fbpx
Karnataka

ಲಾಲ್ ಬಾಗ್ ಪ್ಲವರ್ ಶೋ ಇಂದಿನಿಂದ ಪ್ರಾರಂಭ.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ಲವರ್ ಶೋ. ದೆಹಲಿಯ ಪಾರ್ಲಿಮೆಂಟ್ ಹೌಸ್ ಈ ಬಾರಿಯ ಫ್ಲವರ್ ಶೋ ಆಕರ್ಷಣೆ. ನಾಲ್ಕು ಲಕ್ಷ ಹೂವಿನಿಂದ ಅಲಕೃಂತಗೊಂಡ ಸಂಸತ್ ಭವನ ಅನಾವರಣ

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‍ಬಾಗ್‍ನಲ್ಲಿ ಏರ್ಪಡಿಸಲಾಗುವ ಫಲಪುಷ್ಪ ಪ್ರದರ್ಶನ ಇಂದಿನಿಂದ ಆರಂಭವಾಗಲಿದೆ.

Lalbagh

ಫ್ಲವರ್ ಶೋನಲ್ಲಿ ದೆಹಲಿಯ ಪಾರ್ಲಿಮೆಂಟ್ ಹೌಸ್ ಈ ಬಾರಿಯ ಆಕರ್ಷಣೆ. 4 ಲಕ್ಷ ಹೂವಿನಿಂದ ಅಲಂಕೃತಗೊಂಡ ಸಂಸತ್ ಅನಾವರಣವಾಗಲಿದೆ ಅಂತ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಲಾಲ್‍ಬಾಗ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಒಂದು ಕೋಟಿ ರೂ. ವೆಚ್ಚದಲ್ಲಿ ಪ್ಲವರ್ ಶೋ ಆಯೋಜಿಸಲಾಗುತ್ತಿದೆ. ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ಹಾಗೂ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಬಳಸಲಾಗುತ್ತಿದೆ.

ಎಂಟ್ರಿ ಫೀಸ್ ಎಷ್ಟು: ಸಾಮಾನ್ಯ ದಿನಗಳಲ್ಲಿ 50 ರೂಪಾಯಿ, ರಜಾ ದಿನಗಳಲ್ಲಿ 60 ರೂಪಾಯಿ ಎಂಟ್ರಿ ಫೀಸ್ ಇರುತ್ತದೆ. 12 ವರ್ಷದೊಳಗಿನ ಮಕ್ಕಳಿಗೆ 20 ರೂಪಾಯಿ ಫೀಸ್ ನಿಗದಿಯಾಗಿದೆ.

ಲಾಲ್‍ಬಾಗ್ ಪ್ಲವರ್ ಶೋನಲ್ಲಿ ಕಸ ಹಾಕುವವರ ಮೇಲೆ ಹಸಿರು ದಳದ ಕಣ್ಗಾವಲು ಇರಲಿದೆ. ವಿದ್ಯಾರ್ಥಿಗಳು ಹಾಗೂ ಹಲವು ಸಂಘಟನೆಗಳ ಕಾರ್ಯಕರ್ತರು ಮೂರು ತಂಡ ಮಾಡಿಕೊಂಡು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಾರೆ. ಕಸ ಹಾಕಿದ್ರೇ 100 ರೂಪಾಯಿ ದಂಡ ಸ್ಥಳದಲ್ಲಿಯೇ ಹಾಕುತ್ತಾರೆ.

ಲಾಲ್‌ಬಾಗ್,ಕೆಂಪು ತೋಟ, ಅಥವಾ ಲಾಲ್‌ಬಾಗ್ ಸಸ್ಯೋದ್ಯಾನ, ವರ್ಣರಂಜಿತ ಫಲ-ಪುಷ್ಪ-ಹಣ್ಣು-ಕಾಯಿಗಳಿಗೆ ಪ್ರಸಿದ್ಧವಾದ ಸಸ್ಯೋದ್ಯಾನ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದೆ. ಈ ಉದ್ಯಾನವನವನ್ನು ನಿರ್ಮಿಸಲು ಮೈಸೂರಿನ ಆಡಳಿತ ನಡೆಸುತ್ತಿದ್ದ ಹೈದರಾಲಿ ಸೂಚಿಸಿದ್ದನು. ಇದು ಪ್ರಸಿದ್ಧ ಗಾಜಿನ ಮನೆಯನ್ನು ಹೊಂದಿದ್ದು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಯದಲ್ಲಿ ಫಲ ಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತದೆ. ಇದಲ್ಲದೇ ಮತ್ಸ್ಯಾಗಾರ ಮತ್ತು ಕೆರೆಯನ್ನು ಹೊಂದಿದ್ದು ಬೆಂಗಳೂರಿನಲ್ಲಿರುವ ಒಂದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ

