fbpx
Editor's Pick

ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ.. .. .. .. .. .. .. .. .. .. ..

ಸ್ನೇಹ ಅತಿ ಮಧುರ,
ಸ್ನೇಹ ಅದು ಅಮರ.

ಎಂದು ದಿ|| ರಾಜು ಅನಂತಸ್ವಾಮಿಯವರು ಸುಗಮಸಂಗೀತ ಕಾರ್ಯಕ್ರಮಗಳಲ್ಲಿ ಮಧುರವಾಗಿ ಹಾಡುತ್ತಿದ್ದರೆ ಪ್ರೇಕ್ಷಕರು ಒಂದು ಕ್ಷಣ ಭಾವುಕರಾಗಿ ಮತ್ತೊಮ್ಮೆ ಹಾಡಿ, ಮತ್ತೊಮ್ಮೆ ಹಾಡಿ ಎಂದು ಹಾಡಲು ಬಲವಂತ ಮಾಡುತ್ತಿದ್ದರು. ಈ ಹಾಡು ಕೇಳಲು ಎಷ್ಟು ಮಧುರವಾಗಿದೆಯೊ ಅದರ ಭಾವಾರ್ಥವೂ ಕೂಡ ಅಷ್ಟೇ ಅರ್ಥವತ್ತಾಗಿದೆ. ಹೌದು ಸ್ನೇಹ ಎಂಬುದು ಮಧುವಿಗಿಂತ ಮಧುರ. ಅಷ್ಟೇ ಅಲ್ಲ ಅದು ಅಮರ ಕೂಡ. ಪ್ರಪಂಚದಲ್ಲಿ ಈ ಸ್ನೇಹದ ಮಧುರಾನುಭವವನ್ನು ಪಡೆಯದ ವ್ಯಕ್ತಿ ಬಹುಷಃ ಇಲ್ಲವೇನೋ ?

ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಪ್ರತಿವರ್ಷದ ಆಗಸ್ಟ್ ತಿಂಗಳ ಮೊದಲನೆ ಭಾನುವಾರ “ಸ್ನೇಹಿತರ ದಿನಾ”ಚರಣೆಗೆ ಮೀಸಲು. ಮಗು ಮನೆಯಿಂದ ಹೊರಕ್ಕೆ ಕಾಲಿಡುತ್ತಿದ್ದಂತೆಯೇ ಶಿಶುವಿಹಾರಕ್ಕೊ ಅಥವಾ ಇಂದಿನ Lkg ಅಥವಾ Ukg ಸೇರುತ್ತಲೇ ಸ್ನೇಹಿತರ ಸಂಗ ಪ್ರಾರಂಭವಾಗುತ್ತದೆ. ಸ್ನೇಹ ಎಂಬುದು ವಿವರಿಸಲಾಗದ ಒಂದು ಮಧುರ ಸಂಬಂಧ, ಚಿಕ್ಕವರಿದ್ದಾಗ ಸ್ನೇಹಿತರೊಡನೆ ಕಿತ್ತಾಟ, ಗುದ್ದಾಟ ಬೆಳೆಯುತ್ತಾ ಕಾಲೇಜಿನಲ್ಲಿ ಸ್ನೇಹಿತರೊಂದಿಗೆ ಮೋಜು ಮಸ್ತಿ ಈ ಹಂತದಲ್ಲೆ ಕೆಲವೊಮ್ಮೆ ಪ್ರೀತಿಗೆ ತಿರುಗುವ ಸ್ನೇಹ ವಯಸ್ಕರಾದ ಮೇಲೆ ನಿವೃತ್ತಿಯಾದ ಮೇಲೂ ಹಳೆಯ ಸ್ನೇಹಿತರನ್ನು ಭೇಟಿಯಗುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸವಿಸವಿ ನೆನಪು ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಈ ಸ್ನೇಹ ಎಂಬ ಪದವನ್ನು ವಿವರಿಸಲು ಪದಗಳೇ ಇಲ್ಲ ಎಲ್ಲರ ಬಾಳಿನಲ್ಲೂ ಎಷ್ಟೋ ಜನ ಸ್ನೇಹಿತರು ಬಂದು ಹೋಗುತ್ತಾರೆ ಆದರೆ ಅವರಲ್ಲಿ ಎಷ್ಟೋ ಜನರನ್ನು ನಾವು ಮರೆತುಬಿಡುತ್ತೇವೆ. ಆದರೆ ಕೆಲವು ಸ್ನೇಹಿತರು ಕೊನೆಯವರೆಗೂ ನಮ್ಮ ಸಂಪರ್ಕದಲ್ಲಿರುತ್ತಾರೆ. ಹಲವಾರು ಕಾರಣಗಳಿಂದಾಗಿ ಕೆಲ ಸ್ನೇಹಿತರು ನಮ್ಮ ಸ್ಮೃತಿಪಟಲದಲ್ಲಿ ಚಿರಸ್ಥಾಯಿಯಾಗಿ ಉಳಿದುಬಿಡುತ್ತಾರೆ.

