ಪಿಜ್ಜಾ ಪ್ರಿಯರಿಗೊಂದು ಖುಷಿ ಸುದ್ದಿ. ಇನ್ನು ಮುಂದೆ ನಿಮ್ಮ ನೆಚ್ಚಿನ ಪಿಜ್ಜಾ ಎಟಿಎಂ ನಲ್ಲಿ ಸಿಗಲಿದೆ. ಆದ್ರೆ ಸದ್ಯ ಈ ಮಶಿನ್ ಅಮೆರಿಕಾದಲ್ಲಿ ಮಾತ್ರ ಅಳವಡಿಸಲಾಗಿದೆ. ಅಮೆರಿಕಾದ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಪಿಜ್ಜಾ ಎಟಿಎಂ ಅಳವಡಿಸಲಾಗಿದೆ.
ವರದಿ ಪ್ರಕಾರ ಓಹಿಯೋ ಝೇವಿಯರ್ ವಿಶ್ವವಿದ್ಯಾಲಯ ಆವರಣದಲ್ಲಿ ಪಿಜ್ಜಾ ಎಟಿಎಂ ಅಳವಡಿಸಲಾಗಿದೆ. ಈ ಯಂತ್ರದಲ್ಲಿ 70 ಬಗೆಯ 12 ಇಂಚಿನ ಪಿಜ್ಜಾಗಳಿವೆ. ಕೇವಲ ಮೂರು ನಿಮಿಷದಲ್ಲಿ ಪಿಜ್ಜಾ ಬಿಸಿಯಾಗಿ ನಿಮ್ಮ ಕೈಗೆ ಸಿಗಲಿದೆ. ಪಿಜ್ಜಾ ಪ್ರಿಯರು 24 ಗಂಟೆಯಲ್ಲಿ ಯಾವಾಗ ಬೇಕಾದ್ರೂ ತಮಗೆ ಬೇಕಾದ ಪಿಜ್ಜಾ ತಿನ್ನಬಹುದಾಗಿದೆ.
ಆಗಸ್ಟ್ 10 ರಂದು ಪಿಜ್ಜಾ ಮಶಿನ್ ಉದ್ಘಾಟನೆಗೊಳ್ಳಿದೆ. ಈ ಮಶಿನ್ ನಲ್ಲಿ ತಾಪಮಾನ ನಿಯಂತ್ರಣ ವ್ಯವಸ್ಥೆ ಇದೆ. ಗ್ರಾಹಕ ಸೂಚಿಸಿದ ಬಗೆಯ ಪಿಜ್ಜಾವನ್ನು ಒವನ್ ನಲ್ಲಿಟ್ಟು ಮೊದಲು ಬಿಸಿ ಮಾಡಲಾಗುತ್ತದೆ. ನಂತ್ರ ಅದನ್ನು ಕಟ್ ಮಾಡಿ ಗ್ರಾಹಕನಿಗೆ ಯಂತ್ರ ನೀಡುತ್ತದೆ. ಪಿಜ್ಜಾ ಬೆಲೆ 10 ಅಮೆರಿಕನ್ ಡಾಲರ್. ಅಂದ್ರೆ ಸುಮಾರು 660 ರೂಪಾಯಿ.
ಗ್ರಾಹಕರು ತಮಗೆ ಬೇಕಾದ ಪಿಜ್ಜಾವನ್ನು ಆಯ್ಕೆಮಾಡಿದಾಗ ಓವೆನ್ನಲ್ಲಿ ಸಿದ್ಧವಾದ ಪಿಜ್ಜಾವನ್ನು ರಟ್ಟಿನ ಪೆಟ್ಟಿಗೆಯಲ್ಲಿ ತುಂಬಿ ಯಂತ್ರ ಹೊರದೂಡುತ್ತದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಬಹುದು. ಅಷ್ಟೆ ಅಲ್ಲದೆ ವಿದ್ಯಾರ್ಥಿಗಳು ತಮ್ಮ ಕಾರ್ಡ್ ಬಳಸಿಯೂ ಎಟಿಎಂ ಯಂತ್ರದಿಂದ ಪಿಜ್ಜಾ ಪಡೆದುಕೊಳ್ಳಬಹುದು. ಪಿಜ್ಜಾದ ಬೆಲೆ 10 ಡಾಲರ್ (ಸುಮಾರು ` 668) ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
