ಉಳಿದ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿದರೆ ತಮಿಳು ಭಾಷೆಯ ಗೌರವ ಕಡಿಮೆ ಆಗುತ್ತದೆ ಎಂದು ಅರ್ಜಿದಾದರ ಗಾಂಧಿ ಎನ್ನುವವರು ಮದ್ರಾಸ್ ಉಚ್ಛನ್ಯಾಯಾಲಯದಲ್ಲಿ ಎರಡು ರಿಟ್ ಅರ್ಜಿ ಗಳನ್ನು ದಾಖಲಿಸಿ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳನ್ನು ಆರನೇ ಪ್ರತಿವಾದಿಯನ್ನಾಗಿ ಮಾಡಿದ್ದರು. ಕೇಂದ್ರ ಸರ್ಕಾರ 2004ನೇ ಇಸವಿಯಲ್ಲಿ ಕನ್ನಡಕ್ಕೆ ನೀಡಿದ್ದ ಶಾಸ್ತ್ರೀಯ ಸ್ಥಾನಮಾನವನ್ನು ಪ್ರಶ್ನಿಸಿ ಚೆನ್ನೈನ ವಕೀಲರಾದ ಗಾಂಧಿ ಎಂಬುವವರು ಮದ್ರಾಸ್ ಉಚ್ಛನ್ಯಾಯಾಲಯದಲ್ಲಿ 2008ರಲ್ಲಿ ಹೂಡಿದ್ದ ದಾವೆಗಳು ವಜಾಗೊಳ್ಳುವ ಮೂಲಕ ಕನ್ನಡ ಭಾಷೆಗೆ ಸಿಕ್ಕ ಅತ್ಯುನ್ನತ ಗೌರವಕ್ಕೆ ಕಾನೂನು ಅಂಕಿತವೂ ಸಿಕ್ಕಿದಂತಾಗಿದೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಎಂದು ಅಧ್ಯಕ ಡಾ. ಎಲ್. ಹನುಮಂತಯ್ಯ ತಿಳಿಸಿದ್ದಾರೆ.
2008ರಲ್ಲಿ ಗಾಂಧಿ ಎನ್ನುವವರು ಮದ್ರಾಸ್ ಉಚ್ಛನ್ಯಾಯಾಲಯದಲ್ಲಿ ಎರಡು ರಿಟ್ ಅರ್ಜಿ ಗಳನ್ನು ದಾಖಲಿಸಿ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳನ್ನು ಆರನೇ ಪ್ರತಿವಾದಿಯನ್ನಾಗಿ ಮಾಡಿದ್ದರು. ಈ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ವಯಂ ಪ್ರೇರಿತವಾಗಿ ಮದ್ರಾಸಿನ ಉಚ್ಛನ್ಯಾಯಾಲಯಕ್ಕೆ ಪ್ರತಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಚೆನ್ನೈ ಹಿರಿಯ ವಕೀಲರಾದ ಕಾರ್ತಿಕೇಯನ್ ಮೂಲಕ ಸಮರ್ಥ ವಾದವನ್ನು ಮಂಡಿಸಿತ್ತು.
ಎಂಟು ವರ್ಷಗಳ ಈ ಹೋರಾಟಕ್ಕೆ ಕಡೆಗೂ ಅಂತಿಮ ಜಯ ದೊರಕಿದ್ದು, ಇನ್ನು ಮುಂದೆ ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ. ಪ್ರಸ್ತುತ ಮೈಸೂರಿನಲ್ಲಿ ಹಂಗಾಮಿ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರವನ್ನು ಬೆಂಗಳೂರಿನಲ್ಲಿ ತೆರೆಯಲು ಎಲ್ಲಾ ಪೂರ್ವಭಾವಿ ವ್ಯವಸ್ಥೆಗಳನ್ನು ಕರ್ನಾಟಕ ಸರ್ಕಾರ ಮಾಡಿಕೊಂಡಿದ್ದು, ವ್ಯವಸ್ಥಿತ ಪ್ರಕ್ರಿಯೆಗೆ ಇಷ್ಟರಲ್ಲಿಯೇ ಚಾಲನೆ ಸಿಗಲಿದೆ.
ಈ ಕಾನೂನು ಹೋರಾಟವನ್ನು ಗೆಲ್ಲಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖಾ ಸಚಿವರಾದ ಉಮಾಶ್ರೀರವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ ಡಾ. ಎಲ್. ಹನುಮಂತಯ್ಯ ಅಭಿನಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಹಿರಿಮೆಯನ್ನು ಜಗತ್ತಿಗೆ ಹರಡುವ ಎಲ್ಲಾ ಕಾರ್ಯಕ್ರಮಗಳನ್ನು ಅತ್ಯಂತ ತುರ್ತಾಗಿ ನಿರ್ವಹಿಸಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
