fbpx
News

ಇದು ನೀರ್ ದೋಸೆ ಅಲ್ಲ, ಮಸಾಲ್ ದೋಸೆ story…

ದೋಸೆ ಸಾಮಾನ್ಯವಾಗಿ ಆಗಿಂದಾಗ್ಗೆ ತಯಾರು ಮಾಡಿಕೊಂಡು ತಿನ್ನಬಹುದಾದಂತಹ ತಿಂಡಿಯಾಗಿದೆ. ದಕ್ಷಿಣ ಭಾರತದ ದೋಸೆಯ ರುಚಿ ವಿಶ್ವದಾದ್ಯಂತ ಪರಿಚಿತವಾಗಿದೆ. ಅಕ್ಕಿ ಮತ್ತು ಉದ್ದಿನ ಬೇಳೆಯಂತಹ ಪದಾರ್ಥಗಳಿಂದ ಮಾಡಲ್ಪಡುವ ಈ ದೋಸೆ ಉಗಮವಾದದ್ದು, ಕರ್ನಾಟಕದ ದೇವಾಲಯಗಳ ನಗರ ಉಡುಪಿಯಲ್ಲಿ. ದೋಸೆಯಲ್ಲಿ ಸುಮಾರು 30ಕ್ಕೂ ಹೆಚ್ಚು ವಿಧಗಳಿವೆ. ಇದನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಈಶ್ವರ ವಿಕಾಸ “ಮುಕುಂದ ಫುಡ್ಸ್” ಎಂಬ ಉದ್ಯಮ ಸ್ಥಾಪಿಸಿದ್ದಾರೆ.

Dosas-Made-by-DosaMatic-300x168 (dose prepared from machine)

ಮುಕುಂದ ಫ‌ುಡ್ಸ್‌ ಸಂಸ್ಥಾಪಕ ಈಶ್ವರ ವಿಕಾಸ ಮಾತನಾಡಿ, ಯಶಸ್ವಿ ಉದ್ಯಮಿ ಸುಹಾಸ ಗೋಪಿನಾಥ ಅವರ ಸಾಧನೆಯಿಂದ ಸ್ಫೂರ್ತಿ ಪಡೆದು ಟೇಬಲ್‌ ಟಾಪ್‌ ದೋಸಾ ಮೇಕಿಂಗ್‌ ಮಶಿನ್‌ “ದೋಸಾಮ್ಯಾಟಿಕ್‌” ವಿನ್ಯಾಸಗೊಳಿಸಿದ್ದೇನೆ. ಇದರಿಂದ ನಿಮಗೆ ಬೇಕಾದ ರೀತಿಯಲ್ಲಿ ನಿಮಗೆ ಬೇಕಾದ ದಪ್ಪ ಮತ್ತು ನಿಮಗೆ ಬೇಕಾದ ಗಾತ್ರದಲ್ಲಿ ದೋಸೆಯನ್ನು ಸಿದ್ಧಪಡಿಸಬಹುದು” ಎಂದು ವಿವರಿಸುತ್ತಾ ಹೋದರು…

ಈಶ್ವರ್ ವಿಕಾಸ್… ಇವರು ಎಸ್.ಆರ್.ಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿ.ಒಮ್ಮೆ ದೆಹಲಿಯ ಒಂದು ರೆಸ್ಟೋರೆಂಟ್‍ಗೆ ಭೇಟಿ ನೀಡಿದಾಗ ದೋಸೆ ಆರ್ಡರ್ ಮಾಡಿದರು. ಆಗ ಅವರು ಇದ್ದಕ್ಕಿದ್ದಂತೆ ಆಶ್ಚರ್ಯಗೊಂಡಿದ್ದನ್ನು ಈಗಲೂ ನೆನೆಸಿಕೊಳ್ಳುತ್ತಾರೆ. ಏಕೆಂದರೆ ಅದರ ಬೆಲೆ 110 ರೂಪಾಯಿಯಾಗಿತ್ತು. ಇದೇ ನಮ್ಮ ದಕ್ಷಿಣ ಭಾರತದ ಹೋಟೆಲ್‍ಗೆ ಹೋಲಿಸಿದರೆ ಅತ್ಯಂತ ದುಬಾರಿಯಾದ್ದನ್ನು ಕಂಡರು. ನಾವು ಇಲ್ಲಿ ಮತ್ತೊಂದನ್ನು ಗಮನಿಸಲೇಬೇಕಾದ ಅಂಶವೊಂದಿದೆ. ಅದೇನೆಂದರೆ ಮೆಕ್‍ಡೊನಾಲ್ಡ್ ನಲ್ಲಿ ಬರ್ಗರ್ ಅಥವಾ ಕೆಎಫ್‍ಸಿಯ ಚಿಕನ್ ದೇಶದ ಯಾವುದೇ ಮೂಲೆಯಲ್ಲಿ ಆರ್ಡರ್ ಮಾಡಿದರೂ ಅದರ ಬೆಲೆ ಒಂದೇ ಆಗಿರುತ್ತದೆ ಎಂದು ಮನವರಿಕೆ ಮಾಡಿಕೊಡುತ್ತಾರೆ ಈಶ್ವರ್.

