fbpx
Karnataka

ರೇಶನ್ ಕಾರ್ಡ್ ಕಂಡಿಷನ್ ಗೆ ಭರ್ಜರಿ ಸರ್ಜರಿ!

ಬೆಂಗಳೂರು: ರೇಶನ್ ಕಾರ್ಡ್ ಗೆ ಸರ್ಜರಿ ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ.ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಯು.ಟಿ.ಖಾದರ್ ನೂತನ ವಿಧಾನವನ್ನು ಜಾರಿಗೆ ತರಲು ಮುಂದಾಗಿದ್ದು, ನೂತನ ಕಾರ್ಡ್ ಮಾದರಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸುಲಭ ಐತಿಹಾಸಿಕ ನಿಯಮಾವಳಿಗಳನ್ನು ಸಂಪುಟ ಸಭೆಯಲ್ಲಿ ಮಂಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಮಂತ್ರಿ ಮಂಡಲ ಸಭೆಯಲ್ಲಿ ಚರ್ಚಿಸಿ ಅಸ್ತು ಎಂದಿದ್ದಾರೆ.

ಈ ಹಿಂದೆ ಇದ್ದ ಎಪಿಎಲ್ ಮತ್ತು ಬಿಪಿಎಲ್ ಬ್ರೇಕ್ ಹಾಕಿ ಕೇವಲ 4 ನಿಯಮಗಳು ಅನ್ವಯಿಸಲಿದ್ದು, ಎಪಿಎಲ್-ಬಿಪಿಎಲ್ ಹೆಸರು ತೆಗೆದು, ಆದ್ಯತೆ (Eligible) ಮತ್ತು ಆದ್ಯತೆ ರಹಿತ (Not Eligible) ಎಂಬ ನಾಮಕರಣ ಮಾಡಲಾಗಿದೆ. ಮುಂದೆ ಬರಲಿರುವ ಹೊಸ ಸ್ಮಾರ್ಟ್ ಕಾರ್ಡ್ ಮಾದರಿಯ ರೇಶನ್ ಕಾರ್ಡ್ ಗ್ರಾಹಕರ ಕೈ ಸೇರುವ ಸಂದರ್ಭ ಈ ನಿಯಮವೂ ಚಾಲನೆಗೆ ಬರಲಿದೆ.

ನೂತನ ರೇಶನ್ ಕಾರ್ಡ್ ವಿವರ: ಕುಟುಂಬದ ಸದಸ್ಯರ ವಿವರವಿರುವ  ಹಾಗೂ ಯಜಮಾನನ ಹೇಸರು, ಫೋಟೋ, ಬಾರ್ ಕೋಡ್, ಕಾರ್ಡ್ ನಂಬರ್ ಒಂದೇಕಡೆ ಇರುತ್ತದೆ. ಮತ್ತೋಂದುಕಡೆ ವಿಳಾಸ ಇರುತ್ತದೆ. ಸ್ಮಾರ್ಟ್ ರೇಶನ್ ಕಾರ್ಡಿನ ಬಾರ್ ಕೋಡ್ ಕಂಪೂಟರ್ ನಲ್ಲಿ ಸ್ಕ್ಯಾನ್ ಮಾಡಿದರೆ ಆ ಕಾರ್ಡ್ ನ ಸಂಪೂರ್ಣ ವಿವರ ತಿಳಿಯ ಬಹುದಾಗಿದೆ.

ನೂತನ ರೇಶನ್ ಕಾರ್ಡ್ 4 ನಿಯಮಗಳು;

 1: ತೆರಿಗೆ ಪಾವತಿದಾರರು ಮತ್ತು ಸರಕಾರಿ ಉದ್ಯೋಗಿಗಳು.

 2: 7 ಎಕ್ರೆ ಜಮೀನು ಹೊಂದಿರುವವರು.

 3: ಸಿಟಿ ಕಾರ್ಪೊರೇಶನ್ ವಲಯದಲ್ಲಿ 1,000 ಚದರಡಿ ಮನೆ, ಮುನ್ಸಿಪಾಲಿಟಿ ವಲಯದಲ್ಲಿ 2,000 ಚದರಡಿ ಮನೆ ಹೊಂದಿರುವವರು. ಗ್ರಾಮಾಂತರ ಪ್ರದೇಶದಲ್ಲಿ ಇದರ ಮಿತಿಯಿಲ್ಲ.

 4: ಈ ಹಿಂದೆ ಇದ್ದ ಮಾಸಿಕ 450 ರೂ. ವಿದ್ಯುತ್ ಬಿಲ್ ಬದಲಿಗೆ 150 ಯೂನಿಟ್ ವಿದ್ಯುತ್ ಬಳಸುವವರು, ಸ್ವಂತಕ್ಕೆ ಬಳಸುವ ಚತುಷ್ಚಕ್ರ ಖಾಸಗಿ ವಾಹನ ಹೊಂದಿದವರು. ದ್ವಿಚಕ್ರ, ದುಡಿಯುವ ತ್ರಿಚಕ್ರ, ಚತುಷ್ಚಕ್ರ, ಟ್ರಾಕ್ಟರ್ ವಾಹನಕ್ಕೆ ವಿನಾಯಿತಿ ನೀಡಲಾಗಿದೆ. ಈ ಮೇಲಿನ ನಾಲ್ಕು ಕಂಡಿಷನ್ ನ ಒಳಗಿರುವವರು ಆದ್ಯತೆಯ ರೇಶನ್ ಕಾರ್ಡಿಗೆ ಅರ್ಹರಾಗಿದ್ದು, ಕಂಡಿಷನ್ ನ ಹೊರಗಿರುವವರು ಆದ್ಯತೆ ರಹಿತರಾಗಿರುತ್ತಾರೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಖಾದರ್ ಆಹಾರ ಸಚಿವರಾದ ತಕ್ಷಣ ಮಂಗಳೂರಿನ ನಾಗರಿಕರೊಬ್ಬರು ರೇಶನ್ ಕಾರ್ಡ್ ನ ಕಠಿಣ ನಿಲುವಿಗೆ ಕಡಿವಾಣ ಹಾಕುವಂತೆ ಸಲಹೆ ನೀಡಿ ಸಾಮಾಜಿಕ ತಾಣಗಳಲ್ಲಿ ಬರಹ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ. ಖಾದರ್ ಈ ಸುಲಭ ಐತಿಹಾಸಿಕ ನಿಯಮಾವಳಿಗಳನ್ನು ಸಂಪುಟ ಸಭೆಯಲ್ಲಿ ಮಂಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಮಂತ್ರಿ ಮಂಡಲ ಸಭೆಯಲ್ಲಿ ಚರ್ಚಿಸಿ ಅಸ್ತು ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top