fbpx
News

ಕೋಟಿಗೂಬ್ಬ-2 ದಕ್ಷಿಣ ಭಾರತದ “ಕನ್ನಡಿಗರು” ಹೆಮ್ಮೆಯ ಚಿತ್ರ…

ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ 45 ಕೋಟಿಗೂ ಹೆಚ್ಚು ಬಂಡವಾಳ ಹೂಡಿ ಸೂರಪ್ಪಬಾಬು ನಿಮಾ೯ಣದ ಯಶಸ್ವಿ ನಿದೆ೯ಶಕರಾದ ಕೆ.ಎಸ್ ರವಿಕುಮಾರ್ ನಿದೆ೯ಶನದ ಕೋಟಿಗೂಬ್ಬ-2 ಚಲನಚಿತ್ರ ಕನ್ನಡ ಮತ್ತು ತಮಿಳು ಎರಡೂ ಭಾಷೆಯಲ್ಲಿ ಚಿತೀಕರಣಗೊಂಡಿದ್ದು ಕನ್ನಡಿಗರೇ ಆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಿಚ್ಚ ಅವರು ನಾಯಕ ನಟರಾಗಿ ನಟಿಸಿರುವ ಅಪ್ಪಟ ಮನರಂಜನೆಯ ಚಲನಚಿತ್ರ.

ದಕ್ಷಿಣ ಭಾರತದಲ್ಲಿ ನಮ್ಮದೇ ಆಟ ಎಂದು ನಾವು ಆಡಿದ್ದೆ ಆಟ ಎಂದು ಕನಾ೯ಟಕದತ್ತ ನೋಡಿ ನಗುತ್ತಿದ್ದ ದಕ್ಷಿಣ ಭಾರತದ ತೆಲುಗು, ತಮಿಳು, ಮಲೆಯಾಳಂನ ದೂಡ್ಡ ದೂಡ್ಡ ನಟರಿಗೆ ಸೆಡ್ಡು ಹೂಡೆದಿದ್ದಾರೆ ಸುದೀಪ್ ಎಂದರೆ ತಪ್ಪಾಗಿರಲಿಕ್ಕಿಲ್ಲಾ. ಕನ್ನಡಿಗರು ಮತ್ತು ಕನ್ನಡದ ಚಲನಚಿತ್ರರಂಗ ಎದೆ ಉಬ್ಬಿಸಿ ಹೆಮ್ಮೆಪಡಬೇಕಾದ ದಿನಗಳು ಎನ್ನಬಹುದು… ಏಕೆಂದರೆ ಕನ್ನಡ ಚಲನಚಿತ್ರಗಳಿಗೆ ಮಾಕೆ೯ಟ್ ದೂಡ್ಡದಿಲ್ಲಾ ಎಂದು, ಕನ್ನಡದ ಚಿತ್ರಗಳು ಗೆಲ್ಲುವುದೇ ಕಷ್ಟ ಎಂದು ಅಪಹಾಸ್ಯ ಮಾಡುತ್ತಿದ್ದ ಅನ್ಯರಾಜ್ಯದವರಿಗೆ ಕನ್ನಡಿಗ ಕಿಚ್ಚ ಸುದೀಪ್ ಅಭಿನಯದ ಈ ಕೋಟಿಗೂಬ್ಬ -2 ಕನ್ನಡ ಚಲನಚಿತ್ರ ಟಾಂಗ ಕೊಡುವುದಂತೂ ನಿಜ…

