fbpx
Karnataka

ಕರ್ನಾಟಕದಲ್ಲಿ ಕನ್ನಡ ಪುಸ್ತಕೋದ್ಯಮಕ್ಕೆ ಅಮೇಜಾನ್ ಸಂಸ್ಥೆ ನೀಡಿರುವ ಶೋಚನೀಯ ಉಡುಗೊರೆ.

ಕನ್ನಡಿಗರ ಮೇಲೆ ತಾತ್ಸಾರ ಮಾಡುವ ಈ ವಲಸಿಗ ಕಂಪೆನಿಗಳಿಗೆ ಏನು ಮಾಡಬೇಕು? ನಮ್ಮ ರಾಜ್ಯದಿಂದ ಸಿಗುವ ಸಂಪನ್ಮೂಲಗಳಿಗಾಗಿ ಹಾತೊರೆಯುವ ಈ ಕಂಪನಿಗಳು, ಅದೇ ಕನ್ನಡಿಗರಿಗೆ ಸೌಕರ್ಯ ಕೊಡುವ ಸಂದರ್ಭದಲ್ಲಿ ಕಡೆಗಣಿಸುವುದನ್ನು ನೋಡಿದರೆ ಗೊತ್ತಾಗುತ್ತದೆ ಕನ್ನಡಿಗರ ಶೋಚನೀಯ ಸ್ಥಿತಿ ಏನೆಂಬುದು..

13924906_1728681270720027_4865797136104915404_n

ಸಾಹಿತಿ ವಸುಧೇಂದ್ರ ಅವರು ಬರೆದಿರುವ ‘ಐದು ಪೈಸೆ ವರದಕ್ಷಿಣೆ’ ಪುಸ್ತಕವನ್ನು ಕಿಂಡಲ್ ಆವೃತ್ತಿಯಲ್ಲಿ ಬಿಡುಗಡೆ ಮಾಡಿದ್ದರು. ನಂತರ ಈ ಬಗ್ಗೆ ಅಮೇಜಾನ್ನೊಂದಿಗೆ ಚರ್ಚಿಸಿದಾಗ, ಕಿಂಡಲ್‌ನಲ್ಲಿ ಕನ್ನಡ ಆವೃತ್ತಿ ಬಿಡುಗಡೆ ಗೊಳಿಸಲು ತಂತ್ರಾಂಶದ ತೊಂದರೆಯಿದೆ. ಆದ ಕಾರಣ ನಿಮ್ಮ ಪುಸ್ತಕವನ್ನು ತೆಗೆದು ಹಾಕಿದ್ದೇವೆ ಎಂದು ಪ್ರತಿಕ್ರಿಯೆ ನೀಡಿ, ಪುಸ್ತಕವನ್ನು ಕಿಂಡಲ್ ಆವೃತ್ತಿಯಿಂದ ಡಿಲೀಟ್ ಮಾಡಿದ್ದಾರೆ. ಆದರೆ ಕಿಂಡಲ್‌ನಲ್ಲಿ ಕನ್ನಡ ಅಕ್ಷರಗಳು ಬರುವಂತೆ ತಂತ್ರಾಂಶವನ್ನು ಲೇಖಕರ ತಂಡವೇ ಸಿದ್ದಪಡಿಸಿತ್ತು. ಆದರೂ, ಕಂಪನಿ ಅದನ್ನು ಒಪ್ಪಿಕೊಳ್ಳದೇ ತಗೆದು ಹಾಕಿದೆ.