ನಮ್ಮ ಜೀವನದಲ್ಲಿ ತಮ್ಮ ಆಗಮನದಿಂದ ಜೀವನವನ್ನು ವಿಶೇಷವಾಗಿಸಿದ ಜೀವನದಲ್ಲಿ ಮುನ್ನಡೆಯಲು ಉತ್ತಮ ಮಾರ್ಗದರ್ಶನ ನೀಡಿದ ಅನೇಕ ಸ್ನೇಹಿತರನ್ನು ಸ್ಮರಿಸಿಕೊಳ್ಳಲು ಈ ಆಚರಣೆ ಬಂದಿರಬಹುದು ಸ್ನೇಹ ನಮ್ಮ ಸಮಾನ ವಯಸ್ಕರೊಡನೆ ಆಗಬೇಕೆಂದೇನೂ ಇಲ್ಲ ಸ್ನೇಹಕ್ಕೆ ವಯಸ್ಸಿನ ಅಂತರವಿಲ್ಲ ಸ್ನೇಹದ ಸೆಳೆತವೇ ಅಂತಹುದು. ವಯಸ್ಸಿನ ಮೇರೆಯನ್ನು ಮೀರಿದ್ದು ಎಂಥಹವರನ್ನು ಸ್ನೇಹ ತನ್ನ ಪಾಶದಲ್ಲಿ ಬಂಧಿಸಿಬಿಡುತ್ತದೆ. ಇಡೀ ಪ್ರಪಂಚವೇ ನಮ್ಮನ್ನು ದೂರ ಮಾಡಿದ್ದರೂ ಕಷ್ಟದಲ್ಲಿದ್ದಾಗ ನಮ್ಮ ಜೊತೆಗಿದ್ದು ಜೀವನ್ನಕ್ಕೆ ಅರ್ಥ ತುಂಬಿದ ಸ್ನೇಹಿತರನ್ನು ಅನೇಕರು ನೋಡಿರಬಹುದು ಇಂದಿನ ಯಾಂತ್ರಿಕೃತ ಜಂಜಡಭರಿತ ಜೀವನದಲ್ಲಿ ಉತ್ಸಾಹ ತುಂಬಲು, ಸಾಮಾಜಿಕ ಜೀವನದ ಬದುಕಿನಲ್ಲಿ ಸ್ನೇಹಿತರು ಇರಲೇಬೇಕು ಸ್ನೇಹದ ಪರಾಕಾಷ್ಟೆ ಎಷ್ಟಿದೆ ಎಂದರೆ ಕೆಲವೊಮ್ಮ ಮನೆಯವರ ಬಳಿ, ಒಡಹುಟ್ಟಿದವರ ಬಳಿ ಮತ್ತು ಹೆಂಡತಿಯ ಬಳಿಯೂ ಹೇಳಿಕೊಳ್ಳಲಾಗದ ಚರ್ಚಿಸಲಾಗದ ವಿಷಯಗಳನ್ನು ಸ್ನೇಹಿತರ ಬಳಿ ಹೇಳಿಕೊಳ್ಳುತ್ತೇವೆ ಅಷ್ಟೊಂದು ಸಲುಗೆ ಆತ್ಮೀಯತೆ ಈ ಸ್ನೇಹಕ್ಕಿದೆ ಕಷ್ಟದ ಸಮಯದಲ್ಲಿ ಮಾರ್ಗದರ್ಶನ ಮಾಡಿ ನಮಗೆ ಜೀವನದಲ್ಲಿ ಮತ್ತೆ ತಲೆ ಎತ್ತಿ ನಿಲ್ಲಲು ಶಕ್ತಿಸ್ಪೂರ್ತಿ ತುಂಬಿದ ಸ್ನೇಹಿತರನ್ನು ನೆನೆಸಿಕೊಳ್ಳಲು ಇದೊಂದು ಅಪೂರ್ವವಾದ ದಿನ ನಮ್ಮ ಕಷ್ಟವನ್ನು ಹೇಳಿಕೊಳ್ಳುವ ಮುಂಚೆ0iÉುೀ ನಮ್ಮ ಹಾವಭಾವ ನಮ್ಮ ಮುಖಚರ್ಯೆಯಿಂದಲೇ ನಮ್ಮ ಮನಸ್ಸಿನ ದುಗುಡವನ್ನು ಅರ್ಥಮಾಡಿಕೊಳ್ಳಬಲ್ಲ ಸ್ನೇಹಿತರಿದ್ದಾರೆ ಇಂಥಹ ಹೃದಯಗಳನ್ನು ಬಂಧಿಸುವ ಬೆಸೆಯುವ ಸಂಬಂಧವನ್ನೆ ಸ್ನೇಹ ಎನ್ನಬಹುದು.

