ಪ್ರತೀ ಮನುಷ್ಯ ವರ್ಷಕ್ಕೆ 180 ಮೊಟ್ಟೆ ಸೇವಿಸಲೇಬೇಕು.. ಯಾಕೆ ಅಂತಾ ವೈದ್ಯರು ಹೇಳಿದ್ಧಾರೆ ಕೇಳಿ
ಕೋಳಿ ಮೊದಲೋ…ಮೊಟ್ಟೆ ಮೊದಲೋ… ಎಂಬುದು ಹಳೇಯ ತರ್ಕ. ಆದರೆ ಎರಡು ಮನುಷ್ಯನ ಆಹಾರ. ಮೊಟ್ಟೆ ನಾವು ತಿನ್ನುವ ಆಹಾರಗಳಲ್ಲಿ ಸೂಪರ್ ಫುಡ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಅತಿ ಹೆಚ್ಚು ಪ್ರಮಾಣದ ಪೋಷಕಾಂಶ ಹಾಗೂ ವಿಟಮಿನ್ ಗಳು ಸಿಗುತ್ತವೆ. ಹೀಗಾಗಿ ಪ್ರತಿ ನಿತ್ಯ ಬೇಯಿಸಿದ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಬಹಳ ಉತ್ತಮ. ಬೆಳೆಯುವ ಮಕ್ಕಳಿಗೆ ಹಾಗೂ ಡಯಟ್ ಮಾಡುವವರಿಗೆ ಮೊಟ್ಟೆ ಬಹಳ ಉತ್ತಮ. ಇನ್ನು ಪ್ರತಿ ಮೊಟ್ಟೆಯಲ್ಲಿ ಶೇ.6 ರಷ್ಟು ವಿಟಮಿನ್ ಎ, ವಿಟಮಿನ್ ಬಿ5 ಶೇ,7. ವಿಟಮಿನ್ ಬಿ12, ಶೇ15 ಹಾಗೂ ಪ್ರಾಸ್ಪರಸ್ ಶೇ9 ರಷ್ಟು ಇರುತ್ತದೆ. ಜೊತೆಗೆ ವಿಟಮಿನಿ ಇ. ಪಾಲಿಕ್ ಆಸಿಡ್, ಒಮೆಗಾ 3 ಸೇರಿದಂತೆ ಹಲವು ಅಂಶಗಳು ಮೊಟ್ಟೆಯಲ್ಲಿವೆ. ಹೀಗಾಗಿ ಮೊಟ್ಟೆ ಒಂದು ಪೂರ್ಣ ಪ್ರಮಾಣದ ಆಹಾರ.
ಹೈದರಾಬಾದಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಇತ್ತೀಚೆಗೆ ‘ಪ್ರತಿ ಮನುಷ್ಯನೂ ವರ್ಷಕ್ಕೆ ಕನಿಷ್ಠ ೧೮೦ ಮೊಟ್ಟೆಗಳನ್ನು ಸೇವಿಸಬೇಕು’ ಎಂದಿದೆ. ಆದರೆ ನಮ್ಮ ದೇಶದಲ್ಲಿ ಕೇವಲ ೫೪ ಮೊಟ್ಟೆಗಳನ್ನು ಮಾತ್ರ ಸೇವಿಸಲಾಗುತ್ತಿದೆ. ನಮ್ಮ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಎಲ್ಲ ಶಕ್ತಿ ಮೊಟ್ಟೆಗಿದ್ದರೂ ನಾವು ಅದರ ಮಹತ್ವ ಅರಿತಿಲ್ಲ
ಅತಿ ಕಡಿಮೆ ಬೆಲೆಯಲ್ಲಿ ಕಲಬೆರಿಕೆ ಮಾಡಲಾಗದ, ಶುದ್ಧ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದ, ಮನುಷ್ಯನಿಗೆ ಅವಶ್ಯಕವಾಗಿ ಬೇಕಾದ ೨೪ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪೌಷ್ಟಿಕಾಂಶಗಳ ಪೈಕಿ ೨೩ ಅವಶ್ಯಕ ಪೌಷ್ಟಿಕಾಂಶಗಳ ಆಗರ ಈ ಕೋಳಿ ಮೊಟ್ಟೆ. ತಾಯಿಯ ಎದೆ ಹಾಲಿನ ನಂತರ ಮೊಟ್ಟೆಯು ಪರಿಪೂರ್ಣ ಆಹಾರವಾಗಿದೆ.
