fbpx
Health

ಭಾರತೀಯರಿಗೆ ಅತ್ಯಂತ ಪ್ರಿಯವಾದ ‘ಟೀ’ ಬಗ್ಗೆ ಒಂದಿಷ್ಟು ಮಾಹಿತಿ 

ನಾವು ಪ್ರತಿ ದಿನ ಸೇವಿಸೊ ‘ಟೀ ‘ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

© fastcompany

ಭಾರತೀಯರಿಗೆ ಚಹಾ ಅತ್ಯಂತ ಪ್ರಿಯವಾದದ್ದು. ಒಂದು ಸಮೀಕ್ಷೆ ಪ್ರಕಾರ ಶೇಕಡ ತೊಂಬತ್ತಕ್ಕೂ ಹೆಚ್ಚು ಭಾರತೀಯರು ದಿನಕ್ಕೆ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ. 700ಕ್ಕೂ ಹೆಚ್ಚಿನ ರಾಸಾಯನಿಕ ವಸ್ತುಗಳನ್ನು ಚಹಾ ಎಲೆಗಳು ಒಳಗೊಂಡಿದ್ದು, ಅವುಗಳ ಪೈಕಿ ಮಾನವನ ಆರೋಗ್ಯಕ್ಕೆ ತೀರಾ ಸನಿಹವಾಗಿ ಸಂಬಂಧಿಸಿರುವ ಸಂಯುಕ್ತಗಳೆಂದರೆ, ಫ್ಲೇವನಾಯ್ಡ್‌‌ಗಳು, ಅಮೈನೋ ಆಮ್ಲಗಳು, ವಿಟಮಿನ್‌ಗಳು (C, E ಮತ್ತು K), ಕೆಫೀನ್‌ ಮತ್ತು ಪಾಲಿಸ್ಯಾಕರೈಡ್‌ಗಳು. ಎಲ್ಲಕ್ಕಿಂತ ಮಿಗಿಲಾಗಿ, ಮಾನವ ಶರೀರದ ಜೀವಕೋಶದ-ಮಧ್ಯಸ್ಥಿಕೆಯ ಪ್ರತಿರಕ್ಷಣಾ ಕಾರ್ಯದೊಂದಿಗೆ ಚಹಾ ಸೇವನೆಯು ಸಂಬಂಧ ಹೊಂದಿದೆ ಎಂದು ಇತ್ತೀಚೆಗೆ ಸಾಬೀತುಮಾಡಲ್ಪಟ್ಟಿದೆ.

ಕರುಳಿಗೆ ಸಂಬಂಧಿಸಿದ ಪ್ರಯೋಜನಕಾರಿ ಸೂಕ್ಷ್ಮಸಸ್ಯವರ್ಗವನ್ನು ಸುಧಾರಿಸುವಲ್ಲಿ ಚಹಾವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲ, ಕರುಳಿನ ಅಸಮರ್ಪಕತೆಗಳಿಗೆ ಪ್ರತಿಯಾಗಿ ಪ್ರತಿರಕ್ಷಕ ಗುಣವನ್ನು ಒದಗಿಸುವಲ್ಲಿ ಹಾಗೂ ಉತ್ಕರ್ಷಣಶೀಲ ಹಾನಿಯಿಂದ ಜೀವಕೋಶದ ಒಳಪೊರೆಗಳನ್ನು ರಕ್ಷಿಸುವಲ್ಲಿಯೂ ಸಹ ಚಹಾವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚಹಾದಲ್ಲಿ ಫ್ಲೂರೀನ್‌ ಅಂಶವು ಇರುತ್ತದೆಯಾದ್ದರಿಂದ, ಇದು ಹಲ್ಲಿನ ಸವೆತವನ್ನೂ ತಡೆಗಟ್ಟುತ್ತದೆ.

ರಕ್ತದೊತ್ತಡವನ್ನು, ಮೇಧಸ್ಸನ್ನು ಕುಗ್ಗಿಸುವ ಚಟುವಟಿಕೆಯನ್ನು ಸಾಮಾನ್ಯ ಸ್ಥಿತಿಗೆ ತರುವಲ್ಲಿ, ರಕ್ತದ-ಗ್ಲೂಕೋಸ್‌ನ ಚಟುವಟಿಕೆಯನ್ನು ತಗ್ಗಿಸುವ ಮೂಲಕ ಪರಿಧಮನಿಯ ಹೃದ್ರೋಗ ಹಾಗೂ ಮಧುಮೇಹವನ್ನು ತಡೆಗಟ್ಟವಲ್ಲಿ ಚಹಾದ ಪಾತ್ರವು ಉತ್ತಮ ರೀತಿಯಲ್ಲಿ ಪ್ರಮಾಣೀಕರಿಸಲ್ಪಟ್ಟಿದೆ. ಮಾನವರಲ್ಲಿ ರೋಗವನ್ನುಂಟುಮಾಡುವ ಹಲವಾರು ಗ್ರಾಮ್-ಪಾಸಿಟಿವ್‌ ಮತ್ತು ಗ್ರಾಮ್-ನೆಗಟಿವ್‌ ಬ್ಯಾಕ್ಟೀರಿಯಾಗಳಿಗೆ ಪ್ರತಿಯಾಗಿರುವ ರೋಗಾಣುಹಾರಕ ಮತ್ತು ರೋಗಾಣುಸ್ತಂಭಕ ಚಟುವಟಿಕೆಗಳನ್ನು ಕೂಡ ಚಹಾವು ಹೊಂದಿದೆ.