ಕನ್ನಡ ತಂತ್ರಾಂಶ ಸಿದ್ದವಿಲ್ಲ ಎಂದು ಅಮೆಜಾನ್ ಹೇಳಿದ ಕಾರಣ, ವಸುಧೇಂದ್ರ ಹಾಗೂ ಅವರ ತಂಡ, ಕಿಂಡಲ್ ಆವೃತ್ತಿಗೆ ಹೊಂದುವ ತಂತ್ರಾಂಶಕ್ಕೆ ಪುಸ್ತಕ ಸಿದ್ದಪಡಿಸಿ ಅಪ್‌ಲೋಡ್ ಮಾಡಿದ್ದರು. ಕಿಂಡಲ್‌ನಲ್ಲಿ ಯಾವುದೇ ಅಕ್ಷರ ಲೋಪವಿಲ್ಲದೇ ಸರಿಯಾಗಿ ಕಾರ್ಯನಿರ್ವ-ಹಿಸುತ್ತಿದ್ದರೂ, ಅಮೇಜಾನ್ ಸಂಸ್ಥೆ ‘ಕನ್ನಡಕ್ಕೆ ಸಪೋರ್ಟ್’ ಮಾಡುವುದಿಲ್ಲ ಎಂದು ಹೇಳಿರುವುದು ವಿಪರ್ಯಾಸ. ಈ ಹಿನ್ನೆಲೆಯಲ್ಲಿ ಕೆಲ ತಂತ್ರಾಂಶ ಆಸಕ್ತ ಕನ್ನಡ ಸಾಹಿತಿಗಳು ಕೇಂದ್ರ ಐಟಿ ಸಚಿವ ರವಿಶಂಕರ ಪ್ರಸಾದ್ ಅವರಿಗೆ ಆನ್‌ಲೈನ್ ಪಿಟಿಶನ್ ಮೂಲಕ ದೂರು ನೀಡಿದ್ದಾರೆ. ಚೇಂಜ್.ಆರ್ಗ್ ಸಂಸ್ಥೆಯ ಮೂಲಕ ಆನ್‌ಲೈನ್‌ನಲ್ಲಿ ಜನಾಭಿಪ್ರಾಯ ಸಂಗ್ರಹಿಸುತ್ತಿದೆ.

ರಾಜ್ಯದಲ್ಲಿ ವಹಿವಾಟು ನಡೆಸಲು, ಸಂಸ್ಥೆ ಆರಂಭಿಸಲು ನೆಲ-ಜಲ, ಮಾನವ ಸಂಪನ್ಮೂಲ ಹಾಗೂ ತೆರಿಗೆ ವಿನಾಯಿತಿ ಬಯಸಿದ್ದ ಅಮೆಜಾನ್ ಆನ್‌ಲೈನ್ ಮಾರಾಟ ಸಂಸ್ಥೆಗೆ ಕನ್ನಡಿಗರು ಬರೆದ ಪುಸ್ತಕದ ಕಿಂಡಲ್ ಆವೃತ್ತಿ ಬಿಡುಗಡೆಗೆ ಏನು Problem? ತಮಿಳಿಗೆ ನೀಡಿರುವ ಸ್ಥಾನ ಕನ್ನಡಕ್ಕೇಕೆ ಏಕೆ ಇಲ್ಲ?

ತಂತ್ರಾಂಶ ಅಲಭ್ಯತೆ ಕಾರಣ ನೀಡಿ ಕನ್ನಡ ಪುಸ್ತಕಗಳ ಕಿಂಡಲ್ ಆವೃತ್ತಿ ಬಿಡುಗಡೆ ನಿಲ್ಲಿಸಿರುವ ಅಮೆಜಾನ್ ಸೆಪ್ಟಂಬರ್ ತಿಂಗಳಿಂದ ಹಿಂದಿ, ತಮಿಳು ಸೇರಿ ಪಂಚ ಭಾಷೆಗಳ ಪುಸ್ತಕಗಳನ್ನು ಕಿಂಡಲ್ ಆವೃತ್ತಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಅವಕಾಶ ಕಲ್ಪಿಸಲಿದೆ. ಆದರೆ ಕನ್ನಡದ ಪ್ರತಿಭಾವಂತ ಲೇಖಕರಲ್ಲಿ ಒಬ್ಬರಾದ ವಸುಧೇಂದ್ರ ಅವರ ‘ಐದು ಪೈಸೆ ವರದಕ್ಷಿಣೆ’ ಕಿಂಡಲ್ ಆವೃತ್ತಿ ಸ್ಥಗಿತಗೊಳಿಸಿರುವುದರ ಜತೆಗೆ ಉಳಿದ ಲೇಖಕರಿಗೂ ಸೌಲಭ್ಯ ನೀಡದೆ ಇರುವುದಕ್ಕೆ ನಿರ್ಧರಿಸಿದೆ.

