fbpx
god

ಕಾಯಕ ಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ

ನಾಯಕನಹಟ್ಟಿಯ ಗುರು ಭಕ್ತರ ಆರಾಧ್ಯ ದೈವ :- ಶ್ರೀ ಗುರು ತಿಪ್ಪೇರುದ್ರಸ್ವಾಮಿ

ಜಾನಪದ, ಬುಡಕಟ್ಟು ಸಂಸ್ಕೃತಿಗಳ ತವರು ಚಿತ್ರದುರ್ಗ ಜಿಲ್ಲೆ. ಇಲ್ಲಿನ ಆಚರಣೆಗಳು ವಿಶಿಷ್ಟ ಹಾಗೂ ವಿಭಿನ್ನ. ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ. ಇದು ಬುಡಕಟ್ಟು ಹಾಗೂ ಶಿಷ್ಟ ಸಂಸ್ಕೃತಿಗಳ ಸಮನ್ವಯದ ಸಂಕೇತವಾಗಿದೆ.

ಅವಧೂತ ಪರಂಪರೆಗೆ ಸೇರಿದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪವಾಡ ಮಾಡಿದ ಸ್ಥಳ ನಾಯಕನಹಟ್ಟಿ. ನೂರಾರು ವರ್ಷಗಳಿಂದ ತೆಲುಗು ಮತ್ತು ಕನ್ನಡ ಭಾಷಿಕ ಭಕ್ತರನ್ನು ಬೆಸೆದಿರುವ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿಯೂ ನಾಯಕನಹಟ್ಟಿ ಮಹತ್ವ ಪಡೆದಿದೆ. 12ನೇ ಶತಮಾನದ ನಂತರ ಕಾಯಕ ತತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ, ಆಂಧ್ರದ ರಾಯದುರ್ಗದ ಕಡೆಯಿಂದ ಮೊಳಕಾಲ್ಮುರು ಬಳಿ ಬಂದು ಪವಾಡ ಮಾಡಿ ಬಿಸಿ ನೀರು ಚಿಲುಮೆ ಸೃಷ್ಟಿಸಿದರು. ನಂತರ ಪಾವಗಡದ ಬಳಿಯ ವದನಕಲ್ಲು ಗ್ರಾಮದ ಮಾರ್ಗವಾಗಿ ಭಕ್ತ ಫಣಿಯಪ್ಪನೊಂದಿಗೆ ಇಲ್ಲಿಗೆ ಬಂದು ನೆಲೆಸಿದರು ಎಂದು ಹೇಳಲಾಗಿದೆ.

ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಮೂಲ ಆಂಧ್ರ ಪ್ರದೇಶ ಎನ್ನಲಾಗಿದೆ. ಹೀಗಾಗಿ ಆ ರಾಜ್ಯದ ಜನರಿಗೂ ಶ್ರೀ ಗುರು ತಿಪ್ಪೇಸ್ವಾಮಿ ಎಂದರೆ ಅನನ್ಯ ಭಕ್ತಿ. ಚಿತ್ರದುರ್ಗ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯ ಭಕ್ತರಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ  ತಿಪ್ಪೇಸ್ವಾಮಿ, ತಿಪ್ಪೇಶ್, ತಿಪ್ಪಮ್ಮ, ತಿಪ್ಪಕ್ಕ, ತಿಪ್ಪೇರುದ್ರಸ್ವಾಮಿ, ರುದ್ರಮುನಿ, ಮುಂತಾದ ಹೆಸರುಗಳನ್ನು ಇಟ್ಟುಕೊಂಡವರು ಇದ್ದಾರೆ.