ನಮ್ಮಲ್ಲಿ ಹಲವರಿಗೆ ಮೊಟ್ಟೆ ಸೇವನೆ ಬಗ್ಗೆ ಮೂಢನಂಬಿಕೆಗಳಿವೆ. ಮೊಟ್ಟೆಯು ಮಾಂಸಹಾರವೋ, ಸಸ್ಯಾಹಾರವೋ ಎಂಬ ಜಿಜ್ಞಾಸೆ ಇದೆ. ಗೋವಿನಿಂದ ಬರುವ ಹಾಲು ಯಾವ ರೀತಿಯಾಗಿ ಸಸ್ಯಹಾರವೋ, ಫಲೀಕೃತವಲ್ಲದ ಮೊಟ್ಟೆಯೂ ಸಂಪೂರ್ಣ ಸಸ್ಯಹಾರವಾಗಿದ್ದು, ಫಲೀಕೃತವಲ್ಲದ ಮೊಟ್ಟೆಗಳು ಗಂಡಿನ ಸಂಪರ್ಕವಿಲ್ಲದೆ ಉತ್ಪಾದನೆಯಾಗಿದ್ದು ಇವು ಜೇನು, ಹಾಲಿನಂತೆ ಸಂಪೂರ್ಣ ಸಸ್ಯಹಾರವೆಂದು ಮಹಾತ್ಮಗಾಂಧಿಯವರೇ ತಿಳಿಸಿದ್ದಾರೆ.
ಪ್ರೊಟೀನ್ ಕಣಜ ಮೊಟ್ಟೆ
ಹೈದರಾಬಾದಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಇತ್ತೀಚೆಗೆ, ‘ಪ್ರತಿ ಮನುಷ್ಯನೂ ವರ್ಷಕ್ಕೆ ಕನಿಷ್ಠ ೧೮೦ ಮೊಟ್ಟೆಗಳನ್ನು ಸೇವಿಸಬೇಕು’ ಎಂದಿದೆ. ಆದರೆ ನಮ್ಮ ದೇಶದಲ್ಲಿ ಕೇವಲ ೫೪ ಮೊಟ್ಟೆಗಳನ್ನು ಮಾತ್ರ ಸೇವಿಸಲಾಗುತ್ತಿದೆ. ನಮ್ಮ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಎಲ್ಲ ಶಕ್ತಿ ಮೊಟ್ಟೆಗಿದ್ದರೂ ನಾವು ಅದರ ಮಹತ್ವ ಅರಿತಿಲ್ಲ. ಪ್ರತಿ ೧೦೦ ಗ್ರಾಂ.ನ ಮೊಟ್ಟೆಯಲ್ಲಿ ೧೨.೧೪ ಗ್ರಾಂ ಪ್ರೊಟೀನ್, ೧೧.೧೫ ಗ್ರಾಂ ಕೊಬ್ಬಿನಂಶ, ೧.೨ ಗ್ರಾಂ ಶರ್ಕರಪಿಷ್ಠ ಮತ್ತು ಉಳಿದ ೭೪.೦೭ ಗ್ರಾಂ.ನಷ್ಟು ನೀರಿನಂಶ ಇರುತ್ತದೆ. ಒಂದು ಮೊಟ್ಟೆಯಲ್ಲಿ ಸುಮಾರು ೬.೩ ಗ್ರಾಂ.ನಷ್ಟು ಪ್ರೊಟೀನ್ ಅಂಶವಿದ್ದು ಸುಲಭವಾಗಿ ಜೀರ್ಣವಾಗಬಲ್ಲದು. ಶರೀರದ ಬೆಳವಣಿಗೆಗೆ ಬೇಕಾದ ಅಮೈನೋ ಆಸಿಡ್‌ಗಳನ್ನು ಹೊಂದಿದ್ದು, ಇದು ಶರಿರದಲ್ಲಿ ಪ್ರತಿನಿತ್ಯ ಆಗುವ ಸವಕಳಿಯನ್ನು ಸರಿಪಡಿಸುತ್ತದೆ.