Eshwar

ceo : Eshwar

ಇದಕ್ಕೆ ಉತ್ತರ ತುಂಬಾ ಸರಳವಾಗಿದೆ ಎನ್ನಬಹುದು ಪಿಜ್ಜಾ, ಬರ್ಗರ್‍ಗಳನ್ನು ರೆಡಿಮೇಡ್ ಆಗಿ ತಯಾರು ಮಾಡುವ ಯಂತ್ರಗಳು ಸಾಕಷ್ಟು ಬಂದಿವೆ. ಆದರೆ ಭಾರತೀಯ ತಿಂಡಿಗಳಾದ ದೋಸೆ ಮತ್ತು ಪೂರಿಯಂತಹ ತಿಂಡಿಗಳ ಯಂತ್ರಗಳಿಂದಲ್ಲದೇ ಮಾನವ ನಿರ್ಮಿತವಾದ ತಿಂಡಿಗಳು ಎಂದು ಹೇಳಬಹುದು. ಇದನ್ನು ಬಂಡವಾಳ ಮಾಡಿಕೊಂಡು ಎಷ್ಟೋ ಹೋಟೆಲ್ ಮಂದಿ ಸುಲಿಗೆ ಮಾಡುತ್ತ ಇರುವುದು ಅರಿತ ಈಶ್ವರ್ 2011ರಲ್ಲಿ ತನ್ನ ಗೆಳೆಯ ಸುದೀಪ್ ಸಾಬಟ್‍ರೊಂದಿಗೆ ಕೂಡಿ ಬೆರಳ ತುದಿಯಿಂದ ಬಟನ್ ಪ್ರೆಸ್ ಮಾಡಿದರೆ ದೋಸೆ ಉತ್ಪಾದನೆಯಾಗುವಂತಹ ಮಷೀನನ್ನು ತಯಾರು ಮಾಡುವತ್ತ ಗಮನ ಹರಿಸಿದ್ರು. ಮೇ 2012ರಲ್ಲಿ ಒಂದು ಕಂಪೆನಿಯನ್ನು ತೆರೆಯಲು ಮುಂದಾದ ಆ ಇಬ್ಬರು ಯುವಕರು ತೃತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ಈ ಯೋಜನೆಯನ್ನು ಇಂಡಿಯನ್ ಏಂಜಲ್ ನೆಟ್‍ವರ್ಕ್‍ನೊಂದಿಗೆ ಹಂಚಿಕೊಂಡರು. ಅವರು ಇನ್‍ಕ್ಯೂಬೇಟರ್(ಉಷ್ಣಪೋಷಕ ಯಂತ್ರ)ನ ಸಹಾಯದೊಂದಿಗೆ ತಮ್ಮ ದೋಸಾಮ್ಯಾಟಿಕ್ ಉತ್ಪನ್ನವನ್ನು ತಯಾರಿಸಲು 2013ರಲ್ಲಿ ಕಂಪೆನಿಯ ಸಹಕಾರವನ್ನು ಬಯಸಿದರು. ಈ ಯುವಕರನ್ನ ಬೆನ್ನು ತಟ್ಟಿ ಇಂಡಿಯನ್ ಏಂಜಲ್ ನೆಟ್‍ವರ್ಕ್, ಮುಕುಂದಾ ಫುಡ್ಸ್‍ನ ಮಾಲೀಕರಾದ ಹರಿ ಬಾಲಸುಬ್ರಮಣ್ಯಂ ಮತ್ತು ಪಿ ಗೋಪಿನಾಥರೊಂದಿಗೆ ಅಕ್ಟೋಬರ್2013ರಲ್ಲಿ ಕೈಜೋಡಿಸಿದರು.

