fbpx
Karnataka

20 ವರ್ಷಗಳ ಹಿಂದೆ ಗುಜರಾತ್ ರಾಜ್ಯ ಕನ್ನಡಿಗ ಪ್ರಧಾನಿಯನ್ನು ನೀರಿಗಾಗಿ ಒತ್ತಾಯಿಸಿದ ಕಾಲ

ಇಂದು ನಾವು ಮಹದಾಯಿ ನದಿ ನೀರಿನ ವಿಚಾರದಲ್ಲಿ ಪ್ರಧಾನಿಗಳ ಮಧ್ಯ ಪ್ರವೇಶಕ್ಕೆ ಒತ್ತಾಯ ಮಾಡುತ್ತಿದ್ದೇವೆ ಇದೇ ರೀತಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಗುಜರಾತ್ ರಾಜ್ಯವೂ ಕನ್ನಡಿಗ ಪ್ರಧಾನಿಯನ್ನು ನೀರಿಗಾಗಿ ಒತ್ತಾಯಿಸಿದ ಕಾಲವೂ ಇತ್ತು ಆದರೆ ಅಂದು ಪ್ರಧಾನಿಯಾಗಿದ್ದ ದೇವೇಗೌಡರ ಚಾಣಾಕ್ಷ ನಡೆಯಿಂದಾಗಿ ಹಲವಾರು ಅಡೆ ತಡೆಗಳ ನಡುವೆಯೂ ಗುಜರಾತಿನ ಬರಡಾಗಿದ್ದ ಭೂಮಿಯ 75% ನೀರಾವರಿ ಸೌಲಭ್ಯಕ್ಕೆ ಒಳಪಡುವಂತಾಯಿತು.

© SAKA

© Samanya kannadiga

ನರ್ಮದಾ ನದಿಗೆ ಅಡ್ಡಲಾಗಿ ಸರ್ದಾರ್ ಸರೋವರ್ ಡ್ಯಾಮ್ ಅನ್ನು ಕಟ್ಟಿ ಗುಜರಾತ್ ಬಹುಭಾಗ ಮತ್ತು ಮಧ್ಯಪ್ರದೇಶ್, ರಾಜಸ್ಥಾನ, ಮಹಾರಾಷ್ಟ್ರದ ಕೆಲ ಪ್ರದೇಶಗಳಿಗೆ ನೀರು ನೀಡಬೇಕೆನ್ನುವ ಅತೀ ದೊಡ್ಡ ಪ್ರಾಜೆಕ್ಟ್ ಗೆ ಕೇಂದ್ರ ಸರಕಾರ 1980 ರಲ್ಲಿ ಅನುಮೋದನೆ ನೀಡಿತ್ತು.1988 ರಲ್ಲಿ ಕೇಂದ್ರ ಸರಕಾರ ತನ್ನ ಪಾಲಿನ ಹಣವನ್ನು ಬಿಡುಗಡೆಗೊಳಿಸಿತ್ತು . ಯೋಜನೆ ಆರಂಭವಾಯಿತು ಆದರೆ ಪರಿಸರ ಸಂರಕ್ಷಣೆಯ “ನರ್ಮದ ಬಚಾವೋ” ಹೋರಾಟದ ತೀವ್ರತೆಯ ಕಾರಣದಿಂದ 1994 ರಲ್ಲಿ ಸುಪ್ರಿಂ ಕೋರ್ಟ್ ಈ ಯೋಜನೆಯನ್ನು ಸ್ಥಗಿತಗೊಳಿಸಲು ಆದೇಶ ನೀಡಿತ್ತು ನಿಧಾನಗತಿಯಲ್ಲಿ ಆರಂಭವಾಗಿದ್ದ ಕೆಲಸವೂ ನಿಂತಿತ್ತು .ದಿನದಿಂದ ದಿನಕ್ಕೆ ಯೋಜನೆಯ ವೆಚ್ಚ ಬೆಳೆಯುತ್ತಲೇ ಸಾಗಿತು.ಜೊತೆಗೆ ಮಧ್ಯ ಪ್ರದೇಶ ರಾಜ್ಯವು ತನ್ನ ಮುಳುಗಡೆ ಪ್ರದೇಶದ ನೆಪ ಹೇಳಿ ಈ ಯೋಜನೆಯನ್ನು ಸ್ಥಗಿತಗೊಳಿಸುವುದು ಮಾತ್ರವಲ್ಲದೆ ಈ ಯೋಜನೆಗೆ ವಿರುದ್ದವಾಗಿಯೇ ನಿಂತಿತ್ತು .ಈ ಸಮಸ್ಯೆಯನ್ನು ಬಗೆ ಹರಿಸುವ ಪ್ರಯತ್ನ ಕೆಲ ದಿನಗಳ ಪ್ರಧಾನಿಯಾಗಿದ್ದ ವಾಜಪೈಯವರು ನಡಿಸಿದ್ದರೂ ಅದೂ ವಿಫಲವಾಗಿತ್ತು.ಗುಜರಾತ್ ರಾಜ್ಯ ಈ ಧೈತ್ಯ ಯೋಜನೆ ಜಾರಿಗೆ ತಡ ಮಾಡಿದಷ್ಟು ದಿನವೊಂದಕ್ಕೆ ಹತ್ತು ಕೋಟಿ ಹೆಚ್ಚುವರಿ ಹಣವನ್ನು ವಿನಿಯೋಗಿಸಬೇಕಾಗಿದ್ದಿತ್ತು