ಹಸಿರು ಮತ್ತು ಕಪ್ಪು ಚಹಾ ಮಿಶ್ರಣಗಳೆರಡೂ ಅನೇಕ ಉತ್ಕರ್ಷಣಕಾರಿ-ನಿರೋಧಕಗಳನ್ನು, ಮುಖ್ಯವಾಗಿ ಕ್ಯಾಟ್‌ಚಿನ್‌ಗಳನ್ನು ಒಳಗೊಂಡಿದ್ದು, ಅವು ಕ್ಯಾನ್ಸರು ಜನಕ-ನಿರೋಧಕ, ವಿಕೃತಿ ಜನಕ-ನಿರೋಧಕ ಮತ್ತು ಗಡ್ಡೆಗಳ-ನಿರೋಧಕ ಗುಣಲಕ್ಷಣಗಳನ್ನು ಹೊಂದಿರುತ್ತವೆ.

ಬನ್ನಿ ಹಸಿರು ಚಹಾ(ಗ್ರೀನ್ ಟೀ)ದ ಬಗ್ಗೆ ತಿಳಿದುಕೊಳ್ಳೋಣ

© ingredientsnetwork

ತುಂಬಾ ಟೀ ಕುಡಿಯುವ ಅಭ್ಯಾಸವನ್ನು ಚಟ ಎಂದು ಬಿಡುತ್ತೇವೆ. ಆದರೆ ಗ್ರೀನ್ ಟೀಯನ್ನು ಆ ಗುಂಪಿಗೆ ಸೇರಿಸಲಾಗುವುದಿಲ್ಲ. ಅದಕ್ಕೆ ಕಾರಣ ಅದರಲ್ಲಿರುವ ಔಷಧೀಯ ಗುಣ. ಗಿಡ ಮೂಲಿಕೆಯಿಂದ ತಯಾರಿಸಿದ ಗ್ರೀನ್ ಟೀಯಲ್ಲಿ ಆಂಟಿಯಾಕ್ಸಿಡೆಂಟ್ ಹೆಚ್ಚಿದೆ. ಗ್ರೀನ್ ಟೀ ಸೇವನೆಯಿಂದ ಹೆಚ್ಚು ತಿನ್ನುವುದನ್ನು ತಡೆದು ಹಸಿವನ್ನು ನಿಯಂತ್ರಿಸಬಹುದು. ಇದರಲ್ಲಿ ದೇಹದಲ್ಲಿ ಅನವಶ್ಯಕವಾಗಿ ತುಂಬಿಕೊಂಡಿರುವ ಬೊಜ್ಜನ್ನು ಕರಗಿಸುವ ವಿಶೇಷ ಗುಣವೂ ಇದೆ.

ಹಸಿರು ಟೀ ಕುಡಿಯುವುದರಿಂದ ಆಗುವ ಉಪಯೋಗಗಳು.

ದೇಹದಲ್ಲಿ ನೀರಿನಂಶದ ಸಮತೋಲನ: ಟೀ ಕುಡಿಯುವುದರಿಂದ ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಬಹುದು. ಆದರೆ ದಿನದಲ್ಲಿ ಟೀಯನ್ನು 2-3 ಲೋಟ ಕುಡಿದು ನಂತರ ಅಧಿಕ ಪ್ರಮಾಣದಲ್ಲಿ ನೀರು ಕುಡಿಯಿರಿ.

ಗ್ರೀನ್ ಟೀ ಕುಡಿಯುವುದಿಂದ ದೇಹ ತೂಕ ಕಡಿಮೆ ಆಗುವುದರೊಂದಿಗೆ ದೇಹದ ಕಾಂತಿ ಹೆಚ್ಚುಸುತ್ತದೆ, ಹಾಗೂ ನಿಮ್ಮ ತ್ವಚೆಯ ಸಮಸ್ಯೆಗಳಿಗೂ ಇದರಿಂದ ಪರಿಹಾರವನ್ನು ಕಂಡುಕೊಳ್ಳ ಬಹುದಾಗಿದೆ.

ಮೈಯ ಸುಗಂಧಕ್ಕೆ: ಗುಲಾಬಿಯ ದಳದ ಜೊತೆ ಗ್ರೀನ್ ಟೀ ಬೆರೆಸಿ ಈ ಮಿಶ್ರಣವನ್ನು ಒಂದು ರಾತ್ರಿ ಇಟ್ಟು ಅದನ್ನು ನಿಮ್ಮ ಸ್ನಾನದ ನೀರಿನಲ್ಲಿ ಹಾಕಿ ಸ್ನಾನ ಮಾಡಿದರೆ ನಿಮ್ಮ ದೇಹದ ದುರ್ವಾಸನೆ ದೂರವಾಗುವುದು.

