fbpx
Health

ಕೃತಕವಾಗಿ ಮಾಗಿದ ಹಣ್ಣು ಬೇಕೇ?

ಕೃತಕ ಮಾಗಿದ ಹಣ್ಣು ತರುವುದು ಹುಣ್ಣು

ಹಣ್ಣುಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳಿ, ಪೌಷ್ಟೀಕಾಂಶಗಳು ಹಾಗು ಜೀವಸತ್ವಗಳ ಅಗರವಾಗಿರುವ ಹಣ್ಣುಗಳನ್ನು ಋತುಮಾನಕ್ಕನುಗುಣವಾಗಿ ತಿನ್ನಲು ಏಲ್ಲಾರಿಗೂ ಇಷ್ಟ, ಇನ್ನೇನು ಮಾವಿನ ಹಣ್ಣಿನ ಸಮಯ ಆರಂಭವಾಗುತ್ತಿದೆ, ಮಾವಿನ ಹಣ್ಣಿನ ಸೀಸನ್ ಮುಗಿಯುವವರೆಗೂ ಕೆಲವರ ಮನೆಯಲ್ಲಿ ಮಾವಿನ ಹಣ್ಣಿನದೇ ದರ್ಬಾರ್, ಅದರೆ ನೀವು ಮಾವಿನ ಹಣ್ಣುಗಳನ್ನು ತಿನ್ನುವಾಗ ಓಮ್ಮೆಯಾದರೂ ಯೊಚಿಸಿದ್ದಿರಾ ನಾವು ತಿನ್ನುತ್ತಿರುವ ಮಾವು, ಬಾಳೇ ಪಪ್ಪಾಯ, ದ್ರಾಕ್ಷಿ , ಸೇಬುಹಣ್ಣು ಹಾಗೂ ಟೋಮೇಟೋ ಏಷ್ಟು ಸುರಕ್ಷಿತ ಎಂದು? ಇದೇನು ಹೀಗೆ ಕೇಳುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತಿರಬಹುದು. ನ್ಯೆಸರ್ಗಿಕವಾಗಿ ಮಾಗಿದ ಮೇಲಿನ ಹಣ್ಣುಗಳು ನಿಮಗೆ ಸಿಗುವುದು ದುರ್ಲಬ, ಬೇಗ ಮಾಗಿದರೆ, ಬೇಗ ಮಾರಬಹುದು ಹೆಚ್ಚು ಹಣ ಸಂಪಾದಿಸಬಹುದು ಎಂಬ ವ್ಯಾಪಾರಿ ಮನೋಭಾವ ಗ್ರಾಹಕರ ಅರೋಗ್ಯಕ್ಕೆ ಕುತ್ತುತರುತ್ತಿದೆ, ಬಾಳೆ ಸೇಬುಹಣ್ಣಿಗೆ ಹೋಲಿಸಿದರೆ ಸಾಮಾನ್ಯವಾಗಿ ಮಾವಿನ ಹಣ್ಣನ್ನು ತಿನ್ನುವುದು ಜಾಸ್ತಿ, ಈ ಮಾವಿನ ಸೀಸನ್‍ನಲ್ಲೇ ಈ ರಾಸಾಯನಿಕಗಳ ಉಪಯೋಗ ಜಾಸ್ತಿ!