ನಾಲ್ಕು ರಾಜ್ಯಗಳ ನಡುವಿನ ಕ್ಲಿಷ್ಟಕರ ಸಮಸ್ಯೆಯಾಗಿದ್ದ ಈ ಜಲಾಶಯದ ಪ್ರಾಮುಖ್ಯತೆ ಮತ್ತು ಇದರಿಂದ ರೈತರ ಜಮೀನಿಗೆ ಒದಗಿಸ ಬಹುದಾದ ಅಗಾಧ ಪ್ರಮಾಣದ ನೀರಾವರಿ ವ್ಯವಸ್ಥೆಯಿಂದಾಗಿ ದೇವೇಗೌಡರು ಈ ಡ್ಯಾಮ್ ಕಟ್ಟಲು ಇರುವ ಅಡೆತಡೆಗಳನ್ನು ನಿವಾರಿಸಲು ಮುಂದಾದರು . ಮುಖ್ಯವಾಗಿ ಮಧ್ಯ ಪ್ರದೇಶ ಮತ್ತು ಗುಜರಾತಿನ ಮುಖ್ಯಮಂತ್ರಿಗಳನ್ನು ಕರೆದು ಅವರ ಪ್ರಮುಖ ಬೇಡಿಕೆಗಳನ್ನೂ ಕೇಳಿದರು ಅಂತೆಯೇ ನರ್ಮದಾ ಬಚಾವೋ ಆಂದೋಲನದ ಹೋರಾಟಗಾರ್ತಿ ಮೇದಾ ಪಾಟ್ಕರ್ ಅವರನ್ನೂ ಭೇಟಿಯಾಗಿ ಅವರ ಅಭಿಪ್ರಾಯಗಳನ್ನೂ ಸಂಗ್ರಹಿಸಿದರು.ಗುಜರಾತ್ ರಾಜ್ಯ ಡ್ಯಾಮ್ ನ ಎತ್ತರವನ್ನು ಅಡಿ ಎತ್ತರಕ್ಕೆ ಏರಿಸಲು ಬೇಡಿಕೆ ಇಟ್ಟರೆ ಹೆಚ್ಚಿನ ಮುಳುಗಡೆ ಪ್ರದೇಶ ಹೊಂದುವ ಮಧ್ಯ ಪ್ರದೇಶ ಬರೀ 384 ಅಡಿ ಎತ್ತರಕ್ಕೆ ಅಷ್ಟೇ ಪಟ್ಟು ಹಿಡಿದಿತ್ತು.ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ ದೇವೇಗೌಡರು ಒಂದು ಅಂತಿಮ ನಿರ್ಧಾರಕ್ಕೆ ಬಂದರು ಅದು ಡ್ಯಾಮ್ ನ ಎತ್ತರವನ್ನು ಗುಜರಾತಿನ ಬೇಡಿಕೆಯಂತೆ 455 ಅಡಿ ಎತ್ತರ ಮಾಡುವುದು ಬೇಡ ಬದಲಾಗಿ 436 ಅಡಿ ಎತ್ತರ ಕಟ್ಟುವ ನಿರ್ಧಾರ ಹಾಗೂ 5 ವರ್ಷಗಳ ನಂತರ ಇದರ ಪರಿಣಾಮ ನೋಡಿ ಕೊಂಡು ಬೇಕಾದರೆ ಮತ್ತೆ ಇನ್ನಷ್ಟು ಎತ್ತರಕ್ಕೆ ಏರಿಸುವ ಬಗ್ಗೆ ನಿರ್ಧರಿಸೋಣ ಎಂಬ ನಿಲುವಿಗೆ ಬಂದರು ಇದಕ್ಕೆ ಅಂದಿನ ಮಧ್ಯ ಪ್ರದೇಶದ ಮುಖ್ಯ ಮಂತ್ರಿ ದಿಗ್ವಿಜಯ್ ಸಿಂಗ್ ಮತ್ತು ಗುಜರಾತಿನ ಮುಖ್ಯ ಮಂತ್ರಿ ಸುರೇಶ ಮೆಹ್ತಾ ಇಬ್ಬರೂ ಸಮ್ಮತಿಸಿ ಒಪ್ಪಂದ ಪಾತ್ರಗಳಿಗೆ ರುಜು ಹಾಕಿದ್ದರು.