ಈ ಮಷೀನು ಹೇಗೆ ಕಾರ್ಯನಿರ್ವಹಿಸುತ್ತದೆ.

ಇಲ್ಲಿ ದೋಸೆ ಮಾಡಬೇಕೆಂದರೆ ಒಂದು ಕಂಟೈನರ್‍ನಲ್ಲಿ ದೋಸೆ ಹಿಟ್ಟು ಮತ್ತೊಂದರಲ್ಲಿ ಎಣ್ಣೆಯನ್ನು ಸೇರಿಸಬೇಕು. ಅದಾದ ನಂತರ ನಮಗೆ ಯಾವ ತರಹ ದೋಸೆ ಬೇಕೋ ಅಂದರೆ ತೆಳು, ಮಂದ, ಕ್ರಿಸ್ಪಿ, ಖಾಲಿ ದೋಸೆ ಇದರಲ್ಲಿ ಯಾವುದು ಬೇಕೋ ಅದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಬಟನ್ ಪ್ರೆಸ್ ಮಾಡಿದ ಮೇಲೆ ದೋಸೆ ಹಿಟ್ಟು ಸುತ್ತಲೂ ಹರಡಿ, ಎಷ್ಟು ಬೇಕೋ ಅಷ್ಟು ಎಣ್ಣೆಯೊಂದಿಗೆ ಕೇವಲ 60 ಸೆಕೆಂಡ್‍ಗಳಲ್ಲಿ ದೋಸೆ ತಯಾರಾಗುತ್ತದೆ. ಆ ನಂತರ ರುಚಿಯಾದ ಶುಚಿಯಾದ ದೋಸೆಯನ್ನು ಸವಿಯಬಹುದು.

Team+Assembly-300x150

ಉದ್ದಿಮೆ ಮತ್ತು ಮಾರುಕಟ್ಟೆಯ ವ್ಯವಸ್ಥೆ

ಇಂದು ಭಾರತೀಯ ಆಹಾರ ಉದ್ದಿಮೆಯು ಶೇ. 32ರಷ್ಟು ಬೆಳವಣಿಗೆಯನ್ನು ಹೊಂದಿದೆ. ಸುಮಾರು 121 ಬಿಲಿಯನ್ ಡಾಲರುಗಳ ವ್ಯವಹಾರ ದೇಶದಲ್ಲಿ ನಡೆಯುತ್ತಿದೆ. ಆಹಾರ ಉದ್ದಿಮೆ ಅತಿ ದೊಡ್ಡ ಉದ್ದಿಮೆಗಳಲ್ಲಿ ಒಂದಾಗಿದೆ ಹಾಗೂ ಇದರ ಉತ್ಪಾದನೆ, ಬಳಕೆ ಮತ್ತು ರಫ್ತು ವ್ಯವಹಾರದಲ್ಲಿ 5ನೇ ರ್ಯಾಂಕ್ ಗಳಿಸಿದೆ. ಆಹಾರ ಉದ್ದಿಮೆಯಲ್ಲಿ ನೇರವಾಗಿ ಸುಮಾರು 13 ಮಿಲಿಯನ್ ಜನರಿಗೆ ಉದ್ಯೋಗಾವಕಾಶ ಹಾಗೂ 35 ಮಿಲಿಯನ್ ಪರೋಕ್ಷವಾಗಿ ಉದ್ಯೋಗವನ್ನು ದೊರಕಿಸಿಕೊಟ್ಟಿದೆ ಎಂದು ಹೇಳಬಹುದು. ಒಟ್ಟಾರೆ ಬೆಳವಣಿಗೆಯಲ್ಲಿ ಶೇ.14 ರಷ್ಟು ಉತ್ಪನ್ನಗಳು ಆಹಾರ ಉದ್ದಿಮೆಯಿಂದಲೇ ಬರುತ್ತಿದೆ. ಸುಮಾರು ಶೇ.13ರಷ್ಟು ರಫ್ತು ಹಾಗೂ ಶೇ. 6 ರಷ್ಟು ಬಂಡವಾಳವನ್ನು ಇದೇ ಉದ್ದಿಮೆಗಳಿಗೆ ಹೂಡಲಾಗುತ್ತಿದೆ. ಹೀಗೇ ಮುಂದುವರೆದರೆ ಶೇ. 10 ವಾರ್ಷಿಕ ಬೆಳವಣಿಗೆ ಕಂಡು 2015ರ ಕೊನೆಯ ಹಂತಕ್ಕೆ 194 ಬಿಲಿಯನ್ ಡಾಲರುಗಳ ವ್ಯವಹಾರ ನಡೆಯುವ ಸಂಭವವಿದೆ.