ಈ ರೀತಿಯ ಸ್ನೇಹ ಸಂಬಂಧವನ್ನು ಪ್ರೀತಿಯ ನೀರೆರೆದು ಪೋಷಿಸಬೇಕು ಆಸ್ತಿ ಅಂತಸ್ತನ್ನು ಮೀರಿದ ಸ್ನೇಹಕ್ಕೆ ಬೇಕಾಗಿರುವುದು ಪರಿಶುದ್ಧವಾದ ಪ್ರೀತಿ. ಇದು ಸ್ನೇಹದ ಬಂಧ ಇನ್ನೂ ಗಟ್ಟಿಯಾಗಲು ಸಹಕಾರಿ ಎಂದರೆ ತಪ್ಪೇನಿಲ್ಲ ಆದ್ದರಿಂದ ನಮ್ಮ ಸ್ನೇಹಿತರ ಮುಂದೆ ಅವರ ಬಗ್ಗೆ ನಮಗಿರುವ ಭಾವನೆಯನ್ನು ವ್ಯಕ್ತಪಡಿಸಬೇಕು ಸ್ನೇಹಿತರ ನಡುವೆ ಷರತ್ತುಗಳಿಲ್ಲದ ಪ್ರೀತಿ ಇರುತ್ತದೆ ಸ್ನೇಹ ಎಂಬುದು HONEYಯಂತೆ ಅದನ್ನು MONEY ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ ಸ್ನೇಹಿತರಿಲ್ಲದಿದ್ದರೆ ಜೀವನ ಅಪೂರ್ಣವೆನಿಸುತ್ತದೆ ಸ್ನೇಹಿತರ ಜೊತೆ ಕಳೆದ ದಿನಗಳನ್ನು ನೆನಪಿಸಿಕೊಂಡು ರೋಮಾಂಚನ ಪಡುವುದರಲ್ಲಿಯೇ ಏನೋ ಆನಂದ ಒಳ್ಳೆಯ ಹಾಡು ಕೇವಲ 5 ನಿಮಿಷ ಸಂತಸ ತಂದುಕೊಡಬಹುದು ಒಳ್ಳೆಯ ಸಿನಿಮಾ ಮೂರು ಗಂಟೆ ಸಂತಸ ತಂದುಕೊಡಬಹುದು ಆದರೆ ಒಬ್ಬ ಒಳ್ಳೆಯ ಸ್ನೇಹಿತನಿದ್ದರೆ ಜೀವನವಿಡೀ ಸಂತೋಷವೋ ಸಂತೋಷ CHANCE MAKES OUR PARENTS BUT CHOICE MAKES OUR FRIENDS ಎಂಬುದು ಒಂದು ಹಿತೋಕ್ತಿ ಇದು ಖಂಡಿತಾ ಸತ್ಯ ಉತ್ತಮ ಸ್ನೇಹಿತರ ಆಯ್ಕೆ ನಮ್ಮ ಕೈಯಲ್ಲೇ ಇದೆ.

ಉತ್ತಮ ಸ್ನೇಹ ಸ್ನೇಹಿತರು ಇತ್ತೀಚಿನ ಬೆಳವಣಿಗೆಯೆಲ್ಲಾ! ಉತ್ತಮ ಸ್ನೇಹ ಸ್ನೇಹಿತರ ನಿದರ್ಶನಗಳು ನಮಗೆ ಪುರಾಣ ಕಾಲದಿಂದಲೂ ಸಿಗುತ್ತದೆ. ರಾಮಾಯಣದಲ್ಲಿ ಶ್ರೀರಾಮ ಹನುಮಂತರ ಸ್ನೇಹ ಸರ್ವ ಕಾಲಕ್ಕೂ ಆದರ್ಶನೀಯ ಇನ್ನೂ ಮಹಾಭಾರತದಲ್ಲಿ ಬರುವ ಕೃಷ್ಣ ಅರ್ಜುನರ, ಕೃಷ್ಣ ಸುಧಾಮರ ಸ್ನೇಹವನ್ನು ಮಾತುಗಳಲ್ಲಿ ವಿವರಿಸುವುದು ಸಾಧ್ಯವೇ ? ಕೃಷ್ಣ ಅರ್ಜುನನಿಗೆ ಉತ್ತಮ ಸ್ನೇಹಿತನಾಗಿದ್ದನಲ್ಲದೇ ಸ್ನೇಹದಲ್ಲಿ ಒಲವು,ರಸಿಕತೆ,ಭ್ರಾತೃತ್ವ, ರಕ್ಷಣೆ, ಮಾರ್ಗದರ್ಶನ, ಆತ್ಮೀಯತೆ, ರೇಗಿಸುವಂತಹ ವಿಷಯಗಳು ಸ್ನೇಹದಲ್ಲಿ ಅಡಗಿದೆ ಎಂಬುದನ್ನು ತಿಳಿಸಿದನು ಇದೇ ಮಹಾಭಾರತದಲ್ಲಿ ಧುರ್ಯೋಧನ ಕರ್ಣರ ಸ್ನೇಹ ಎಂಥದ್ದೂ ಎಂದು ಎಲ್ಲರಿಗೂ ತಿಳಿದ ವಿಷಯವೇ.