ಮಕ್ಕಳಿಗೆ ಬೆಸ್ಟ್ ಮೊಟ್ಟೆ
ಮೊಟ್ಟೆಯು ಬೆಳೆಯುವ ಮಕ್ಕಳಿಗೆ ಪರಿಪೂರ್ಣ ಆಹಾರ. ಮೊಟ್ಟೆಯಲ್ಲಿ ವಿಟಮಿನ್ ‘ಎ’ ಅಧಿಕವಾಗಿದ್ದು, ಮಕ್ಕಳ ದೃಷ್ಟಿ ಸಮಸ್ಯೆಯನ್ನು ನಿವಾರಿಸುತ್ತದೆ. ಇದಲ್ಲದೆ ವಿಟಮಿನ್ ‘ಡಿ’ಯು ಗಟ್ಟಿಮುಟ್ಟಾದ ಹಲ್ಲು ಮತ್ತು ಎಲುಬುಗಳ ಬೆಳವಣಿಗೆಗೆ ಅತಿ ಉಪಯುಕ್ತ. ವಿಟಮಿನ್ ಬಿ೬, ಬಿ೧ ಮತ್ತು ಬಿ೨ ಶರೀರಕ್ಕೆ ಅವಶ್ಯಕವಾದ ಶಕ್ತಿ ಮತ್ತು ಕೆಂಪು ರಕ್ತಕಣಗಳ ಉತ್ಪಾದನೆಗೆ ನೆರವಾಗುತ್ತದೆ. ಮೊಟ್ಟೆಯಲ್ಲಿನ ಕ್ಯಾಲ್ಷಿಯಂ, ಮೆಗ್ನೀಷಿಯಂ ಮತ್ತು ಲವಣಾಂಶಗಳು ಮಕ್ಕಳ ಮಾಂಸಖಂಡಗಳ ಬೆಳವಣಿಗೆ, ಬುದ್ಧಿಶಕ್ತಿ ಬೆಳವಣಿಗೆ ಮತ್ತು ರೋಗಗಳ ವಿರುದ್ಧ ಹೋರಾಡಲು ಅವಶ್ಯಕವಾದ ಕೋಲಿನ್, ಲಿನೋಲಿಕ್ ಆಸಿಡ್ ಮತ್ತು ಅಮೈನೋ ಅಸಿಡ್‌ಗಳನ್ನು ಒದಗಿಸುತ್ತದೆ.
ಮೊಟ್ಟೆ ದೃಷ್ಟಿ ದೋಷವನ್ನು ತಡೆಗಟ್ಟುತ್ತದೆ. ತೀವ್ರ ನಿಶಕ್ತತೆ ಹಾಗೂ ಸಣಕಲು ದೆೇಹದಿಂದ ಬಳಲುತ್ತಿರುವವರು ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ಸದೃಢರಾಗಿ ಆರೋಗ್ಯಯುತ ದೇಹ ಹೊಂದಬಹುದು.
ಮಹಿಳೆಯರ ಆರೋಗ್ಯಕ್ಕೂ ಮೊಟ್ಟೆ ವರದಾನ.ಸೌಂದರ್ಯ ರಕ್ಷಣೆಗೆ ಬೇಕಾದ ವಿಟಮಿನ್ ಇ, ಡಿ ಮತ್ತು ಸೆಲಿನಿಯಂ ಅಂಶಗಳು ಮೊಟ್ಟೆಯಲ್ಲಿ ಹೇರಳವಾಗಿವೆ. ಇದರಲ್ಲಿ ಕಬ್ಬಿಣ ಹಾಗೂ ಪೋಲಿಕ್ ಆಮ್ಲ ಯಥೇಚ್ಚವಾಗಿದ್ದು, ಗರ್ಭಿಣಿ ಮತ್ತು ಬಾಣಂತಿಯರಿಗೆ ಬಹಳ ಉಪಯುಕ್ತ. ದೇಹದ ತೂಕ ಇಳಿಸಿಕೊಳ್ಳಲು ಕೋಳಿ ಮೊಟ್ಟೆ ಹೇಳಿಮಾಡಿಸಿದ ಆಹಾರ. ಕಡಿಮೆ ಸಕ್ಕರೆ ಆಂಶ ಮತ್ತು ಹೆಚ್ಚು ಪ್ರೊಟೀನ್ ಹೊಂದಿರುವ ಮತ್ತು ದೇಹದ ಸಕ್ಕರೆ, ಕೊಬ್ಬಿನಂಶವನ್ನು ನಿಯಂತ್ರಣದಲ್ಲಿಡಲು ಮೊಟ್ಟೆ ಸಹಕಾರಿ. ವಯಸ್ಸಾದವರಿಗೆ ಮೊಟ್ಟೆಯು ಸುಲಭವಾಗಿ ಜೀರ್ಣವಾಗುವ ಆಹಾರ.