IMG-20160805-WA0042

ಪವಾಡ ಪುರುಷರಾಗಿದ್ದರೆಂದು ನಂಬಲಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ಯಾವ ಸ್ಥಳದವರು? ಯಾವ ಜಾತಿಯವರು? ಎಂಬ ಬಗ್ಗೆ ಈಗಲೂ ವಿವಾದಗಳಿವೆ. ಇವರು ವೀರಶೈವರೆಂದು ಕೆಲವರು ನಂಬಿದ್ದಾರೆ. ಇವರು ಬೇಡ ಜನಾಂಗದವರು ಇದ್ದಿರಬಹುದೆಂದು ಕೆಲವರ ವಾದ. ಒಂದು ದಿನ ನಾಯಕನಹಟ್ಟಿಗೆ ಬಂದ ಶ್ರೀ ಗುರು ತಿಪ್ಪೇಸ್ವಾಮಿಯವರು ಅದೇ ಗ್ರಾಮದಲ್ಲಿದ್ದ ಮಾರಮ್ಮನ ಗುಡಿಗೆ ಹೋಗಿ ಒಂದೆರಡು ದಿನ ತಂಗಲು ಸ್ಥಳಾವಕಾಶ ನೀಡಲು ಮಾರಮ್ಮದೇವಿಯ ಅಪ್ಪಣೆ ಪಡೆದರೆಂದೂ, ಮಾರಮ್ಮ ಬದಲು ಹಳ್ಳಿಗಳಿಗೆ ತಿರುಗಾಡಿ ಬರಲು ಹೋದಾಗ ಗುಡಿಯ ತುಂಬಾ ಶ್ರೀ ಗುರು ತಿಪ್ಪೇಸ್ವಾಮಿಯವರ ಜೋಳಿಗೆ-ಬೆತ್ತಗಳು ಕಾಣಿಸಿಕೊಂಡು, ಇದನ್ನು ಕಂಡ ಮಾರಮ್ಮ ಗುಡಿಯನ್ನು ಶ್ರೀ ಗುರು ತಿಪ್ಪೇಸ್ವಾಮಿಯವರಿಗೆ ಬಿಟ್ಟುಕೊಟ್ಟು ವಡ್ನಹಳ್ಳಿಗೆ ಹೋಗಿ ನೆಲೆಸಿದಳೆಂದು ಇಲ್ಲಿನ ಜನರು ಕಥೆ ಹೇಳುವುದಿದೆ. ಈಗ ಅದೇ ಗುಡಿ “ಶ್ರೀ ಗುರು ತಿಪ್ಪೇಸ್ವಾಮಿಯ ಒಳಮಠ”. ಇಲ್ಲಿ ತಿಪ್ಪೇಸ್ವಾಮಿಯವರನ್ನು ಲಿಂಗರೂಪದಲ್ಲಿ ಪ್ರತಿಷ್ಟಾಪಿಸಿ ಆರಾಧಿಸಲಾಗುತ್ತಿದೆ.

horamata

ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಾಯಕನಹಟ್ಟಿಗೆ ಮೊದಲ ಸಲ ಬಂದಾಗ ಅಲ್ಲಿನ ಮಾರಿಗುಡಿಯಲ್ಲಿ ವಾಸ್ತವ್ಯ ಮಾಡಿದ್ದರು ಎನ್ನಲಾಗಿದೆ. ಜೋಳಿಗೆ ಬೆತ್ತದ ಮಹಿಮೆ ತೋರಿಸಿ ಅಲ್ಲಿದ್ದ ಮಾರಿಯನ್ನು (ಅಜ್ಞಾನ, ಮೂಢನಂಬಿಕೆ) ಓಡಿಸಿ ಅಲ್ಲಿ ನೆಲೆಸಿದರು ಎಂಬ ಐತಿಹ್ಯವಿದೆ. ಅದೇ ಈಗಿನ ಒಳ ಮಠದ ದೇವಸ್ಥಾನ. ಮೊದಲು ಇಲ್ಲಿ ಗೋಪುರವಿರಲಿಲ್ಲ. ಬಸೆಟ್ಟೆಪ್ಪ ಎಂಬ ಭಕ್ತರು 18ನೇ ಶತಮಾನದ ಕೊನೆಯ ಭಾಗದಲ್ಲಿ ಈಗ ಕಾಣುವ ಸುಮಾರು 24 ಮೀಟರ್ ಎತ್ತರದ ಗೋಪುರ ಕಟ್ಟಿಸಿದರು.

1

*ಹೊರಮಠ: ಇದು ಶ್ರೀಗಳು ಜೀವಂತ ಸಮಾಧಿಯಾದ ಸ್ಥಳ. ಹಿಂದೂ ಇಸ್ಲಾಮಿಕ್ ಶೈಲಿಯಲ್ಲಿದೆ.

IMG-20160805-WA0043

ಶ್ರೀಗಳ ಆಶೀರ್ವಾದದಿಂದ ಜನಿಸಿದ ಪುತ್ರನ ನೆನಪಿಗೆ ಹೈದರಾಲಿ ಇದನ್ನು ನಿರ್ಮಿಸಿದರು. ಮಗನಿಗೆ ‘ತಿಪ್ಪುಸುಲ್ತಾನ್’ ಎಂದು ನಾಮಕರಣ ಮಾಡಿದ್ದರೆಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

IMG-20160805-WA0044

*ನಿಡುಗಲ್ಲು ರಾಜ ದಂಪತಿಗಳಿಗೆ ಸಂತಾನಫಲದ ಆಶೀರ್ವಾದ ನೀಡಿದವರು:- ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು

