fbpx
News

ಉಪವಾಸ ಸತ್ಯಾಗ್ರಹಕ್ಕೆ ಇಂದು ತಿಲಾಂಜಲಿ ಶರ್ಮಿಳಾ ಇರೋಮ್

ಇಂಫಾಲ (ಪಿಟಿಐ): ಮಣಿಪುರದಲ್ಲಿ ಜಾರಿಯಲ್ಲಿರುವ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್ಪಿಎ) ರದ್ದುಮಾಡಬೇಕೆಂದು ಆಗ್ರಹಿಸಿ 16 ವರ್ಷಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ ಇರೋಮ್ ಶರ್ಮಿಳಾ ಮಂಗಳವಾರ ಅಂತ್ಯ ಹಾಡಲಿದ್ದಾರೆ.

ಮಣಿಪುರದ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿರುವ ಶರ್ಮಿಳಾ ಅವರಿಗೆ 2000 ಇಸವಿಯಿಂದ ದ್ರವರೂಪದ ಆಹಾರವನ್ನು ಮೂಗಿನ ಮೂಲಕ ಅಳವಡಿಸಲಾಗಿರುವ ನಳಿಕೆಯಿಂದ ನೀಡಲಾಗುತ್ತಿದೆ.

‘ಶರ್ಮಿಳಾ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು. ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸುವ ಘೋಷಣೆ ಮಾಡಿದ ನಂತರ ನ್ಯಾಯಾಂಗ ಬಂಧನದಿಂದ ಅವರು ಬಿಡುಗಡೆಯಾಗಲಿದ್ದಾರೆ’ ಎಂದು ಶರ್ಮಿಳಾ ಸಹೋದರ ಇರೋಮ್ ಸಿಂಗ್ಜಿತ್ ಹೇಳಿದ್ದಾರೆ.

ಶರ್ಮಿಳಾರವರ ಸಹೋದರ ಸಿಂಗಜಿತ್ ಅವರು, ಸೇನಾ ವಿಶೇಷಾಧಿಕಾರ (ಆಸ್ಪಾ) ಕಾಯ್ದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ 2000 ನೇ ಇಸವಿಯಿಂದ ಉಪವಾಸ ಆರಂಭಿಸಿದ್ದರು. ಅದನ್ನು ನಾಳೆ ಅಂತ್ಯಗೊಳಿಸಲಿದ್ದಾರೆ. ನಾಳೆ ಶರ್ಮಿಳಾರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುತ್ತದೆ. ಅವರು ಉಪವಾಸ ಸತ್ಯಾಗ್ರಹ ನಿಲ್ಲಿಸಿದ ಬಳಿಕ ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

‘ಶರ್ಮಿಳಾ ಕುಂಭ ಲೂಪ್’ ವೇದಿಕೆಯಡಿ ಅವರ ಬೆಂಬಲಿಗರು ಮತ್ತು ಹೋರಾಟಗಾರರು ಒಂದಾಗಿ ಶರ್ಮಿಳಾ ಅವರ ಹೊಸ ಪಯಣಕ್ಕೆ ಸಾಥ್ ನೀಡಲಿದ್ದಾರೆ. ‘ನ್ಯಾಯಾಂಗ ಬಂಧನದಿಂದ ಬಿಡುಗಡೆಯಾದ ನಂತರ ಅವರು (ಶರ್ಮಿಳಾ) ಎಲ್ಲಿ ಹೋಗುತ್ತಾರೆ ಎಂಬುದು ಗೊತ್ತಿಲ್ಲ. ಮನೆಗೆ ಬಂದು ಕುಟುಂಬದವರೊಂದಿಗೆ ಇರಲು ಬಯಸಿದಲ್ಲಿ ಸ್ವಾಗತಕ್ಕೆ ನಾವು ಸಿದ್ಧ’ ಎಂದು ಸಿಂಗ್ಜಿತ್ ತಿಳಿಸಿದ್ದಾರೆ.

ಈಶಾನ್ಯ ರಾಜ್ಯಗಳು ಮತ್ತು ಕಾಶ್ಮೀರದಲ್ಲಿ ಸೇನಾ ಯೋಧರು ನಡೆಸುತ್ತಿದ್ದ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ಖಂಡಿಸಿ ಇರೋಮ್ ಶರ್ಮಿಳಾ 2000ನೇ ವರ್ಷದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top