ದೋಸಾಮ್ಯಾಟಿಕ್ ಉದ್ದಿಮೆ ಸಣ್ಣ ರೆಸ್ಟೋರೆಂಟ್‍ಗಳಲ್ಲಿ ಬಳಸಿದಲ್ಲಿ ಹೆಚ್ಚಿನ ಮಾನವ ಸಂಪನ್ಮೂಲವಿಲ್ಲದೆ ಕೇವಲ ಮೆಶೀನಿನಿಂದಲೇ ಸುಮಾರು 500 ದೋಸೆಗಳನ್ನು ತಯಾರಿಸಬಹುದಾಗಿದೆ.

ಮುಂದಿನ ಗುರಿ:

• ಈ ಸಾಲಿನಲ್ಲಿ 500 ದೋಸಾಮ್ಯಾಟಿಕ್ ಮೆಷೀನುಗಳನ್ನು ರೂ. 1.1 – 1.5 ಲಕ್ಷದವರೆಗಿನ ಅಂದಾಜಿನಂತೆ ಮಾರಾಟ ಮಾಡುವುದು.

• ಬೆಂಗಳೂರು, ಕೊಲ್ಕತ್ತಾ, ಮುಂಬೈ ಮಹಾನಗರಳಲ್ಲಿ ಸರ್ವೀಸ್ ಸೆಂಟರ್‍ಗಳ ಸ್ಥಾಪನೆ.

• ದೊಡ್ಡ ದೊಡ್ಡ ತಯಾರಿಕಾ ಕಂಪೆನಿಗಳಂತೆ ಇದರ ಉತ್ಪಾದನಾ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ಳುವುದು.

• ಮತ್ತಷ್ಟು ಡಿಸೈನ್‍ಗಳನ್ನು ವೃದ್ಧಿಗೊಳಿಸಿ ಉತ್ಪನ್ನಗಳ ತಯಾರಿಕೆ.

“ಮುಕುಂದ ಫುಡ್ಸ್”ನ ಮೂಲಕ ಮೊದಲ್ಗೊಂಡ ನಮ್ಮ ಸ್ಟಾರ್ಟ್ಅಪ್ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಇದರ ಪರಿಚಯ ಮತ್ತು ಎಲ್ಲಾ ಕಡೆಗಳಲ್ಲೂ ನಮ್ಮ ಉತ್ಪನ್ನಗಳು ಸಿಗುವಂತೆ ಮಾಡಬೇಕಾಗಿರುವುದು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಎಂದು ಹರ್ಷ ವ್ಯಕ್ತಪಡಿಸುತ್ತಾರೆ.

ಇಂಜಿನಿಯರಿಂಗ್ ಮಾಡಿ ಸಾಫ್ಟ್ ವೇರ್ ಇಂಜಿನಿಯರ್ ಅನ್ನುಸ್ಕೊಂಡ್ರೆ ಲೈಫ್ ಮುಗಿತು ಸೆಟ್ಟ್ಲು ಅಂತ ಯೋಚಿಸೋ ಮಂದಿಗೆ ಈಶ್ವರ್ ಸ್ಪೂರ್ತಿಯಾಗಿ ನಿಲ್ಲಲಿ.

ಅನುವಾದಕರು – ಬಾಲು

ಲೇಖಕರು – ಅಬಾಷ್ ಕುಮಾರ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

ಇದು ನೀರ್ ದೋಸೆ ಅಲ್ಲ, ಮಸಾಲ್ ದೋಸೆ story…
Click to comment

Leave a Reply

Your email address will not be published.

ನಮ್ಮಲ್ಲಿ ಜನಪ್ರಿಯ

To Top