ಸುದೀಪ್ ಅವರ ಮಾಕೆ೯ಟ್ ಈಗ ಅತೀ ದೂಡ್ಡದಾಗಿ ಬೆಳೆದಿದೆ, ತೆಲುಗಿನ ರಾಜಮೌಳಿಯವರ ‘ಈಗ’, ಬಾಹುಬಲಿ ಚಿತ್ರದ ಪುಟ್ಟ ಪಾತ್ರ, ಮತ್ತು ಬಾಲಿವುಡ್ ನ ರಣ್, ಪೂಂಕ್, ರಕ್ತಚರಿತ್ರೆ ಅಂತಹ ಬಾಲಿವುಡ್,ಕಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿರುವ ಕನ್ನಡಿಗ ಕಿಚ್ಚ ಸುದೀಪ್ ಅವರು ತಮ್ಮ ತಾಕತ್ತ್ ಏನು ಎಂಬುದನ್ನು ಭಾರತೀಯ ಚಿತ್ರರಂಗಕ್ಕೆ ತೋರಿಸಿದ್ದಾರೆ, ಅಷ್ಟೇ ಅಲ್ಲದೆ ಅವರ ಅತ್ಯುತ್ತಮವಾದ ನಟನಾ ಚಾತುರ್ಯದ ಮೂಲಕ ಚಿತ್ರಗಳ ನಿಮಾ೯ಪಕರ ಜೋಬನ್ನು ತುಂಬಿಸಿದ್ದು ಅಲ್ಲದೇ, ದಕ್ಷಿಣ ಭಾರತ ಮತ್ತು ದೇಶದಾದ್ಯಂತ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ ಒಬ್ಬರೇ ಒಬ್ಬ ಕನ್ನಡದ ನಟ ಎಂದರೇ’ ಅದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ.

ಸುದೀಪ ಈಗ ಕನ್ನಡ ನಟನಾಗಿ ಉಳಿದಿಲ್ಲ ಎನ್ನುವುದು ಎಷ್ಟು ಸತ್ಯವೋ ದಕ್ಷಿಣ ಭಾರತದ ಅತೀ ಹೆಚ್ಚು ಬೇಡಿಕೆಯಳ್ಳ ಮತ್ತು ಪ್ರಸಿದ್ದ ನಟ ಎನ್ನುವುದು ಅಷ್ಟೇ ಸತ್ಯ… ಸದ್ಯ ಸೌತ್ ಇಂಡಿಯಾದಲ್ಲಿ ಅತೀ ಹೆಚ್ಚು ಸೌಂಡ್ ಮಾಡುತ್ತಿರುವಚಿತ್ರಗಳಲ್ಲಿ ಕೋಟಿಗೂಬ್ಬ-2 ಮತ್ತು ಹೆಬ್ಬುಲಿ ಮೊದಲೆರೆಡು ಸ್ಥಾನದಲ್ಲಿ ನಿಲ್ಲುತ್ತವೆ. ಈ ಎರಡು ಚಿತ್ರಗಳು ಯಶಸ್ವಿಯಾಗಿದ್ದೇ ಆದಲ್ಲಿ ಕಿಚ್ಚ ಸುದೀಪ್ ಅವರ ಈಗಿನ ಸಂಭಾವನೆ 12 ಕೋಟಿಯಿಂದ 20 ಕೋಟಿಗೆ ಜಿಗಿಯುವುದರಲ್ಲಿ ಎರಡು ಮಾತಿಲ್ಲ ಮತ್ತು ಕನ್ನಡದ ಚಲನಚಿತ್ರಗಳಿಗೆ ದಕ್ಷಿಣ ಭಾರತ ಮತ್ತು ಭಾರತದಾದ್ಯಂತ ಒಂದು ದೂಡ್ಡ ಮಾರುಕಟ್ಟೆ ಸೈಷ್ಟಿಯಾಗಲಿದೆ ಕೂಡ. ಕನ್ನಡ ಚಿತ್ರರಂಗ ದೂಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಕೀರ್ತಿಯ ದೊಡ್ಡ ಪಾಲು ಕಿಚ್ಚ ಸುದೀಪ ಅವರಿಗೆ ಸೆರಲಿದೆ.