ಮಹಿಳೆಯರು ವಾರಕ್ಕೆ 4 ರಿಂದ 5 ಮೊಟ್ಟೆ ತಿನ್ನುವುದರಿಂದ ಸ್ತನ ಕ್ಯಾನ್ಸರ್ ನಿಂದ ದೂರ ವಿರುಬಹುದು.ಇನ್ನು ಡಯಟ್ ಮಾಡುವವರಿಗೂ ಮೊಟ್ಟೆ ಉತ್ತಮ ಆಹಾರ. ಇದರಲ್ಲಿರುವ ವಿಟಮಿನ್ಸ್ ಹಾಗೂ ಮಿನರಲ್ಸ್ ದೇಹಕ್ಕೆ ಬೇಕಾದ ಅವಶ್ಯಕ ಅಂಶಗಳನ್ನು ಪೂರೈಸುವುದರಿಂದ ಆಹಾರ ಸಮತೋಲನ ಕಾಪಾಡಬಹುದು.
ಹಸಿಮೊಟ್ಟೆ ಸೇವಿಸುವಾಗ ಎಚ್ಚರ!
ಹಸಿ ಮೊಟ್ಟೆಯನ್ನು ಬಳಸದಿರುವುದು ಉತ್ತಮ. ಏಕೆಂದರೆ ಹಸಿ ಮೊಟ್ಟೆಯಲ್ಲಿರುವ ‘ಅವಿಡಿನ್’ (ಅಜಿಜ್ಞಿ) ಅಂಶವು ದೇಹದಲ್ಲಿನ ‘ಬಯೋಟಿನ್’ (ಆಜಿಟಠಿಜ್ಞಿ) ವಿಟಮಿನ್ ಅಂಶವನ್ನು ಕಡಿಮೆ ಮಾಡುವ ಸಾಧ್ಯತೆಯಿರುತ್ತದೆ. ಹಸಿ ಮೊಟ್ಟೆಯನ್ನು ಸೇವಿಸಿದಾಗ ಇದು ಹೊಟ್ಟೆ ಮತ್ತು ಕರುಳಿನ ಮೇಲೆ ಪದರದ ರೀತಿಯಲ್ಲಿ ಅಂಟಿಕೊಳ್ಳುತ್ತದೆ. ಜಠರದಲ್ಲಿ ದೇಹಕ್ಕೆ ಬೇಕಾಗುವಂಥ ಕೆಲವು ಆಮ್ಲಗಳ ಸ್ರವಿಸುವಿಕೆಗೆ ಇದು ಅಡ್ಡಿಯಾಗುತ್ತದೆ. ಸರಿಯಾಗಿ ತೊಳೆಯದೆ ಹಸಿಮೊಟ್ಟೆ ಬಳಸಿದರೆ ‘ಸಾಲ್ಮೋನೆಲ್ಲಾ’ ಸೂಕ್ಷ್ಮಾಣುಜೀವಿಗಳು ನಮ್ಮ ದೇಹವನ್ನು ಸೇರಬಹುದು. ಇದರಿಂದ ಅತಿಸಾರ, ಇನ್ನಿತರ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ‘ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ’ ಎಂಬ ನಾಣ್ಣುಡಿಯಂತೆ ಎಲ್ಲ ವರ್ಗದ ಜನರಿಗೆ ಇದು ಪರಿಪೂರ್ಣ ಆಹಾರ.
