ನಿಯಂತ್ರಣವಿಲ್ಲದೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಬೆಲೆಗಳ ನಡುವೆ ಈ ಬಾರಿಯು ವರಮಹಾಲಕ್ಷ್ಮೀ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಜನರು ಸಿದ್ಧತೆ ನಡೆಸುತ್ತಿದ್ದು, ಮಾರ್ಕೆಟ್ ಗೆ ಹೋದರೆ ಹಬ್ಬಕ್ಕೆ ಬೇಕಾದ ಪೂಜಾ ಸಾಮಾಗ್ರಿಗಳೇ ಹಣ್ಣು, ಹೂವು, ತರಕಾರಿಗಳು ಕಂಡು ಬರುತ್ತಿದೆ. ಪೂಜಾ ಸಾಮಾಗ್ರಿ, ಹಣ್ಣು, ಹೂವು, ತರಕಾರಿಗಳ ಮೇಲೆ ಉಳಿದ ಸಮಯಕ್ಕಿಂತ ಸ್ವಲ್ಪ ಜಾಸ್ತಿ.
ಹಬ್ಬದ ಈ ಸಂದರ್ಭಗಳಲ್ಲಿ ಹಣ್ಣು, ಹೂಗಳ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ, ಹಾಪ್ಕಾಮ್ಸ್ ಈ ಬಾರಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹಣ್ಣುಗಳ ಬೆಲೆಯಲ್ಲಿ ಶೇ.5ರಷ್ಟು ರಿಯಾಯಿತಿ ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಹಾಪ್ಕಾಮ್ಸ್ ಅಧ್ಯಕ್ಷ ಶ್ರೀನಿವಾಸನ್, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬುಧವಾರದಿಂದ ಶುಕ್ರವಾರದವರೆಗೆ ಶೇ.5ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳು ಲಭ್ಯವಾಗಲಿವೆ.

© kannada.oneindia
ತರಕಾರಿಗಳು ಈಗಾಗಲೇ ಕಡಿಮೆ ಬೆಲೆಯಲ್ಲಿ ದೊರಕುತ್ತಿರುವುದರಿಂದ ಅವುಗಳ ಮೇಲೆ ಯಾವುದೇ ರಿಯಾಯಿತಿ ಇಲ್ಲ. ಹಬ್ಬದ ಸಮಯದಲ್ಲಿ ತರಕಾರಿ ಬೆಲೆ ಹೆಚ್ಚಳವಾದರೆ ಅವುಗಳ ಮೇಲೂ ಶೇ.5ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಾಪ್ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಕೃಷ್ಣ ಇದ್ದರು.
ಹಾರ್ಟಿ ಬಜಾರ್ನಲ್ಲಿ ನಗರ ಪ್ರದೇಶದಲ್ಲಿ ವಾಸಿಸುವ ಜನರಿಗೆ ಅಗತ್ಯವಿರುವ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಶೇ.80 ಹಣ್ಣುಗಳು, ತರಕಾರಿ ಹಾಗೂ ಜ್ಯೂಸ್ ಮಾರಾಟಕ್ಕೆ ಆದ್ಯತೆ ನೀಡಲಾಗುತ್ತದೆ. ಇದರ ಜತೆ ಕಿಚನ್ ಗಾರ್ಡನ್ಗೆ ಅಗತ್ಯವಿರುವ ಎರೆಹುಳ ಗೊಬ್ಬರ, ಬೀಜ ಮತ್ತಿತರ ಉತ್ನನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಅಂದಹಾಗೆ ಬೆಂಗಳೂರಿನಲ್ಲಿ 290 ಹಾಪ್ಕಾಮ್ಸ್ ಮಳಿಗೆಗಳಿವೆ.
ತೋಟಗಾರಿಕೆ ಉತ್ಪನ್ನಗಳೂ ಲಭ್ಯ
ಇನ್ನು ಮುಂದೆ ಮುಖ್ಯ ಮಳಿಗೆಯಲ್ಲಿ ಎರೆಹುಳು ಗೊಬ್ಬರ, ಹೂವು ಕುಂಡ, ಸಾವಯವ ಗೊಬ್ಬರ, ಕತ್ತರಿ ಸೇರಿದಂತೆ ತಾರಸಿ ತೋಟ ಹಾಗೂ ಕೈ ತೋಟಗಳಿಗೆ ಅಗತ್ಯ ತೋಟ ಗಾರಿಕೆ ಉತ್ಪನ್ನಗಳೂ ದೊರೆಯಲಿವೆ. ಖಾಸಗಿ ಕಂಪನಿಗಳಿಂದ ಇವುಗಳನ್ನು ಖರೀದಿಸಿ ಹಾಪ್ಕಾಮ್ಸ್ ಸಿಬ್ಬಂದಿ ಮಾರಾಟ ಮಾಡಲಿದ್ದಾರೆ. ಗುಣಮಟ್ಟದ ಉತ್ಪನ್ನಗಳು ದೊರಕಲಿವೆ ಎಂದು ಶ್ರೀನಿವಾಸನ್ ಹೇಳಿದರು.
ಮೂಲ: ವಿಶ್ವವಾಣಿ ಸುದ್ದಿಮನೆ ಬೆಂಗಳೂರು
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