ಶ್ರೀಗಳ ಪಾದ ಪೂಜೆಯ ಓಂದು ನೋಟ

*ಶ್ರೀಗುರು ತಿಪ್ಪೇರುದ್ರಸ್ವಾಮಿಯವರ ಕೃಪೆಯ ಫಲದಿಂದ ಉಗಮಿಸಿದ ಬಿಳಿನೀರ ಚಿಲುಮೆ

ಉಗಮಿಸಿದ ಬಿಳಿನೀರ ಚಿಲುಮೆ

ಶ್ರೀಗುರು ತಿಪ್ಪೇರುದ್ರಸ್ವಾಮಿಯವರ ಕೃಪೆಯ ಫಲದಿಂದ ಉಗಮಿಸಿದ ಬಿಳಿನೀರ ಚಿಲುಮೆ ಇಂದು ಚಿತ್ರದುರ್ಗ ಜಿಲ್ಲೆಯ ಕೂಂಡ್ಲಹಳ್ಳಿ ಮತ್ತು ಕೋನಸಾಗರ ಸಮೀಪದಲ್ಲಿ ಇಂದಿಗೂ ಕಂಡುಬರುತ್ತದೆ, ಹಾಗೂ ಇಲ್ಲೇ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರ ಭವ್ಯ ಮಂದಿರವು ಪ್ರತಿಸ್ಠಾಪಿಸಲ್ಪಟ್ಟಿರುತ್ತದೆ. ಇಲ್ಲಿ ಗುರುಗಳ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನೆಡೆಯುತ್ತದೆ..

*ಮಾಡಿದಷ್ಟು ನೀಡುಬಿಕ್ಷೇ 

'ಮಾಡಿದವರಿಗೆ ನೀಡು ಬಿಕ್ಷೆ 'ಎಂಬ ವಾಕ್ಯವನ್ನು ಜಗತ್ತಿಗೆ ಪಸರಿಸಿದ ಶ್ರೀಗಳು

12ನೇ ಶತಮಾನದ ನಂತರ ಕಾಯಕ ತತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮಾಡಿದವರಿಗೆ ನೀಡು ಭಿಕ್ಷೆ ಎಂಬ ತತ್ವ ಜಗಕೆ ನೀಡಿದವರು ಇವರು.

*ಶ್ರೀಗುರು ತಿಪ್ಪೇರುದ್ರಸ್ವಾಮಿಯವರು ಕರುಣಿಸಿದಂತ ವಾಡೇವಿನಿಂದ ಭಕ್ತ ದಂಪತಿಗಳ ಧಾನ್ಯವನ್ನು ಸ್ವೀಕರಿಸುತ್ತಿರುವುದು….

ವಾಡೇವಿನಿಂದ ಭಕ್ತ ದಂಪತಿಗಳ ಧಾನ್ಯವನ್ನು ಸ್ವೀಕರಿಸುತ್ತಿರುವುದು

*ದುರ್ಗದ ದೊರೆ ಭರಮಣ್ಣನಾಯಕ (1689-1721)ರ ಅಧಿಕಾರಿಗಳಾದ ಗುಂಟನೂರು ಮಲ್ಲಪ್ಪ, ನರಸಯ್ಯ ಅವರು ನಿರ್ಮಿಸಿದರೆಂದು ಐತಿಹ್ಯವಿದೆ.

ತೇರು

ರಥೋತ್ಸವ: ಪ್ರತಿ ವರ್ಷ ಫಾಲ್ಗುಣ ಮಾಸದ ಚಿತ್ತಾ ನಕ್ಷತ್ರದಂದು ರಥೋತ್ಸವ ನಡೆಯುತ್ತದೆ. ರಥದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪಾದಗಟ್ಟೆವರೆಗೂ ಎಳೆದು ಮತ್ತೆ ಸ್ವಸ್ಥಾನಕ್ಕೆ ತಂದು ನಿಲ್ಲಿಸುತ್ತಾರೆ. ಸುಮಾರು 70ಟನ್ ಭಾರದ 9 ಮಜಲಿನ ರಥ ವಿಶಿಷ್ಟವಾದುದು. ನಾಯಕನಹಟ್ಟಿ ಜಾತ್ರೆ ರಾಜ್ಯದ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ ಒಂದು. ಜಾತಿ, ಮತಗಳ ಭೇದವಿಲ್ಲದೆ ಹಿಂದೂ ಮುಸ್ಲಿಮರು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಶ್ರೀಗಳು ಹಟ್ಟಿಗೆ ಬರುವಾಗ ಬೆಳಕಿಗಾಗಿ ಕೊಬ್ಬರಿ ಹಚ್ಚಿಕೊಂಡು ಆಗಮಿಸಿದರು ಎಂಬುದರ ಸಂಕೇತವಾಗಿ ಜಾತ್ರೆ ಸಮಯದಲ್ಲಿ ಭಕ್ತರು ಕೊಬ್ಬರಿ ಸುಡುವ ಹರಕೆ ಹೊತ್ತು ಅದನ್ನು ತೀರಿಸುವ ಪದ್ಧತಿ ಬೆಳೆದುಬಂದಿದೆ.