maxresdefault

ಕೃತಕವಾಗಿ ಮಾಗಿಸಲು ಬಳಸುವ ರಾಸಾಯನಿಕಗಳಾವುವು?ಕ್ಯಾಲ್ಸಿಯಂ ಕಾಬ್ರ್ಯೆಡ್, ಅಸಿಟಲೀನ್,ಇಥಿಲಿನ್,ಪ್ರೋಪಿಲಿನ್ ಗ್ಲೈಕಾಲ್ ಹಾಗೂ ಇಥೆನಾಲ್ ಗಳನ್ನು ಬಳಸುತ್ತಾರಾದರೂ ಹೆಚ್ಚಾಗಿ ಬಳಕೆಯಾಗುವುದು ಕ್ಯಾಲ್ಸಿಯಂ ಕಾಬ್ರ್ಯೆಡ್,ಈ ರಾಸಾಯನಿಕವನ್ನು ಹಲವಾರು ದೇಶಗಳು ನಿಷೇದಿಸಿದೆಯಾದರೂ ಭಾರತ, ಪಾಕಿಸ್ತಾನ್, ನೇಪಾಳ್ ಹಾಗು ಬಾಂಗ್ಲಾದೇಶಗಳಲ್ಲಿ ಮುಕ್ತವಾಗಿ ಉಪಯೋಗಿಸಲಾಗುತ್ತದೆ,ಹಣ್ಣುಗಳನ್ನು ಬೇಗ ಮಾಗಿಸುವುದರಲ್ಲಿ ಕ್ಯಾಲ್ಸಿಯಂ ಕಾಬ್ರ್ಯೆಡ್ ಎತ್ತಿದಕ್ಯೆ, ನ್ಯೆಸರ್ಗಿಕವಾಗಿ ಹಣ್ಣಾಗಲು ಸಾಮಾನ್ಯವಾಗಿ ಹತ್ತರಿಂದ ಹನ್ನೆರಡು ದಿನ ಬೇಕು, ಅದರೆ ಈ ರಾಸಾಯನಿಕ 6-8 ದಿನದಲ್ಲಿ ಹಣ್ಣನ್ನು ಮಾಗಿಸುತ್ತದೆ, ಬಲಿತ ಹಸುರಾಗಿರುವ ಹಣ್ಣುಗಳನ್ನು ಕಿತ್ತಿ ಅದಕ್ಕೆ ಕ್ಯಾಲ್ಸಿಯಂ ಕಾಬ್ರ್ಯೆಡ್ ಉದುರಿಸಿ ಹಣ್ಣಾಗಿಸುತ್ತಾರೆ, ರಾಸಾಯನಿಕ ಕೃತಕವಾಗಿ ಹೇಗೆ ಹಣ್ನನ್ನು ಮಾಗಿಸುತ್ತದೆ? ಹಣ್ಣು ನ್ಯೆಸರ್ಗಿಕವಾಗಿ ಮಾಗುವಾಗ ಅದರಲ್ಲಿರುವ ಪಿಷ್ಟ ಸಕ್ಕರೆಯಾಗಿಪರಿವರ್ತನೆಯಾಗುತ್ತದೆ, ಈ ಕ್ರಿಯೆ ನೆಡೆಯುವಾಗ ಮಾವಿನಹಣ್ಣು ಬಾಳೆಹಣ್ಣಿನ ಸಿಪ್ಪೆ ಹಳದಿಗೆ ತಿರುಗಿದರೆ, ಟೋಮೇಟೊ ಮತ್ತು ಸೇಬಿನಲ್ಲಿ ಕೆಂಪುಬಣ್ಣಕ್ಕೆ ತಿರುಗುತ್ತದೆ, ಈ ಕ್ರಿಯೆಗೆ ಹಣ್ಣುಗಳಲ್ಲಿ ನ್ಯೆಸರ್ಗಿಕವಾಗಿರುವ ಇಥೆಲಿನ್ ಸಹಾಯಮಾಡುತ್ತದೆ, ಈ ನ್ಯೆಸರ್ಗಿಕ ಕ್ರಿಯೆ 10-15 ದಿನ ತೆಗೆದುಕೊಳ್ಳುತ್ತದೆ,ಈ ಇಥೆಲಿನ್‍ನನ್ನು ಕೃತಕವಾಗಿ ಹಣ್ಣುಗಳಮೇಲೆ ಹಾಕಿದರೆ? ಅದನ್ನೇ ಈಗ ವ್ಯಾಪಾರಿಗಳು ಮಾಡುತ್ತಿರುವುದು. ಬಲಿತ ಕಾಯಿಗಳನ್ನು ಕಿತ್ತು ಮರದ ಪೆಟ್ಟಿಗೆಗಳಲ್ಲಿ ಹುಲ್ಲನ್ನು ಹಾಕಿ ಅದನ್ನು ಒಂದರಮೇಲೊಂದರಂತೆ ಇಟ್ಟು ಕೆಳಗೆ ಕೃತಕ ಇಥೆಲಿನ್ ಅಥವಾ ಅಸಿಟಲಿನ ಅನಿಲವನ್ನು ಹಾಯಿಸುತ್ತಾರೆ, ಇಲ್ಲದ್ದಿದ್ದರೆ ಅದರ ಮೇಲೆ ಕ್ಯಾಲ್ಸಿಯಂ ಕಾಬ್ರ್ಯೆಡ್ ಪುಡಿಯನ್ನು ಉದುರಿಸುತಾರೆ, ಇದು ಕಾಯಿಯಲ್ಲಿರುವ ತೇವಾಂಶದೊಂದಿಗೆ ವರ್ತಿಸಿದಾಗ ಅಸಿಟಲಿನ್ ಅಗಿಪರಿವರ್ತನೆಯಾಗುತ್ತದೆ ಹಣ್ಣನ್ನು ಬೇಗ ಮಾಗುವಂತೆ ಪ್ರೇರೆಪಿಸುತ್ತದೆ.