ತೂಕ ಇಳಿಕೆ: ಗ್ರೀನ್ ಟೀ ಡಯಟ್ ಪಿಲ್ಸ್ ಗಿಂತ ನೈಸರ್ಗಿಕ ಟೀ ಕುಡಿಯುವುದೇ ಒಳ್ಳೆಯದು. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೊತ್ತು ಗ್ರೀನ್ ಟೀ ಸೇವನೆಯಿಂದ ಬೊಜ್ಜನ್ನು ಕರಗಿಸಿಕೊಳ್ಳಬಹುದು.

ಹೃದಯಾಘಾತ ಮತ್ತು ಪಾರ್ಶ್ವವಾಯು ಕಾಯಿಲೆಯ ನಿಯಂತ್ರಣ: ಪಾರ್ಶ್ವವಾಯು ಮತ್ತು ಹೃದಯಾಘಾತ ಸಮಸ್ಯೆಯು ದೇಹದಲ್ಲಿ ರಕ್ತ ಸಂಚಲನದಲ್ಲಿ ಉಂಟಾಗುವ ತೊಂದರೆಯಿಂದ ತಡೆಯುತ್ತದೆ.

ಹಲ್ಲುಗಳ ಆರೋಗ್ಯಕ್ಕೆ: ಸಕ್ಕರೆ ಹಾಕದೆ ಟೀ ಕುಡಿಯುವ ಅಭ್ಯಾಸವಿದ್ದರಂತೂ ತುಂಬಾ ಒಳ್ಳೆಯದು. ಏಕೆಂದರೆ ಇದು ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

ಗ್ರೀನ್ ಟೀ ಕುಡಿಯುವುದಿಂದ ಮೂಳೆಗಳನ್ನು ಬಲಪಡಿಸುತ್ತದೆ.

ಕ್ಯಾನ್ಸರ್ ತಡೆಗಟ್ಟುವುದು: ಟೀಯಲ್ಲಿ ಪಾಲಿಫಿನಲ್ ಮತ್ತು ಚಿಟಿಣಜಚಿಟಿಣ ಅಂಶವಿದೆ. ಈ ಅಂಶಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ದಿನಕ್ಕೆ ಒಂದು ಕಪ್ ಗ್ರೀನ್ ಟೀ ಕುಡಿದರೆ ಕ್ಯಾನ್ಸರ್ ಗಡ್ಡೆ ಉಂಟಾಗುವುದನ್ನು ತಡೆದು ಕ್ಯಾನ್ಸರ್ ಬರುವ ಕಣಗಳನ್ನು ನಿರ್ಣಾಮ ಮಾಡುತ್ತದೆ.

ಎಣ್ಣೆ ತ್ವಚೆ: ದ್ರವವನ್ನು ಫ್ರೀಜರ್ ನಲ್ಲಿ ಇಟ್ಟು ಐಸ್ ಮಾಡಿ ನಂತರ ಆ ಐಸ್ ನಿಂದ ಮುಖದ ಮೇಲೆ ನಯವಾಗಿ ಉಜ್ಜಿ. ಅದನ್ನು ಮುಖದಲ್ಲಿ ಒಣಗುವರಿಗೂ ಹಾಗೆ ಬಿಡಿ ನಂತರ ತೊಳೆಯಿರಿ. ಇದರಿಂದ ಮುಖದಲ್ಲಿ ಆದ ಬದಲಾವಣೆಯನ್ನು ನೀವೇ ಕಾಣಬಹುದು.

ಮೊಡವೆ: ಸ್ವಲ್ಪ ಗ್ರೀನ್ ಟೀ ಸೊಪ್ಪನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಕಿ ಅದರ ಪೇಸ್ಟ್ ಅನ್ನು ಮೊಡವೆಯ ಕಲೆಗಳ ಮೇಲೆ ಹಚ್ಚುತ್ತಾ ಬಂದರೆ ಮುಖದ ಕಲೆಗಳು ಮಾಯವಾಗಿ ಮುಖವು ಕಾಂತಿ ಹೆಚ್ಚಾಗುವುದು.

ಬ್ಲಾಕ್ ಹೆಡ್ಸ್: ಸ್ವಲ್ಪ ಗ್ರೀನ್ ಟೀಯನ್ನು ಬಿಸಿ ನೀರಿನಲ್ಲಿ ಹಾಕಿ ಮಿಶ್ರ ಮಾಡಿ ಬ್ಲಾಕ್ ಹೆಡ್ಸ್ ರಿಮೋವರ್ ಬಳಸಿ ನಿಮ್ಮ ಮುಖವನ್ನು ಶುಚಿಗೊಳಸಿ.

ಮಧುಮೇಹ: ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಗ್ರೀನ್ ಟೀ ಸಹಕಾರಿಯಾಗಿದೆ.

ರೋಗ ನಿರೋಧಕ ಶಕ್ತಿ: ಗ್ರೀನ್ ಟೀಯಲ್ಲಿರುವ ಅಂಶಗಳು ದೇಹದಲ್ಲಿನ ರೋಗನಿರೋಶಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ.

© ingredientsnetwork

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top