತಿಸುವುದಕ್ಕೆ ಪ್ರೋತ್ಸಾಹಸಿಗುವುದು. ಅವರ ತಪ್ಪು ನಡವಳಿಕೆಗೆ ಕೋಪವನ್ನು ವ್ಯಕ್ತ ಮಾಡಬೇಕು ಮತ್ತು ಅವಶ್ಯಕತೆ ಇದ್ದಲ್ಲಿ ಶಿಕ್ಷೆಯನ್ನೂ ನೀಡಬೇಕು.

೨.ಆಜ್ಞೆಯನ್ನು ಮಾಡದೇ ವಿನಂತಿಯನ್ನು ಮಾಡಬೇಕು. “ನೀರನ್ನು ತಾ”, ಎಂದು ಹೇಳದೇ “ರಾಜಾ ನನಗೆ ಕುಡಿಯಲು ನೀರನ್ನು ತಂದುಕೊಡಬಹುದಾ ?”, ಎಂದು ವಿನಂತಿಯನ್ನು ಮಾಡಬೇಕು.

೩.ಮನೆಯಸದಸ್ಯರ ಒಮ್ಮತ-ಮಗುವಿಗೆ ಶಿಸ್ತನ್ನು ಹಚ್ಚುವ ಮೊದಲು ಮಗುವಿನಿಂದ ಯಾವ ರೀತಿಯ ನಡವಳಿಕೆಯ ಅಪೇಕ್ಷೆಯಿದೆ ಎನ್ನುವುದರ ವಿಚಾರವನ್ನು ಮಾಡಿ ನಮ್ಮ ಭೂಮಿಕೆಯನ್ನು ನಿಶ್ಚಿತಗೊಳಿಸಬೇಕು ಮತ್ತು ಎರಡು ಮತಗಳಾಗಲು ಬಿಡಬಾರದು. ತಾಯಿ-ತಂದೆಯ ಹಾಗೂ ಮನೆಯಇತರ ಸದಸ್ಯರ ಒಮ್ಮತವು ಮಗುವಿಗೆ ಶಿಸ್ತನ್ನು ಕಲಿಸುವ ಕಾರ್ಯದಲ್ಲಿ ಅತ್ಯಂತ ಆವಶ್ಯಕವಾಗಿರುತ್ತದೆ. ಕಿಟಕಿಯ ಗಾಜನ್ನು ಹಿಡಿದು ಕಿಟಕಿಯ ಮೇಲೆ ಎತ್ತರಕ್ಕೆ ಏರುವ ಬಗ್ಗೆ ತಂದೆಯ ಪ್ರಶಂಸೆ ಮತ್ತು ಅದೇ ಕೃತ್ಯಕ್ಕಾಗಿ ತಾಯಿಯು ಕೋಪಗೊಳ್ಳುವುದು, ಹೀಗೆ ಆಗಬಾರದು. ಶಿಕ್ಷೆಯನ್ನು ಯಾವಾಗ ಕೊಡಬೇಕು ಎನ್ನುವುದರ ಬಗ್ಗೆ ಮತಭೇದವನ್ನು ಪಾಲಕರು ಮೊದಲೇ ದೂರಗೊಳಿಸಿಕೊಂಡಿರಬೇಕು. ಮಕ್ಕಳೆದುರು ಸಮಸ್ಯೆ ಉದ್ಭವಿಸಬಾರದು.

೪.ತಪ್ಪು ನಡೆದಾಗ ತಕ್ಷಣ ಶಿಕ್ಷೆಯನ್ನು ಕೊಡಬೇಕು. “ಇರು, ಸಂಜೆತಂದೆಬರಲಿ, ನಂತರ ನೋಡುತ್ತೇನೆ” ಎನ್ನುವುದು ತಪ್ಪು ಶಿಕ್ಷೆಯಾಗಿದೆ. ಅದರಿಂದಾಗಿ ತಂದೆಯು ಬರುವವರೆಗೆ ಮಗುವು ಶಿಕ್ಷೆಯ ಚಿಂತೆಯಲ್ಲಿರುತ್ತದೆ.

ಇದು ಸಂಗ್ರಹ ಮಾಹಿತಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top