fbpx
Karnataka

ಮಹದಾಯಿ ವಿವಾದ ಸಂಬಂಧ ಮಾತನಾಡಿದ ನಾರೀಮನ್

ಮಹದಾಯಿ ವಿವಾದ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಬೇಡ;ಸಮಸ್ಯೆ ಉಲ್ಬಣವಾಗಲಿದೆ-ಸರ್ಕಾರಕ್ಕೆ  ಹಿರಿಯ ವಕೀಲ ನಾರಿಮನ್ ಎಚ್ಚರಿಕೆ…

ಬೆಂಗಳೂರು: ಕರ್ನಾಟಕ ಮತ್ತು ಗೋವಾ ನಡುವೆ ಮಹದಾಯಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದೆ. ಕಳಸಾ ಮತ್ತು ಬಂಡೂರಿ ನಾಲೆಯನ್ನು ನಿರ್ಮಿಸಿ ಉತ್ತರ ಕರ್ನಾಟಕದ ಧಾರವಾಡ, ಗದಗ ಮತ್ತು ಬೆಳಗಾವಿ ಜಿಲ್ಲೆಯ ಕೆಲ ಹಳ್ಳಿಗಳಲ್ಲಿರುವ ನೀರಿನ ಬವಣೆಯನ್ನು ತಪ್ಪಿಸಬೇಕೆಂದು ಕರ್ನಾಟಕದ ಜನತೆ ಹೋರಾಟ ನಡೆಸುತ್ತಿದ್ದಾರೆ. ಈ ನದಿ ಕರ್ನಾಟಕದಲ್ಲೇ ಹುಟ್ಟಿದ್ದರೂ ನೀರನ್ನು ಬಳಸಿಕೊಳ್ಳಲಾಗದಿರುವುದು ನಿಜಕ್ಕೂ ದುರಂತವೇ ಸರಿ. ಇದಕ್ಕೆ ಪೂರಕವಾಗಿ, ಮಹದಾಯಿ ನ್ಯಾಯಾಧಿಕರಣ ಕರ್ನಾಟಕದ ಮನವಿಯನ್ನು ತಿರಸ್ಕರಿಸಿದೆ. ಈ ಯೋಜನೆ, ಮಧ್ಯಂತರ ತೀರ್ಪು, ಮುಂದೆ ಕನ್ನಡಿಗರು ಮಾಡಬೇಕಾಗಿರುವುದೇನು ಎಂಬ ವಿವರವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದರಿಂದ ಸಮಸ್ಯೆ ಉಲ್ಭಣವಾಗಲಿದೆ. ಹೀಗಾಗಿ ಮೇಲ್ಮನವಿ ಸಲ್ಲಿಸಬೇಡಿ ಎಂದು ಕರ್ನಾಟಕ ಸರ್ಕಾರಕ್ಕೆ ಹಿರಿಯ ವಕೀಲ ನಾರೀಮನ್ ಎಚ್ಚರಿಕೆ ನೀಡಿದ್ದಾರೆ.

ಮಹದಾಯಿ ವಿವಾದ ಸಂಬಂಧ ಮಾತನಾಡಿದ ನಾರೀಮನ್ ,ವಿವಾದವನ್ನು ಪ್ರಧಾನಿಗಳ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳುವುದೇ ಸೂಕ್ತ.ಈ ಹಿಂದೆಯೇ ಟ್ರಿಬ್ಯೂನಲ್ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸಬೇಡಿ ಎಂದು ಹೇಳಿದ್ದೆ.ಆದರೆ ರಾಜಕೀಯ ಒತ್ತಡಗಳಿಗೆ ಮಣಿದು ಮಧ್ಯಂತರ ಅರ್ಜಿ ಸಲ್ಲಿಸಲು ಪಟ್ಟು ಹಿಡಿದಿರಿ.ಈಗ ನಮ್ಮ ಅರ್ಜಿ ತಿರಸ್ಕೃತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ನಡುವೆ ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೆ ಉಪಯೋಗವಿಲ್ಲ.ಯಾಕೆಂದರೆ ಮಧ್ಯಂತರ ತೀರ್ಪನ್ನು ಆಧರಿಸಿ ಅದು ತೀರ್ಪು ಕೊಡುವುದಿಲ್ಲ.ಹೀಗಾಗಿ ಆಗಸ್ಟ್ 7ರಂದು ನಡೆಯುವ ಕರ್ನಾಟಕದ ಸರ್ವಪಕ್ಷಗಳ ಸಭೆಯಲ್ಲಿ ಎಚ್ಚರಿಕೆಯ ತೀರ್ಮಾನ ತೆಗೆದುಕೊಳ್ಳಿ.ಮಹದಾಯಿ ನದಿಯಿಂದ ಕುಡಿಯಲು ಅಗತ್ಯವಾದಷ್ಟು ನೀರನ್ನು ಬಿಡುಗಡೆ ಮಾಡಿಸಲು ಮದ್ಯಸ್ಥಿಕೆ ವಹಿಸಿ ಎಂದು ಪ್ರಧಾನಿಗೆ ಮನವಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಹಾಗೆಯೇ ಯಾವುದೇ ಕಾರಣಕ್ಕೂ ಗೋವಾ ರಾಜ್ಯ ಅಸಮಾಧಾನಗೊಳ್ಳದಂತೆ ಹೆಜ್ಜೆ ಇಡಿ.ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದರು.

ಕೃಪೆ: Justkannada

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top