ಇದು ದೇಶದಲ್ಲೇ ಅತಿ ಹೆಚ್ಚು ಆನ್‌ಲೈನ್ ಮಾರಾಟ ಜಾಲ ಹೊಂದಿರುವುದರ ಜತೆಗೆ ಐಟಿ ಸಿಟಿ ಎಂಬ ಖ್ಯಾತಿಯನ್ನೂ ಪಡೆದಿರುವ ಬೆಂಗಳೂರಿನಲ್ಲಿ ಕನ್ನಡ ಪುಸ್ತಕೋದ್ಯಮಕ್ಕೆ ವಿದೇಶಿ ಕಂಪನಿಯೊಂದು ನೀಡಿರುವ ಶೋಚನೀಯ ಉಡುಗೊರೆ. ಈ ಘಟನೆ ನಡೆದು ಹಲವು ದಿನಗಳೇ ಕಳೆದರೂ ಕನ್ನಡದ ಸಾಹಿತಿಗಳಾಗಲಿ, ಪ್ರಕಾಶಕರಾಗಲಿ, ಪುಸ್ತಕೋ ದ್ಯಮದ ಗಣ್ಯರಾಗಲಿ, ಐಟಿ ಕ್ಷೇತ್ರದ ದಿಗ್ಗಜರಾಗಲಿ ಈ ಬಗ್ಗೆ ಸೊಲ್ಲೆತ್ತಿಲ್ಲ. ಸರಕಾರ ಕ್ಕಂತೂ ಈ ವಿಚಾರ ಗೊತ್ತೇ ಇಲ್ಲ. ಇನ್ನು ‘ಹುಟ್ಟು ಹೋರಾಟಗಾರ’ರಿಗೆ ಓದಿನ ವಿಚಾರ ಅರ್ಥವಾಗುವುದಿಲ್ಲ ಬಿಡಿ. ಈ ಒಂದು ದಿವ್ಯ ನಿರ್ಲಕ್ಷ್ಯದಿಂದಲೇ ಅಮೆಜಾನ್ನಂಥ ಸಂಸ್ಥೆ ಗಳು ಈ ಕನ್ನಡವನ್ನು ಧಿಕ್ಕರಿಸಿವೆ.

“ರಾಜ್ಯದಲ್ಲಿ ಅಮೆಜಾನ್ ಸಂಸ್ಥೆಯ ವಹಿವಾಟು ವಿಸ್ತರಣೆಗೆ ತೆರಿಗೆ ವಿನಾಯಿತಿ ಹಾಗೂ ಇನ್ನಿತರ ಸೌಲಭ್ಯ ನೀಡುವಂತೆ ರಾಜ್ಯ ಹಾಘೂ ಕೇಂದ್ರದ ಘಟಾನುಘಟಿ ನಾಯಕರು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಹಲವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ಮಾತ್ರವಲ್ಲ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಅದು ಪ್ರಕಟವಾಗುವಂತೆ ಮಾಡಿ ಅಮೆಜಾನ್ ಪರ ಲಾಬಿ ನಡೆಸಿದ್ದರು. ಅಂತಿಮವಾಗಿ ರಾಜ್ಯ ಸರಕಾರ ಈ ‘ಗಣ್ಯ’ರ ಒತ್ತಡಕ್ಕೆ ಶರಣಾಗಿತ್ತು. ಆದರೆ ಅದೇ ಅಮೆಜಾನ್ ಸಂಸ್ಥೆ ಈಗ ತನ್ನ ಜಾಲ ತಾಣದಿಂದ ಕನ್ನಡವನ್ನು ಜಾಡಿಸಿ ಆಚೆ ಕಳುಹಿಸಿದೆ. ಈಗ ಕನ್ನಡದ ಪರ ಲಾಬಿ ನಡೆಸುವವರು ಯಾರು ? ಸಿಎಂ ಸಿದ್ದರಾಮಯ್ಯ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತ ಲಕ್ಷ್ಯ ಹರಿಸುವರೇ ? ಅಥವಾ ಬೆಂಗಳೂರಿನಲ್ಲಿ ಮೂಲ ಸೌಕರ್ಯ ಸರಿ ಇಲ್ಲ ಎನ್ನುವ ಐಟಿ ದಿಗ್ಗಜರು ಮೌನ ಮುರಿಯುವರೇ ? ರಾಜ್ಯದ ನೆಲ, ಜಲ ಉಪಯೋಗಿಸಿ ಕೊಳ್ಳುವ ಅಮೇಜಾನ್ ಸಂಸ್ಥೆ, ಕನ್ನಡಕ್ಕೆ ಅವಕಾಶ ನೀಡಲು ಏನು ತೊಂದರೆ ಇದೆ, ನೆರೆ ರಾಜ್ಯದ ಭಾಷೆಗೆ ತಂತ್ರಾಂಶ ಸಿದ್ದಪಡಿಸಿ ಆನ್‌ಲೈನ್ ಆವೃತ್ತಿ ಸೌಲಭ್ಯ ಕಲ್ಪಿಸುವುದಾದರೆ ಕನ್ನಡಕ್ಕೂ ಸಿದ್ದಪಡಿಸಲಿ.” – ವಸುಧೇಂದ್ರ ಸಾಹಿತಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top