fbpx
Karnataka

ಮಹಾದಾಯಿ: ಯಾವುದೇ ನಿರ್ಧಾರಕ್ಕೆ ಬರದ ಸರ್ವಪಕ್ಷ ಸಭೆ

ಬೆಂಗಳೂರು: ಮಹದಾಯಿ ಸಭೆ – ಮತ್ತೇ ಸಭೆಯಲ್ಲಿ ಅದೇ ರಾಗ, ಅದೇ ಹಾಡು. ವಿಧಾನ ಸೌಧದಲ್ಲಿ ಸರ್ವಪಕ್ಷ ನಾಯಕ ಸಭೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪ್ರತಿಪಲ್ಷ ನಾಯಕ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ, ಸಂಸದರು, ಸಚಿವರು ಭಾಗಿಯಾಗಿದ್ದರು.

ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ. ಮಹಾದಾಯಿ ನ್ಯಾಯಾಧಿಕರಣ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಆದರೆ ರಾಜ್ಯದ ಹಿತದೃಷ್ಟಿಯಿಂದ ಯಾವುದೇ ನಿರ್ಧಾರಕ್ಕೆ ಬರುವಲ್ಲಿ ಈ ಸಭೆ ವಿಫಲಾವಾಗಿದೆ. ಬದಲಿಗೆ ಆ.16ರಂದು ಸುಪ್ರೀಂ ಕೋರ್ಟ್ ನ್ಯಾಯವಾದಿ ನಾರಿಮನ್ ಭೇಟಿ ಮಾಡಿ ಸಲಹೆ ಪಡೆದು ನಂತರ ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿದೆ.

ಸಾರ್ವಜನಿಕವಾಗಿ ರಾಜಕಾರಣಿಗಳು ಹೇಳಿಕೆ ನೀಡುವಂತೆಯೇ ಇಂದೂ ‌ಕೂಡ ಪರಸ್ಪರ ಬೇರೆಯವರ ಕೆಲಸದ ಬಗ್ಗೆಯೇ ಹೇಳಿದರೆ ಹೊರತು ತಾವು ಏನು ಮಾಡತ್ತೇವೆ ಎಂಬುದರ ಬಗ್ಗೆ ಯಾರೂ ಹೇಳಲಿಲ್ಲ. ಕೊನೆಗೆ ಆ. 16ರಂದು ನಾರಿಮನ್ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.‌ ಅದಕ್ಕೆ ಎಲ್ಲ ಪಕ್ಷದ ನಾಯಕರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಾದಾಯಿ ವಿಚಾರವಾಗಿ ಸಿಎಂ ಹಾಗೂ ಇತರ ಸಂಸದರು, ಸಚಿವರ ಅಭಿಪ್ರಾಯಗಳು ಈ ಕೆಳಗಿನಂತಿವೆ.

ಮಹಾದಾಯಿ ನದಿಯಲ್ಲಿ 7ಟಿಎಂಸಿ ನೀರು ನೀಡಲು ನಾರಿಮನ್ ನೇತೃತ್ವದ ವಕೀಲರ ತಂಡ ನ್ಯಾಯಾಧಿಕರಣ ಮುಂದೆ ಅರ್ಜಿ ಸಲ್ಲಿತ್ತು. ಈ ಅರ್ಜಿಯನ್ನು ನ್ಯಾಯಾಧಿಕರ ತಿರಸ್ಕರಿಸಿತ್ತು. ‌ಹೀಗಾಗಿ ಇಂದು ಸರ್ವ ಪಕ್ಷ ನಾಯಕರ ಸಭೆ ಕರೆದಿದ್ದೆವು.

– ಸಿಎಂ ಸಿದ್ದರಾಮಯ್ಯ ಹೇಳಿಕೆ.