ಈ ಸ್ನೇಹಿತರ ದಿನದ ಆಚರಣೆ ಹೇಗೆ ಬಂತು ಎಂಬುದು ಗೊತ್ತಿಲ್ಲ ಆದರೆ ನಮ್ಮ ಪುರಾಣ ಇತಿಹಾಸದಲ್ಲಿ ಸ್ನೇಹಿತರ ಬಗ್ಗೆ ಬೆಲೆ ಕಟ್ಟಲಾಗದ ಸ್ನೇಹದ ಬಗ್ಗೆ ನಮ್ಮ ನಾಗರೀಕತೆ ಬೆಳೆದಾಗಿನಿಂದ ಉದಾಹರಣೆಗಳು ಸಿಗುತ್ತದೆ. ಪ್ರತಿಯೊಬ್ಬನ ಜೀವನಕ್ಕೆ ಕಳೆಕಟ್ಟುವ ಅಮೂಲ್ಯವಾದ ಸ್ನೇಹ ಹಾಗೂ ಸ್ನೇಹಿತರಿಗೊಂದು ದಿನವನ್ನು ಮೀಸಲಿಡಬೇಕೆಂದು ನಿರ್ಧರಿಸಿ 1935 ರಲ್ಲಿ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ ಪ್ರತಿವರ್ಷದ ಆಗಸ್ಟ್ ತಿಂಗಳ ಮೊದಲನೆ ಭಾನುವಾರವನ್ನು ರಾಷ್ಟ್ರೀಯ ಸ್ನೇಹಿತರ ದಿನಾಚರಣೆಯನ್ನಾಗಿ ಘೋಷಿಸಿದೆ ಅಂದಿನಿಂದ ಸ್ನೇಹಿತರ ದಿನಾಚರಣೆಯನ್ನು ವರ್ಷಕ್ಕೊಮ್ಮೆ ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆಯಲ್ಲದೇ ಸ್ನೇಹಿತರನ್ನು ಸ್ನೇಹವನ್ನು ಗೌರವಿಸಲೆಂದು ಮೀಸಲಾದ ಈ ದಿನ ವರ್ಷದಿಂದ ವರ್ಷಕ್ಕೆ ಮೆರುಗು ಪಡೆಯುತ್ತಾ ಇದೆ.
ಉತ್ತಮ ಸ್ನೇಹಿತರನ್ನು ಮಾಡಿಕೊಳ್ಳುವಾಗ ನಿಧಾನಿಸಿ, ಕಳೆದುಕೊಳ್ಳುವಾಗ ಇನ್ನೂ ನಿಧಾನ ಮಾಡಿ ಏಕೆಂದರೆ ಸ್ನೇಹ ಎಂಬುದು ಕಳೆದುಕೊಳ್ಳಲಾಗದ ಜವಾಬ್ದಾರಿ ಇಂಥಹ ಜವಾಬ್ದಾರಿಯನ್ನು ನೀವು ಹೊತ್ತಿರಬಹುದಲ್ಲವೇ ಎಲ್ಲರ ಜೀವನದಲ್ಲೂ ಸ್ನೇಹ ಸ್ನೇಹಿತರು ಜೀವನದ ಅವಿಭಾಜ್ಯ ಅಂಗವಾಗಿರುತ್ತರೆ ಕೆಲ ಸ್ನೇಹಿತರನ್ನು ಜೀವನವಿಡೀ ಮರೆಯಲು ಸಾಧ್ಯವಿಲ್ಲ ಅಂಥ ಸ್ನೇಹಿತರು ನಿಮಗೂ ಇರಬಹುದಲವೇ ಹಾಗಿದ್ದರೆ ಈ ಸ್ನೇಹಿತರ ದಿನಚರಣೆಯಂದು ಎಲ್ಲರನ್ನೂ ನೆನಪಿಸಿಕೊಳ್ಳಿ ಸ್ನೇಹಿತರೊಡನೆ ಕಳೆದ ದಿನಗಳು ಮುಖದ ಮೇಲೆ ಮಂದಹಾಸ ಮೂಡಿಸಲಿ WISH YOU ALL A HAPPY FRIENDSHIP DAY.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top