fbpx
death

ಐಟಂ ಸಾಂಗ್ ಡ್ಯಾನ್ಸರ್ ಜ್ಯೋತಿ ಲಕ್ಷ್ಮಿ ನಿಧನ…

ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದ ಜ್ಯೋತಿ ಲಕ್ಷ್ಮಿ, 1970 ರಲ್ಲಿ ತಮಿಳು ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರವಲ್ಲದೇ ಬಾಲಿವುಡ್ ನ ಕೆಲ ಚಿತ್ರಗಳಲ್ಲೂ ಜ್ಯೋತಿ ಲಕ್ಷ್ಮಿ ಕಾಣಿಸಿಕೊಂಡಿದ್ದರು.

ಹಿರಿಯ ನಟಿ ಜ್ಯೋತಿ ಲಕ್ಷ್ಮಿ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ನಾಯಕಿ ಪಾತ್ರಕ್ಕೆ ಬೇಡಿಕೆ ಕಡಿಮೆಯಾಗುತ್ತಿದ್ದಂತೆಯೇ ಸ್ಪೆಷಲ್ ಸಾಂಗ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿ ಲಕ್ಷ್ಮಿ ಈ ಕಾರಣಕ್ಕಾಗಿ ಸಾಕಷ್ಟು ಜನಪ್ರಿಯರಾಗಿದ್ದರು. ಸಹೋದರಿ ಜಯಮಾಲಿನಿ ಚಿತ್ರರಂಗ ಪ್ರವೇಶಿಸುತ್ತಿದ್ದಂತೆಯೇ ಜ್ಯೋತಿ ಲಕ್ಷ್ಮಿಯವರು ಕ್ರಮೇಣ ನೇಪಥ್ಯಕ್ಕೆ ಸರಿದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

ಐಟಂ ಸಾಂಗ್ ಡ್ಯಾನ್ಸರ್ ಜ್ಯೋತಿ ಲಕ್ಷ್ಮಿ ನಿಧನ…
Click to comment

Leave a Reply

Your email address will not be published. Required fields are marked *

ನಮ್ಮಲ್ಲಿ ಜನಪ್ರಿಯ

To Top