fbpx
Karnataka

ದೇಶದ ಎರಡನೇ ಅತಿ ದೊಡ್ಡ ಸಿರಿವಂತ ಮಂತ್ರಿ ಡಿ.ಕೆ. ಶಿವಕುಮಾರ್

ಹೊಸದಿಲ್ಲಿ: ದೇಶದ ವಿವಿಧ ರಾಜ್ಯಗಳ ವಿಧಾನಸಭೆಗೆ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾದವರ ಪೈಕಿ ಮಂತ್ರಿಗಳಾದವರ ಪಟ್ಟಿಯಲ್ಲಿ ಕರ್ನಾಟಕ ವಿಧಾನಸಭೆಯ ಶೇ.97 ಮಂದಿ ಕೋಟ್ಯಾಧಿಪತಿಗಳು. ಡಿ.ಕೆ. ಶಿವಕುಮಾರ್ ದೇಶದ ಎರಡನೇ ಅತಿ ದೊಡ್ಡ ಸಿರಿವಂತ ಮಂತ್ರಿ ಎಂಬ ಮಾಹಿತಿ ಬಹಿರಂಗವಾಗಿದೆ.

ದೇಶದ ಎಲ್ಲ ಸಚಿವರ ಪೈಕಿ ತೆಲುಗು ದೇಶಂ ಪಕ್ಷದ ಪೊಂಗುರು ನಾರಾಯಣ ದೇಶದ ಅತಿ ಸಿರಿವಂತ ಸಚಿವ ಅವರ ಒಟ್ಟು ಆಸ್ತಿ ಮೌಲ್ಯ 496 ಕೋಟಿ ರೂ. ಇಂದನ ಸಚಿವ ಡಿ.ಕೆ.ಶಿವಕುಮಾರ್ ದೇಶದ ಎರಡನೇ ಅತಿ ಸಿರಿವಂತ ಮಂತ್ರಿ ಅವರ ಒಟ್ಟು ಆಸ್ತಿ ಮೌಲ್ಯ 251 ಕೋಟಿ ರೂ. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ ನಡೆಸಿದ ಅಧ್ಯಯನದ ಪ್ರಕಾರ, 29 ರಾಜ್ಯ ವಿಧಾನಸಭೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಟ್ಟು 620 ಸಚಿವರ ಪೈಕಿ 206 ಸಚಿವರು ಘೋಷಿಸಿರುವ ಆಸ್ತಿ ವಿವರ ದಾಖಲಾಗಿದೆ.

ಆಂಧ್ರದಲ್ಲಿ ಅತಿ ಹೆಚ್ಚು ಶ್ರೀಮಂತ ಸಚಿವರಿದ್ದು, ಅವರ ಸರಾಸರಿ ಆಸ್ತಿ ಮೌಲ್ಯ 45.49 ಕೋಟಿ ರೂ. ಕರ್ನಾಟಕ ಎರಡನೇ ಸ್ಥಾನ(31 ಸಚಿವರು) ದಲ್ಲಿದ್ದು, ಸರಾಸರಿ ಆಸ್ತಿ ಮೌಲ್ಯ ಶೇ. 36.96 ಕೋಟಿ ರೂ. ಕರ್ನಾಟಕದಲ್ಲಿ ಕೋಟ್ಯಾಧಿಪತಿ ಸಚಿವರ ಸಂಖ್ಯೆ ಶೇ. 97ರಷ್ಟಿದ್ದರೆ, ರಾಜಸ್ಥಾನದಲ್ಲಿ ಶೇ. 92, ಗೋವಾ, ಮೇಘಾಲಯ ಹಾಗೂ ಛತ್ತೀಸ್‍ಗಡ್ ಸಚಿವರ ಘೋಷಿತ ಆಸ್ತಿ ಮೊತ್ತ 1ಕೋಟಿ ಹಾಗೂ ಅದಕ್ಕಿಂತ ಹೆಚ್ಚಿದೆ. ಅತಿ ಕಡಿಮೆ ಆದಾಯ ಹೊಂದಿರುವ ಸಚಿವರಿರುವ ರಾಜ್ಯ ತ್ರಿಪುರಾ (12 ಸಚಿವರು), ಇವರ ಸರಾಸರಿ ಆಸ್ತಿ ಮೌಲ್ಯ 31.57 ಲಕ್ಷ ರೂ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top