ನಿಂತಿದ್ದ ಡ್ಯಾಮ್ ನಿರ್ಮಾಣದ ಕೆಲಸ ಸಾಗರೋಪಾದಿಯಾಗಿ ವೇಗದಿಂದ ಮತ್ತೆ ಆರಂಭವಾಯಿತು.ಆದರೂ ಸ್ಥಳೀಯ ರಾಜಕೀಯ ಒತ್ತಡಗಳಿಂದ ಮತ್ತೆ ನ್ಯಾಯಾಧಿಕಾರಣಕ್ಕೆ ಈ ವಿಷಯವನ್ನು ಮಧ್ಯ ಪ್ರದೇಶ ರಾಜ್ಯ ತೆಗೆದುಕೊಂಡು ಹೋಯಿತು ಆದರೆ ಒಪ್ಪಂದದಂತೆ ಕಾಲ ಕಾಲಕ್ಕೆ ಈ ಡ್ಯಾಮ್ ನ ಎತ್ತರವನ್ನು ಏರಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡುತ್ತಾ ಸಾಗಿತು . ಅಂತಿಮವಾಗಿ 2014 ರಲ್ಲಿ 455 ಅಡಿ ಎತ್ತರ ಏರಿಸಲು ಅನುಮತಿ ನೀಡಿದೆ.

ಇದೀಗ ಗುಜರಾತಿನ 9633 ಹಳ್ಳಿಗಳಿಗೆ ಅಂದರೆ ಸುಮಾರು 53% ಹಳ್ಳಿಗಳಿಗೆ ಇದೇ ಡ್ಯಾಮ್ ನಿಂದ ಕುಡಿಯಲು ನೀರು ಪೂರೈಸಲು ಸಾಧ್ಯವಾಗಿದೆ.ಲಕ್ಷಾಂತರ ಎಕರೆ ರೈತರ ಜಾಮೀನು ಹಸಿರಿನಿಂದ ನಳ ನಳಿಸುವಂತಾಯಿತು. ಇಂದಿನ ಪ್ರಧಾನಿಗಳು ಕಳಸಾ ಬಂಡೂರಿ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡದಿರುವಂತೆ ಅಂದು ದೇವೇಗೌಡರೂ ಸುಮ್ಮನಿರುತ್ತಿದ್ದರೆ ಇಂದು ಗುಜರಾತ್ “ಸರ್ದಾರ್ ಸರೋವರ್ ಡ್ಯಾಮ್” ನಿರ್ಮಿಸಲು ಸಾವಿರಾರು ಕೋಟಿ ಹೆಚ್ಚುವರಿಯಾಗಿ ವ್ಯಯ ಮಾಡ ಬೇಕಿತ್ತು ಮುಖ್ಯವಾಗಿ ಗುಜರಾತಿನ ರೈತರು ಉತ್ತಮ ನೀರಾವರಿ ಮತ್ತು ಕುಡಿಯುವ ನೀರು ದೊರಕಲು ಇನ್ನಷ್ಟು ವರ್ಷಗಳು ಕಾಯಬೇಕಿತ್ತು ..

Source: GBKM

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top