ನ್ಯಾಯಾಧಿಕರಣದ ತೀರ್ಪಿನ ಬಗ್ಗೆ ಸಮಗ್ರ ಚರ್ಚೆ ಮಾಡಿದ್ದೇವೆ. ಅನೇಅನೇಕ ನಾಯಕರು ಹಲವು ಸಲಹೆ ನೀಡಿದ್ದಾರೆ. ನಾರಿಮನ್ ಹಾಗೂ ಇತರ ತಜ್ಞರ ಜೊತೆ ನಿನ್ನೆ ಸಚಿವ ಎಂ.ಬಿ.ಪಾಟೀಲ್ ಚರ್ಚೆ ನಡೆಸಿದ್ದಾರೆ. ಮದ್ಯಂತರ ತೀರ್ಪು ಸ್ಪಷ್ಠೀಕರಣ ಕೇಳಲು ಅವಕಾಶವಿದೆ. ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯ ಕೇಳುವ ಅವಕಾಶವಿದೆ. ಆದರೆ ನಾರಿಮನ್ ನೇತೃತ್ವದ ತಂಡದ ಅಭಿಪ್ರಾಯ ಪಡೆದು ಮುಂದುವರಿಯಲು ತೀರ್ಮಾನ. 16ಕ್ಕೆ ಮತ್ತೊಮ್ಮೆ ನ್ಯಾಯವಾದಿ ನಾರಿಮನ್ ಅವರ ಭೇಟಿ ಮಾಡಿ ಮತ್ತೊಮ್ಮೆ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲು ತೀರ್ಮಾನ.

– ಸಿಎಂ ಸಿದ್ದರಾಮಯ್ಯ ಹೇಳಿಕೆ

ನವಲಗುಂದದಲ್ಲಿ ಪೊಲೀಸರ ದೌರ್ಜನ್ಯದ ಬಗ್ಗೆ ರಾಘವೇಂದ್ರ ಔರಾದ್ಕರ್, ಕಮಲ್ ಪಂಥ್  ನೇತೃತ್ವದ ತಂಡಗಳು ವರದಿ ನೀಡಲಿವೆ. ಆ.10ರಂದು ನಡೆಯುವ ಸಂಪುಟದ ಸಭೆಯಲ್ಲಿ ಅಮಾಯಕರ ಮೇಲಿನ ಕೇಸ್ ವಾಪಸ್ ಬಗ್ಗೆ ತೀರ್ಮಾನ

– ಸಿಎಂ ಸಿದ್ದರಾಮಯ್ಯ ಹೇಳಿಕೆ

ಮುಖ್ಯಮಂತ್ರಿ ಗಳಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಸಿಎಂ ಯಡಿಯೂರಪ್ಪ. ಸಿಎಂ ಮಹಾದಾಯಿ ಕುರಿತು ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲ ಬದ್ಧ. ರೈತರ ಮೇಲಿನ ಕೇಸ್ ವಾಪಸ್ ಗೆ ಮನವಿ ಮಾಡಿದ್ದೇವೆ. ಅದಕ್ಕೆ ಸಿಎಂ ಕೂಡ ಸ್ಪಂದಿಸಿದ್ದಾರೆ.

– ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ

ಮಹದಾಯಿ ವಿಚಾರದಲ್ಲಿ ಎಲ್ಲ ಮುಖಂಡರ ಒಗ್ಗಟ್ಟಿದೆ. ಆ ಭಾಗದ ಜನರ ಆತಂಕವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ.

-ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ

ಮಹಾದಾಯಿ ವಿಚಾರ. ಸಿಎಂ ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ರ. ಆರೋಗ್ಯ ಸರಿ ಇಲ್ಲದಿರುವುದರಿಂದ‌ ದೇವೇಗೌಡರ ಗೈರು. ಇಂಥ ಸಂಕಷ್ಟ ಸ್ಥಿತಿಯಲ್ಲಿ ರಾಜ್ಯದ ರೈತರ ಹಿತಕಾಯುವುದು ಮುಖ್ಯ. ಈ ವಿಚಾರದಲ್ಲಿ ರಾಜಕೀಯ ಬೇಡ. ಅನ್ನದಾತರ ಹಿತ ಕಾಯುವ ವಿಚಾರದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಸಿಎಂಗೆ ದೇವೇಗೌಡರು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top