ಇದೆ ತಿಂಗಳು ಅಗಸ್ಟ್ 12 ರಂದು ತರೆಕಾಣತ್ತಿರುವ ಕನ್ನಡದಲ್ಲಿ ಕೋಟಿಗೂಬ್ಬ-2 ತಮಿಳಿನಲ್ಲಿ “ಮುದಿಂಜ ಇವನ್ಪುಡಿ” ಹೆಸರಲ್ಲಿ ನಿಮಾ೯ಣವಾಗಿರುವ ಚಲನಚಿತ್ರ ಕನಾ೯ಟಕದಲ್ಲಿ 400 ಚಿತ್ರಮಂದಿರಗಳಲ್ಲಿ ಮತ್ತು ತಮಿಳುನಾಡಿನಲ್ಲಿ 300, ಮಲಯಾಳಿ ಭಾಷೆಯಲ್ಲಿ 100 ಮತ್ತು ದೇಶ್ಯಾದ್ಯಂತ ಮತ್ತು ವಿಶ್ವದಾದ್ಯಂತ ಒಂದು ಸಾವಿರ ಚಿತ್ರಮಂದಿರಗಳಲ್ಲಿ ಕೋಟಿಗೂಬ್ಬ -2 ಚಲನಚಿತ್ರ ಬಿಡುಗಡೆಯಾಗಲಿದೆ. ಮುಂಬರುವ ತಿಂಗಳು ತೆಲುಗಿನಲ್ಲಿ ಡಬ್ ಆಗಿ ಆಂಧ್ರಪ್ರದೇಶದ 400 ಚಿತ್ರಮಂದಿರಗಳಲ್ಲಿ ಕೋಟಿಗೂಬ್ಬ 2 ಚಿತ್ರ ಬಿಡುಗಡೆಯಾಗಲಿದೆ, ಅಂದರೆ ಒಟ್ಟು 1400 ಚಿತ್ರಮಂದಿರಗಳಲ್ಲಿ ಆರ್ಭಟಿಸಲಿರುವ ಮೊಟ್ಟ ಮೂದಲ ಕನ್ನಡ ಚಲನಚಿತ್ರ ಈ ಕೋಟಿಗೂಬ್ಬ-2.

ಯಶಸ್ವಿ ಪಥದತ್ತ ಹೆಜ್ಜೆ ಇಟ್ಟಿರುವ ಚಿತ್ರಗಳ ಸಾಲಿಗೆ ಇನ್ನು ಹೆಚ್ಚು ಹೆಚ್ಚು ಕನ್ನಡ ಚಿತ್ರಗಳು ಸೇರ್ಪಡೆಗೊಳ್ಳಲಿ ಎಂದು ಅರೈಸೋಣ. ಕಬಾಲಿ ಗಿಂತ ಕಬೀರ ಒಳ್ಳೆಯ ವಿಮರ್ಶೆ ಪಡೆದ ಮತ್ತು ಗಳಿಕೆಯಲ್ಲಿ ಮುನ್ನುಗುತ್ತಿರುವ ಚಿತ್ರ ಎಂಬುದೇ ಸಾಕ್ಷಿ. ಬನ್ನಿ ಕನ್ನಡ ಚಿತ್ರರಂಗವನ್ನು ಬೆಂಬಲಿಸೋಣ, ಪ್ರತಿಯೊಬ್ಬ ಕನ್ನಡಿಗನೂ ತಪ್ಪದೆ ಚಿತ್ರಮಂದಿರಕ್ಕೆ ಹೋಗಿ ಚಿತ್ರ ವೀಕ್ಷಿಸೋಣ…

-ಗಿರೀಶ್ ಗೌಡ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

ಕೋಟಿಗೂಬ್ಬ-2 ದಕ್ಷಿಣ ಭಾರತದ “ಕನ್ನಡಿಗರು” ಹೆಮ್ಮೆಯ ಚಿತ್ರ…
Click to comment

Leave a Reply

Your email address will not be published.

ನಮ್ಮಲ್ಲಿ ಜನಪ್ರಿಯ

To Top