images

ಏನಿದು ಕ್ಯಾಲ್ಸಿಯಂ ಕಾಬ್ರ್ಯೆಡ್: ಇದೊಂದು ರಾಸಾಯನಿಕವಾಗಿದ್ದು ಇದನ್ನು ಕ್ಯಾಲ್ಸಿಯಂ ಸ್ಯೆನಮ್ಯೆಡ್ ತಯಾರಿಕೆಯಲ್ಲಿ, ಹಾಗೂ ಈ ಕ್ಯಾಲ್ಸಿಯಂ ಸ್ಯೆನಮ್ಯೆಡನ್ನು ರಸಗೋಬ್ಬರಗಳ ತಯಾರಿಕೆಯಲ್ಲಿ ಕಚ್ಚಾವಸ್ತುವಾಗಿ ಬಳಸುತ್ತಾರೆ, ಈ ಕ್ಯಾಲ್ಸಿಯಂ ಕಾಬ್ರ್ಯೆಡನ್ನು ಲೋಹಗಳ ವೆಲ್ಡಿಂಗ್ ಪ್ರಕ್ರಿಯೆಯಲ್ಲಿ ಸಹ ಬಳಸುತ್ತಾರೆ, ಕ್ಯಾಲ್ಸಿಯಂ ಕಾಬ್ರ್ಯೆಡನಲ್ಲಿ ಅರ್ಸೆನಿಕ್ ಹಾಗೂ ಪಾಸ್ಪರಸ್ (ರಂಜಕ) ಅಂಶ ಇದ್ದು ಇದು ಮಾರಕವಾಗಿರುತ್ತದೆ, ಆಡ್ಡ ಪರಿಣಾಮಗಳೇನು? ಹೀಗೆ ಕೃತಕವಾಗಿ ಮಾಗಿಸಿದ ಹಣ್ಣುಗಳನ್ನು ತಿನ್ನುತ್ತಿದ್ದರೆ ಸ್ವಲ್ಪ ಪ್ರಾಮಾಣದಲ್ಲಿ ಕ್ಯಾಲ್ಸಿಯಂ ಕಾಬ್ರ್ಯೇಡ್ ನಲ್ಲಿರುವ ರಂಜಕ ಹಾಗೂ ಅರ್ಸೆನಿಕ್ ಅಂಶದಿಂದ ಮೊದಲನೆಯದಾಗಿ ವಾಂತಿ, ಬೇದಿ, ಕೆಲವೊಮ್ಮೆ ರಕ್ತ ಮಿಶ್ರಿತ ಅಮಶಂಕೆ, ಹೊಟ್ಟೆ ಹಾಗೂ ಎದೆಯ ಭಾಗದಲ್ಲಿ ಉರಿ, ಅತಿಯಾದ ಬಾಯಾರಿಕೆ, ಸುಸ್ತು, ಅಹಾರ ಸೇವಿಸಲು ಕಷ್ಟವಾಗುವುದು, ಕಣ್ಣುರಿಯಲ್ಲದೇ ಕಣ್ಣಿಗೆ ಖಾಯಂ ತೊಂದರೆಯಾಗಬಹುದು,ಇದಲ್ಲದೇ ಗಂಟಲು ನೋವು ಕೆಮ್ಮು ಉಸಿರಾಟಕ್ಕೂ ತೊಂದರೆಯಾಗುತ್ತದೆ,ಈ ಮೇಲಿನ ಲಕ್ಷಣಗಳು ಕಂಡುಬಂದಲ್ಲಿ ಹಿಂದಿನ ದಿನ ಯಾವುದಾದರೂ ಹಣ್ಣು ಸೇವಿಸಿದ್ದರೆ ತಕ್ಷಣ ವ್ಯೆದ್ಯರನ್ನು ಭೇಟಿಮಾಡಿ.