ತಪ್ಪುಕಲ್ಪನೆ ಬಿಡಿ
ಮೊಟ್ಟೆಗಳಿಂದ ನೂರಾರು ಬಗೆಯ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಬಹದು. ಹೆಚ್ಚು ಮೊಟ್ಟೆ ಸೇವನೆಯಿಂದ ಶರೀರಕ್ಕೆ ಉಷ್ಣವಾಗುತ್ತದೆಂಬ ತಪ್ಪುಕಲ್ಪನೆಯಿದೆ. ಆದರೆ ಮೊಟ್ಟೆಯಲ್ಲಿ ಕೇವಲ ೭೭ ಕ್ಯಾಲರಿ ಶಕ್ತಿಯಿದ್ದು, ಇದರಿಂದ ದೇಹಕ್ಕೆ ಯಾವುದೇ ಉಷ್ಣವಾಗುವುದಿಲ್ಲ. ಮೊಟ್ಟೆಯ ಹಳದಿಯಲ್ಲಿ ಅಧಿಕ ಕೊಲೆಸ್ಟೆರಾಲ್ ಇದೆ ಎಂಬ ತಪ್ಪು ಬಾವನೆ ಇದೆ. ಮೊಟ್ಟೆಯ ಹಳದಿಯಲ್ಲಿ ಅತ್ಯುತ್ತಮ ಪೌಷ್ಟಿಕಾಂಶಗಳಿಂದ ಕೂಡಿದ್ದು ಶರೀರಕ್ಕೆ ಅವಶ್ಯಕವಾಗಿ ಬೇಕಾಗಿರುವ ಉತ್ತಮ ಕೊಲೆಸ್ಟೆರಾಲ್ ಲಭ್ಯವಿರುವುದರಿಂದ ಈ ಹಳದಿಯನ್ನು ನಿಸ್ಸಂಶಯವಾಗಿ ಸೇವಿಸಬಹುದು.
ಮೊಟ್ಟೆಯ ೯ ಗುಟ್ಟು
- – ಮೊಟ್ಟೆಯ ಅಮೈನೋ ಆ್ಯಸಿಡ್‌ನಲ್ಲಿ ಟೈರೋಸಿನ್ ಮತ್ತು ಟ್ರೈಪ್ಟೋಫನ್ ಅಂಶಗಳಿದ್ದು, ಇವು ಕ್ಯಾನ್ಸರ್ ವಿರುದ್ಧ ಹೋರಾಡುತ್ತವೆ.
- – ಗರ್ಭಿಣಿಯರು ಆರೋಗ್ಯವಂತ ಭ್ರೂಣ ಹೊಂದಲು ನಿತ್ಯ ಬೇಯಿಸಿದ ಎರಡು ಮೊಟ್ಟೆಗಳನ್ನು ಸೇವಿಸಬೇಕು.
- – ಇದರಲ್ಲಿನ ಒಮೆಗಾ ೩ ಫ್ಯಾಟಿ ಆ್ಯಸಿಡ್ ಮೆದುಳಿನ ಆರೋಗ್ಯಕ್ಕೆ ನೆರವಾಗುತ್ತದೆ. ನೆನಪಿನ ಶಕ್ತಿಯನ್ನೂ ಹೆಚ್ಚಿಸುತ್ತದೆ.
- – ತೂಕ ಕಳೆದುಕೊಳ್ಳುವವರಿಗೆ ಮೊಟ್ಟೆ ಸೇವನೆ ಅತ್ಯುತ್ತಮ ಮಾರ್ಗ.
- – ಮೊಟ್ಟೆಯಲ್ಲಿ ಲುಟೀನ್ ಅಂಶವಿದ್ದು, ಕಣ್ಣಿನ ದೃಷ್ಟಿಗೆ ಬಲ ತುಂಬುತ್ತದೆ.
- – ನಮ್ಮ ಮೂಡ್ ಅನ್ನು ಸದಾ ಹಸಿರಾಗಿಡುತ್ತದೆ.
- – ಆರೋಗ್ಯವಂತ ಕೂದಲು ಮತ್ತು ಉಗುರನ್ನು ಹೊಂದಲು ನಿತ್ಯ ಮೊಟ್ಟೆ ಸೇವಿಸುವುದು ಉತ್ತಮ.
- – ಮೊಟ್ಟೆಯಲ್ಲಿನ ಫಾಸ್ಫರಸ್ ಮತ್ತು ವಿಟಮಿನ್ ಡಿ ಅಂಶಗಳು ಮೂಳೆಯನ್ನು ಗಟ್ಟಿಗೊಳಿಸುತ್ತವೆ.
- – ಎಣ್ಣೆ ಚರ್ಮ ಇದ್ದವರಿಗೆ ಕಾಡುವ ಮೊಡವೆ ಸಮಸ್ಯೆಯು ಮೊಟ್ಟೆ ಸೇವನೆಯಿಂದ ನಿವಾರಣೆಯಾಗುತ್ತದೆ.
Source – ಡಾ. ಸತೀಶ್
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
