fbpx
Kannada Bit News

ಡಿ.ಸಿ. ಶಿಖಾ ನಿಂದನೆ ಪ್ರಕರಣ: ಸಿ.ಎಂ. ಆಪ್ತ ಮರಿ ಗೌಡರ ಜಾಮೀನು ಅರ್ಜಿ ವಜಾ !

ಡಿ.ಸಿ. ಶಿಖಾ ನಿಂದನೆ ಪ್ರಕರಣ: ಸಿ.ಎಂ. ಆಪ್ತ ಮರಿ ಗೌಡರ ಜಾಮೀನು ಅರ್ಜಿ ವಜಾ ! ರಾಜಕೀಯ ನಾಯಕರ ‘ಆಪ್ತರ’ ಪುಂಡಾಟಿಕೆಗೆ ಬ್ರೇಕ್ ಹಾಕಿದ ಮೈಸೂರಿನ ನ್ಯಾಯಾಲಯ.

CmqbP65WEAE_6rb

ಮಹತ್ತರವಾದ ಬೆಳವಣಿಗೆಯೊಂದರಲ್ಲಿ , ಮೈಸೂರಿನ ಮೂರನೇ ಜೆ.ಎಂ.ಎಫ್.ಸಿ ನ್ಯಾಯಾಲಯವು ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರ ‘ಕುಚಿಕು’ ಗೆಳೆಯ ಮರಿ ಗೌಡರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಈ ಮೂಲಕ ಮರಿ ಗೌಡರ ಕಾನೂನು ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ. ಈ ಹಿಂದೆ ಜೂಲೈ 12 ರಂದು, ಆರೋಪಿಯು ಸಾಕ್ಷ್ಯನಾಶ ಮಾಡಬಹುದೆಂದು, ನಿರೀಕ್ಷಣಾ ಜಾಮೀನನ್ನು ಮೈಸೂರಿನ 7 ನೇ ಜಿಲ್ಲಾ ಸತ್ರ ನ್ಯಾಯಾಲಯವು ‘ಮರಿ’ ಅರ್ಜಿಯನ್ನು ತಿರಸ್ಕರಿಸುತ್ತು.

ಮರಿ ಗೌಡರ ಜೊತೆಗೂಡಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾಧಿಕಾರಿ ಶಿಖಾ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ‘ಮರಿ’ ರವರೊಂದಿಗೆ ಜೊತೆಗೂಡಿ ಈ ‘ಘನ’ ಕಾರ್ಯವೆಸೆಗಿದ್ದ ಬಸಪ್ಪ ರವರು ಈಗಾಗಲೇ ಜೈಲಿನಲ್ಲಿ ‘ಹಿಟ್ಟು’ ಮುರಿಯುತ್ತಿದ್ದಾರೆ.

ಇನ್ನಿಬ್ಬರು, ಆನಂದ ಮತ್ತು ಸಿದ್ದಾರಾಜು ತಲೆಮರೆಸಿಕೊಂಡಿದ್ದಾರೆ. ಇವರ ಬೇಟೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಸರ್ಕಾರದ ಯಾವುದೇ ಅಧಿಕಾರಿಗಳ ಕಾರ್ಯವೈಖರಿಯನ್ನು ಅಡ್ಡಿಪಡಿಸಿದಲ್ಲಿ, ಅಸಭ್ಯವಾಗಿ, ಅನುಚಿತವಾಗಿ ವರ್ತಿಸಿದಲ್ಲಿ; ಅದರಲ್ಲೂ ಒಬ್ಬ ಮಹಿಳಾಧಿಕಾರಿಯ, ಜಿಲ್ಲಾ ಮ್ಯಾಜಿಸ್ಟ್ರೇಟ್ ರೊಂದಿಗೆ ಈ ರೀತಿಯಾಗಿ ವರ್ತಿಸಿವುದು ಖಂಡನೀಯ. ಜಾಮೀನು ಅರ್ಜಿ ತಿರಸ್ಕರಿಸುವ ಮೂಲಕ, ಘನತೆವೆತ್ತ ನ್ಯಾಯಾಧೀಶರು, ಈ ರೀತಿಯಾದ ಪ್ರಕರಣವೆಸಗುವ ಅಪರಾಧಿಗಳಿಗೆ/ಸಮಾಜಘಾತುಕ ಶಕ್ತಿಗಳಿಗೆ/ಪಟ್ಟಭದ್ರ ಹಿತಾಸಕ್ತಿಗಳಿಗೆ ‘ಸ್ಪಷ್ಟ ಸಂದೇಶ’ ರವಾನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top