fbpx
Awareness

ಕನ್ನಡ ನಾಡು-ನುಡಿ ಸುದ್ದಿಗೆ ಬಂದ್ರೆ ಸುಮ್ಮನೆ ಬಿಡ್ತಿವಾ?

Two guys ‘abuse’ Kannada: Samanya Kannadiga group traces them to apology .In an initiative to take Kannada language and Karnataka culture abusers to task, Bengaluru-based civic society group Samanya Kannadga has tendered a video apology from the two abusers

ಕನ್ನಡ ನಾಡು, ನುಡಿಗೆ ಎಲ್ಲಿಯೇ ಸಂಕಷ್ಟ ಬಂದರೂ ಯಾರೂ ಸುಮ್ಮನಿರಬಾರದು. ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಸದಾ ಕ್ರಿಯಾಶೀಲವಾಗಿರುವ “ಸಾಮಾನ್ಯ ಕನ್ನಡಿಗ” ಗುಂಪು ಇದೀಗ ಕನ್ನಡಕ್ಕೆ ಅವಮಾನ ಮಾಡಿದವರ ಬೆನ್ನು ಬಿದ್ದಿದೆ. ಅಲ್ಲದೇ ಅವಮಾನ ಮಾಡಿದವರಿಂದ ವಿಡಿಯೋ ಕ್ಷಮೆ ಯನ್ನು ಪಡೆದುಕೊಂಡಿದೆ.ಮಹಾರಾಷ್ಟ್ರ ಮೂಲದ ಇಬ್ಬರು ಕನ್ನಡ ಭಾಷೆ ಮತ್ತು ಬೆಂಗಳೂರನ್ನು ಅವಹೇಳನ ಮಾಡುವಂತಹ ಪೋಸ್ಟ್ ಗಳನ್ನು ಫೇಸ್ ಬುಕ್ ನಲ್ಲಿ ಹಾಕಿದ್ದರು. ತಾಂಜಾನೀಯಾ ವಿದ್ಯಾರ್ಥಿನಿ ಪ್ರಕರಣವನ್ನು ಇಟ್ಟುಕೊಂಡು ಬೆಂಗಳೂರಿಗನ್ನು ನಿಂದಿಸಿದ್ದರು.

11-1455171072-kannada-new

ಕನ್ನಡಾಭಿಮಾನಿ ಪೇಜ್ ನ್ನು ಟಾಗ್ ಮಾಡಿ ಕೆಟ್ಟ ಪೋಸ್ಟ್ ಹಾಕಲಾಗಿತ್ತು. ಇದನ್ನು ಕಂಡ ಸಾಮಾನ್ಯ ಕನ್ನಡಿಗ ತಂಡದ ಸದಸ್ಯರು ಪೋಸ್ಟ್ ಮಾಡಿದವರಿಗೆ ತಿಳಿವಳಿಕೆ ಹೇಳಿ ಅದನ್ನು ತೆಗೆಸಿದ್ದಾರೆ.ನಾವು ಏಕಾಏಕಿ ಅವರಿಗೆ ಬೆದರಿಕೆ ಹಾಕಲಿಲ್ಲ. ಕೆಟ್ಟ ಪೋಸ್ಟ್ ನ್ನು ತೆಗೆಯಿರಿ ಎಂದು ವಿನಂತಿ ಮಾಡಿಕೊಂಡರೆ ಕೇಳದೆ ಉಲ್ಟಾ ಮಾತನಾಡಿದರು. ಹಾಗಾಗಿ ನಾವು ಅವರ ಕಚೇರಿಗೆ ತೆರಳಿ ಒತ್ತಡ ಹೇರಬೇಕಾಗಿ ಬಂತು ಎಂದು ಸಾಮಾನ್ಯ ಕನ್ನಡಿಗ ಪೇಜ್ ಸಂಪಾದಕ ಪವನ್ ತಿಳಿಸುತ್ತಾರೆ.

ಮಹಾರಾಷ್ಟ್ರದ ವ್ಯಕ್ತಿಯೊಬ್ಬ ತಾಂಜಾನೀಯಾ ವಿದ್ಯಾರ್ಥಿನಿ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಬೆಂಗಳೂರಿಗರು ಮತ್ತು ಪೊಲೀಸರ ಮೇಲೆ ಕೆಂಡ ಕಾರಿದ್ದ. ಇದನ್ನು ಸಹಿಸದ ಸಾಮಾನ್ಯ ಕನ್ನಡಿಗ ತಂಡದವರು ಇಬ್ಬರಿಂದಲೂ ವಿಡಿಯೋ ಕ್ಷಮಾಪಣೆ ಪಡೆದುಕೊಂಡಿದ್ದಾರೆ.ಇಂಥ ಕಾರ್ಯಗಳನ್ನು ಮಾಡುವವರು ಸ್ವಲ್ಪ ಎಚ್ಚರಿಕೆ ವಹಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಮ್ಮ ನೆಲ, ಜಲ, ಭಾಷೆಗೆ ಅವಹೇಳನ ಮಾಡಿದರೆ ಸುಮ್ಮನೆ ಬಿಡಲು ಸಾಧ್ಯವಿಲ್ಲ ಎಂದು ಸಮಾನ್ಯ ಕನ್ನಡಿಗ ಸಿವಿಕ್ ಸೊಸೈಟಿ ಸಿವಿಕ್ ಸೊಸೈಟಿ ಅಧ್ಯಕ್ಷ ಸಂದೀಪ್ ಹೇಳುತ್ತಾರೆ.

English Summary
In an ‘initiative’ to take Kannada language and Karnataka culture abusers to task, Bengaluru-based civic society group Samanya Kannadga has tendered a video apology from the two abusers.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top