*ಆಂಜನೇಯಸ್ವಾಮಿಯವರು ಮೊದಲಬಾರಿಗೆ ಶ್ರೀ ಗುರುಗಳ ರಧವನ್ನು ಎಳೆದು ಆಶೀರ್ವಾದ ಗೈದಂತಹ ಅಪೂರ್ವ ಕ್ಷಣ.

ಆಂಜನೇಯಸ್ವಾಮಿಯವರು

*ಹೊರಮಠವನ್ನು ಶ್ರೀ ಗುರು ತಿಪ್ಪೇರುದ್ರಸ್ವಾಮಿ ‘ಗದ್ದುಗೆ’ ಎಂದು ಕರೆಯುತ್ತಾರೆ.

IMG-20160805-WA0041

*ಒಳಮಠವನ್ನು ಶ್ರೀ ಗುರು ತಿಪ್ಪೇಸ್ವಾಮಿಯ ‘ಮಠ’ವೆಂದು ಕರೆಯುತ್ತಾರೆ.

ಒಳಮಠ

ಒಳಮಠವನ್ನು ಶ್ರೀ ಗುರು ತಿಪ್ಪೇಸ್ವಾಮಿಯ ‘ಮಠ’ವೆಂದು ಕರೆಯುತ್ತಾರೆ. ಒಳಮಠಕ್ಕೆ ಶೈವರು ಪೂಜಾಧಿಕಾರವನ್ನು ಹೊಂದಿದ್ದರೆ, ಒಳಮಠದಲ್ಲಿ ಪ್ರತಿ ಸೋಮವಾರ ಪೂಜೆ ನಡೆಯುವುದಕ್ಕೆ ಹೊರಮಠಕ್ಕೆ ಜೀವಕಳೆ ಬರಬೇಕು ವಾಡಿಕೆಯಿದೆ! ನಾಯಕನಹಟ್ಟಿ ಜಾತ್ರೆಗೆ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಿಂದಷ್ಟೇ ಅಲ್ಲದೇ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದಲೂ ಭಕ್ತಾದಿಗಳು ಸಾಗರೋಪಾದಿಯಲ್ಲಿ ಸೇರುತ್ತಾರೆ. ಸುತ್ತಲೂ ಹತ್ತಾರು ಸ್ಥಳಗಳಿಂದ ರಾಜ್ಯ ಸರ್ಕಾರದ ವಿಶೇಷ ಬಸ್ಸುಗಳ ಈ ಜಾತ್ರೆಗೆ ಹಗಲಿರುಳು ಸಂಚರಿಸುತ್ತವೆ.

ನಾಯಕನಹಟ್ಟಿಗೆ ಬರುವುದು ಹೇಗೆ?

ನಾಯಕನಹಟ್ಟಿ ಚಳ್ಳಕೆರೆಯಿಂದ ಉತ್ತರಕ್ಕೆ 20 ಕಿ.ಮೀ ದೂರದಲ್ಲಿದೆ. ಅಲ್ಲಿಗೆ ಹೋಗಲು ಬಸ್, ಆಟೋಗಳ ಸೌಲಭ್ಯವಿದೆ. ಚಿತ್ರದುರ್ಗ, ಬಳ್ಳಾರಿ, ದಾವಣಗೆರೆಯಿಂದ ಸಾಕಷ್ಟು ಖಾಸಗಿ ಬಸ್‌ಗಳು ಅಲ್ಲಿಗೆ ಹೋಗುತ್ತವೆ.

ಭಕ್ತಾದಿಗಳಿಗೆ ನಿತ್ಯ ದಾಸೋಹ ವ್ಯವಸ್ಥೆ ಇದೆ. ತಂಗಲು ಛತ್ರದ ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗೆ 08190-207450 ಸಂಪರ್ಕಿಸಬಹುದು.

ಇದೇ 2017 ಮಾರ್ಚ್ 15 ರಂದು ನಾಯಕನಹಟ್ಟಿಯಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಜಾತ್ರೆ ನಡೆಯುತ್ತದೆ.

-ರಜನಿ.ಎಂ.ಆರ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top