more-profit-02

ಇನ್ನು ನಿರಂತರವಾಗಿ ಈ ಕೃತಕ ಮಾಗಿದ ಹಣ್ಣುಗಳನ್ನು ತಿನ್ನುತ್ತಿದ್ದರೆ ಈ ರಾಸಾಯನಿಕಗಳು ನಿಮ್ಮ ದೇಹದಲ್ಲಿ ಹೆಚ್ಚಾಗಿ ಶೇಕರಣೆಯಾದರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತದೆ, ಈ ರಾಸಾಯನಿಕ ಕ್ಷಾರಗುಣವಾಗಿರುವುದರಿಂದ ಕರುಳಿನ ಸ್ನಾಯುಗಳಿಗೆ ಹಾನಿಯುಂಟುಮಾಡಿ ಕರುಳಿನ ಹುಣ್ಣಿಗೆ ಕಾರಣವಾಗುತ್ತದೆ,
ಕ್ಯಾಲ್ಸಿಯಂ ಕಾಬ್ರ್ಯೆಡ್ ನಿಂದ ಹೊರಬರುವ ಅಸಿಟಲಿನ್ ಅನಿಲ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಎಂದು 2005ರಲ್ಲಿ ಟರ್ಕಿ ವಿಶ್ವವಿದ್ಯಾಲಯದ ವಿಜ್ನಾನಿಗಳು ಸಂಶೋಧನೆಯಿಂದ ದೃಡಪಡಿಸಿದ್ದಾರೆ. ತಲೆನೋವು, ತಲೆಸುತ್ತು, ಯಾವುದೇ ಕೆಲಸದ ಮೇಲೆ ಮನಸ್ಸನ್ನು ಕೇಂದ್ರಿಕರಿಸಲು ಸಾಧ್ಯವಾಗದೆ ಇರುವುದು, ಗಲಿಬಿಲಿಯಗುವುದು ಹಾಗೂ ನಡುಕವನ್ನು ತರಿಸುತ್ತದೆ ಎಂದು ಹೇಳಿದ್ದಾರೆ, ನಿರಂತರವಾಗಿ ಈ ರಾಸಾಯನಿಕಗಳು ದೇಹವನ್ನು ಸೇರುತ್ತಿದ್ದರೆ ಇದು ಕ್ಯಾನ್ಸರ ಕಾರಕವಾಗಬಹುದು ಎಂದು ಸಾಬೀತಾಗಿದೆ, ಈ ರಾಸಾಯನಿಕಗಳು ನಿರಂತರವಾಗಿ ಗರ್ಭಿಣಿಯರ ದೇಹವನ್ನು ಸೇರಿದರೆ ಗರ್ಭಪಾತವಾಗುವ ಸಂಭವ ಇದೆಯೆಂದು ಮತ್ತು ಹುಟ್ಟುವ ಮಗುವಿನ ನರಮಂಡಲದ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಂದು ಸಂಶೋಧನೆ ಹೇಳುತ್ತದೆ, ಅರ್ಸೆನಿಕ್, ಫಾಸ್ಪರಸ್ ಹಾಗೂ ಅಸಿಟಲಿನ್ ಅನಿಲಗಳು ನಮ್ಮ ದೇಹಕ್ಕೆ ನಿರಂತರವಾಗಿ ಸೇರುತ್ತಿದ್ದರೆ ನಮ್ಮ ಅಂಗಾಂಗಗಳಿಗೆ ತೊಂದರೆಯಾಗಬಹುದಲ್ಲದೇ ತಲೆನೋವು, ತಲೆಸುತ್ತು, ನಿದ್ದೆಬಾರದಿರುವುದು, ಮಾನಸಿಕ ಗಲಿಬಿಲಿ, ನೆನಪಿನ ಶಕ್ತಿ ಕಡಿಮೆಯಾಗುವುದು ಹಾಗೂ ಅಪಸ್ಮಾರದಂತಹ ಖಾಯಿಲೆಗಳಿಗೂ ನಾಂದಿ ಹಾಡಬಹುದು.