ಲಾಲ್‌ಬಾಗ್‌ನಲ್ಲಿ ಇತ್ತೀಚೆಗೆ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಬಾಲಕಿಯೊಬ್ಬಳು ಜೇನು ಹುಳುಗಳಿಂದ ಕಚ್ಚಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಜೇನು ಹುಳುಗಳ ಉಪಟಳ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ರಿಂದ ಉದ್ಘಾಟನೆಗೊಳ್ಳಲಿದೆ. ಲಾಲ್ ಬಾಗ್ ಕೆಂಪುತೋಟದಲ್ಲಿ ಹೂವಿನ ಲೋಕ ಅನಾವರಣ,ಕೇಸರಿ ,ಬಿಳಿ ,ಕೆಂಗುಲಾಬಿಯಲ್ಲಿ  ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಅನಾವರಣ, ಮೈಸೂರು ಉದ್ಯಾನ ಕಲಾಸಂಘ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಆಯೋಜನೆ ಮಾಡಲಾಗಿದೆ. ಮಂಜು ಕವಿದ ವಾತಾವರಣದಲ್ಲಿ ಹೂವಿನ ಲೋಕ ಕಣ್ತುಂಬಿಸಿಕೊಳ್ಳುವ ಅವಕಾಶವಾಗಿದೆ. ಇಸ್ರೇಲ್ ನ ಮಿಸ್ಟಿಂಗ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ, ಇದರಿಂದ ಹೂವು ಬಾಡದಂತೆ ಈ ಸಿಸ್ಟಮ್ ನೋಡಿಕೊಳ್ಳುತ್ತೆ.

ಫಲಪುಷ್ಪಪ್ರದರ್ಶನಕ್ಕೆ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲೀಕಾರ್ಜುನ ಚಾಲನೆ ನೀಡಿದರು. ಫ್ಲವರ್ ಶೋನಲ್ಲಿ ಭಾಗಿಯಾದ   ತೇಜಸ್ವಿನಿ ಅನಂತ್ ಕುಮಾರ್. ನನ್ನ ಪತಿ ಸಂಸತ್ ಭವನದಲ್ಲಿ ಕಾರ್ಯನಿರ್ವಜಿಸುತ್ತಾರೆ. ಆ ಸಂಸತ್ ಭವನ ಸಸ್ಯಕಾಶಿಯಲ್ಲಿ ಮಾಡಲಾಗಿದೆ. ಒಂದು ರೀತಿಯ ಸಂತವನ್ನುಂಟು ಮಾಡಿದೆ, ನಾನು ಮತ್ತು ನನ್ನ ಪತಿ ಅನಂತ್ ಕುಮಾರ್ ಆಗಾಗ್ಗೆ ಬರುತ್ತಿರುತ್ತೇನೆ. ಮನೆ ಹತ್ತಿರ ಇರುವ ಕಾರಣ ಬರುತ್ತಿರುತ್ತೇವೆ ಎಂದು ಹೇಳಿದರು.

ಎಸ್ ಎಸ್ ಮಲ್ಲಿಕಾರ್ಜುನ್ ಸಚಿವ ಹೇಳಿಕೆ, ನಾನು ಮಣ್ಣಿನ ಮಗ,  ನನಗೆ ಈ ಫಲಪುಷ್ಪ ಪ್ರದರ್ಶನ ಖುಷಿ ಕೊಟ್ಟಿದೆ. ಮರಿಗೌಡರ ಸ್ಮಾರಕ, ಸಂಸತ್ ಭವನ ಎಲ್ಲವನ್ನು ಹೂವಿನಿಂದ ತುಂಬಾ ಚೆನ್ನಾಗಿ ಸಿಂಗಾರ ಮಾಡಿದ್ದಾರೆ. ಕಬ್ಬನ್ ಪಾರ್ಕ್ ಲಾಲ್ ಬಾಗ್ ಗೆ ಇನ್ನಷ್ಟು ಹೊಸತನ ನೀಡುವ ಉದ್ದೇಶ ನನಗಿದೆ. ಸಧ್ಯದಲ್ಲಿಯೇ ಹೊಸ ತಂತ್ರಜ್ಞಾನಗಳ ಅಳವಡಿಕೆ ಮಾಡಿ ಮತ್ತಷ್ಟು ಅಭಿವೃದ್ಧಿ ಗೊಳಿಸುತ್ತೇವೆ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top