mango ripening

ಕೃತಕ ಮಾಗಿದ ಹಣ್ಣನ್ನು ಕಂಡುಹಿಡಿಯುವುದು ಹೇಗೆ? ಕೃತಕ ಮಾಗಿದ ಹಣ್ಣುಗಳ ಬಣ್ಣ ಒಂದೆಸಮನಾಗಿ ಇರುವುದಿಲ್ಲಾ, ಉದಾಹರಣೆಗೆ ಮಾವಿನ ಹಣ್ಣನ್ನೆ ತೆಗೆದುಕೊಳ್ಳಿ, ಹಳದಿ ಹಸಿರು ಮಿಶ್ರಿತ ಇದ್ದರೆ ಅದು ಕೃತಕವಾಗಿ ಮಾಗಿದ್ದು, ರಾಸಾಯನಿಕ ಪೂರ್ತಿ ಹಣ್ಣನ್ನು ಅವರಿಸದಿದ್ದಾಗ ಅಂತಹ ಜಾಗದಲ್ಲಿ ಹಸಿರಾಗಿರುತ್ತದೆ, ಎರಡನೆಯದಾಗಿ ಅದಕ್ಕೆ ನ್ಯೆಸರ್ಗಿಕ ಸಿಹಿ ಮಿಶ್ರಿತ ವಾಸನೆ ಸಹ ಬರುವುದಿಲ್ಲಾ! ಹಣ್ಣು ಹುಳಿಮಿಶ್ರಿತ ಸಿಹಿಯಿಂದ ಕೂಡಿರುತ್ತದೆ, ನೀರಿನ ಬಕೆಟ್‍ನಲ್ಲಿ ಹಾಕಿದಾಗ ನೈಸರ್ಗಿಕವಾಗಿ ಮಾಗಿದ ಹಣ್ಣು ಮುಳುಗುತ್ತದೆ, ಕೃತಕ ಮಾಗಿದ ಹಣ್ಣು ತೆಲುತ್ತದೆ, ಅಲ್ಲದೇ ತೇವಾಂಶ ಇರದ ಕಾರಣ ಹಣ್ಣಿನಲ್ಲಿ ರಸ ಹೆಚ್ಚಾಗಿರುವುದಿಲ್ಲಾ!ಈ ರಾಸಾಯನಿಕಗಳನ್ನು ಪಪ್ಪಾಯಿಯಲ್ಲದೆ ಟಮೇಟೋವನ್ನು ಮಾಗಿಸುವುದಕ್ಕೂ ಉಪಯೋಗಿಸುತ್ತಾರೆ, ಹಾಗಾಗಿ ಮನೆಗೆ ತಂದ ಹಣ್ಣು ತರಕಾರಿಗಳನ್ನು ಕನಿಷ್ಟಪಕ್ಷ 2-3 ನಿಮಿಷಗಳಾದರು ನಲ್ಲಿನೀರಿನಲ್ಲಿ ತೊಳೆಯಬೇಕು. ಹಣ್ಣು ಖರೀದಿ ಮಾಡಲು ಹೋದಾಗ ಹೆಚ್ಚು ವಾಸನೆಯುಕ್ತ ಹಣ್ಣನ್ನೆ ಖರೀದಿ ಮಾಡಿ, ಪೂರ್ತಿಯಾಗಿ ಒಂದೇ ಬಣ್ಣವಿರುವ ಹಣ್ಣನ್ನು ಖರೀದಿಸಿ, ಹೆಚ್ಚು ಹಣ್ಣುಗಳನ್ನು ಮಾರಾಟಮಾಡಬೇಕೆಂಬ ಉದ್ದೇಶದಿಂದ ವ್ಯಾಪಾರಿಗಳು ರಾಸಾಯನಿಕ ಬಳಸಿ ಹಣ್ಣನ್ನು ಮಾಗಿಸುತ್ತಾರೆ, ಈ ರಾಸಾಯನಿಕಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಏಂದು ಗೊತ್ತಿದ್ದರೂ ಸರ್ಕಾರ ಇವರೆ ಮೇಲೆ ಕ್ರಮ ಕ್ಯೆಗೊಳ್ಳುವುದಿಲ್ಲಾ, ಯಾವುದಕ್ಕೂ ಗ್ರಾಹಕರೆ ಜಾಗೃತರಾಗಬೇಕು, ಹಣ್ಣು ಕೋಳ್ಳುವ ಮುನ್ನ ಒಮ್ಮೆ ಯೋಚಿಸಿ!

ಪ್ರಕಾಶ್.ಕೆ.ನಾಡಿಗ್,ಶಿವಮೊಗ್ಗ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top